Home
ಸುದ್ದಿಜಾಲ

Phonepe: ಫೋನ್‌ಪೇ ಸ್ಮಾರ್ಟ್‌ಸ್ಪೀಕರ್‌ಗಳಲ್ಲಿ ಕೇಳಿ ಬರಲಿದೆ ಇನ್ಮುಂದೆ ಕಿಚ್ಚನ ವಾಯ್ಸ್‌!

ಪ್ರಮುಖ ಫಿನ್‌ಟೆಕ್ ಸಂಸ್ಥೆಯಾಗಿರುವ ಫೋನ್‌ಪೇ (Phonepe) ತನ್ನ ಬಳಕೆದಾರರಿಗೆ ಗುಡ್‌ ನ್ಯೂಸ್‌ ನೀಡಿದೆ. ಈಗಾಗಲೇ ವಿಶೇಷ ಫೀಚರ್ಸ್‌ ಹಾಗೂ ಪ್ರಯೋಜನಗಳೊಂದಿಗೆ ಸಾಕಷ್ಟು ಬಳಕೆದಾರರನ್ನು ತನ್ನೆಡೆ ಸೆಳೆದಿದ್ದು, ಈಗ ಘೋಷಣೆ ಮಾಡಿರುವ ಹೊಸ ಸೌಲಭ್ಯದಿಂದ ಇನ್ನಷ್ಟು ಮಂದಿ ಫೋನ್‌ಪೇ ಕಡೆ ತಿರುಗಿ ನೋಡುವಂತೆ ಮಾಡಲಾಗಿದೆ.

ಹೌದು, ಪ್ರಖ್ಯಾತ ಭಾರತೀಯ ನಟರಾದ ಮಮ್ಮುಟಿ, ಕಿಚ್ಚ ಸುದೀಪ್ ಮತ್ತು ಮಹೇಶ್ ಬಾಬು (Mammootty, Kiccha Sudeep, Mahesh Babu) ಅವರ ಸಹಯೋಗದೊಂದಿಗೆ ಸೆಲೆಬ್ರಿಟಿ ವಾಯ್ಸ್‌ ಫೀಚರ್ಸ್‌ (Celebrity voice features) ಅನ್ನು ಫೋನ್‌ಪೇ ಪರಿಚಯಿಸಿದೆ. ಅಂದರೆ ಇನ್ಮುಂದೆ ಸ್ಮಾರ್ಟ್‌ಸ್ಪೀಕರ್‌ಗಳಲ್ಲಿ ಈ ನಟರ ಧ್ವನಿಯನ್ನು ಆಲಿಸಬಹುದಾಗಿದೆ. ಕೇರಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಂತಹ ಪ್ರದೇಶಗಳಲ್ಲಿ ಬಳಕೆದಾರರ ಅನುಭವವನ್ನು ಹೆಚ್ಚಿಸಲು ಈ ಸೌಲಭ್ಯ ನೀಡಲಾಗಿದೆ. ಹಾಗಿದ್ರೆ, ಬನ್ನಿ ಈ ಫೀಚರ್ಸ್‌ ಆಕ್ಟಿವ್‌ ಮಾಡುವುದು ಹೇಗೆ ಅನ್ನೋದನ್ನು ತಿಳಿಯೋಣ.

ಫೋನ್‌ಪೇ ಸ್ಮಾರ್ಟ್‌ಸ್ಪೀಕರ್‌ಗಳಲ್ಲಿ ಕೇಳಿ ಬರಲಿದೆ ಇನ್ಮುಂದೆ ಕಿಚ್ಚನ ವಾಯ್ಸ್‌!

ಫೋನ್‌ಪೇನಲ್ಲಿ ಇನ್ಮುಂದೆ ಕಿಚ್ಚನ ಕಂಚಿನ ಕಂಠದ ಧ್ವನಿ: ಫೋನ್‌ಪೇ ಸ್ಮಾರ್ಟ್‌ಸ್ಪೀಕರ್‌ಗಳಲ್ಲಿ ಈ ಸೌಲಭ್ಯ ಕಲ್ಪಿಸಿಕೊಟ್ಟಿದ್ದು, ಆಯಾ ಪ್ರದೇಶಗಳಲ್ಲಿನ ಸ್ಥಳೀಯ ಸೆಲೆಬ್ರಿಟಿಗಳ ಧ್ವನಿಯನ್ನು ಬಳಸಿಕೊಂಡು ಗ್ರಾಹಕರ ಪಾವತಿಗಳನ್ನು ದೃಢೀಕರಿಸಲು ಸಕ್ರಿಯಗೊಳಿಸುತ್ತದೆ. ಇದು ಭಾರತದಾದ್ಯಂತ ಇಂಗ್ಲಿಷ್ ಮತ್ತು ಮಲಯಾಳಂ, ಕನ್ನಡ ಮತ್ತು ತೆಲುಗಿನಲ್ಲಿ ಲಭ್ಯ ಇದೆ.

ಈ ಮೊದಲು ಫೋನ್‌ಪೇ ತನ್ನ ಸ್ಮಾರ್ಟ್‌ಸ್ಪೀಕರ್‌ಗಳಲ್ಲಿ ಸೆಲೆಬ್ರಿಟಿ ವಾಯ್ಸ್ ಫೀಚರ್ಸ್‌ನಲ್ಲಿ ಭಾರತೀಯ ಪ್ರಸಿದ್ಧ ನಟ ಅಮಿತಾಬ್ ಬಚ್ಚನ್ (Amitabh Bachchan) ಅವರ ವಾಯ್ಸ್‌ ಅನ್ನು ಬಳಕೆ ಮಾಡಿಕೊಂಡಿತ್ತು. ಇದು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಈಗಲೂ ಲಭ್ಯವಿದೆ. ಆದರೆ ಈಗ ಸ್ಮಾರ್ಟ್‌ಸ್ಪೀಕರ್ ಬಳಕೆ ಹೆಚ್ಚಾದಂತೆ ಪ್ರಾದೇಶಿಕವಾಗಿ ಜನರಿಗೆ ವಿಶೇಷ ಅನುಭವ ನೀಡಲು ಫೋನ್‌ಪೇ ಮುಂದಾಗಿದೆ.

ಫೋನ್‌ಪೇ ಸ್ಮಾರ್ಟ್‌ಸ್ಪೀಕರ್‌ಗಳಲ್ಲಿ ಕೇಳಿ ಬರಲಿದೆ ಇನ್ಮುಂದೆ ಕಿಚ್ಚನ ವಾಯ್ಸ್‌!

ಅಂದರೆ ಫೋನ್‌ಪೇನ್ ಸ್ಮಾರ್ಟ್‌ಸ್ಪೀಕರ್ ದೇಶಾದ್ಯಂತ 90% ಪೋಸ್ಟಲ್ ಕೋಡ್‌ಗಳನ್ನು ಒಳಗೊಂಡಿರುವ ವ್ಯಾಪಾರಿ ಪಾಲುದಾರರಿಂದ ನಿಯೋಜಿಸಲಾದ 4.8 ಮಿಲಿಯನ್ ಡಿವೈಸ್‌ಗಳನ್ನು ಹೊಂದಿರುವುದಾಗಿ ತಿಳಿಸಿದೆ. ಈ ಮೂಲಕ ವೈವಿಧ್ಯಮಯ ಪ್ರದೇಶಗಳಿಂದ ಪ್ರಸಿದ್ಧ ವಾಯ್ಸ್‌ಗಳನ್ನು ಸಂಯೋಜಿಸುವುದು ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಸಂವಾದಾತ್ಮಕ ಪಾವತಿ ಅನುಭವವನ್ನು ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದೆ.

ಈ ಸಂಬಂಧ ಫೋನ್‌ಪೇನ ಮರ್ಚೆಂಟ್ ಬ್ಯುಸಿನೆಸ್ ವಿಭಾಗದ ಮುಖ್ಯ ವ್ಯಾಪಾರ ಅಧಿಕಾರಿ ಯುವರಾಜ್ ಸಿಂಗ್ ಶೆಖಾವತ್ ಮಾಹಿತಿ ನೀಡಿ, ನಮ್ಮ ವ್ಯಾಪಕವಾದ 3.8+ ಕೋಟಿ ವ್ಯಾಪಾರಿಗಳ ಜಾಲವು ಭಾರತದ ವಿವಿಧ ಪ್ರದೇಶಗಳಲ್ಲಿ ಹರಡಿದೆ. ಪ್ರತಿಯೊಂದೂ ಪಾವತಿ ಮೌಲ್ಯೀಕರಣಕ್ಕಾಗಿ ಅದರ ವಿಶಿಷ್ಟ ಭಾಷಾ ಅಗತ್ಯಗಳನ್ನು ಹೊಂದಿದೆ. ವಿವಿಧ ಹೆಸರಾಂತ ಸೆಲೆಬ್ರಿಟಿಗಳೊಂದಿಗೆ ಪಾಲುದಾರಿಕೆಯ ಮೂಲಕ, ನಮ್ಮ ವ್ಯಾಪಾರಿಗಳ ವಿಭಿನ್ನ ಅಗತ್ಯಗಳನ್ನು ಸೃಜನಾತ್ಮಕ ರೀತಿಯಲ್ಲಿ ಪೂರೈಸಲು ನಾವು ನಮ್ಮ ಸೇವೆಗಳನ್ನು ಅಳವಡಿಸಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.

ಈ ಫೀಚರ್ಸ್‌ ಅನ್ನು ಸಕ್ರಿಯಗೊಳಿಸಲು ವ್ಯಾಪಾರಿಗಳಿಗೆ ಇಲ್ಲಿದೆ ಸರಳ ಮಾರ್ಗ
ಹಂತ 1: ಮೊದಲು ಫೋನ್‌ಪೇನ ಬ್ಯುಸಿನೆಸ್‌ ಆಪ್‌ ಅನ್ನು ಓಪನ್ ಮಾಡಿ. ನಂತರ ಅಪ್ಲಿಕೇಶನ್‌ನ ಹೋಮ್ ಸ್ಕ್ರೀನ್‌ನಲ್ಲಿ ಸ್ಮಾರ್ಟ್‌ಸ್ಪೀಕರ್ ವಿಭಾಗಕ್ಕೆ ನ್ಯಾವಿಗೇಟ್ ಮಾಡಿ. ಅಲ್ಲಿ ಸ್ಮಾರ್ಟ್‌ ಸ್ಪೀಕರ್ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದನ್ನು ಕ್ಲಿಕ್‌ ಮಾಡಿದರೆ ಮತ್ತೆ ಸ್ಮಾರ್ಟ್ ಸ್ಪೀಕರ್ ವಾಯ್ಸ್ (SmartSpeaker Voice) ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದನ್ನು ಟ್ಯಾಪ್ ಮಾಡಿ.

ಫೋನ್‌ಪೇ ಸ್ಮಾರ್ಟ್‌ಸ್ಪೀಕರ್‌ಗಳಲ್ಲಿ ಕೇಳಿ ಬರಲಿದೆ ಇನ್ಮುಂದೆ ಕಿಚ್ಚನ ವಾಯ್ಸ್‌!

ಹಂತ 2 : ಇದೆಲ್ಲಾ ಆದ ಮೇಲೆ ನೀವು ಆಯ್ಕೆ ಮಾಡಿದ ಭಾಷೆಯಲ್ಲಿ ನೀವು ಆದ್ಯತೆ ನೀಡುವ ಪ್ರಸಿದ್ಧ ವಾಯ್ಸ್‌ ಅನ್ನು ಆಯ್ಕೆಮಾಡಿ. ಒಮ್ಮೆ ನೀವು ನಿಮ್ಮ ಇಷ್ಟದ ವಾಯ್ಸ್‌ ಅನ್ನು ಆಯ್ಕೆ ಮಾಡಿದ ನಂತರ, ಆ ವಾಯ್ಸ್‌ ಅನ್ನು ಸಕ್ರಿಯಗೊಳಿಸಲು ದೃಢೀಕರಿಸಿ ಎಂಬ ಆಯ್ಕೆ ಬರುತ್ತದೆ ಅದರ ಮೇಲೆ ಕ್ಲಿಕ್‌ ಮಾಡಿ. ಇದಾದ ಕೆಲವೇ ಗಂಟೆಗಳಲ್ಲಿ ಆಯ್ಕೆಮಾಡಿದ ಸೆಲೆಬ್ರಿಟಿಗಳ ವಾಯ್ಸ್‌ ಅನ್ನು ಆಲಿಸಬಹುದಾಗಿದೆ.

Best Mobiles in India

English summary
kiccha sudeep voice will be heard in Phonepe from now on. This means that Phonepe has introduced this feature on smart speakers, enabling customers to authenticate payments using the voice of local celebrities in their respective regions.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+