Kissan GPT: ರೈತರು ಇನ್ಮುಂದೆ ಇನ್ನಷ್ಟು ಇಳುವರಿ ಪಡೆಯಬಹುದು! ಇದರ ಬಳಕೆ ಹೇಗೆ?
ಜಗತ್ತಿನಲ್ಲಿ ಇಂದು ಎಐ ಆಧಾರಿತ ಚಾಟ್‌ಜಿಪಿಟಿ (ChatGPT) ಎಲ್ಲಾ ರೀತಿಯಲ್ಲೂ ಬಳಕೆಯಾಗುತ್ತಿದ್ದು, ಈ ಎಐ ತಂತ್ರಜ್ಞಾನ ನಿರೀಕ್ಷೆಗೂ ಮೀರಿದ ವಿಷಯಗಳನ್ನು ನಮಗೆ ನೀಡುತ್ತಿದೆ. ಇದರ ನಡುವೆ ಭಾರತದಲ್ಲೂ ಈ ಬಗೆಗಿನ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿದ್ದು, ಇದರ ನಡುವೆ ದೇಶದ ಬೆನ್ನೆಲುಬಾಗಿರುವ ರೈತರಿಗೂ ಇನ್ಮುಂದೆ ಈ ಎಐ ಸಾಕಷ್ಟು ಪ್ರಯೋಜನಕಾರಿ.
ಹೌದು, ಕೃತಕ ಬುದ್ಧಿಮತ್ತೆ (AI) ಚಾಲಿತ ಉಪಕರಣಗಳು ಶೀಘ್ರವಾಗಿ ಬೆಳೆಯುತ್ತಿವೆ. ಈ ಮೂಲಕ ಬಳಕೆದಾರರು ಸಂಭಾಷಣೆಯ ರೀತಿಯಲ್ಲಿ ಉತ್ತರಗಳನ್ನು ಪಡೆದುಕೊಳ್ಳುವ ಅವಕಾಶ ಕಲ್ಪಿಸಲಾಗುತ್ತಿದೆ. ಅದರಲ್ಲೂ ಚಾಟ್ ಜಿಪಿಟಿ ಆರಂಭ ಆದಾಗಿನಿಂದ ಟೆಕ್ ವಲಯದಲ್ಲಿ ಭಾರೀ ಸಂಚಲನವೇ ಉಂಟಾಗಿದೆ. ಆದರೆ, ಇನ್ಮುಂದೆ ಕೇವಲ ಟೆಕ್ ವಲಯದಲ್ಲಷ್ಟೇ ಅಲ್ಲದೆ ರೈತರ ಬಾಳಿಗೂ ಬೆಳಕಾಗಲಿದೆ. ಹಾಗಿದ್ರೆ, ಏನಿದು ಹೊಸ ತಂತ್ರಜ್ಞಾನ? ಇದರಿಂದ ರೈತರಿಗೆ ಪ್ರಯೋಜನ ಏನು ಎಂಬುದನ್ನು ತಿಳಿದುಕೊಳ್ಳಿ.

ಕಿಸ್ಸಾನ್ ಜಿಪಿಟಿ: ಈ ಕಿಸ್ಸಾನ್ ಜಿಪಿಟಿ (Kissan GPT) ಎಂಬುದು ಚಾಟ್‌ಜಿಪಿಟಿ ಮತ್ತು ವಿಸ್ಪರ್ ಅನ್ನು ಆಧರಿಸಿದ ಎಐ ಚಾಟ್‌ಬಾಟ್ ಆಗಿದ್ದು, ಭಾರತದ ಕಡಿಮೆ ಕೃಷಿ ಡೊಮೇನ್ ಆಗಿ ಗುರುತಿಸಿಕೊಳ್ಳಲಿದೆ. ಇದನ್ನು ಈ ವರ್ಷ ಮಾರ್ಚ್ 15 ರಂದು ಪ್ರತೀಕ್ ದೇಸಾಯಿ ಎಂಬುವರು ಪರಿಚಯಿಸಿದ್ದು, ಬೆಳೆ ಕೃಷಿ, ನೀರಾವರಿ, ಕೀಟ ನಿಯಂತ್ರಣ ಮತ್ತು ಇತರ ಕೃಷಿ-ಸಂಬಂಧಿತ ವಿಷಯಗಳ ಕುರಿತು ನೈಜ-ಸಮಯದ ಸಲಹೆಯನ್ನು ಇದು ನೀಡುತ್ತದೆ.
ಈ ಕಿಸ್ಸಾನ್ ಜಿಪಿಟಿ ಹೇಗೆ ಕೆಲಸ ಮಾಡುತ್ತದೆ?: ಈ ಕಿಸ್ಸಾನ್ ಜಿಪಿಟಿ ಇಂಟರ್ಫೇಸ್ ತುಂಬಾ ಸರಳವಾಗಿದ್ದು, ಇದು ಬಳಕೆದಾರರ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಮೈಕ್ರೋಫೋನ್ ಅನ್ನೇ ಇನ್‌ಪುಟ್ ಆಗಿ ಬಳಕೆ ಮಾಡಿಕೊಳ್ಳಲಿದ್ದು, ಈ ಮೂಲಕ ಕನ್ನಡ ಹಿಂದಿ, ಇಂಗ್ಲಿಷ್, ಮರಾಠಿ, ಬೆಂಗಾಲಿ ಸೇರಿದಂತೆ 10 ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತದೆ. ಅಷ್ಟೇ ಅಲ್ಲದೆ ಸ್ಪ್ಯಾನಿಷ್, ಜಪಾನೀಸ್, ಪೋರ್ಚುಗೀಸ್ ಮತ್ತು ಇಂಡೋನೇಷಿಯನ್ ಭಾಷೆಯಲ್ಲೂ ಇದು ಕೆಲಸ ಮಾಡಲಿದೆ.
ಇದನ್ನು ಬಳಕೆ ಮಾಡುವುದು ಹೇಗೆ?: ಮೊದಲೇ ತಿಳಿಸಿದಂತೆ ಇದು ಎಲ್ಲಾ ಭಾಷೆಗಳಲ್ಲಿ ಲಭ್ಯ ಇರುವುದರಿಂದ ಹಾಗೂ ಮೈಕ್ರೋಫೋನ್ ಮೂಲಕ ಕೆಲಸ ಮಾಡುವುದರಿಂದ ಬಳಕೆದಾರರು ಅಥವಾ ರೈತರು ಸುಲಭವಾಗಿ ಕಿಸ್ಸಾನ್ ಜಿಪಿಟಿ ಬಳಿ ತಮಗೆ ಬೇಕಾದ ಪ್ರಶ್ನೆಗಳನ್ನು ಕೇಳಬಹುದಾಗಿದೆ. ಇದಕ್ಕೆ ನೀವು ಬರೆಯಲೇಬೇಕು ಎಂದೇನಿಲ್ಲ. ಹೀಗಾಗಿ ಕೆಲವೇ ಸೆಕೆಂಡುಗಳಲ್ಲಿ ನಿಮ್ಮ ಪ್ರಶ್ನೆಗೆ ಉತ್ತರಿಸುತ್ತದೆ.

ಹಾಗೆಯೇ ಈ ಕಿಸ್ಸಾನ್‌ಜಿಪಿಟಿ ಓಪನ್‌ಎಐನ ಚಾಟ್‌ಜಿಪಿಟಿ ತಂತ್ರಜ್ಞಾನವನ್ನು ಕಂಟ್ರೋಲ್ ಮಾಡಲಿದ್ದು, ನೀವು ಕೇಳಲಾದ ಉತ್ತರಗಳನ್ನು ನೀಡಲು ಪ್ಲಾಟ್‌ಫಾರ್ಮ್‌ನ ಸ್ವಂತ ಜ್ಞಾನದ ಮೂಲವನ್ನು ಇದು ಸಂಯೋಜಿಸುತ್ತದೆ. ಹಾಗೆಯೇ ಚಾಟ್‌ಬಾಟ್ ಚಾಟ್‌ಜಿಪಿಟಿ-3.5 ಟರ್ಬೊವನ್ನು ಬಳಸುತ್ತದೆ. ಜೊತೆಗೆ ಜಿಪಿಟಿ-4 ನಂತರ ಸುಧಾರಿಸುವ ಫಲಿತಾಂಶಗಳನ್ನು ನೀಡಲಾಗುತ್ತದೆ ಎಂದು ದೇಸಾಯಿ ಅವರು ಮಾಹಿತಿ ನೀಡಿದ್ದಾರೆ.
ಇದರ ಬಳಕೆ ರೈತರಿಗೆ ಮಾತ್ರವಲ್ಲ: ಈ ಕಿಸ್ಸಾನ್ ಜಿಪಿಟಿ ಕೇವಲ ರೈತರಿಗೆ ಮಾತ್ರವಲ್ಲದೆ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಹವ್ಯಾಸಿಗಳಂತಹ ಕೃಷಿಯಲ್ಲಿ ಆಸಕ್ತಿ ಹೊಂದಿರುವ ಯಾರೇ ಆದರೂ ಇದನ್ನು ಬಳಕೆ ಮಾಡಿಕೊಳ್ಳಬಹುದು. ಅದರಲ್ಲೂ ಕೆಲವರು ಐಟಿ ವಿಭಾಗದಲ್ಲಿ ಕೈತುಂಬಾ ಸಂಪಾದನೆ ಮಾಡಿದರೂ ಕೃಷಿಯಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದುಕೊಂಡವರು ಇದರ ಮೊರೆ ಹೋಗಬಹುದು.
ಅದರಂತೆ ಮುಂದಿನ ದಿನಗಳಲ್ಲಿ ಈ ಕಿಸ್ಸಾನ್ ಸುಧಾರಿತ ತಂತ್ರಜ್ಞಾನವನ್ನು ಪಡೆದುಕೊಳ್ಳಲಿದ್ದು, ಈ ಮೂಲಕ ರೈತರಿಗೆ ಇನ್ನೂ ಹೆಚ್ಚಿನ ಅಗತ್ಯ ಮಾಹಿತಿಯನ್ನು ನೀಡುತ್ತದೆ ಎಂದು ದೇಸಾಯಿ ಅವರು ತಿಳಿಸಿದ್ದು, ಮುಂದಿನ ಕೆಲವು ದಿನಗಳಲ್ಲಿ ಈ ಜಿಪಿಟಿಯಲ್ಲಿ ಮತ್ತೆರಡು ಭಾಷೆಗಳು ಸೇರಿಕೊಳ್ಳಲಿವೆಯಂತೆ. ಜೊತೆಗೆ ಸರ್ಕಾರ ಮತ್ತು ಕೃಷಿ ಸಂಸ್ಥೆಗಳ ಸಹಯೋಗಕ್ಕಾಗಿ ಇದು ಸಿದ್ಧವಾಗಿದೆ.


Click it and Unblock the Notifications








