smartphone: ನಿಮ್ಮ ಹಳೇ ಫೋನ್ ಮಾರಲು ಮುಂದಾಗಿದ್ದೀರಾ?ಹಾಗಿದ್ರೆ ಅದರ ಬೆಲೆ ಈ ರೀತಿ ತಿಳಿದುಕೊಳ್ಳಿ!
ಸ್ಮಾರ್ಟ್‌ಫೋನ್ ಬಳಕೆ ಮಾಡುವ ಯಾರೇ ಆದರೂ ಸಹ ಎರಡು ಅಥವಾ ಮೂರು ವರ್ಷಗಳ ನಂತರ ಹೊಸ ಫೋನ್‌ಗೆ ಅಪ್‌ಗ್ರೇಡ್ ಆಗಲು ಮುಂದಾಗುತ್ತಾರೆ. ಈ ಮೂಲಕ ಈಗಾಗಲೇ ಬಳಕೆ ಮಾಡುವ ಸ್ಮಾರ್ಟ್‌ಫೋನ್ ಅನ್ನು ಸೇಲ್ ಮಾಡಲು ಯೋಜಿಸುತ್ತಾರಾದರೂ ಅದರ ಬೆಲೆ ನಿಖರವಾಗಿ ಎಷ್ಟಿರಲಿದೆ ಎಂದು ಹಲವರಿಗೆ ತಿಳಿದಿರುವುದಿಲ್ಲ. ಅದರಲ್ಲೂ ಇಂದಿನ ದಿನಗಳಲ್ಲಿ ವಿನಿಮಯ ಆಫರ್ ಸೌಲಭ್ಯ ಸಹ ಇದ್ದು, ಹಿಂದು ಮುಂದು ನೋಡದೆ ನಮ್ಮ ಹಳೆಯ ಸ್ಮಾರ್ಟ್‌ಫೋನ್ ಸೇಲ್ ಮಾಡುತ್ತಿದ್ದಾರೆ.
ಹೌದು, ಸಾಮಾನ್ಯವಾಗಿ ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಡಿವೈಸ್‌ಗಳಿಗೆ ಮಾರುಕಟ್ಟೆಯಲ್ಲಿ ಇಂದಿಗೂ ಬೇಡಿಕೆ ಇದೆ. ಅದರಲ್ಲೂ ಭಾರತದಲ್ಲಿ ಇದು ಹೆಚ್ಚಾಗಿಯೇ ಇದೆ. ಈ ನಡುವೆ ಹಳೆಯ ಸ್ಮಾರ್ಟ್‌ಫೋನ್(Smartphone) ಮಾರಾಟ ಮಾಡಲು ಮುಂದಾಗಿದ್ದರೆ ಅದನ್ನು ಮಾರುವ ಮುನ್ನ ಎಷ್ಟು ಬೆಲೆ ಹೊಂದಿದೆ ಎಂದು ತಿಳಿಯುವುದು ಮುಖ್ಯ. ಯಾಕೆಂದರೆ ಸೆಕೆಂಡ್ ಹ್ಯಾಂಡ್ ಫೋನ್ ಖರೀದಿ ಮಾಡುವ ಯಾರೇ ಆದರೂ ಅದನ್ನು ತುಂಬಾ ಕಡಿಮೆ ಬೆಲೆಗೆ ಕೇಳುತ್ತಾರೆ. ಹಾಗಿದ್ರೆ, ನಿಮ್ಮ ಫೋನ್‌ನ ಇಂದಿನ ಮಾರುಕಟ್ಟೆ ಮೌಲ್ಯ ಎಷ್ಟೆಂದು ತಿಳಿಯಲು ಈ ಲೇಖನ ಓದಿರಿ.

ಬಹುಪಾಲು ಮಂದಿ ಹೊಸ ಸ್ಮಾರ್ಟ್‌ಫೋನ್‌ಗೆ ಅಪ್‌ಗ್ರೇಡ್ ಆಗಲು ಬಯಸುತ್ತಾರೆ: ತಂತ್ರಜ್ಞಾನವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಪ್ರತಿ ತಿಂಗಳು ಮಾರುಕಟ್ಟೆಯಲ್ಲಿ ಹೊಸ ಹೊಸ ಸ್ಮಾರ್ಟ್‌ಫೋನ್ ಅನಾವರಣ ಆಗುತ್ತಿವೆ. ಈ ನಡುವೆ ಹೆಚ್ಚಿನವರು ಹೊಸ ಸ್ಮಾರ್ಟ್‌ಫೋನ್‌ಗೆ ಅಪ್‌ಗ್ರೇಡ್ ಆಗಲು ಬಯಸುತ್ತಾರೆ. ಆದರೆ, ಕೆಲವರಿಗೆ ತಮ್ಮ ಹಳೆಯ ಫೋನ್ ಅನ್ನು ಹೇಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಎಂಬ ಬಗ್ಗೆ ಅರಿವೇ ಇರುವುದಿಲ್ಲ. ಹೀಗಾಗಿ ಅವರು ತಮ್ಮ ಸ್ಮಾರ್ಟ್‌ಫೋನ್‌ನ ಮೌಲ್ಯವನ್ನು ಈ ರೀತಿ ಹೆಚ್ಚಿಗೆ ಮಾಡಿಕೊಳ್ಳಬಹುದು.
ಬ್ರ್ಯಾಂಡ್ ಮತ್ತು ವೇರಿಯಂಟ್: ಸ್ಮಾರ್ಟ್‌ಫೋನ್‌ನ ಬ್ರಾಂಡ್ ಖ್ಯಾತಿ ಮತ್ತು ಜನಪ್ರಿಯತೆಯು ಅದರ ಮರುಮಾರಾಟ ಮೌಲ್ಯದ ಮೇಲೆ ಪರಿಣಾಮ ಬೀರುತ್ತದೆ. ಕಡಿಮೆ ಜನಪ್ರಿಯತೆ ಇರುವ ಬ್ರ್ಯಾಂಡ್‌ಗಳಿಗೆ ಹೋಲಿಸಿದರೆ ಪ್ರಸಿದ್ಧ ಮತ್ತು ಪ್ರತಿಷ್ಠಿತ ಬ್ರ್ಯಾಂಡ್‌ಗಳ ಡಿವೈಸ್‌ಗಳು ಹಾಗೂ ಹೆಚ್ಚಿನ ಸಾಮರ್ಥ್ಯದ ವೆರಿಯಂಟ್ ಇರುವ ಫೋನ್‌ಗಳು ಉತ್ತಮ ಬೆಲೆ ಪಡೆದುಕೊಳ್ಳುತ್ತವೆ. ಉದಾಹರಣೆಗೆ ಹೇಳುವುದಾದರೆ ಆಪಲ್, ಸ್ಯಾಮ್‌ಸಂಗ್, ಒನ್‌ಪ್ಲಸ್‌ನ ಹಳೆಯ ಫೋನ್‌ಗಳು ಅಧಿಕ ಬೆಲೆ ಪಡೆಯುತ್ತವೆ.
ಹಾನಿಯ ಪ್ರಮಾಣ: ನಿಮ್ಮ ಸ್ಮಾರ್ಟ್‌ಫೋನ್‌ನ ಮೌಲ್ಯವನ್ನು ನಿರ್ಧರಿಸುವ ಮತ್ತೊಂದು ಪ್ರಮುಖ ಅಂಶವೆಂದರೆ ಡಿವೈಸ್‌ನ ಹಾನಿಯ ಪ್ರಮಾಣ. ಈ ಹಾನಿಗಳನ್ನು ಎರಡು ಪ್ರಮುಖ ವಿಧಗಳಾಗಿ ವಿಂಗಡಿಸಲಾಗಿದೆ. ಅಂದರೆ ಸೌಂದರ್ಯ ಮತ್ತು ಕ್ರಿಯಾತ್ಮಕ. ಈ ಕಾರಣಕ್ಕಾಗಿಯೇ ನೀವು ನಿಮ್ಮ ಸ್ಮಾರ್ಟ್‌ಫೋನ್‌ಗೆ ಉತ್ತಮ ಗುಣಮಟ್ಟದ ಕವರ್ ಕೇಸ್ ಅನ್ನು ಬಳಸಬೇಕಿದೆ. ಯಾಕೆಂದರೆ ಇದು ಡೆಂಟ್, ಗೀರುಗಳ ಸಮಸ್ಯೆ ನಿರ್ಮಾಣ ಮಾಡುವುದಿಲ್ಲ. ಜೊತೆಗೆ ಬಣ್ಣವನ್ನು ಹಾಗೆಯೇ ಉಳಿಸುತ್ತದೆ.

ದೋಷಯುಕ್ತ ಘಟಕಗಳು: ಮೊಬೈಲ್‌ನಲ್ಲಿರುವ ದೋಷಯುಕ್ತ ಘಟಕಗಳು ಸ್ಮಾರ್ಟ್‌ಫೋನ್‌ನ ಮರುಮಾರಾಟ ಮೌಲ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಉದಾಹರಣೆಗೆ ಹೇಳುವುದಾದರೆ ಕಾರ್ಯನಿರ್ವಹಿಸದ ವಾಲ್ಯೂಮ್ ಬಟನ್‌ಗಳು ಅಥವಾ ಕ್ರಿಯಾತ್ಮಕವಲ್ಲದ ಎಸ್‌ಡಿ ಕಾರ್ಡ್ ಸ್ಲಾಟ್ ನಿಮ್ಮ ಸ್ಮಾರ್ಟ್‌ಫೋನ್‌ನ ಮೌಲ್ಯವನ್ನು ಕಡಿಮೆ ಮಾಡುತ್ತದೆ. ಈ ಕಾರಣಕ್ಕೆ ಇವುಗಳನ್ನು ಸದಾ ಎಚ್ಚರಿಕೆಯಿಂದ ಬಳಕೆ ಮಾಡಿ.
ಬಿಡಿಭಾಗಗಳು: ಇನ್ನು ಸ್ಮಾರ್ಟ್‌ಫೋನ್ ಅನ್ನು ಮಾರಾಟ ಮಾಡುವಾಗ ಅದರೊಂದಿಗೆ ಒದಗಿಸಲಾದ ಎಲ್ಲಾ ಟೂಲ್ಸ್ ಅನ್ನು ನೀವು ಹೊಂದಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ. ಉದಾಹರಣೆಗೆ ಕೆಲವು ಡಿವೈಸ್‌ಗಳು ಟೈಪ್-ಸಿ ಚಾರ್ಜಿಂಗ್ ನಿಂದ ಹಿಡಿದು 3.5 ಎಂಎಂ ಆಡಿಯೊ ಜ್ಯಾಕ್ ಕನೆಕ್ಟರ್ ಅನ್ನು ಹೊಂದಿರುತ್ತವೆ. ಈ ರೀತಿಯ ಯಾವುದೇ ಬಿಡಿಭಾಗಗಳು ಕಾಣೆಯಾಗಿದ್ದರೆ, ಇದು ನಿಮ್ಮ ಸ್ಮಾರ್ಟ್‌ಫೋನ್‌ನ ಮರುಮಾರಾಟ ಮೌಲ್ಯದ ಮೇಲೆ ಪರಿಣಾಮ ಬೀರುತ್ತದೆ.
ಫೀಚರ್ಸ್: ಸ್ಮಾರ್ಟ್‌ಫೋನ್‌ನ ಫೀಚರ್ಸ್ ಸಹ ಮರುಮಾರಾಟ ಮೌಲ್ಯದ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚಿನ ಶೇಖರಣಾ ಸಾಮರ್ಥ್ಯ, ಹೆಚ್ಚು RAM, ಉತ್ತಮ ಕ್ಯಾಮರಾ ಸಾಮರ್ಥ್ಯ ಮತ್ತು ಸುಧಾರಿತ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳ ಮೌಲ್ಯ ಎಂದಿಗೂ ಕಡಿಮೆ ಆಗುವುದಿಲ್ಲ. ಇದರಿಂದಾಗಿ ನೀವು ಹೊಸದಾಗಿ ಸ್ಮಾರ್ಟ್‌ಫೋನ್ ಖರೀದಿ ಮಾಡುವಾಗಲೇ ಈ ವಿಷಯಗಳ ಕಡೆ ಗಮನಹರಿಸಿ ಖರೀದಿ ಮಾಡಿದರೆ ಇದನ್ನು ಮಾರುವಾಗ ಉತ್ತಮ ಬೆಲೆ ಪಡೆಯಬಹುದು.

ಇನ್ನು ಈ ಫೋನ್ ಅನ್ನು ನೀವು ಅಧಿಕೃತವಾಗಿ ಓಎಲ್‌ಎಕ್ಸ್, ಫ್ಲಿಪ್‌ಕಾರ್ಟ್, ಕ್ಯಾಶಿಫೈ, ಇನ್‌ಸ್ಟಾಕ್ಯಾಶ್, ಕ್ಲಿಕ್ ಮೊಬೈಲ್ ಸೇರಿದಂತೆ ಅನೇಕ ಪ್ಲಾಟ್‌ಫಾರ್ಮ್‌ನಲ್ಲಿ ನಿಮ್ಮ ಮೊಬೈಲ್ ಮಾರಾಟ ಮಾಡಬಹುದು. ಅದರಲ್ಲೂ ಕ್ಯಾಶಿಫೈ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನ ಇಂದಿನ ಮೌಲ್ಯ ಎಷ್ಟಿದೆ ಎಂದೂ ಸಹ ತಿಳಿದುಕೊಳ್ಳಲು ಅನುಕೂಲ ಮಾಡಿಕೊಡಲಾಗಿದೆ. ಇದರಿಂದ ಮಾರಾಟ ಮಾಡುವ ಅದೇ ಫೋನ್ ತೆಗೆದುಕೊಂಡು ಆ ಫೋನ್‌ಬಗ್ಗೆ ಕೆಲವು ವಿವರ ನೀಡಿದರೆ ಸಾಕು. ನಿಮ್ಮ ಫೋನ್‌ಗೆ ಅದು ಬೆಲೆ ನಿಗದಿ ಮಾಡುತ್ತದೆ.


Click it and Unblock the Notifications








