15,000ರೂ.ಒಳಗಿನ ಫೋನ್ ಖರೀದಿಸುತ್ತೀರಾ? ಹಾಗಿದ್ರೆ ಈ ವಿಷಯ ತಿಳಿಯಲೇಬೇಕು!
ಈಗ ಸಾಕಷ್ಟು ಸುಧಾರಿತ ತಂತ್ರಜ್ಞಾನ ಇರುವ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿವೆ. ಅದರಲ್ಲೂ ಕೆಲವು ಇ-ಕಾಮರ್ಸ್ ಸೈಟ್‌ನಲ್ಲಿ ಸಾಮಾನ್ಯ ಬೆಲೆಗಿಂತ ಅಗ್ಗದ ಬೆಲೆಯಲ್ಲಿ ಮಾರಾಟ ಆಗುತ್ತಿದ್ದು, ಕಡಿಮೆಗೆ ಸಿಗುತ್ತವೆ ಎಂದು ಖರೀದಿ ಮಾಡುವಾಗ ನೀವು ಈ ವಿಷಯಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು.
ಹೌದು, ಯಾವುದೇ ಡಿವೈಸ್‌ಗಳನ್ನು ಖರೀದಿ ಮಾಡುವಾಗ ಅದರಲ್ಲಿ ಇರುವ ಫೀಚರ್ಸ್‌ಗಳನ್ನು ಮೊದಲು ತಿಳಿದುಕೊಂಡು ಆ ಫೀಚರ್ಸ್‌ಗೂ ಹಾಗೂ ಆ ಬೆಲೆಗೂ ತಾಳೆ ಮಾಡಿ ನೋಡಬೇಕು. ಅದಾಗ್ಯೂ ಕೆಲವು ಫೋನ್‌ಗಳು ಅತ್ಯುತ್ತಮವಾದ ಫೀಚರ್ಸ್ ಹೊಂದಿದ್ದರೂ ಕಡಿಮೆ ಬೆಲೆ ಹೊಂದಿರುತ್ತವೆ. ಹಾಗೆಯೇ ಕೆಲವು ಫೋನ್‌ಗಳು ಕಡಿಮೆ ಸಾಮರ್ಥ್ಯದ ಫೀಚರ್ಸ್ ಹೊಂದಿದ್ದರೂ ಹೆಚ್ಚಿನ ಬೆಲೆ ಹೊಂದಿರುತ್ತವೆ.

15,000ರೂ. ಗಳಿಗಿಂತ ಕಡಿಮೆ ಬೆಲೆಯ ಫೋನ್‌ಗಳಲ್ಲಿ ಈ ಫೀಚರ್ಸ್ ಗಮನಿಸಿ: ಮಾರುಕಟ್ಟೆಯಲ್ಲಿ ಇದೀಗ 15,000ರೂ. ಬೆಲೆಗಿಂತ ಕಡಿಮೆ ಇರುವ ಸ್ಮಾರ್ಟ್‌ಫೋನ್‌ಗಳಿಗೆ ಭಾರೀ ಬೇಡಿಕೆ ಇದ್ದು, ಈ ಫೋನ್‌ಗಳು ಹಿಂದೆಂದಿಗಿಂತಲೂ ಈಗ ಅತ್ಯುತ್ತಮವಾದ ಕಾರ್ಯಕ್ಷಮತೆಯನ್ನು ಹೊಂದಿವೆ. ಅದರಲ್ಲೂ ರೆಡ್ಮಿ, ರಿಯಲ್‌ಮಿ ಫೋನ್‌ಗಳು ಈ ಬೆಲೆಯಲ್ಲಿ ಹೆಚ್ಚು ಲಭ್ಯ . ಹೀಗಾಗಿ ಖರೀದಿ ಸಮಯದಲ್ಲಿ ಗ್ರಾಹಕರು ಈ ವಿಷಯಗಳ ಕಡೆ ಕಣ್ಣಾಡಿಸಿ, ಜೊತೆಗೆ ಬ್ರ್ಯಾಂಡ್‌ಗಳು ಸಹ ಈ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಿ.
ಡಿಸ್‌ಪ್ಲೇ ಗಮನಿಸಿ: ಈ ತಿಂಗಳು ಹಾಗೂ ಈ ಹಿಂದಿನ ಫೆಬ್ರವರಿ ತಿಂಗಳುಗಳಲ್ಲಿ ಹಲವಾರು ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗಿದ್ದು, ಕೆಲವು ಬ್ರ್ಯಾಂಡ್‌ಗಳು ಡಿಸ್‌ಪ್ಲೇನ ಗುಣಮಟ್ಟಕ್ಕಿಂತ ಅದರ ರಿಫ್ರೆಶ್ ರೇಟ್‌ಗೆ ಹೆಚ್ಚಿನ ಗಮನ ನೀಡಿವೆ. ಹಾಗೆಯೇ ಅಮೋಲೆಡ್ ಬದಲಿಗೆ ಅಗ್ಗದ ಎಲ್‌ಸಿಡಿ ಡಿಸ್‌ಪ್ಲೇ ಬಳಕೆ ಮಾಡಲಾಗುತ್ತಿದ್ದು, ಗೇಮಿಂಗ್, ಚಲನಚಿತ್ರ ವೀಕ್ಷಣೆ ಅಥವಾ ಸುದ್ದಿ ಓದುವಾದ ಡಿಸ್‌ಪ್ಲೇ ಕಳಪೆಯಾಗಿದ್ದರೆ ಫೋನ್ ನಿಷ್ಪ್ರಯೋಜಕವಾಗುತ್ತದೆ. ಹೀಗಾಗಿ 15,000ರೂ.ಬೆಲೆ ಹೊಂದಿರುವ ಫೋನ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆಯಾ ಎಂದು ಖಚಿತಪಡಿಸಿಕೊಳ್ಳಿ.
ಕ್ಯಾಮೆರಾ ಕಡೆಯೂ ಕಣ್ಣಾಯಿಸಬೇಕು: ಸ್ಮಾರ್ಟ್‌ಫೋನ್‌ಗಳು ಹೆಚ್ಚು ಖರೀದಿಯಾಗಲು ಪ್ರಮುಖ ಕಾರಣಗಳಲ್ಲಿ ಕ್ಯಾಮೆರಾ ಸಹ ಒಂದು ವಿಷಯವಾಗಿದೆ. ಯಾಕೆಂದರೆ ಕೆಲವು ಬ್ರ್ಯಾಂಡ್‌ಗಳು ತಮ್ಮ ಫೋನ್‌ಗಳಲ್ಲಿ ಕ್ವಾಡ್, ಟ್ರಿಪಲ್, ಡ್ಯುಯಲ್ ಕ್ಯಾಮೆರಾ ಆಯ್ಕೆ ನೀಡುತ್ತಿವೆ. ಆದರೆ, ಈ ಕ್ಯಾಮೆರಾಗಳು ಎಷ್ಟು ಮೆಗಾಪಿಕ್ಸೆಲ್ ಹೊಂದಿವೆ, ಇವುಗಳ ಸಾಮರ್ಥ್ಯ ಎಷ್ಟಿದೆ ಎಂದು ತಿಳಿದುಕೊಳ್ಳಿ. ಯಾಕೆಂದರೆ ಅಸಮರ್ಥ ಕ್ವಾಡ್ ಕ್ಯಾಮೆರಾಗಿಂತ ಉತ್ತಮವಾದ ಒಂದು ಕ್ಯಾಮೆರಾ ಆಯ್ಕೆ ಇರುವ ಫೋನ್ ಸಹ ಸೂಕ್ತ.

ಬ್ಯಾಟರಿ ಸಾಮರ್ಥ್ಯವನ್ನು ಅರಿತುಕೊಳ್ಳಿ: ಸದ್ಯಕ್ಕೆ 5000mAh ಸಾಮರ್ಥ್ಯದ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಇನ್ನೂ ಕೆಲವು ಸ್ಮಾರ್ಟ್‌ಫೋನ್‌ಗಳು ಸೂಪರ್ ಪಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದುಕೊಂಡಿವೆ. ಆದರೆ, ಕೆಲವು ಬ್ರ್ಯಾಂಡ್‌ಗಳು 10W, 18W ಮತ್ತು 22W ಚಾರ್ಜಿಂಗ್ ಬೆಂಬಲ ಇದೆ ಎಂದು ಜನರನ್ನು ಮರಳು ಮಾಡುತ್ತವೆ. ಆದರೆ, ನೀವು ಈ ಬೆಲೆಯಲ್ಲಿ ಫೋನ್ ಖರೀದಿ ಮಾಡುತ್ತೀರಿ ಎಂದಾದರೆ ಕನಿಷ್ಠ 33W ವೇಗದ ಚಾರ್ಜಿಂಗ್ ಆಯ್ಕೆ ಇದೆಯೇ ಎಂದು ಖಚಿತಪಡಿಸಿಕೊಳ್ಳಿ.
ಯೂಸರ್ ಇಂಟರ್ಫೇಸ್ (UI) ಗಮನಿಸಿ: ಮೊಬೈಲ್‌ಗಳ ಆಪರೇಟಿಂಗ್ ಸಿಸ್ಟಮ್‌ಗಳನ್ನೂ ಈ ವೇಳೆ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಅದರಂತೆ ಹಲವಾರು ಬ್ರ್ಯಾಂಡ್‌ಗಳು ಈ ವಿಷಯದಲ್ಲಿ ಇನ್ನೂ ಸುಧಾರಣೆ ಆಗಬೇಕಿದೆ. ಹಾಗೆಯೇ ಒಪ್ಪೋ ನಂತಹ ಕೆಲವು ಬ್ರ್ಯಾಂಡ್‌ಗಳು ತಮ್ಮ ಹೊಸ ಕಲರ್ ಓಎಸ್ ನೊಂದಿಗೆ ಉತ್ತಮ ಕಾರ್ಯಕ್ಷಮತೆ ಹೊಂದಿವೆಯಾದರೂ ಎಲ್ಲಾ ಕೆಲಸಗಳನ್ನು ಒಂದೇ ರೀತಿಯಲ್ಲಿ ಅವು ಮಾಡುವುದಿಲ್ಲ ಎನ್ನುವುದು ತಿಳಿದಿರಲಿ.

5G ವಿಷಯದ ಬಗ್ಗೆ ಕಡ್ಡಾಯವಾಗಿ ಪರಿಶೀಲಿಸಿ: ಈಗ ಬಹುಪಾಲು ಮಂದಿ 5G ಗೆ ಒಗ್ಗಿಕೊಂಡಿದ್ದಾರೆ. ಹಾಗೆಯೇ ಕೆಲವು ಟೆಲಿಕಾಂಗಳು ಈ ಸೇವೆಯನ್ನು ಹಲವು ಕಡೆ ನೀಡುತ್ತಿದ್ದು, ಫೋನ್‌ಗಳು ಸಹ ಈ 5G ಯನ್ನು ಬೆಂಬಲಿಸುವುದು ಅಗತ್ಯವಾಗಿದೆ. ಇನ್ಮುಂದೆ ಎಲ್ಲಾ ಕಡೆ ಈ 5G ವಿಸ್ತಾರವಾಗಲಿದ್ದು, ನಿಮ್ಮ ಹೊಸ ಫೋನ್ ಇನ್ನೂ ಸಹ 4G ಯಲ್ಲೇ ಅಥವಾ ಅದರ ಹಿಂದಿನ ಆವೃತ್ತಿಯಲ್ಲಿ ಕೆಲಸ ಮಾಡಿದರೆ ಯಾವುದೇ ಪ್ರಯೋಜನ ಇರುವುದಿಲ್ಲ.


Click it and Unblock the Notifications








