ಕೊಡಾಕ್ ಸಂಸ್ಥೆಯಿಂದ ಹೊಸ 4K ಸ್ಮಾರ್ಟ್‌ಟಿವಿ ಲಾಂಚ್!..ಅಚ್ಚರಿಯ ಬೆಲೆ!
ಕೊಡಾಕ್ ಸಂಸ್ಥೆಯು ಸ್ಮಾರ್ಟ್ ಟಿವಿ ವಿಭಾಗದಲ್ಲಿಯೂ ಕಾಣಿಸಿಕೊಂಡಿದ್ದು, ಕೆಲವು ಟಿವಿ ಸರಣಿಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಇದೀಗ ಕೊಡಾಕ್ ಕಂಪನಿಯು ಹೊಸದಾಗಿ ಕೊಡಾಕ್ ಮ್ಯಾಟ್ರಿಕ್ಸ್ 4K QLED TV ಮತ್ತು 4K CA PRO LED TV ಸ್ಮಾರ್ಟ್ ಟಿವಿಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.
ಹೌದು, ಕೊಡಾಕ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಕೊಡಾಕ್ ಮ್ಯಾಟ್ರಿಕ್ಸ್ 4K ಕ್ಯೂಎಲ್‌ಇಡಿ ಟಿವಿ ಮತ್ತು 4K CA ಪ್ರೊ ಎಲ್‌ಇಡಿ ಟಿವಿ ಸ್ಮಾರ್ಟ್ ಟಿವಿಗಳನ್ನು ಬಿಡುಗಡೆ ಮಾಡಿದೆ. ಇನ್ನು ಕೊಡಾಕ್ ಮಾರ್ಟಿಕ್ಸ್ QLED ಟಿವಿ ಐದು ಭಿನ್ನ ಗಾತ್ರಗಳ ಆಯ್ಕೆಯಲ್ಲಿ ಲಭ್ಯ ಇವೆ. ಹಾಗೆಯೇ ಈ ಸ್ಮಾರ್ಟ್ ಟಿವಿಗಳು 4K ರೆಸಲ್ಯೂಶನ್ ಡಿಸ್‌ಪ್ಲೇ ಮತ್ತು 40W ಸ್ಪೀಕರ್ ಅನ್ನು ಪಡೆದಿವೆ.

ಹಾಗೆಯೇ ಈ ನೂತನ ಸ್ಮಾರ್ಟ್ ಟಿವಿಗಳು ಗೂಗಲ್ ಟಿವಿ ಇಂಟರ್ಫೇಸ್ ರನ್ ಮಾಡುತ್ತದೆ. ಸುಮಾರು 10,000 ಕ್ಕೂ ಅಧಿಕ ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳ ಸೌಲಭ್ಯ ಕೂಡಾ ಪಡೆದಿವೆ. ಇದರೊಂದಿಗೆ ಈ ಟಿವಿಗಳು HDR10 ಮತ್ತು ಡಾಲ್ಬಿ ವಿಷನ್ ಸೌಲಭ್ಯ ಸಹ ಒಳಗೊಂಡಿವೆ. ಹಾಗಾದರೆ ಕೊಡಾಕ್ ಮ್ಯಾಟ್ರಿಕ್ಸ್ 4K ಕ್ಯೂಎಲ್‌ಇಡಿ ಟಿವಿ ಮತ್ತು 4K CA ಪ್ರೊ ಎಲ್‌ಇಡಿ ಟಿವಿಗಳ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಕೊಡಾಕ್ ಸಂಸ್ಥೆಯ ನೂತನ ಟಿವಿಗಳ ಫೀಚರ್ಸ್ ಹೀಗಿವೆ
ಕೊಡಾಕ್ ಮ್ಯಾಟ್ರಿಕ್ಸ್ ಕ್ಯೂಎಲ್‌ಇಡಿ ಟಿವಿಗಳು 43, 50, 55, 65 ಮತ್ತು 75 ಇಂಚಿನ ಸ್ಕ್ರೀನ್ ಗಾತ್ರಗಳ ಆಯ್ಕೆಯಲ್ಲಿ ಲಭ್ಯ ಇವೆ. ಜೊತೆಗೆ ಈ ಟಿವಿಗಳು 4K ರೆಸಲ್ಯೂಶನ್, 60Hz ರಿಫ್ರೆಶ್ ರೇಟ್, 16:9 ಆಕಾರ ಅನುಪಾತ ಮತ್ತು 4000:1 ಕಾಂಟ್ರಾಸ್ಟ್ ಅನುಪಾತ ಅನ್ನು ಪಡೆದಿವೆ. ಇದಲ್ಲದೆ, ಈ ಟಿವಿಗಳು HDR10 ಮತ್ತು ಡಾಲ್ಬಿ ವಿಷನ್ ಸಪೋರ್ಟ್ ಅನ್ನು ಸಹ ಒಳಗೊಂಡಿವೆ.
ಕೊಡಾಕ್ ಮ್ಯಾಟ್ರಿಕ್ಸ್ ಕ್ಯೂಎಲ್‌ಇಡಿ ಟಿವಿಗಳು ಗೂಗಲ್ ಟಿವಿ ಇಂಟರ್ಫೇಸ್ ಅನ್ನು ಬೂಟ್ ಮಾಡುತ್ತವೆ. ಈ ಸ್ಮಾರ್ಟ್ ಟಿವಿಗಳು ಮಲ್ಟಿಪಲ್ ಬಳಕೆದಾರರ ಪ್ರೊಫೈಲ್‌ಗಳು, ಸ್ಮಾರ್ಟ್ ಹೋಮ್ ಡಿವೈಸ್‌ಗಳಿಗೆ ಕೈಪಿಡಿ ಮತ್ತು ವಾಯಿಸ್ ನಿಯಂತ್ರಣ ಮತ್ತು ಅಂತರ್ನಿರ್ಮಿತ ಕ್ರೋಮ್‌ಕಾಸ್ಟ್ ಮತ್ತು ಏರ್‌ಪ್ಲೇ ಗಳಂತಹ ಹಲವಾರು ಫೀಚರ್ಸ್‌ಗಳ ಆಯ್ಕೆ ಕೂಡಾ ಪಡೆದಿವೆ.
ಈ ನೂತನ ಟಿವಿಗಳು ಮೂರು ಹೆಚ್‌ಡಿಎಮ್‌ಐ ಪೋರ್ಟ್‌ಗಳು, ಎರಡು ಯುಎಸ್‌ಬಿ ಪೋರ್ಟ್‌ಗಳು, ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ ಮತ್ತು ಈಥರ್ನೆಟ್ ಪೋರ್ಟ್ ಆಯ್ಕೆಗಳನ್ನು ಕೂಡಾ ಪಡೆದಿವೆ. ಹಾಗೆಯೇ ಈ ಸ್ಮಾರ್ಟ್ ಟಿವಿಗಳು ಡಾಲ್ಬಿ ಅಟ್ಮಾಸ್, ಡಾಲ್ಬಿ ಡಿಜಿಟಲ್ ಪ್ಲಸ್ ಮತ್ತು ಡಿಟಿಎಸ್ ಟ್ರೂ ಸರೌಂಡ್ ಜೊತೆಗೆ 40W ಸ್ಪೀಕರ್‌ಗಳನ್ನು ಸಹ ಒಳಗೊಂಡಿವೆ.
ಕೊಡಾಕ್ CAPRO 4K ಗೂಗಲ್ ಟಿವಿಯು 55 ಇಂಚಿನ ಡಿಸ್‌ಪ್ಲೇ ಅನ್ನು ಹೊಂದಿದ್ದು, ಡಿಸ್‌ಪ್ಲೇಯು 4K ರೆಸಲ್ಯೂಶನ್ ಸಪೋರ್ಟ್, 500 nits ಬ್ರೈಟ್ನೆಸ್ ಹಾಗೂ HDR10+ ಸಪೋರ್ಟ್ ಪಡೆದಿದೆ. ಮ್ಯಾಟ್ರಿಕ್ಸ್ ಟಿವಿಯಂತೆ, CAPRO 4K ಟಿವಿ ಕೂಡಾ ಅಂತರ್ನಿರ್ಮಿತ ಕ್ರೋಮ್‌ಕಾಸ್ಟ್ ಮತ್ತು ಏರ್‌ಪ್ಲೇ ಸಪೋರ್ಟ್ ಪಡೆದಿದೆ. ಅಲ್ಲದೇ ಗೂಗಲ್ ಅಸಿಸ್ಟಂಟ್ ಸಪೋರ್ಟ್ ಮತ್ತು 40W ಸ್ಪೀಕರ್ ಅನ್ನು ಸಹ ಹೊಂದಿದೆ.
ಬೆಲೆ ಮತ್ತು ಲಭ್ಯತೆಯ ಮಾಹಿತಿ ಹೀಗಿದೆ
ಕೊಡಾಕ್ 4K ಮ್ಯಾಟ್ರಿಕ್ಸ್ ಕ್ಯೂಎಲ್‌ಇಡಿ ಟಿವಿಯ 43 ಇಂಚಿನ (43MT5055) ವೇರಿಯಂಟ್ ಬೆಲೆ 22,999 ರೂ. ಆಗಿದೆ. ಈ ಟಿವಿಯು ಅಕ್ಟೋಬರ್ 7 ರಿಂದ ಭಾರತದಲ್ಲಿ ಖರೀದಿಗೆ ಲಭ್ಯ ಆಗಲಿದೆ. ಕೊಡಾಕ್ CAPRO ಪ್ರೊ ಟಿವಿಯ ಪ್ರಾರಂಭಿಕ ಬೆಲೆಯು 25,999 ರೂ. ಆಗಿದೆ. ಗ್ರಾಹಕರು ಫ್ಲಿಪ್‌ಕಾರ್ಟ್ ತಾಣದ ಮೂಲಕ ಖರೀದಿ ಮಾಡಬಹುದಾಗಿದೆ.


Click it and Unblock the Notifications








