Koo ಆಪ್‌ ಸೇರಲಿವೆ ಎರಡು ಹೊಸ ಫೀಚರ್ಸ್‌!..ಆ ಬಗ್ಗೆ ಇಲ್ಲಿದೆ ಮಾಹಿತಿ

|

ಪ್ರಸ್ತುತ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಟ್ರೆಂಡಿಂಗ್‌ನಲ್ಲಿ ಇವೆ. ಆ ಸಾಲಿನಲ್ಲಿ ಕಾಣಿಸಿಕೊಂಡಿರುವ ಭಾರತದ (Koo) ಕೂ ಮೈಕ್ರೋಬ್ಲಾಗಿಂಗ್ ಅಪ್ಲಿಕೇಶನ್ ತನ್ನದೇ ಶೈಲಿಯಿಂದ ಬಳಕೆದಾರರನ್ನು ಸೆಳೆದಿದೆ. ಕೂ ಮೈಕ್ರೋಬ್ಲಾಗಿಂಗ್ ತಾಣವು ಟ್ವಿಟರ್ ಆಪ್‌ಗೆ ನೇರ ಫೈಟ್‌ ನೀಡುವ ಅಪ್ಲಿಕೇಶನ್ ಆಗಿಯೂ ಬಿಂಬಿತವಾಗಿದೆ. ಇದೀಗ ತನ್ನ ಬಳಕೆದಾರರ ವ್ಯಾಪ್ತಿ ಹೆಚ್ಚಿಸಿಕೊಳ್ಳಲು ಕೂ ಮೈಕ್ರೋಬ್ಲಾಗಿಂಗ್ ಅಪ್ಲಿಕೇಶನ್ ಎರಡು ನೂತನ ಫೀಚರ್ಸ್‌ಗಳನ್ನು ಅಳವಡಿಸಿಕೊಳ್ಳಲು ಸಕಲ ಸಜ್ಜಾಗಿದೆ ಎಂದು ವರದಿಯೊಂದರಿಂದ ತಿಳಿದು ಬಂದಿದೆ.

Koo ಆಪ್‌ ಸೇರಲಿವೆ ಎರಡು ಹೊಸ ಫೀಚರ್ಸ್‌!..ಆ ಬಗ್ಗೆ ಇಲ್ಲಿದೆ ಮಾಹಿತಿ

ಭಾರತೀಯ ಸಮುದಾಯದೊಳಗೆ ಹೆಚ್ಚಿನ ಬಳಕೆದಾರರನ್ನು ತನ್ನತ್ತ ಆಕರ್ಷಿಸಲು ಕಂಪನಿಯು ಹೊಸ ಅನುಭವಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂದು ಕೂ ಆಪ್‌ನ ಸಿಇಒ, ಅಪರಮೇಯ ರಾಧಾಕಿಷ್ಣ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಮೈಕ್ರೋಬ್ಲಾಗಿಂಗ್ ಕೂ ಅಪ್ಲಿಕೇಶನ್ ಮುಂದಿನ ತಿಂಗಳಿನಲ್ಲಿ ವಾಟ್ಸಾಪ್‌ ಗ್ರೂಪ್‌ ನಂತಹ ಆಯ್ಕೆ ಮತ್ತು ವಿಡಿಯೋ ಲೈವ್ ಫೀಚರ್ಸ್‌ ಪರಿಚಯಿಸಲಿದೆ ಎಂದು ಹೇಳಲಾಗಿದೆ. ಇನ್ನು ಕೂ ಪ್ಲಾಟ್‌ಫಾರ್ಮ್ ಪ್ರಸ್ತುತ 5000 ಗಣ್ಯ ವ್ಯಕ್ತಿಗಳ ಪರಿಶೀಲಿಸಿದ ಖಾತೆಗಳನ್ನು ಹೊಂದಿದೆ. ಇವುಗಳಲ್ಲಿ ಬಾಲಿವುಡ್‌ನ ವ್ಯಕ್ತಿಗಳಿಂದ ಹಿಡಿದು ರಾಜಕಾರಣಿಗಳವರೆಗೂ ಇದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

Koo ಆಪ್‌ ಸೇರಲಿವೆ ಎರಡು ಹೊಸ ಫೀಚರ್ಸ್‌!..ಆ ಬಗ್ಗೆ ಇಲ್ಲಿದೆ ಮಾಹಿತಿ

ವಾಟ್ಸಾಪ್‌ ಗ್ರೂಪ್‌ನಂತಹ ಆಯ್ಕೆ
ವಾಟ್ಸಾಪ್ ಗ್ರೂಪ್‌ನಂತಹ ಮುಕ್ತ ಸಮುದಾಯದ ಅನುಭವಕ್ಕಾಗಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಕೂ ಸಿಇಒ ಹೇಳಿದ್ದಾರೆ. ಇದು ಹೇಗೆ ವಿಭಿನ್ನವಾಗಿರುತ್ತದೆ ಎಂದರೆ ಈ ಸಮುದಾಯ-ಆಧಾರಿತ ಗುಂಪು ಚಾಟ್‌ಗೆ ಸೇರಲು ತಿಳಿದಿರುವ ಫೋನ್ ಸಂಖ್ಯೆಗಳ ಅಗತ್ಯವಿರುವುದಿಲ್ಲ. ಬಳಕೆದಾರರು ಸಾಮಾನ್ಯ ಆಸಕ್ತಿಯೊಂದಿಗೆ ಗ್ರೂಪ್‌ಗಳಲ್ಲಿ ಮಾತನಾಡಲು ಸಾಧ್ಯವಾಗುತ್ತದೆ.

ವೀಡಿಯೊ ಲೈವ್ಸ್ ಆಯ್ಕೆ
ವೀಡಿಯೊ ಲೈವ್ ಫೀಚರ್‌ನಲ್ಲಿ ಕೂಡ ಕೂ ಕೆಲಸ ಮಾಡಲಿದೆ ಎನ್ನಲಾಗಿದೆ. ಪ್ರಮುಖ ಖಾತೆದಾರರಿಗೆ ಅಪ್ಲಿಕೇಶನ್ ಆರಂಭದಲ್ಲಿ ಈ ಫೀಚರ್ಸ್‌ ಅನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಬಳಕೆದಾರರು ನಿರ್ದಿಷ್ಟ ರೂಮ್‌ಗಳಿಗೆ ವೀಡಿಯೊಗಳನ್ನು ಸ್ಟ್ರೀಮ್ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.

Koo ಆಪ್‌ ಸೇರಲಿವೆ ಎರಡು ಹೊಸ ಫೀಚರ್ಸ್‌!..ಆ ಬಗ್ಗೆ ಇಲ್ಲಿದೆ ಮಾಹಿತಿ

ಏನಿದು ಕೂ ಆಪ್‌?
ಕೂ ಮೂಲತಃ ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್ ಮತ್ತು ಟ್ವಿಟರ್‌ಗೆ ಭಾರತೀಯ ಪರ್ಯಾಯವಾಗಿದೆ. ಈ ಅಪ್ಲಿಕೇಶನ್ ಅನ್ನು ಏಪ್ರಿಲ್ 2020 ರಲ್ಲಿ ಅಪ್ರಮೇಯ ರಾಧಾಕೃಷ್ಣ ಮತ್ತು ಮಾಯಾಂಕ್ ಬಿಡಾವಟ್ಕಾ ಅವರು ಅಭಿವೃದ್ಧಿಪಡಿಸಿದ್ದಾರೆ. ಈ ಭಾರತೀಯ ಅಪ್ಲಿಕೇಶನ್‌ನಲ್ಲಿ ಭಾರತದ ಅನೇಕ ಅಧಿಕಾರಿಗಳು ತಮ್ಮ ಖಾತೆಗಳನ್ನು ರಚಿಸಿರುವುದರಿಂದ ಇದು ಈಗ ಹೆಚ್ಚು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿದೆ. ಬಳಕೆದಾರರ ಅನುಕೂಲಕ್ಕಾಗಿ ಅಪ್ಲಿಕೇಶನ್ ಡೆವಲಪರ್‌ಗಳು ಹಿಂದಿ, ತೆಲುಗು, ಕನ್ನಡ, ಬಂಗಾಳಿ, ತಮಿಳು, ಮಲಯಾಳಂ, ಗುಜರಾತಿ, ಮರಾಠಿ, ಪಂಜಾಬಿ, ಒರಿಯಾ ಮತ್ತು ಅಸ್ಸಾಮೀಸ್ ಸೇರಿದಂತೆ ಅನೇಕ ಭಾರತೀಯ ಪ್ರಾದೇಶಿಕ ಭಾಷೆಗಳಿಗೆ ಬೆಂಬಲವನ್ನು ಸೇರಿಸಿದ್ದಾರೆ.

ಟ್ವಿಟರ್‌ಗೆ ಫೈಟ
ಕೂ ಆಪ್‌ ಸಹ ಟ್ವಿಟರ್‌ನಂತೆ ಮೈಕ್ರೋಬ್ಲಾಗಿಂಗ್ ಅಪ್ಲಿಕೇಶನ್ ಆಗಿದೆ. ಟ್ವಿಟರ್‌ನಂತೆ ಸ್ವದೇಶಿ ಕೂ ಆಪ್‌ನಲ್ಲಿಯೂ ಬಳಕೆದಾರರಿಗೆ 400 ಅಕ್ಷರಗಳನ್ನು ಒಳಗೊಂಡಿರುವ ಸಣ್ಣ ಪೋಸ್ಟ್‌ಗಳನ್ನು ಶೇರ್‌ ಮಾಡಬಹುದಾದ ಅವಕಾಶ ಇದೆ. ಇದರೊಂದಿಗೆ ಕೂ ಆಪ್‌ನಲ್ಲಿ ಬಳಕೆದಾರರು ಆಡಿಯೋ ಮೆಸೆಜ್, ವೀಡಿಯೊ ಗಳು ಕಂಟೆಂಟ್, ಫೋಟೋಗಳು ಮತ್ತು ಲಿಂಕ್‌ ಗಳನ್ನು ಸಹ ಶೇರ್ ಮಾಡಬಹುದಾಗಿದೆ.

ಕೂ ಆಪ್‌ ಡೌನ್‌ಲೋಡ್ ಮಾಡುವುದು ಹೇಗೆ?
ಆಂಡ್ರಾಯ್ಡ್ ಮತ್ತು ಐಓಎಸ್ ಈ ಇಬ್ಬರೂ ಬಳಕೆದಾರರು ಕೂ ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಆಂಡ್ರಾಯ್ಡ್‌ ಬಳಕೆದಾರರು ಕೂ ಆಪ್‌ ಅನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಐಓಎಸ್ ಬಳಕೆದಾರರು ಆಪಲ್ ಆಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

Best Mobiles in India

English summary
Koo App is Planning to Launch a WhatsApp-like: Report.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X