ಅಂತರ್‌ ಜಿಲ್ಲಾ ಇ-ಪಾಸ್‌ನಲ್ಲಿ ಈಗ ಟು-ವೇ ಪ್ರಯಾಣಕ್ಕೆ ಅನುಮತಿ!

|

ದೇಶದಲ್ಲಿ ಕೊರೊನಾ ವೈರಸ್‌ ವ್ಯಾಪಕವಾಗಿ ಹರಡುವುದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮೂರನೇ ಹಂತದಲ್ಲಿ ಲಾಕ್‌ಡೌನ್ ಜಾರಿ ಮುಂದುವರೆಸಿದೆ. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಮನೆಯಲ್ಲಿಯೇ ಇರುವುದು ಅಗತ್ಯವಾಗಿದೆ. ಆದರೆ ಜನರಿಗೆ ಅಗತ್ಯ ಸೇವೆಗಳ ಪೂರೈಕೆಗೆ ತೊಂದರೆ ಆಗಬಾರದೆಂದು, ಅಗತ್ಯ ಸಾಮಗ್ರಿಗಳ ವ್ಯಾಪಾರಸ್ಥರಿಗಾಗಿ ಈಗಾಗಲೇ ಇ-ಪಾಸ್ ವ್ಯವಸ್ಥೆ ಮಾಡಿದೆ. ಹಾಗೆಯೇ ಲಾಕ್‌ಡೌನ್‌ನಿಂದಾಗಿ ಬೇರೆ ಜಿಲ್ಲೆಗಳಲ್ಲಿ ಸಿಲುಕಿರುವ ಜನರಿಗೂ ಈಗ ಪಾಸ್ ನೀಡಲಾಗುತ್ತಿದೆ.

ಹೌದು, ಲಾಕ್‌ಡೌನ್‌ ಜಾರಿ ಮಾಡಿದಾಗಿನಿಂದಲೂ ಅನೇಕರು ಅವರು ಕೆಲಸ ಮಾಡುವ ಜಿಲ್ಲೆಗಳಲ್ಲಿಯೇ ಸಿಲುಕಿದ್ದಾರೆ. ಹೀಗೆ ಲಾಕ್‌ಡೌನ್‌ನಿಂದಾಗಿ ಬೇರೆ ಜಿಲ್ಲೆಯಲ್ಲಿ ಉಳಿದುಕೊಂಡವರು ಅವರ ಜಿಲ್ಲೆಗೆ ಹೋಗಲು ಸಾರ್ವಜನಿಕರಿಗೆ ಪೊಲೀಸ್‌ ಇಲಾಖೆಯಿಂದ ಅಂತರ್ ಜಿಲ್ಲಾ ಓಡಾಟಕ್ಕೆ ಪಾಸ್ ವಿತರಿಸಲಾಗುತ್ತದೆ. ಹೀಗಾಗಿ ಅಂತರ್‌ ಜಿಲ್ಲೆಗಳ ನಡುವೆ ಪ್ರಯಾಣ ಮಾಡಲು ಜನರು ಆನ್‌ಲೈನ್‌ ಮೂಲಕ ಪಾಸ್‌ ಪಡೆಯಬಹುದಾಗಿದೆ. ಚೆಕ್‌ಪೋಸ್ಟ್‌ನಲ್ಲಿ ಪಾಸ್‌ ತೋರಿಸಿ, ಆರೋಗ್ಯ ತಪಾಸಣೆಗೆ ಒಳಗಾಗಿ ಸಂಚರಿಸಬಹುದಾಗಿದೆ.

ಜಿಲ್ಲಾ ಇ-ಪಾಸ್

ಈ ಮೊದಲು ಅಂತರ್ ಜಿಲ್ಲಾ ಇ-ಪಾಸ್‌ನಲ್ಲಿ ಒಂದು ಅವಧಿಗೆ ಮಾತ್ರ ಬಳಸಲು ಅನುಮತಿ ನೀಡಲಾಗಿತ್ತು. ಆದರೆ ಇ-ಪಾಸ್‌ನಲ್ಲಿ ಇದೀಗ ಟು-ವೇ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಹೀಗಾಗಿ ಇ-ಪಾಸ್‌ ಪಡೆದು ಲಾಕ್‌ಡೌನ್‌ನಿಂದಾಗಿ ಬೇರೆ ಜಿಲ್ಲೆಯಲ್ಲಿ ಇರುವ ತಮ್ಮ ಕುಟುಂಬದವರನ್ನು ಕರೆದುಕೊಂಡು ಮರಳಿ ಹಿಂದಿರುಗಬಹುದಾಗಿದೆ. ಆದರೆ ಪಾಸ್‌ ಅನ್ನು ದುರುಪಯೋಗಕ್ಕೆ ಬಳಸುವುದು ಡಿಎಂ ಕಾಯ್ದೆಯಡಿ ಶಿಕ್ಷಾರ್ಹ ಆಗಿದೆ. ಪಾಸ್‌ ಪಡೆಯಲು https://kspclearpass.idp.mygate.com/ ಭೇಟಿ ನೀಡಿ. ಹಾಗೂ ಆನ್‌ಲೈನ್‌ನಲ್ಲಿ ಪಾಸ್‌ಗೆ ಅಪ್ಲೈ ಮಾಡುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಹಂತ 1

ಹಂತ 1

ಅಂತರ ಜಿಲ್ಲಾ ಪಾಸ್ ಪಡೆಯಲು ಈ ವೆಬ್‌ಸೈಟ್‌ಗೆ ಭೇಟಿ ನೀಡಿರಿ. https://kspclearpass.idp.mygate.com/ ಮೊಬೈಲ್ ನಂಬರ್ ನಮೂದಿಸಿ. ಓಟಿಪಿ ಎಂಟ್ರಿ ಮಾಡಿ.

ಹಂತ 2

ಹಂತ 2

ನಂತರ ಪಾಸ್‌ ಪಡೆಯುವವರ ಪೂರ್ಣ ಮಾಹಿತಿ ಭರ್ತಿ ಮಾಡಿ. ಹೆಸರು, ಮನೆ ವಿಳಾಸ, ಪಿನ್ ನಂಬರ್ ಮತ್ತು ಪ್ರಯಾಣಕ್ಕೆ ಬಳಸುವ ವಾಹನದ ನಂಬರ್ ನಮೂದಿಸಿ. ನಂತರ Request pass ಒತ್ತಿರಿ.

ಹಂತ 3

ಹಂತ 3

ಜನ್ಮ ದಿನಾಂಕ, ಆಧಾರ್‌ಕಾರ್ಡ್, ಪ್ಯಾನ್, ವೋಟರ್‌ಐಡಿ, ಪಾಸ್‌ಪೋರ್ಟ್‌, ಡಿಎಲ್‌, ರೇಶನ್‌ ಕಾರ್ಡ್‌, ಮಾಹಿತಿ ಅಪ್‌ಲೋಡ್ ಮಾಡುವುದು.

ಹಂತ 4

ಹಂತ 4

ಭೇಟಿ ಆಗಲು ಹೋಗುವ ವ್ಯಕ್ತಿಯ ಜೊತೆಗಿನ ಸಂಬಂಧ ತಿಳಿಸುವುದು ಹಾಗೂ ಯಾವ ಕಾರಣಕ್ಕೆ ಹೋಗಲಾಗುತ್ತಿದೆ ಎಂಬ ಮಾಹಿತಿ ಭರ್ತಿ ಮಾಡುವುದು.

ಹಂತ 5

ಹಂತ 5

ಯಾವ ಸ್ಥಳ ಹಾಗೂ ಯಾವ ಜಿಲ್ಲೆಯಿಂದ ಪ್ರಯಾಣ ಮಾಡಲಾಗುತ್ತದೆ ಎನ್ನುವ ಮಾಹಿತಿ ಭರ್ತಿ ಮಾಡುವುದು.

ಹಂತ 6

ಹಂತ 6

ನೀವು ಭೇಟಿ ನೀಡುವ ಸ್ಥಳದ ವಿಳಾಸ ನಮೂದಿಸುವುದು.

ಹಂತ 7

ಹಂತ 7

ಭೇಟಿ ಮಾಡುವ ವ್ಯಕ್ತಿಯ ಹೆಸರು ಹಾಗೂ ಮೊಬೈಲ್ ಸಂಖ್ಯೆ ಎಂಟ್ರಿ ಮಾಡಿರಿ.

ಹಂತ 8

ಹಂತ 8

ಪ್ರಯಾಣ ಮಾಡುವ ದಿನಾಂಕದ ಬಗ್ಗೆ ಮಾಹಿತಿ ನಮೂದಿಸಿ.

ಹಂತ 9

ಹಂತ 9

ಡ್ರೈವರ್ ಸೇರಿದಂತೆ ಮೂರು ಜನರಿಗೆ ಪ್ರಯಾಣಕ್ಕೆ ಅವಕಾಶ ಇರುತ್ತದೆ. ಸಹ ಪ್ರಯಾಣಿಕರ ಮಾಹಿತಿ ಭರ್ತಿ ಮಾಡುವುದು.

ಹಂತ 10

ಹಂತ 10

ಮೇಲೆ ನೀಡಿರುವ ಎಲ್ಲ ಮಾಹಿತಿ ಸರಿಯಾಗಿದೆ ಎಂದು ಒಪ್ಪಿ (ಬಾಕ್ಸ್‌ನಲ್ಲಿ ಟಿಕ್ ಮಾಡಿ) ಕನ್ಫರ್ಮ್ ಬಟನ್ ಒತ್ತಿರಿ.

ಹಂತ 11

ಹಂತ 11

ಕನ್ಫರ್ಮ್ ಬಟನ್ ಒತ್ತಿದ ಮೇಲೆ ನಿಮಗೆ ಪಿಡಿಎಫ್‌ ಫಾರ್ಮೆಟ್‌ನಲ್ಲಿ ಇ-ಪಾಸ್‌ ಕಾಣಿಸುತ್ತದೆ.

ಹಂತ 12

ಹಂತ 12

ನಂತರ ಕೆಳಗಡೆ ಕಾಣಿಸುವ ಪ್ರಿಂಟ್ ಪಾಸ್‌ ಆಯ್ಕೆ ಒತ್ತಿರಿ. ಈ ರೀತಿ ಸುಲಭವಾಗಿ ನೀವು ಪಾಸ್ ಪಡೆಯಬಹುದು.

Best Mobiles in India

English summary
KSP clear pass can be downloaded for onward and return journey.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X