Home
ಸುದ್ದಿಜಾಲ

ಪಾಕಿಸ್ತಾನಿಯರಿಂದ ಕುವೆಂಪು ವಿಶ್ವವಿದ್ಯಾಲಯದ ವೆಬ್‌ಸೈಟ್ ಹ್ಯಾಕ್?!

ಪ್ರತಿಷ್ಟಿತ ಸಂಸ್ಥೆಗಳ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡುತ್ತಿದ್ದ ಹ್ಯಾಕರ್‌ಗಳ ಕಣ್ಣು ಇದೀಗ ಕರ್ನಾಟಕದ ಪ್ರತಿಷ್ಟಿತ ವಿಶ್ವವಿದ್ಯಾಲಯದ ಮೇಲೆ ಬಿದ್ದಿದೆ.

By Bhaskar N J

ಪ್ರತಿಷ್ಟಿತ ಸಂಸ್ಥೆಗಳ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡುತ್ತಿದ್ದ ಹ್ಯಾಕರ್‌ಗಳ ಕಣ್ಣು ಇದೀಗ ಕರ್ನಾಟಕದ ಪ್ರತಿಷ್ಟಿತ ವಿಶ್ವವಿದ್ಯಾಲಯದ ಮೇಲೆ ಬಿದ್ದಿದೆ. ಕರ್ನಾಟಕ ರಾಜ್ಯದ ಪ್ರತಿಷ್ಟಿತ ಕುವೆಂಪು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ ಅನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದು, ವೆಬ್‌ಸೈಟ್‌ಗೆ ಸಂಬಂಧಪಟ್ಟ ಬಹುತೇಕ ಮಾಹಿತಿಗಳನ್ನು ಅಳಿಸಿಹಾಕಿದ್ದಾರೆ.

ಪ್ರತಿದಿನ ವಿಶ್ವಮಾನವ ಸಂದೇಶ ಸಾರುತ್ತಿದ್ದ ಕುವೆಂಪು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ ಮೇಲೆ ಕಪ್ಪು ಸ್ಕ್ರೀನ್ ಆವರಿಸಿಕೊಂಡಿದ್ದು, ಪಾಕಿಸ್ತಾನ್ ಜಿಂದಾಬಾದ್ ಘೋಷಣೆಯಷ್ಟೇ ಕಾಣುತ್ತಿದೆ. ಸೆಕ್ಯುರಿಟಿ ಇಸ್ ಜಸ್ಟ್ ಎ ಫ್ಯಾಂಟಸಿ, ಇಟ್ಸ್ ಬೆಟರ್ ಟು ಹ್ಯಾವ್ ಎ ಗುಡ್ ಸೆಕ್ಯುರಿಟಿ ಎಂಬ ಬರಹಗಳ ಮೂಲಕ ವೆಬ್‌ಸೈಟ್ ಭದ್ರತೆಯನ್ನು ಅಣಕಿಸಲಾಗಿದೆ.

ಪಾಕಿಸ್ತಾನಿಯರಿಂದ ಕುವೆಂಪು ವಿಶ್ವವಿದ್ಯಾಲಯದ ವೆಬ್‌ಸೈಟ್ ಹ್ಯಾಕ್?!

ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಿರುವ ಹ್ಯಾಕರ್‌ಗಳೂ ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟ ಬಹುತೇಕ ಮಾಹಿತಿಗಳನ್ನು ಅಳಿಸಿಹಾಕಿರುವುದಲ್ಲದೇ ವೆಬ್‌ಸೈಟ್ ಮೇಲೆ ಪಾಕಿಸ್ತಾನ್ ಜಿಂದಾಬಾದ್ ಎಂದು ಬರೆದಿದ್ದಾರೆ. ಹಾಗಾಗಿ, ಪಾಕಿಸ್ಥಾನದ ಬಾಜ್ವಾ ಎಂಬ ಸಂಘಟನೆಯಲ್ಲಿರುವ ಹ್ಯಾಕರ್‌ಗಳೂ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಿರುವ ಶಂಕೆ ಮೂಡಿದೆ.

ಈ ಬಗ್ಗೆ 'ಪ್ರತಿಕ್ರಿಯೆ ನೀಡಿರುವ ಕುವೆಂಣಪು ವಿಶ್ವವಿದ್ಯಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಸತ್ಯಪ್ರಕಾಶ್, ಇಂದು ಬೆಳಗ್ಗೆ ಹ್ಯಾಕ್ ಆಗಿರುವುದು ಗಮನಕ್ಕೆ ಬಂತು. ಕೂಡಲೇ ನಮ್ಮ ಐಟಿ ಡಿಪಾರ್ಟ್ಮೆಂಟ್ ಅಲರ್ಟ್ ಆಗಿ ರಿಕವರ್ ಮಾಡುತ್ತಿದೆ. ಕೆಲವೇ ಕ್ಷಣದಲ್ಲಿ ಪುನಃ ಮೊದಲಿನಂತೆ ವೆಬ್‌ಸೈಟ್ ತೆರೆದುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಾಕಿಸ್ತಾನಿಯರಿಂದ ಕುವೆಂಪು ವಿಶ್ವವಿದ್ಯಾಲಯದ ವೆಬ್‌ಸೈಟ್ ಹ್ಯಾಕ್?!

ಕೆಲವು ಪ್ರತಿಷ್ಟಿತ ಇಲಾಖೆಗಳು, ಸರ್ಕಾರಿ ಸಂಸ್ಥೆಗಳ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡುವುದು ಆಗಾಗ ನಡೆಯುತ್ತಿರುತ್ತದೆ. ಇದೀಗ ವಿವಿ ವೆಬ್ಸೈಟ್ ಮೇಲೂ ಹ್ಯಾಕರ್ಗಳ ಕಣ್ಣು ಬಿದ್ದಿರುವುದು ವಿವಿ ಆಡಳಿತ ಮಂಡಳಿಯನ್ನು ಬೆಚ್ಚಿ ಬೀಳಿಸಿದೆ. ಇನ್ನು ಕುವೆಂಪು ವಿವಿ ಕುಲಪತಿ ಪ್ರೋ. ಜೋಗನ್ ಶಂಕರ್ ಅವರು ತುರ್ತು ಸಭೆ ಕರೆದು ಚರ್ಚಿಸಿ ಕ್ರಮ ತೆಗೆದುಕೊಂಡಿದ್ದಾರೆ.

Riversong Jelly Kids GPS tracker hands-on - GIZBOT KANNADA

ಓದಿರಿ: ಶತಕೋಟಿ ನಿಧಿ ಹೊಂದಿದ್ದ 300 ವರ್ಷಹಳೆಯ ಹಡಗನ್ನು ಹುಡುಕಿತು ಅಂಡರ್‌ವಾಟರ್ ರೊಬೊಟ್!!

Best Mobiles in India

English summary
The Hunter Bajwa, a pro-Pakistan cyber team, claimed it hacked the website of state-run Kuvempu University at Shankaraghatta in Shivamogga.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+