ಶತಕೋಟಿ ನಿಧಿ ಹೊಂದಿದ್ದ 300 ವರ್ಷಹಳೆಯ ಹಡಗನ್ನು ಹುಡುಕಿತು ಅಂಡರ್‌ವಾಟರ್ ರೊಬೊಟ್!!

|

310 ವರ್ಷಗಳ ಹಿಂದೆ ಕೆರಿಬಿಯನ್ ಸಮುದ್ರದಲ್ಲಿ ಮುಳುಗಿದ್ದ ಹಡಗೊಂದನ್ನು ಜಲಾಂತರ್ಗಾಮಿ ಸಬ್‌ಮರಿನ್ ರೋಬೋಟ್ ಒಂದು ಕಂಡುಹಿಡಿದಿದೆ. ಮೂರು ಶತಮಾನಗಳ ಹಿಂದೆಯೇ ಭಾರೀ ಸಂಪತ್ತಿನ ಜೊತೆಗೆ ಕೆರಿಬಿಯನ್ ಸಮುದ್ರದ ಪಾಲಾಗಿದ್ದ ಸ್ಪ್ಯಾನಿಶ್ ಗ್ಯಾಲಿಯನ್ ಹಡಗನ್ನು ಸಬ್‌ಮರಿನ್ ರೋಬೋಟ್ ಹುಡುಕುವಲ್ಲಿ ಯಶಸ್ವಿಯಾಗಿದೆ.

ಹೌದು, 'ರೆಮಸ್ 6000' ಎಂದು ಕರೆಯಲ್ಪಟ್ಟಿರುವ ಜಲಾಂತರ್ಗಾಮಿ ಸಬ್‌ಮರಿನ್ ಒಂದು ಮೂರು ಶತಮಾನಗಳ ಹಿಂದೆಯೇ ಮುಳುಗಿದ್ದ, ಸ್ಯಾನ್ ಜೋಸ್ ಎಂಬ ಹಡಗನ್ನು ಕಂಡುಹಿಡಿದಿದೆ. ಸೆನ್ಸಾರ್ ಮತ್ತು ಕ್ಯಾಮೆರಾಗಳ ಜೊತೆಯಲ್ಲಿ ನಾಲ್ಕು ಮೈಲು ಆಳಕ್ಕಿಳಿದಿದ್ದ 'ರೆಮಸ್ 6000' ಜಲಾಂತರ್ಗಾಮಿ ಸಬ್‌ಮರಿನ್ ಕಂಚಿನಿಂದ ಮಾಡಿದ್ದ ಫಿರಂಗಿಗಳನ್ನು ಗುರುತಿಸಿದೆ.

ಶತಕೋಟಿ ನಿಧಿ ಹೊಂದಿದ್ದ 300 ವರ್ಷಹಳೆಯ ಹಡಗನ್ನು ಹುಡುಕಿತು ಅಂಡರ್‌ವಾಟರ್ ರೊಬೊಟ್!

ಮೂರು ಶತಮಾನಗಳ ನಂತರ ಸುರುತಿಸಿರುವ ಸ್ಯಾನ್ ಜೋಸ್ ನೌಕಾಘಾತದ ಸ್ಥಳ ಇನ್ನೂ ರಹಸ್ಯವಾಗಿದ್ದು, ಕೊಲಂಬಿಯಾದ ಕಾರ್ಟೆಜಿನಾ ತೀರದಲ್ಲಿ ನೆಲೆಸಿದೆ ಎಂದು ನಂಬಲಾಗಿದೆ. 310 ವರ್ಷಗಳ ಹಿಂದೆಯೇ ಚಿನ್ನ, ಬೆಳ್ಳಿ ಸೇರಿದಂತೆ ಸುಮಾರು 17 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಸಂಪತ್ತು ಮುಳುಗಿರುವ ಹಡಗಿನಲ್ಲಿದೆ ಎಂದು ಹೇಳಲಾಗಿದೆ.

How To Link Aadhaar With EPF Account Without Login (KANNADA)

16 ನೇ ಶತಮಾನದ ಅಂತ್ಯದಲ್ಲಿ ಇಂಗ್ಲಿಷ್ ಕಮಾಡೊರ್ ಸರ್ ಚಾರ್ಲ್ಸ್ ವೇಜರ್ ನೇತೃತ್ವದಲ್ಲಿ ಬ್ರಿಟಿಶ್ ಯುದ್ಧನೌಕೆ ಮತ್ತು ಸ್ಯಾನ್ ಜೋಸ್ ಗ್ಯಾಲಿಯನ್ ಹಡಗುಗಳ ನಡುವೆ ನಡೆದ ಕಾಳಗದಲ್ಲಿ ಅಂದಿನ ಕಾಲದಲ್ಲಿ ಭಾರೀ ಸಂಪತ್ತು ಇದ್ದ ಸ್ಯಾನ್ ಜೋಸ್ ಹಡಗು ಮುಳುಗಿದೆ ಎಂದು ಇತಿಹಾಸ ನೆನಪಿನಲ್ಲಿ ಇಟ್ಟುಕೊಂಡಿದೆ.

ಶತಕೋಟಿ ನಿಧಿ ಹೊಂದಿದ್ದ 300 ವರ್ಷಹಳೆಯ ಹಡಗನ್ನು ಹುಡುಕಿತು ಅಂಡರ್‌ವಾಟರ್ ರೊಬೊಟ್!

'ರೆಮಸ್ 6000' ಜಲಾಂತರ್ಗಾಮಿ ಸಬ್‌ಮರಿನ್ ಸಹಾಯದಿಂದ ಸ್ಯಾನ್ ಜೋಸ್ ಹಡಗಿನಲ್ಲಿ ತುಂಬಿದ್ದ ಕಂಚಿನ ಫಿರಂಗಿಗಳನ್ನು ಗುರುತಿಸಿದ ಸಮಯದಲ್ಲಿ "ಜೆಫ್ ಕೆಲ್ಲಿ" ಎಂಬ ಎಂಜಿನಿಯರ್ ಓರ್ವರೇ ಇದ್ದಾರೆ. "ನಾನು ಸುಮಾರು 10 ನಿಮಿಷಗಳ ಕಾಲ ಕುಳಿತು ನಕ್ಕಿದೆ' ಎಂದು ವುಡ್ಸ್ ಹೋಲ್ ಒಷಿನೊಗ್ರಾಫಿಕ್ ಇನ್ಸ್ಟಿಟ್ಯೂಷನ್‌ನಲ್ಲಿ ಇಂಜಿನಿಯರ್ ಜೆಫ್ ಕೆಲ್ಲಿ ಅವರು ಹೇಳಿದ್ದಾರೆ.

Best Mobiles in India

Read more about:
English summary
An underwater robot submarine has recently discovered a 310-year-old Spanish galleon ship at the bottom of the Caribbean Sea. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X