Laptops: ವಿದ್ಯಾರ್ಥಿಗಳಿಗೆ ಅತ್ಯುತ್ತಮವಾದ ಲ್ಯಾಪ್‌ಟಾಪ್‌ಗಳಿವು, 20 ಸಾವಿರದೊಳಗೆ ಲಭ್ಯ!
ಲ್ಯಾಪ್‌ಟಾಪ್‌ಗಳು (Laptops) ಇಂದು ವಿದ್ಯಾರ್ಥಿಗಳು ಹಾಗೂ ಖಾಸಗಿ ನೌಕರರಿಗೆ ಅಗತ್ಯವಾದ ಡಿವೈಸ್‌ಗಳಾಗಿವೆ. ಅದರಲ್ಲೂ ಕೊರೊನಾ ತರುವಾಯ ಭಿನ್ನ ಫೀಚರ್ಸ್ ಆಯ್ಕೆಯ ಲ್ಯಾಪ್‌ಟಾಪ್‌ಗಳಿಗೆ ಭಾರೀ ಬೇಡಿಕೆ ಇದ್ದು, ಅದರಂತೆ ಟಾಪ್ ಬ್ರ್ಯಾಂಡ್‌ಗಳು ಹೊಸ ಹೊಸ ಲ್ಯಾಪ್‌ಟಾಪ್‌ಗಳನ್ನು ಲಾಂಚ್ ಮಾಡಿಕೊಂಡು ಬರುತ್ತಿವೆ.
ಹೌದು, ಲ್ಯಾಪ್‌ಟಾಪ್‌ಗಳು ಇಂದು ಎಲ್ಲಾ ರೀತಿಯಲ್ಲಿ ಅನುಕೂಲ ಮಾಡಿಕೊಡುವ ಡಿವೈಸ್ ಆಗಿವೆ. ಅದರಲ್ಲೂ ಭಾರತದಲ್ಲಿ ಅಗ್ಗದ ದರದ ಲ್ಯಾಪ್‌ಟಾಪ್‌ಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಜಿಯೋ ಹಾಗೂ ಇನ್ನಿತರೆ ಬ್ರ್ಯಾಂಡ್‌ಗಳು ಕಡಿಮೆ ದರದಲ್ಲಿ ಗ್ರಾಹಕರಿಗೆ ಉತ್ತಮ ಲ್ಯಾಪ್‌ಟಾಪ್ ಪರಿಚಯಿಸಲು ಸಜ್ಜಾಗಿವೆ. ಆದರೆ, ಈಗಾಗಲೇ 20 ಸಾವಿರದ ಒಳಗೆ ಸಾಕಷ್ಟು ಲ್ಯಾಪ್‌ಟಾಪ್‌ಗಳು ಲಭ್ಯ ಇದ್ದು, ಇವುಗಳು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಆಯ್ಕೆ ಆಗಿವೆ. ಹಾಗಿದ್ರೆ, ಈ ಲ್ಯಾಪ್‌ಟಾಪ್‌ಗಳ ಬೆಲೆ ಎಷ್ಟು?, ಫೀಚರ್ಸ್ ಏನು? ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಅಲ್ಟಿಮಸ್ ಪ್ರೊ NU14U3INC43BN-CS ಲ್ಯಾಪ್‌ಟಾಪ್ : ಈ ಲ್ಯಾಪ್‌ಟಾಪ್ (Ultimus Pro NU14U3INC43BN-CS Laptop) ನಿಮಗೆ ಆನ್‌ಲೈನ್‌ನಲ್ಲಿ ಕೇವಲ 10,990 ರೂ.ಗಳ ಬೆಲೆಯಲ್ಲಿ ಲಭ್ಯ ಇದೆ. ಇದು 14.ಇಂಚಿನ ಡಿಸ್‌ಪ್ಲೇ ಹೊಂದಿದ್ದು, 1366 x 768 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ ಇಂಟೆಲ್ ಸೆಲೆರಾನ್ N4020 ಪ್ರೊಸೆಸರ್ ಬಲ ಪಡೆದಿದ್ದು, ಇಂಟೆಲ್ ಇಂಟಿಗ್ರೇಟೆಡ್ UHD ಗ್ರಾಫಿಕ್ಸ್ ನೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ. ಜೊತೆಗೆ 4 GB DDR4 RAM ಹಾಗೂ 128 GB SSD ಇಂಟರ್‌ಸ್ಟೋರೇಜ್ ಹೊಂದಿದೆ.
ಹೆಚ್‌ಪಿ 255 G9 840T7PA ಲ್ಯಾಪ್‌ಟಾಪ್: ಈ ಡಿವೈಸ್ (HP 255 G9 840T7PA Laptop) ಅನ್ನು 19,790 ರೂ.ಗಳ ಬೆಲೆಗೆ ಖರೀದಿ ಮಾಡಬಹುದಾಗಿದೆ. ಜೊತೆಗೆ ಈ ಲ್ಯಾಪ್‌ಟಾಪ್ 15.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಇದು 1366 x 768 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಹಾಗೆಯೇ 3ನೇ ಜನ್ AMD ಅಥ್ಲಾನ್ 3050U ಪ್ರೊಸೆಸರ್ ಬಲ ಪಡೆದಿದ್ದು, 4 GB DDR4 RAM ಹಾಗೂ 256 GB SSD ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿದೆ.

ಪ್ರೈಮ್‌ಬುಕ್ 4G ಆಂಡ್ರಾಯ್ಡ್ ಲ್ಯಾಪ್‌ಟಾಪ್ : ಈ ಲ್ಯಾಪ್‌ಟಾಪ್ (PrimeBook 4G Android Laptop) 14,990 ರೂ.ಗಳ ದರದಲ್ಲಿ ಕಾಣಿಸಿಕೊಂಡಿದ್ದು, 11.6 ಇಂಚಿನ ಡಿಸ್ಪ್ಲೇ ಆಯ್ಕೆ ಪಡೆದಿದ್ದು, 1366 x 768 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ ಮೀಡಿಯಾ ಟೆಕ್ MTK8788 ಪ್ರೊಸೆಸರ್ ಬಲ ಪಡೆದಿದ್ದು, 4 GB LPDDR4 RAM ಹಾಗೂ 64 GB ಹಾರ್ಡ್ ಡಿಸ್ಕ್ ಹೊಂದಿದೆ. ಜೊತೆಗೆ ARM ಮಾಲಿ G72 ಗ್ರಾಫಿಕ್ ಆಯ್ಕೆ ಪಡೆದಿದ್ದು, ಆಂಡ್ರಾಯ್ಡ್ 11 ಓಎಸ್ ಅನ್ನು ರನ್ ಮಾಡಲಿದೆ.
ಐಬಾಲ್ ಎಕ್ಸಲೆನ್ಸ್ ಕಾಂಪ್‌ಬುಕ್ ಲ್ಯಾಪ್‌ಟಾಪ್: ಈ ಲ್ಯಾಪ್‌ಟಾಪ್ (iball Excelence CompBook Laptop) ಅನ್ನು 9,999ರೂ.ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಇದು 11.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 1366 x 768 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ ಇಂಟೆಲ್ ಆಟಮ್ ಕ್ವಾಡ್ ಕೋರ್ Z3735F ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 2 GB DDR3 RAM ಹಾಗೂ 32 GB ಹಾರ್ಡ್ ಡಿಸ್ಕ್ ಸ್ಟೋರೇಜ್‌ನಲ್ಲಿ ಕಾಣಿಸಿಕೊಂಡಿದೆ.
ಏಸರ್ ಒನ್ 11 Z8-284 UN.013SI.033 ಲ್ಯಾಪ್‌ಟಾಪ್: ಈ ಲ್ಯಾಪ್‌ಟಾಪ್ (Acer One 11 Z8-284 UN.013SI.033 Laptop) 17,990 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದು 11.6 ಇಂಚಿನ ಡಿಸ್‌ಪ್ಲೇ ಪಡೆದಿದ್ದು, 1366 x 768 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ ಇಂಟೆಲ್ ಸೆಲೆರಾನ್ N4500 ಪ್ರೊಸೆಸರ್ ಬಲ ಹಾಗೂ 8 GB DDR4 RAM ಮತ್ತು 128 GB SSD ಇಂಟರ್ ಸ್ಟೋರೇಜ್ ನಲ್ಲಿ ಪ್ಯಾಕ್ ಆಗಿದ್ದು, ವಿಂಡೋಸ್ 11 ಓಎಸ್ ಅನ್ನು ಈ ಲ್ಯಾಪ್‌ಟಾಪ್ ರನ್ ಮಾಡಲಿದೆ.

ಪ್ರೈಮ್‌ಬುಕ್ S ವೈ ಫೈ ಲ್ಯಾಪ್‌ಟಾಪ್: ಈ ಲ್ಯಾಪ್‌ಟಾಪ್ (PrimeBook S Wi-Fi Laptop) 13,990ರೂ.ಗಳ ಬೆಲೆ ಹೊಂದಿದ್ದು, 11.6 ಇಂಚಿನ ಡಿಸ್ಪ್ಲೇ ಆಯ್ಕೆ ಪಡೆದಿದ್ದು, 1366 x 768 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ ಮೀಡಿಯಾ ಟೆಕ್ MT8183 ಪ್ರೊಸೆಸರ್ ಬಲ ಹಾಗೂ 4 GB LPDDR4 RAM ಮತ್ತು 128 GB ಹಾರ್ಡ್ ಡಿಸ್ಕ್ ಆಯ್ಕೆ ಪಡೆದಿದೆ. ಇದರೊಂದಿಗೆ ARM ಮಾಲಿ G72 ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ.


Click it and Unblock the Notifications








