ಮೊಬೈಲ್ ಪ್ರಿಯರ ಗಮನ ಸೆಳೆದ ಈ 5G ಫೋನಿಗೆ ಈಗ ಭಾರೀ ಡಿಸ್ಕೌಂಟ್!
ಜನಪ್ರಿಯ ಲಾವಾ ಸಂಸ್ಥೆಯು ಭಿನ್ನ ಶ್ರೇಣಿಯ ಫೋನ್‌ಗಳ ಮೂಲಕ ಮೊಬೈಲ್ ಮಾರುಕಟ್ಟೆಯಲ್ಲಿ ಗ್ರಾಹಕರ ಆಕರ್ಷಣೆ ಪಡೆದಿದೆ. ಆ ಪೈಕಿ ಲಾವಾ ಅಗ್ನಿ 2 5G ಮೊಬೈಲ್ ಅದರ ಡಿಸೈನ್ ಹಾಗೂ ಬೆಲೆಯಿಂದಾಗಿ ಮತ್ತಷ್ಟು ಟ್ರೆಂಡ್‌ನಲ್ಲಿ ಗುರುತಿಸಿಕೊಂಡಿದೆ. ಆದರೆ, ಲಾವಾ ಅಗ್ನಿ 2 5G ಇದೀಗ ಅಮೆಜಾನ್ ತಾಣದಲ್ಲಿ ಗಮನಾರ್ಹ ರಿಯಾಯತಿ ಪ್ರೈಸ್ ಟ್ಯಾಗ್‌ನಲ್ಲಿ ಖರೀದಿಗೆ ಲಭ್ಯ ಇದೆ.
ಹೌದು, ಪ್ರಮುಖ ಇ ಕಾಮರ್ಸ್ ದೈತ್ಯ ಅಮೆಜಾನ್ ಪ್ಲಾಟ್‌ಫಾರ್ಮ್ ನಲ್ಲಿ ಲಾವಾ ಅಗ್ನಿ 2 5G ಮೊಬೈಲ್ ಶೇ. 27% ರಷ್ಟು ನೇರ ರಿಯಾಯಿತಿ ಹೊಂದಿದೆ. ಈ ಮೊಬೈಲ್ 8GB RAM + 256GB ವೇರಿಯಂಟ್ ಬೆಲೆಯು 25,999ರೂ. ಆಗಿದ್ದು, ಆದರೆ ಅಮೆಜಾನ್ ಆಫರ್‌ನಲ್ಲಿ ಸದ್ಯ 18,999ರೂ. ಗಳಿಗೆ ಗ್ರಾಹಕರು ಖರೀದಿಗೆ ಕಾಣಿಸಿಕೊಂಡಿದೆ. ಹಾಗೆಯೇ ಕೆಲವು ಆಯ್ದ ಬ್ಯಾಂಕ್‌ಗಳಿಂದ ಹೆಚ್ಚುವರಿ ರಿಯಾಯಿತಿ ಸಹ ಸಿಗಲಿದೆ.

ಅಂದಹಾಗೆ ಲಾವಾ ಅಗ್ನಿ 2 5G ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoC ಪ್ರೊಸೆಸರ್ ಸೌಲಬ್ಯ ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆ ಲ್ ಆಗಿದೆ. ಇದರ ಜೊತೆಗೆ 4,700mAh ಜೊತೆಗೆ ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ. ಹಾಗಾದರೇ ಲಾವಾ ಅಗ್ನಿ 2 5G ಮೊಬೈಲ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಡಿಸೈನ್ ಹೀಗಿದೆ
ಲಾವಾ ಅಗ್ನಿ 2 5G ಫೋನ್ 6.78 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಕರ್ವ್ಡ್ ಅಮೋಲೆಡ್ ಡಿಸ್‌ಪ್ಲೇ ಅನ್ನು ಪಡೆದಿದೆ. ಈ ಡಿಸ್‌ಪ್ಲೇ 2220 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದ್ದು, ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್ ಸಪೋರ್ಟ್ ನೊಂದಿಗೆ ಲಭ್ಯ ಇದೆ. ಅಲ್ಲದೇ HDR, HDR 10 ಮತ್ತು HDR 10+ ಅನ್ನು ಸಪೋರ್ಟ್ ಮಾಡಲಿದ್ದು, ಫೋನ್ ಮ್ಯಾಟ್ ಫಿನಿಶ್ ಮತ್ತು ಡಬಲ್-ರೀನ್‌ಫೋರ್ಸ್ಡ್ ಗ್ಲಾಸ್ ಪ್ರೊಟೆಕ್ಷನ್ ಪಡೆದುಕೊಂಡಿದೆ.

ಪ್ರೊಸೆಸರ್ ಸಾಮರ್ಥ್ಯದ ಮಾಹಿತಿ
ಲಾವಾದ ಈ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoC ಪ್ರೊಸೆಸರ್ ಸ್ಲೀಡ್ ನಲ್ಲಿ ಕೆಲಸ ಮಾಡಲಿದ್ದು, ಇದು ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಪಡೆದಿದೆ. ಹಾಗೆಯೇ 8GB RAM ಮತ್ತು 256GB ಆಂತರೀಕ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಇದರ ಜೊತೆಗೆ 16GB ವರೆಗೆ ವರ್ಚುವಲ್ ವಿಸ್ತರಣೆಗೆ ಸಪೋರ್ಟ್ ಕೂಡಾ ಪಡೆದಿದೆ.
ಕ್ಯಾಮೆರಾ ವಿಶೇಷತೆಯ ಮಾಹಿತಿ
ಲಾವಾ ಸಂಸ್ಥೆಯ ಈ 5G ಮೊಬೈಲ್ ಕ್ವಾಡ್ ರಿಯರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್ ಸೌಲಭ್ಯ ಪಡೆದುಕೊಂಡಿದೆ. ಎರಡನೇಯ ಕ್ಯಾಮೆರಾ 8 ಮೆಗಾ ಪಿಕ್ಸಲ್ ಹಾಗೂ ತೃತೀಯ ಕ್ಯಾಮೆರಾ 2 ಮೆಗಾ ಪಿಕ್ಸಲ್ ಸೆನ್ಸಾರ್ ಆಗಿದೆ. ಅಲ್ಲದೇ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್ ಸೆನ್ಸಾರ್ ನಲ್ಲಿ ಇದೆ.
ಬಿಗ್ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ
ಲಾವಾ ಅಗ್ನಿ 2 5G ಮೊಬೈಲ್ 4,700mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು, ಇದು 66W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅಡಾಪ್ಟರ್ ಸೌಲಭ್ಯ ಇದೆ. ಇದರಿಂದ ಈ ಮೊಬೈಲ್ ಕೇವಲ 16 ನಿಮಿಷಗಳಲ್ಲಿ ಶೂನ್ಯದಿಂದ 50% ತನಕ ಚಾರ್ಜ್ ಪಡೆಯುವ ಸೌಲಭ್ಯ ಇದೆ. ಇದರ ಜೊತೆಗೆ ಈ ಮೊಬೈಲ್ 5G ಯ 13 ಬ್ಯಾಂಡ್‌ಗಳನ್ನು ಸಹ ಬೆಂಬಲ ಮಾಡುತ್ತದೆ. ಹಾಗೆಯೇ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ವೈಫೈ, ಯುಎಸ್‌ಬಿ ಸಿ ಪೋರ್ಟ್ ಆಯ್ಕೆಗಳನ್ನು ಒಳಗೊಂಡಿದೆ.


Click it and Unblock the Notifications








