ಕರ್ವ್ ಡಿಸ್‌ಪ್ಲೇ ಹಾಗೂ 5G ಸೌಲಭ್ಯದ ಈ ಫೋನಿನ ಬೆಲೆಯಲ್ಲಿ ಇಳಿಕೆ!
ಸ್ವದೇಶಿ ಮೂಲದ ಲಾವಾ ಮೊಬೈಲ್ ಸಂಸ್ಥೆಯು ಬಜೆಟ್ ಮಾದರಿಯ ಹಲವು ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅವುಗಳಲ್ಲಿ ಲಾವಾ ಅಗ್ನಿ 2 5G ಮೊಬೈಲ್ ಈಗಾಗಲೇ ಗ್ರಾಹಕರ ಗಮನ ಸೆಳೆದಿದ್ದು, ಈ ಮೊಬೈಲ್ ಅಮೆಜಾನ್ ತಾಣದಲ್ಲಿ ಗ್ರಾಹಕರು ಹುಬ್ಬೇರಿಸುವಂತಹ ಡಿಸ್ಕೌಂಟ್ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ.
ಹೌದು, ಅಮೆಜಾನ್ ತಾಣದಲ್ಲಿ ಲಾವಾ ಮೊಬೈಲ್ ಕಂಪನಿಯ ಲಾವಾ ಅಗ್ನಿ 2 5G ಮೊಬೈಲ್ ಬೆಲೆಯಲ್ಲಿ ಶೇ. 23% ರಷ್ಟು ನೇರ ರಿಯಾಯಿತಿ ಪಡೆದಿದೆ. ಈ ಫೋನಿನ 8GB RAM + 256GB ಸ್ಟೋರೇಜ್ ವೇರಿಯಂಟ್ 19,999ರೂ. ಗಳ ಆಫರ್ ಪ್ರೈಸ್‌ಟ್ಯಾಗ್‌ನಲ್ಲಿ ಖರೀದಿಗೆ ಲಭ್ಯ. ಇದರೊಂದಿಗೆ ಆಯ್ದ ಕೆಲವು ಬ್ಯಾಂಕ್‌ಗಳಿಂದ ಮತ್ತಷ್ಟು ಡಿಸ್ಕೌಂಟ್ ಕೊಡುಗೆ ಸಹ ಪಡೆಯಬಹುದು.

ಅಂದಹಾಗೆ ಲಾವಾ ಸಂಸ್ಥೆಯ ಈ ಮೊಬೈಲ್‌ನ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೌಲಭ್ಯದಲ್ಲಿ ಇದ್ದು, ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoC ಪ್ರೊಸೆಸರ್ ಬಲದಲ್ಲಿ ಕೆಲಸ ನಿರ್ವಹಿಸಲಿದೆ. ಇದರ ಜೊತೆಗೆ 4,700mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ. ಹಾಗಾದರೇ ಲಾವಾ ಅಗ್ನಿ 2 5G ಮೊಬೈಲ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಲಾವಾ ಅಗ್ನಿ 2 5G - ಫೀಚರ್ಸ್
ಈ ಮೊಬೈಲ್ 6.78 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಕರ್ವ್ಡ್ ಅಮೋಲೆಡ್ ಡಿಸ್‌ಪ್ಲೇ ಅನ್ನು ಪಡೆದಿದೆ. ಈ ಡಿಸ್‌ಪ್ಲೇ 2220 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದ್ದು, ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್ ಸಪೋರ್ಟ್ ಹೊಂದಿದೆ. ಅಲ್ಲದೇ HDR, HDR 10 ಮತ್ತು HDR 10+ ಅನ್ನು ಸಪೋರ್ಟ್ ಮಾಡಲಿದ್ದು, ಫೋನ್ ಮ್ಯಾಟ್ ಫಿನಿಶ್ ಮತ್ತು ಡಬಲ್-ರೀನ್‌ಫೋರ್ಸ್ಡ್ ಗ್ಲಾಸ್ ಪ್ರೊಟೆಕ್ಷನ್ ಒಳಗೊಂಡಿದೆ.
ಲಾವಾ ಕಂಪನಿಯ ಈ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoC ಪ್ರೊಸೆಸರ್ ಪವರ್‌ನಲ್ಲಿ ಕಾರ್ಯ ಮಾಡಲಿದ್ದು, ಇದು ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಪಡೆದಿದೆ. ಹಾಗೆಯೇ 8GB RAM ಮತ್ತು 256GB ಆಂತರೀಕ ಸ್ಟೋರೇಜ್ ವೇರಿಯಂಟ್ ಆಯ್ಕೆ ಒಳಗೊಂಡಿದ್ದು, ಇದರ ಜೊತೆಗೆ 16GB ವರೆಗೆ ವರ್ಚುವಲ್ ವಿಸ್ತರಣೆಗೆ ಸಪೋರ್ಟ್ ಕೂಡಾ ಹೊಂದಿದೆ.

ಲಾವಾ ಅಗ್ನಿ 2 5G ಮೊಬೈಲ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್ ಪಡೆದುಕೊಂಡಿದೆ. ದ್ವಿತೀಯ ಕ್ಯಾಮೆರಾ 8 ಮೆಗಾ ಪಿಕ್ಸಲ್ ಹಾಗೂ ತೃತೀಯ ಕ್ಯಾಮೆರಾ 2 ಮೆಗಾ ಪಿಕ್ಸಲ್ ಸೆನ್ಸಾರ್ ಆಗಿದೆ. ಅಲ್ಲದೇ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್ ಸೆನ್ಸಾರ್ ಸೌಲಭ್ಯ ಪಡೆದುಕೊಂಡಿದೆ.
ಈ ಫೋನ್ 4,700mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದ್ದು, ಇದು 66W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅಡಾಪ್ಟರ್ ಸೌಲಭ್ಯ ಪಡೆದಿದೆ. ಇದರಿಂದ ಈ ಫೋನ್ ಕೇವಲ 16 ನಿಮಿಷಗಳಲ್ಲಿ ಶೂನ್ಯದಿಂದ 50% ತನಕ ಚಾರ್ಜ್ ಪಡೆಯಲಿದೆ. ಹಾಗೆಯೇ ಈ ಮೊಬೈಲ್ 5G ಯ 13 ಬ್ಯಾಂಡ್‌ಗಳನ್ನು ಸಹ ಸಪೋರ್ಟ್ ಮಾಡುತ್ತದೆ. ಹಾಗೆಯೇ ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಹಾಟ್‌ಸ್ಪಾಟ್, ವೈಫೈ, ಯುಎಸ್‌ಬಿ ಸಿ ಪೋರ್ಟ್ ಆಯ್ಕೆಗಳನ್ನು ಪಡೆದಿದೆ.
ಲಾವಾ ಸಂಸ್ಥೆಯ ಅಗ್ನಿ 2 5G ಫೋನ್ 8GB RAM ಮತ್ತು 256GB ಸ್ಟೋರೇಜ್ ಆಯ್ಕೆ ಅನ್ನು ಹೊಂದಿದೆ. ಇನ್ನು ಈ ಮೊಬೈಲ್ ವಿರಿಡಿಯನ್ ಕಲರ್ ಆಯ್ಕೆಯಲ್ಲಿ ಗ್ರಾಹಕರು ಖರೀದಿ ಮಾಡಬಹುದು. ಇ ಕಾಮರ್ಸ್ ದೈತ್ಯ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ಡಿಸ್ಕೌಂಟ್ ಬೆಲೆಯಲ್ಲಿ ಇದನ್ನು ಖರೀದಿ ಮಾಡಬಹುದಾಗಿದೆ.


Click it and Unblock the Notifications








