ಲಾವಾ ಅಗ್ನಿ 2 5G ಫೋನಿಗೆ ಬೊಂಬಾಟ್ ಆಫರ್, ಇದರ ಫೀಚರ್ಸ್ ಸೂಪರ್!
ಲಾವಾ ಸಂಸ್ಥೆಯು ಭಿನ್ನ ಶ್ರೇಣಿಯ ಫೋನ್‌ಗಳ ಮೂಲಕ ಮೊಬೈಲ್ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ. ಆ ಪೈಕಿ ಲಾವಾ ಅಗ್ನಿ 2 5G ಮೊಬೈಲ್ ಡಿಸೈನ್ ಹಾಗೂ ಫೀಚರ್ಸ್‌ಗಳಿಂದ ಹೆಚ್ಚಿನ ಟ್ರೆಂಡ್‌ನಲ್ಲಿ ಕಾಣಿಸಿಕೊಂಡಿದೆ. ಆದ್ರೆ, ಇದೀಗ ಈ ಫೋನ್ ಭರ್ಜರಿ ರಿಯಾಯತಿ ದರದಲ್ಲಿ ಕಾಣಿಸಿಕೊಂಡಿದೆ.
ಹೌದು, ಜನಪ್ರಿಯ ಇ ಕಾಮರ್ಸ್ ದೈತ್ಯ ಅಮೆಜಾನ್ ಪ್ಲಾಟ್‌ಫಾರ್ಮ್ ನಲ್ಲಿ ಲಾವಾ ಅಗ್ನಿ 2 5G ಮೊಬೈಲ್ ಶೇ. 17% ರಷ್ಟು ರಿಯಾಯಿತಿ ಪಡೆದಿದೆ. ಈ ಮೊಬೈಲ್ 8GB RAM + 256GB ವೇರಿಯಂಟ್ ಬೆಲೆಯು 25,999ರೂ. ಆಗಿದ್ದು, ಆದರೆ ಅಮೆಜಾನ್ ಕೊಡುಗೆಯಲ್ಲಿ 21,499ರೂ. ಗಳಿಗೆ ಗ್ರಾಹಕರು ಖರೀದಿ ಮಾಡಬಹುದಾಗಿದೆ. ಹಾಗೆಯೇ ಆಯ್ದ ಬ್ಯಾಂಕ್‌ಗಳಿಂದ ರಿಯಾಯಿತಿ ಸಹ ದೊರೆಲಿದೆ.

ಲಾವಾ ಅಗ್ನಿ 2 5G ಮೊಬೈಲ್‌ನ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆ ಲ್ಆಗಿದ್ದು, ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoC ಪ್ರೊಸೆಸರ್ ಪವರ್‌ನಲ್ಲಿ ಕೆಲಸ ನಿರ್ವಹಿಸಲಿದೆ. 4,700mAh ಜೊತೆಗೆ ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ. ಹಾಗಾದರೇ ಲಾವಾ ಅಗ್ನಿ 2 5G ಸ್ಮಾರ್ಟ್‌ಫೋನ್ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಲಾವಾ ಅಗ್ನಿ 2 5G ಡಿಸ್‌ಪ್ಲೇ ರಚನೆ ಹೀಗಿವೆ
ಲಾವಾ ಅಗ್ನಿ 2 5G ಫೋನ್ 6.78 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಕರ್ವ್ಡ್ ಅಮೋಲೆಡ್ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 2220 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದ್ದು, ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್ ಸಪೋರ್ಟ್ ನೊಂದಿಗೆ ಲಭ್ಯ ಇದೆ. ಅಲ್ಲದೇ HDR, HDR 10 ಮತ್ತು HDR 10+ ಅನ್ನು ಸಪೋರ್ಟ್ ಮಾಡಲಿದ್ದು, ಫೋನ್ ಮ್ಯಾಟ್ ಫಿನಿಶ್ ಮತ್ತು ಡಬಲ್-ರೀನ್‌ಫೋರ್ಸ್ಡ್ ಗ್ಲಾಸ್ ಪ್ರೊಟೆಕ್ಷನ್ ಒಳಗೊಂಡಿದೆ.
ಲಾವಾ ಅಗ್ನಿ 2 5G ಪ್ರೊಸೆಸರ್ ಕಾರ್ಯವೈಖರಿ ಯಾವುದು
ಲಾವಾ ಅಗ್ನಿ 2 5G ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoC ಪ್ರೊಸೆಸರ್ ಸ್ಲೀಡ್ ನಲ್ಲಿ ಕೆಲಸ ಮಾಡಲಿದ್ದು, ಇದು ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಪಡೆದಿದೆ. ಹಾಗೆಯೇ 8GB RAM ಮತ್ತು 256GB ಆಂತರೀಕ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಇದರ ಜೊತೆಗೆ 16GB ವರೆಗೆ ವರ್ಚುವಲ್ ವಿಸ್ತರಣೆಗೆ ಸಪೋರ್ಟ್ ಕೂಡಾ ಪಡೆದಿದೆ.
ಲಾವಾ ಅಗ್ನಿ 2 5G ಕ್ಯಾಮೆರಾ ಸೆನ್ಸಾರ್ ಎಷ್ಟಿದೆ
ಲಾವಾ ಅಗ್ನಿ 2 5G ಮೊಬೈಲ್ ಕ್ವಾಡ್ ರಿಯರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್ ಪಡೆದುಕೊಂಡಿದೆ. ಎರಡನೇಯ ಕ್ಯಾಮೆರಾ 8 ಮೆಗಾ ಪಿಕ್ಸಲ್ ಹಾಗೂ ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸಲ್ ಸೆನ್ಸಾರ್ ಆಗಿದೆ. ಅಲ್ಲದೇ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್ ಸೆನ್ಸಾರ್ ನಲ್ಲಿ ಇದೆ.
ಲಾವಾ ಅಗ್ನಿ 2 5G ಫೋನ್ ಬ್ಯಾಟರಿ ಬ್ಯಾಕ್‌ಅಪ್ ಎಷ್ಟಿದೆ
ಲಾವಾ ಅಗ್ನಿ 2 5G ಫೋನ್ 4,700mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು, ಇದು 66W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅಡಾಪ್ಟರ್ ಸೌಲಭ್ಯ ಪಡೆದಿದೆ. ಇದರಿಂದ ಈ ಫೋನ್ ಕೇವಲ 16 ನಿಮಿಷಗಳಲ್ಲಿ ಶೂನ್ಯದಿಂದ 50% ತನಕ ಚಾರ್ಜ್ ಪಡೆಯಲಿದೆ. ಇದರ ಜೊತೆಗೆ ಈ ಮೊಬೈಲ್ 5G ಯ 13 ಬ್ಯಾಂಡ್‌ಗಳನ್ನು ಸಹ ಬೆಂಬಲ ಮಾಡುತ್ತದೆ. ಹಾಗೆಯೇ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ವೈಫೈ, ಯುಎಸ್‌ಬಿ ಸಿ ಪೋರ್ಟ್ ಆಯ್ಕೆಗಳನ್ನು ಹೊಂದಿದೆ.
ಲಾವಾ ಅಗ್ನಿ 2 5G ಮೆಮೊರಿ ಹಾಗೂ ಕಲರ್ ಮಾಹಿತಿ
ಲಾವಾ ಅಗ್ನಿ 2 5G ಫೋನ್ 8GB RAM ಮತ್ತು 256GB ಸ್ಟೋರೇಜ್ ಆಯ್ಕೆ ಅನ್ನು ಹೊಂದಿದೆ. ಇನ್ನು ಈ ಮೊಬೈಲ್ ವಿರಿಡಿಯನ್ ಕಲರ್ ಆಯ್ಕೆಯಲ್ಲಿ ಗ್ರಾಹಕರು ಖರೀದಿ ಮಾಡಬಹುದು. ಇ ಕಾಮರ್ಸ್ ತಾಣ ಅಮೆಜಾನ್‌ನಲ್ಲಿ ರಿಯಾಯಿತಿ ಬೆಲೆಯಲ್ಲಿ ಇದನ್ನು ಖರೀದಿ ಮಾಡಬಹುದಾಗಿದೆ.


Click it and Unblock the Notifications








