Home
ಸುದ್ದಿಜಾಲ

ಇಂದು ಎಂಟ್ರಿ ಕೊಡಲಿದೆ Lava Agni 3 ಫೋನ್‌!..ಹಿಂಭಾಗದಲ್ಲಿ ಚಿಕ್ಕ ಡಿಸ್‌ಪ್ಲೇ ಇದೆ!

ಜನಪ್ರಿಯ ಲಾವಾ (Lava) ಮೊಬೈಲ್‌ ಕಂಪನಿಯು ತನ್ನ ಬಹುನಿರೀಕ್ಷಿತ ಲಾವಾ ಅಗ್ನಿ 3 (Lava Agni 3) ಮೊಬೈಲ್‌ ಅನ್ನು ಇಂದು (ಅಕ್ಟೋಬರ್ 4ರಂದು) ಲಾಂಚ್ ಮಾಡಲು ಸಕಲ ರೀತಿ ಸಜ್ಜಾಗಿದೆ. ಈ ಫೋನ್‌ ಆಕ್ಷನ್‌ ಬಟನ್‌, ಡ್ಯುಯಲ್‌ ಸ್ಕ್ರೀನ್‌ ಆಯ್ಕೆಗಳು ಭಾರೀ ಆಕರ್ಷಕ ಎನಿಸಿವೆ. ಅಲ್ಲದೇ ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7300X ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದೆ.

ಹೌದು, ಲಾವಾ ಸಂಸ್ಥೆಯು ಇಂದು (ಅಕ್ಟೋಬರ್ 4 ರಂದು) ದೇಶಿಯ ಮೊಬೈಲ್‌ ಮಾರುಕಟ್ಟೆಗೆ ತನ್ನ ಹೊಸ ಲಾವಾ ಅಗ್ನಿ 3 (Lava Agni 3) ಮೊಬೈಲ್‌ ಅನ್ನು ಅಧಿಕೃತವಾಗಿ ಲಾಂಚ್ ಮಾಡಲಿದೆ. ಇನ್ನು ಈ ಮೊಬೈಲ್‌ನ ಫೀಚರ್ಸ್‌ಗಳು ಹಾಗೂ ಇದರ ಡ್ಯುಯಲ್‌ ಸ್ಕ್ರೀನ್‌ ರಚನೆ ಫೋನ್‌ ಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ. ಅಂದಹಾಗೆ ಈ ಮೊಬೈಲ್‌ ಸುಮಾರು 30,000ರೂ. ಗಳ ಪ್ರೈಟ್‌ಟ್ಯಾಗ್‌ ಒಳಗೆ ಇರಲಿದೆ ಎಂದು ವರದಿಯಾಗಿದೆ.

ಇಂದು ಎಂಟ್ರಿ ಕೊಡಲಿದೆ Lava Agni 3 ಫೋನ್‌!..ಹಿಂಭಾಗದಲ್ಲಿ ಚಿಕ್ಕ ಡಿಸ್‌ಪ್ಲೇ!

ಇನ್ನು ಲಾವಾ ಅಗ್ನಿ 3 (Lava Agni 3) ಮೊಬೈಲ್‌ ಬಿಡುಗಡೆ ಕಾರ್ಯಕ್ರಮವು ಇದೇ ಅಕ್ಟೋಬರ್ 4 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗುತ್ತದೆ. ಇನ್ನು ಈ ಕಾರ್ಯಕ್ರಮವನ್ನು ಕಂಪನಿಯ ಅಧಿಕೃತ YouTube ಚಾನಲ್‌ನಲ್ಲಿ ಲೈವ್‌ಸ್ಟ್ರೀಮ್ ಮಾಡಬಹುದು. ಅಲ್ಲದೇ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ಸಹ ಲಭ್ಯವಿರುತ್ತದೆ. ಹಾಗಾದರೇ ಈ ಫೋನಿನ ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಲಾವಾ ಅಗ್ನಿ 3 - ಫೀಚರ್ಸ್‌ ಮಾಹಿತಿ ಹೀಗಿವೆ

ಬರಲಿರುವ ಹೊಸ ಲಾವಾ ಅಗ್ನಿ 3 ಫೋನ್‌ ಡ್ಯುಯಲ್‌ ಡಿಸ್‌ಪ್ಲೇ ರಚನೆ ಪಡೆದಿರಲಿದೆ. ಇದರ ಪ್ರಾಥಮಿಕ ಡಿಸ್‌ಪ್ಲೇಯು 1.5K ರೆಸಲ್ಯೂಶನ್ ಕರ್ವ್ಡ್ AMOLED ಡಿಸ್‌ಪ್ಲೇ ಆಗಿರಲಿದ್ದು, 120Hz ರಿಫ್ರೆಶ್ ರೇಟ್‌ ಅನ್ನು ಪಡೆದಿರಲಿದೆ. ಹಾಗೆಯೇ ಇದರ ಸೆಕೆಂಡರಿ ಡಿಸ್‌ಪ್ಲೇಯು 1.74 ಇಂಚಿನ AMOLED ಸ್ಕ್ರೀನ್ ಆಗಿದ್ದು ಸ್ಮಾರ್ಟ್‌ಫೋನ್‌ನ ಹಿಂಭಾಗದಲ್ಲಿ ಕ್ಯಾಮೆರಾ ಮಾಡ್ಯೂಲ್ ಜೊತೆಗೆ ಇರಲಿದೆ.

ಹಾಗೆಯೇ ಲಾವಾ ಅಗ್ನಿ 3 ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7300X ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್ ಸಹ ಇರಲಿದೆ. ಹಾಗೆಯೇ ಈ ಫೋನ್‌ 8 GB + 256 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯನ್ನು ಒಳಗೊಂಡಿರಲಿದೆ. ಅಲ್ಲದೇ ಲಾವಾ ಅಗ್ನಿ 3 ಫೋನ್ ಕಸ್ಟಮೈಸ್ ಮಾಡಬಹುದಾದ ಆಕ್ಷನ್ ಬಟನ್ (ಇತ್ತೀಚಿನ ಆಪಲ್‌ ಐಫೋನ್‌ನಲ್ಲಿ ಇರುವಂತೆ) ಅನ್ನು ಕೂಡಾ ಪಡೆದಿರಲಿದೆ.

ಇನ್ನು ಲಾವಾ ಅಗ್ನಿ 3 ಫೋನ್‌ ತ್ರಿವಳಿ ಕ್ಯಾಮೆರಾ ರಚನೆ ಪಡೆದಿರಲಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸೌಲಭ್ಯದಲ್ಲಿ ಇರಲಿದೆ. ಹಾಗೆಯೇ ಇದು OIS ಸೌಲಭ್ಯ ಕೂಡಾ ಪಡೆದಿರಲಿದೆ. ಇನ್ನು ಈ ಫೋನ್‌ 4700 mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿರಲಿದ್ದು, ಇದಕ್ಕೆ ಪೂರಕವಾಗಿ 66W ಫಾಸ್ಟ್‌ ಚಾರ್ಜಿಂಗ್‌ ಸಪೋರ್ಟ್‌ ಸಹ ಪಡೆದಿರಲಿದೆ.

ಸಂಸ್ಥೆಯ ಲಾವಾ ಅಗ್ನಿ 2 5G ಫೋನ್‌ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಕರ್ವ್ಡ್‌ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಪಡೆದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoC ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯ ಮಾಡಲಿದೆ. ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್‌ ಒಳಗೊಂಡಿದೆ.

Best Mobiles in India

English summary
Lava Agni 3 launch in India Today. Check Out Expected Price, Specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+