Home
ಸುದ್ದಿಜಾಲ

Lava Agni 3 ಫಸ್ಟ್‌ ಸೇಲ್‌ ಪ್ರಾರಂಭ!..ಏನಾದ್ರೂ ಬಿಗ್‌ ಡಿಸ್ಕೌಂಟ್‌ ಸಿಗುತ್ತಾ?

ಲಾವಾ ಕಂಪನಿಯು ಇತ್ತೀಚಿಗೆ ಹೊಸದಾಗಿ ಭಾರತದಲ್ಲಿ ಬಿಡುಗಡೆ ಮಾಡಿರುವ ಲಾವಾ ಅಗ್ನಿ 3 (Lava Agni 3) ಫೋನ್‌ ಈಗಾಗಲೇ ಬೆಲೆ ಹಾಗೂ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸಿದೆ. ಈ ಮೊಬೈಲ್‌ ಇಂದು (ಅಕ್ಟೋಬರ್‌ 26 ರಂದು) ಅಮೆಜಾನ್‌ ಪ್ಲಾಟ್‌ಫಾರ್ಮ್ ಮೂಲಕ ಮಾರಾಟ ಶುರು ಮಾಡಿದೆ. ಈ ಮೊಬೈಲ್‌ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದ್ದು, ಜೊತೆಗೆ ಡ್ಯುಯಲ್‌ ಕ್ಯಾಮೆರಾ ರಚನೆ ಪಡೆದಿದೆ.

ಹೌದು, ಲಾವಾ ಸಂಸ್ಥೆಯ ಇತ್ತೀಚಿನ ಲಾವಾ ಅಗ್ನಿ 3 ಮೊಬೈಲ್‌ನ ಮಾರಾಟ ಇಂದು (ಅಕ್ಟೋಬರ್‌ 9 ರಂದು, 12am ನಿಂದ) ಅಮೆಜಾನ್‌ ತಾಣದಲ್ಲಿ ಹಾಗೂ ಲಾವಾ ಇ ಸ್ಟೋರ್‌ ತಾಣದಲ್ಲಿ ಪ್ರಾರಂಭ ಆಗಿದೆ. ಈ ಮೊಬೈಲ್‌ 8 GB RAM ಮತ್ತು 256 GB ವೇರಿಯಂಟ್‌ ಆಯ್ಕೆ ಪಡೆದಿದ್ದು, ಇದರೊಂದಿಗೆ 4700 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯವನ್ನು ಒಳಗೊಂಡಿದೆ.

Lava Agni 3 ಫಸ್ಟ್‌ ಸೇಲ್‌ ಪ್ರಾರಂಭ!..ಏನಾದ್ರೂ ಬಿಗ್‌ ಡಿಸ್ಕೌಂಟ್‌ ಸಿಗುತ್ತಾ?

ಹಾಗೆಯೇ ಲಾವಾ ಅಗ್ನಿ 3 (Lava Agni 3) ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7300X ಚಿಪ್‌ಸೆಟ್‌ ಪ್ರೊಸೆಸರ್‌ ಬಲದಲ್ಲಿ ಕಾರ್ಯ ನಿರ್ವಹಿಸಲಿದೆ. ಇದರ ಜೊತೆಗೆ ಈ ಫೋನ್‌ ಹೀದರ್ ಗ್ಲಾಸ್ ಮತ್ತು ಪ್ರಿಸ್ಟಿನ್ ಗ್ಲಾಸ್ ಕಲರ್‌ ಆಯ್ಕೆಗಳನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಲಾವಾ ಅಗ್ನಿ 3 ಮೊಬೈಲ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಲಾವಾ ಅಗ್ನಿ 3 ಮೊಬೈಲ್‌ - ಫೀಚರ್ಸ್‌

ಲಾವಾ ಅಗ್ನಿ 3 ಮೊಬೈಲ್‌ ಡ್ಯುಯಲ್‌ ಡಿಸ್‌ಪ್ಲೇ ಸೆಟ್‌ಅಪ್‌ ಒಳಗೊಂಡಿದೆ. ಇದರ ಪ್ರಾಥಮಿಕ ಡಿಸ್‌ಪ್ಲೇಯು 6.78 ಇಂಚಿನ ಅಮೋಲೆಡ್‌ ಮಾದರಿಯಲ್ಲಿ ಇದ್ದು, ಇದು 1.5K ರೆಸಲ್ಯೂಶನ್ ಕರ್ವ್ಡ್ AMOLED ಡಿಸ್‌ಪ್ಲೇ ಆಗಿದೆ. ಹಾಗೆಯೇ 120Hz ರಿಫ್ರೆಶ್ ರೇಟ್‌ ಅನ್ನು ಪಡೆದಿದೆ. ಹಾಗೆಯೇ ಇದರ ಸೆಕೆಂಡರಿ ಡಿಸ್‌ಪ್ಲೇಯು 1.74 ಇಂಚಿನ AMOLED ಸ್ಕ್ರೀನ್ ಆಗಿದ್ದು, ಫೋನಿನ ಹಿಂಭಾಗದ ಕ್ಯಾಮೆರಾ ಮಾಡ್ಯೂಲ್ನಲ್ಲಿ ನೀಡಲಾಗಿದೆ.

ಲಾವಾ ಅಗ್ನಿ 3 ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7300X ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್ ಕೂಡಾ ಇದೆ. ಹಾಗೆಯೇ ಈ ಮೊಬೈಲ್‌ 8 GB + 256 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯನ್ನು ಒಳಗೊಂಡಿದೆ. ಅಲ್ಲದೇ ಲಾವಾ ಅಗ್ನಿ 3 ಫೋನ್ ಕಸ್ಟಮೈಸ್ ಮಾಡಬಹುದಾದ ಆಕ್ಷನ್ ಬಟನ್ (ಇತ್ತೀಚಿನ ಆಪಲ್‌ ಐಫೋನ್‌ನಲ್ಲಿ ಇರುವಂತೆ) ಅನ್ನು ಸಹ ಪಡೆದಿದೆ.

ಲಾವಾ ಅಗ್ನಿ 3 ಫೋನ್‌ ಮೂರು ಕ್ಯಾಮೆರಾ ಸೆಟ್‌ಅಪ್‌ ಪಡೆದಿದ್ದು, ಇದರ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸೌಲಭ್ಯದಲ್ಲಿ ಇದೆ. ಅಲ್ಲದೇ ಇದು OIS ಸೌಲಭ್ಯ ಸಹ ಪಡೆದಿದೆ. ಇದರ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್ ಸೆನ್ಸಾರ್‌ ಆಗಿದೆ. ಇನ್ನು ಈ ಫೋನ್‌ 4700 mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ 66W ಫಾಸ್ಟ್‌ ಚಾರ್ಜಿಂಗ್‌ ಸಪೋರ್ಟ್‌ ಸಹ ಪಡೆದಿದೆ.

ಬೆಲೆ ಹಾಗೂ ಲಭ್ಯತೆ ಮಾಹಿತಿ

ಈ ಫೋನಿನ 8GB + 128GB (ಚಾರ್ಜರ್‌ ಇಲ್ಲದೇ) ವೇರಿಯಂಟ್‌ ದರವು 20,999ರೂ. ಗಳು ಆಗಿದೆ. ಅಲ್ಲದೇ 8GB + 128GB ವೇರಿಯಂಟ್‌ ದರವು 22,999ರೂ. ಗಳು ಆಗಿದ್ದು, ಇನ್ನು 8GB + 256GB ವೇರಿಯಂಟ್‌ ಬೆಲೆಯು 24,999ರೂ. ಗಳು ಆಗಿದೆ. ಈ ಮೊಬೈಲ್‌ ಹೀದರ್ ಗ್ಲಾಸ್ ಮತ್ತು ಪ್ರಿಸ್ಟಿನ್ ಗ್ಲಾಸ್ ಕಲರ್‌ ಆಯ್ಕೆಗಳನ್ನು ಪಡೆದುಕೊಂಡಿದೆ. ಇನ್ನು ಖರೀದಿದಾರರು ಈ ಫೋನ್‌ ಅನ್ನು ಅಮೆಜಾನ್‌ ಇ ಕಾಮರ್ಸ್‌ ತಾಣದಲ್ಲಿ ಖರೀದಿಗೆ ಲಭ್ಯ.

Best Mobiles in India

English summary
Lava Agni 3 now Available for Purchase via Amazon website and lava e store. Know Price and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+