Lava Agni 3 ಪ್ರಿ-ಬುಕಿಂಗ್ ಶುರು; ಸಿಗಲಿದೆ ಭರ್ಜರಿ ಡಿಸ್ಕೌಂಟ್, ಆಕರ್ಷಕ ಫೀಚರ್ಸ್!
ಜನಪ್ರಿಯ ಲಾವಾ (Lava) ಮೊಬೈಲ್ ಕಂಪನಿಯು ಹೊಸದಾಗಿ ಬಿಡುಗಡೆ ಮಾಡಿರುವ ಲಾವಾ ಅಗ್ನಿ 3 (Lava Agni 3) ಮೊಬೈಲ್ ಈಗಾಗಲೇ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿದೆ. ಆಕ್ಷನ್ ಬಟನ್ ಹಾಗೂ ಹಿಮಭಾಗದ ಮಿನಿ ಸ್ಕ್ರೀನ್ ಈ ಫೋನಿನ ಪ್ರಮುಖ ಹೈಲೈಟ್ ಅಂಶಗಳು ಆಗಿವೆ. ಅಂದಹಾಗೆ ಈ ಫೋನ್ ಇದೇ ಅಕ್ಟೋಬರ್ 9 ರಂದು ಪ್ರಥಮ ಮಾರಾಟ ಪ್ರಾರಂಭ ಮಾಡಲಿದ್ದು, ಇದೀಗ ಪ್ರೀ-ಬುಕಿಂಗ್ ಆರಂಭಿಸಿದೆ.
ಹೌದು, ಲಾವಾ (Lava) ಮೊಬೈಲ್ ಕಂಪನಿಯ ಲಾವಾ ಅಗ್ನಿ 3 (Lava Agni 3) ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300X ಚಿಪ್‌ಸೆಟ್ ಪ್ರೊಸೆಸರ್ ಸೌಲಭ್ಯ ಪಡೆದಿದ್ದು, ಹಾಗೆಯೇ ಇದು ಹೀದರ್ ಗ್ಲಾಸ್ ಮತ್ತು ಪ್ರಿಸ್ಟಿನ್ ಗ್ಲಾಸ್ ಕಲರ್ ಆಯ್ಕೆಗಳನ್ನು ಒಳಗೊಂಡಿದೆ. ಹಾಗಾದರೇ ಲಾವಾ ಅಗ್ನಿ 3 ಫೋನಿನ ಬೆಲೆ ಹಾಗೂ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಲಾವಾ ಅಗ್ನಿ 3 ಫೋನ್ - ಫೀಚರ್ಸ್
ಹೊಸ ಲಾವಾ ಅಗ್ನಿ 3 ಫೋನ್ ಡ್ಯುಯಲ್ ಡಿಸ್‌ಪ್ಲೇ ರಚನೆ ಪಡೆದಿದ್ದು, ಇದರ ಪ್ರಾಥಮಿಕ 6.78 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಇದ್ದು, ಇದು 1.5K ರೆಸಲ್ಯೂಶನ್ ಕರ್ವ್ಡ್ AMOLED ಡಿಸ್‌ಪ್ಲೇ ಆಗಿದೆ. ಅಲ್ಲದೇ 120Hz ರಿಫ್ರೆಶ್ ರೇಟ್ ಅನ್ನು ಪಡೆದಿದೆ. ಹಾಗೆಯೇ ಇದರ ಸೆಕೆಂಡರಿ ಡಿಸ್‌ಪ್ಲೇಯು 1.74 ಇಂಚಿನ AMOLED ಸ್ಕ್ರೀನ್ ಆಗಿದ್ದು ಸ್ಮಾರ್ಟ್‌ಫೋನ್‌ನ ಹಿಂಭಾಗದಲ್ಲಿ ಕ್ಯಾಮೆರಾ ಮಾಡ್ಯೂಲ್ ಜೊತೆಗೆ ಇದೆ.
ಹಾಗೆಯೇ ಲಾವಾ ಅಗ್ನಿ 3 ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300X ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಸಹ ಇದೆ. ಹಾಗೆಯೇ ಈ ಫೋನ್ 8 GB + 256 GB ಸ್ಟೋರೇಜ್ ವೇರಿಯಂಟ್ ಆಯ್ಕೆಯನ್ನು ಒಳಗೊಂಡಿದೆ. ಅಲ್ಲದೇ ಲಾವಾ ಅಗ್ನಿ 3 ಫೋನ್ ಕಸ್ಟಮೈಸ್ ಮಾಡಬಹುದಾದ ಆಕ್ಷನ್ ಬಟನ್ (ಇತ್ತೀಚಿನ ಆಪಲ್ ಐಫೋನ್‌ನಲ್ಲಿ ಇರುವಂತೆ) ಅನ್ನು ಕೂಡಾ ಪಡೆದಿದೆ.
ಇನ್ನು ಲಾವಾ ಅಗ್ನಿ 3 ಫೋನ್ ತ್ರಿವಳಿ ಕ್ಯಾಮೆರಾ ರಚನೆ ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸೌಲಭ್ಯದಲ್ಲಿ ಇದೆ. ಹಾಗೆಯೇ ಇದು OIS ಸೌಲಭ್ಯ ಕೂಡಾ ಪಡೆದಿದೆ. ಇದರ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್ ಸೆನ್ಸಾರ್ ಆಗಿದೆ. ಇನ್ನು ಈ ಫೋನ್ 4700 mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ 66W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಸಹ ಪಡೆದಿದೆ.
ಬೆಲೆ ಹಾಗೂ ಲಭ್ಯತೆ ಮಾಹಿತಿ
8GB + 128GB (ಚಾರ್ಜರ್ ಇಲ್ಲದೇ) ವೇರಿಯಂಟ್ ಬೆಲೆ - 20,999 ರೂ. ಗಳು ಆಗಿದೆ.
8GB + 128GB ವೇರಿಯಂಟ್ ಬೆಲೆ - 22,999 ರೂ. ಗಳು ಆಗಿದೆ.
8GB + 256GB ವೇರಿಯಂಟ್ ಬೆಲೆ - 24,999 ರೂ. ಗಳು ಆಗಿದೆ.
ಸದ್ಯ ಲಾವಾ ಅಗ್ನಿ 3 ಫೋನಿನ ಪ್ರೀ-ಬುಕಿಂಗ್ ಪ್ರಾರಂಭ ಆಗಿದ್ದು, ಇದು ಹೀದರ್ ಗ್ಲಾಸ್ ಮತ್ತು ಪ್ರಿಸ್ಟಿನ್ ಗ್ಲಾಸ್ ಕಲರ್ ಆಯ್ಕೆಗಳನ್ನು ಒಳಗೊಂಡಿದೆ. ಇನ್ನು ಆಸಕ್ತ ಖರೀದಿದಾರರು ಈ ಫೋನ್ ಅನ್ನು ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಖರೀದಿ ಮಾಡಬಹುದು.


Click it and Unblock the Notifications








