ಶೀಘ್ರದಲ್ಲೇ Agni 3 ಬಿಡುಗಡೆ!..ಎರಡು ಸ್ಕ್ರೀನ್...ಅಚ್ಚರಿಯ ಬೆಲೆ ಖಚಿತ!
ಸ್ವದೇಶಿ ಮೂಲದ ಲಾವಾ (Lava) ಮೊಬೈಲ್ ಸಂಸ್ಥೆಯು ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಭಿನ್ನ ಮೊಬೈಲ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಲಾವಾ ಕಂಪನಿಯು ಇತ್ತೀಚಿಗೆ ತನ್ನ ಅಗ್ನಿ ಸರಣಿಯಲ್ಲಿ ಲಾವಾ ಅಗ್ನಿ 2 ಮೊಬೈಲ್ ಅನ್ನು ಲಾಂಚ್ ಮಾಡಿ, ಚೀನಾ ಮೂಲಕ ಮೊಬೈಲ್‌ಗಳಿಗೂ ಟಾಂಗ್ ನೀಡಿದೆ. ಅದರ ಮುಂದುವರಿದ ಭಾಗವಾಗಿ ಲಾವಾ ಇದೀಗ ಲಾವಾ ಅಗ್ನಿ 3 (Lava Agni 3) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಕಲ ಸಜ್ಜಾಗಿದೆ.
ಹೌದು, ಲಾವಾ ಸಂಸ್ಥೆಯು ಇದೇ ಅಕ್ಟೋಬರ್ 4 ರಂದು ಭಾರತೀಯ ಮಾರುಕಟ್ಟೆಗೆ ತನ್ನ ನೂತನ ಲಾವಾ ಅಗ್ನಿ 3 (Lava Agni 3) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವುದು ಅಧಿಕೃತವಾಗಿದೆ. ಇನ್ನು ಈ ಫೋನಿನ ಫೀಚರ್ಸ್‌ಗಳು ಹಾಗೂ ಇದರ ಬೆಲೆ ಮೊಬೈಲ್ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ಅಂದಹಾಗೆ ಈ ಫೋನ್ ಸುಮಾರು 30,000ರೂ. ಗಳ ಒಳಗೆ ಲಭ್ಯವಾಗಲಿದೆ ಎಂದು ವರದಿಯಾಗಿದೆ.

ಇನ್ನು ಲಾವಾ ಅಗ್ನಿ 3 (Lava Agni 3) ಮೊಬೈಲ್ ಬಿಡುಗಡೆ ಕಾರ್ಯಕ್ರಮವು ಇದೇ ಅಕ್ಟೋಬರ್ 4 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗುತ್ತದೆ. ಇನ್ನು ಈ ಕಾರ್ಯಕ್ರಮವನ್ನು ಕಂಪನಿಯ ಅಧಿಕೃತ YouTube ಚಾನಲ್‌ನಲ್ಲಿ ಲೈವ್‌ಸ್ಟ್ರೀಮ್ ಮಾಡಬಹುದು. ಅಲ್ಲದೇ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ಸಹ ಲಭ್ಯವಿರುತ್ತದೆ. ಹಾಗಾದರೇ ಈ ಫೋನಿನ ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.
ಲಾವಾ ಅಗ್ನಿ 3 - ಕೀ ಫೀಚರ್ಸ್
ಬರಲಿರುವ ಹೊಸ ಲಾವಾ ಅಗ್ನಿ 3 ಫೋನ್ ಎರಡು ಡಿಸ್‌ಪ್ಲೇ ರಚನೆ ಪಡೆದಿರಲಿದೆ. ಇದರ ಪ್ರಾಥಮಿಕ ಡಿಸ್‌ಪ್ಲೇಯು 1.5K ರೆಸಲ್ಯೂಶನ್ ಕರ್ವ್ಡ್ AMOLED ಡಿಸ್‌ಪ್ಲೇ ಆಗಿರಲಿದ್ದು, 120Hz ರಿಫ್ರೆಶ್ ರೇಟ್ ಅನ್ನು ಪಡೆದಿರಲಿದೆ. ಹಾಗೆಯೇ ಇದರ ಸೆಕೆಂಡರಿ ಡಿಸ್‌ಪ್ಲೇಯು 1.74 ಇಂಚಿನ AMOLED ಸ್ಕ್ರೀನ್ ಆಗಿದ್ದು ಸ್ಮಾರ್ಟ್‌ಫೋನ್‌ನ ಹಿಂಭಾಗದಲ್ಲಿ ಹಿಂಬದಿಯ ಕ್ಯಾಮೆರಾ ಮಾಡ್ಯೂಲ್ ಜೊತೆಗೆ ಇರಲಿದೆ.
ಹಾಗೆಯೇ ಲಾವಾ ಅಗ್ನಿ 3 ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300X ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಸಹ ಇರಲಿದೆ. ಹಾಗೆಯೇ ಈ ಫೋನ್ 8GB + 256 GB ಸ್ಟೋರೇಜ್ ವೇರಿಯಂಟ್ ಆಯ್ಕೆಯನ್ನು ಒಳಗೊಂಡಿರಲಿದೆ. ಅಲ್ಲದೇ ಲಾವಾ ಅಗ್ನಿ 3 ಫೋನ್ ಕಸ್ಟಮೈಸ್ ಮಾಡಬಹುದಾದ ಆಕ್ಷನ್ ಬಟನ್ ಅನ್ನು ಸಹ ಪಡೆದಿರಲಿದೆ.
ಇನ್ನು ಲಾವಾ ಅಗ್ನಿ 3 ಫೋನ್ ತ್ರಿವಳಿ ಕ್ಯಾಮೆರಾ ರಚನೆ ಪಡೆದಿರಲಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸೌಲಭ್ಯದಲ್ಲಿ ಇರಲಿದೆ. ಹಾಗೆಯೇ ಇದು OIS ಸೌಲಭ್ಯ ಕೂಡಾ ಪಡೆದಿರಲಿದೆ. ಇನ್ನು ಈ ಫೋನ್ 4700 mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿರಲಿದ್ದು, ಇದಕ್ಕೆ ಪೂರಕವಾಗಿ 66W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಸಹ ಪಡೆದಿರಲಿದೆ.
ಸಂಸ್ಥೆಯ ಲಾವಾ ಅಗ್ನಿ 2 5G ಫೋನ್ 6.78 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಕರ್ವ್ಡ್ ಅಮೋಲೆಡ್ ಡಿಸ್‌ಪ್ಲೇ ಅನ್ನು ಪಡೆದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoC ಪ್ರೊಸೆಸರ್ ಪವರ್‌ನಲ್ಲಿ ಕಾರ್ಯ ಮಾಡಲಿದೆ. ಅಲ್ಲದೇ ಇದು ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದ್ದು, ಇದರ ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್ ಒಳಗೊಂಡಿದೆ.


Click it and Unblock the Notifications








