ಲಾವಾದ ಹೊಸ ಆಫರ್ ಗೊತ್ತಾದ್ರೆ ಈಗಲೇ ಮೊಬೈಲ್ ಖರೀದಿಸ್ತೀರಾ!!..ಏಕೆ ಗೊತ್ತಾ?
ಲಾವ ಕಂಪೆನಿ ತನ್ನ ಗ್ರಾಹಕರಿಗಾಗಿ ಯಾವ ಮೊಬೈಲ್ ಕಂಪೆನಿಯೂ ನೀಡದಂತಹ ವಿಶೇಷವಾದ ಮತ್ತು ಆಕರ್ಷಕವಾದ ಆಫರ್ ಪ್ರಕಟಿಸಿದೆ.!!
ದೇಶೀಯ ಮೊಬೈಲ್ ತಯಾರಿಕ ಕಂಪೆನಿ ಲಾವಾ ಗ್ರಾಹಕರನ್ನು ಸೆಳೆಯಲು ಭಾರಿ ಆಫರ್ ಒಂದನ್ನು ಘೋಷಿಸಿದೆ.! ಹೌದು, ಹೇಳಹೆಸರಿಲ್ಲದಂತಾಗಿದ್ದ ಲಾವ ಕಂಪೆನಿ ತನ್ನ ಗ್ರಾಹಕರಿಗಾಗಿ ಯಾವ ಮೊಬೈಲ್ ಕಂಪೆನಿಯೂ ನೀಡದಂತಹ ವಿಶೇಷವಾದ ಮತ್ತು ಆಕರ್ಷಕವಾದ ಆಫರ್ ಪ್ರಕಟಿಸಿದೆ.!!
''ಮನಿ ಬ್ಯಾಕ್ ಚಾಲೆಂಜ್'' ಆಫರ್ ಅನ್ನು ಲಾವಾ ಘೋಷಿಸಿದ್ದು, ಗ್ರಾಹಕರು ಯಾವುದೇ ಲಾವಾ ಮೊಬೈಲ್ ಫೋನ್ ಖರೀದಿಸಿ ಬಳಸಿದ ನಂತರ ಆ ಮೊಬೈಲ್ ಇಷ್ಟವಾಗದಿದ್ದಲ್ಲಿ 30 ದಿನಗಳೊಳಗೆ ಅದನ್ನು ವಾಪಸ್ ಮಾಡಿ ನಿಮ್ಮ ಹಣವನ್ನು ಸಂಪೂರ್ಣವಾಗಿ ವಾಪಸ್ ಪಡೆಯಬಹುದು ಎಂದು ಹೇಳಿದೆ.!!

ಅಕ್ಟೋಬರ್ 1ರಿಂದ ಡಿಸೆಂಬರ್ 31ರವರೆಗೆ ಈ ಯೋಜನೆ ಜಾರಿಯಲ್ಲಿದ್ದು, ಲಾವಾ ಸೇವಾ ಕೇಂದ್ರಗಳಲ್ಲೇ ಮೊಬೈಲ್ ಫೋನ್ ವಾಪಸ್ ಪಡೆದು, ಹಣ ಹಿಂದಿರುಗಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಎಂದು ಲಾವಾ ಕಂಪೆನಿಯ ಇಂಟರ್ ನ್ಯಾಷನಲ್‌ನ ಉತ್ಪಾದನಾ ವಿಭಾಗದ ಮುಖ್ಯಸ್ಥ ಗೌರವ್ ನಿಗಮ್ ಅವರು ಹೇಳಿದ್ದಾರೆ.!!

ಬೇರೆ ಯಾವ ಮೊಬೈಲ್ ಕಂಪನಿಯೂ ಘೋಷಿಸದಂತಹ ಯೋಜನೆ 'ಮನಿ ಬ್ಯಾಕ್ ಚಾಲೆಂಜ್' ಇದು ನಮ್ಮ ಉತ್ಪನ್ನಗಳ ಬಗೆಗೆ ನಮಗಿರುವ ಆತ್ಮ ವಿಶ್ವಾಸವನ್ನು ಎತ್ತಿ ತೋರುತ್ತದೆ' ಎಂದು ಗೌರವ್ ನಿಗಮ್ ಹೇಳಿದ್ದು, ಇದೀಗ ಬಿಡುಗಡೆಯಾಗಿರುವ ಲಾವ ಕಂಪೆನಿಯ ಝೆಡ್ ಸರಣಿ ಸ್ಮಾರ್ಟ್‌ಫೋನ್ ಮಾರಾಟದ ಯಶಸ್ಸಿಗಾಗಿ ಕಾಯುತ್ತಿದ್ದಾರೆ.!!
ಓದಿರಿ: ಒಂದೇ ವರ್ಷಕ್ಕೆ ಟೆಲಿಕಾಂ ದಿಗ್ಗಜನಾದ ಜಿಯೋ!..ಏರ್‌ಟೆಲ್‌ಗೆ ಮುಖಭಂಗ!!


Click it and Unblock the Notifications








