ಒಂದೇ ವರ್ಷಕ್ಕೆ ಟೆಲಿಕಾಂ ದಿಗ್ಗಜನಾದ ಜಿಯೋ!..ಏರ್‌ಟೆಲ್‌ಗೆ ಮುಖಭಂಗ!!

Written By:

ನಿಖರವಾಗಿ ಒಂದು ವರ್ಷಗಳ ಹಿಂದಷ್ಟೆ, ಒಂದು ಹೊಸ ಟೆಲಿಕಾಂ ಕಂಪೆನಿ ಜಿಯೋ ಆರಂಭವಾದಾಗ ಎಲ್ಲರಲ್ಲಿಯೂ ಒಂದೇ ಮಾತು. ಈ ಟೆಲಿಕಾಂ ಉಳಿಯುತ್ತದೆಯೇ ಅಥವಾ ಇಲ್ಲವೇ ಎಂಬುದು.!! ಹೌದು, ನಾವು ಹೇಳುತ್ತಿರುವುದು ಪ್ರಸ್ತುತ 4G ಬಳಕೆದಾರರಲ್ಲಿಯೇ ನಂಬರ್ ಒನ್ ಟೆಲಿಕಾಂ ಆಗಿ ಬೆಳೆದಿರುವ ಜಿಯೋ ಇಂತಹ ಅಡೆತಡೆಗಳನ್ನು ಮೀರಿ ಬೆಳೆದಿದೆ.!!

ಏರ್‌ಟೆಲ್, ಐಡಿಯಾ ಮತ್ತು ವೊಡಾಫೋನ್‌ಗಳಂತಹ ದೊಡ್ಡ ದೊಡ್ಡ ಕಂಪೆನಿಗಳಿಗೆ ಪೈಪೋಟಿ ನೀಡಿ, ಕೇವಲ 4G ವೋಲ್ಟ್ ಸೇವೆಯ ಮೂಲಕ ಜಿಯೋ ಬೆಳೆದುಬಂದ ದಾರಿ ಸುಲಭವಾಗಿರಲ್ಲಿಲ್ಲ.!! ಸರ್ಕಾರದ ನಿಯಮಾವಳಿಗಳು, ಭಾರಿ ಬಂಡವಾಳ ಮತ್ತು ಜನರ ಪ್ರತಿಕ್ರಿಯೇ ಎಲ್ಲವೂ ಜಿಯೋಗೆ ಬಹುದೊಡ್ಡ ಸವಾಲಾಗಿ ನಿಂತಿದ್ದವು.!!

ಈ ಎಲ್ಲಾ ಸವಾಲುಗಳನ್ನು ಹಿಮ್ಮೆಟ್ಟಿಸಿದ ಜಿಯೋ ಇದೀಗ ಭಾರತದ 4G ಬಳಕೆದಾರ ನಂಬರ್ ಒನ್ ಟೆಲಿಕಾಂ ಆಗಿ ಬದಲಾಗಿದೆ.!! ಇನ್ನು ಜಿಯೋ ಫೋನ್ ಮೂಲಕ ಭಾರದ ಟೆಲಿಕಾಂಗೆ ದಿಗ್ಗಜನಾಗುವ ಆಸೆಯನ್ನು ಹೊಂದಿದೆ ಮತ್ತು ಅದನ್ನು ಸಾಧಿಸುತ್ತದೆ ಕೂಡ.!! ಹಾಗಾಗಿ, ಜಿಯೋ ಭವಿಷ್ಯದ ಪ್ಲಾನ್‌ಗಳು ಯಾವುವು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭಾರತದ ನಂಬರ್ ಒನ್ ಟೆಲಿಕಾಂ ಆಗಲಿದೆ ಜಿಯೋ!!

ಭಾರತದ ನಂಬರ್ ಒನ್ ಟೆಲಿಕಾಂ ಆಗಲಿದೆ ಜಿಯೋ!!

ಜಿಯೋ ಉಚಿತ ಫೋನ್ ಶೀಘ್ರವೇ ಮಾರುಕಟ್ಟೆಗೆ ಅಪ್ಪಳಿಸಲಿದ್ದು, 2019 ರ ವೇಳೆಗೆ ಜಿಯೋ ಬಾರತದ ನಂಬರ್ ಒನ್ ಟೆಲಿಕಾಂ ಆಗಲಿದೆ.!! 3 ಕೋಟಿಗೂ ಹೆಚ್ಚು ಜನರು ಜಿಯೋ ಉಚಿತ ಫೋನ್ ಬುಕ್ ಮಾಡಲು ತುದಿಗಾಲಲ್ಲಿ ನಿಂತಿದ್ದು, ಈಗಾಗಲೇ 60 ಲಕ್ಷ ಜನರು ಫೋನ್ ಬುಕ್ ಮಾಡಿದ್ದಾರೆ.!!

ಭಾರಿ ಬಂಡವಾಳ ಹೂಡುತ್ತಿದೆ ಜಿಯೋ!!

ಭಾರಿ ಬಂಡವಾಳ ಹೂಡುತ್ತಿದೆ ಜಿಯೋ!!

ಈಗಾಗಲೇ ಮೊದಲ ಸಕ್ಸಸ್ ಕಂಡಿರುವ ಜಿಯೋ ಮತ್ತೆ ಭಾರಿ ಬಂಡವಾಳವನ್ನು ಜಿಯೋಗೆ ಹರಿಬಿಡುತ್ತಿದ್ದು, ಷೇರುದಾರರು ಕೂಡ ಜಿಯೋಗೆ ಮತ್ತಷ್ಟು ಬಂಡವಾಳ ಹೂಡಲು ಮುಂದಾಗಿದ್ದು, ಜಿಯೋ ಭಾರಿ ಬಂಡವಾಳದ ಮೂಲಕ ಮತ್ತಷ್ಟು ಜನರನ್ನು ತಲುಪಲಿದೆ.!!

ಇಂಟರ್‌ಕನೆಕ್ಟ್ ಚಾರ್ಜ್ ತೆಗೆದರೆ!!?

ಇಂಟರ್‌ಕನೆಕ್ಟ್ ಚಾರ್ಜ್ ತೆಗೆದರೆ!!?

ಟೆಲಿಕಾಂ ಕಂಪೆನಿಗಳ ನಡುವೆ ಇರುವ ಒಪ್ಪಂದದಂತೆ, ಒಂದು ಕಂಪೆನಿ ಬಳಕೆದಾರ ಇನ್ನೊಂದು ಟೆಲಿಕಾಂ ಕಂಪೆನಿಗೆ ಕರೆ ಮಾಡಿದರೆ, ಕರೆ ಮಾಡಿದ ಕಂಪೆನಿಯು ಕರೆ ಹೋದ ಕಂಪೆನಿಗೆ 14 ಪೈಸೆ ಹಣವನ್ನು ನೀಡಬೇಕು. ಇದನ್ನು !! ಇಂಟರ್‌ಕನೆಕ್ಟ್ ಚಾರ್ಜ್ ಎನ್ನುತ್ತಾರೆ ಆದರೆ, ಇದು ಇನ್ನೇನು ಕೊನೆಗೊಳ್ಳುವ ನಿರೀಕ್ಷೆ ಇದ್ದು, ಹಾಗೇನಾದರೂ ಆದರೆ, ಜಿಯೋವನ್ನು ಹಿಡಿಯಲು ಸಾಧ್ಯವಿಲ್ಲ!!

ಜಿಯೋ ಹಿಂದೆ ಬಿದ್ದ ಮೊಬೈಲ್ ಕಂಪೆನಿಗಳು!!

ಜಿಯೋ ಹಿಂದೆ ಬಿದ್ದ ಮೊಬೈಲ್ ಕಂಪೆನಿಗಳು!!

ಇಷ್ಟು ದಿವಸ ಕಾದು ನೋಡುವ ತಂತ್ರವನ್ನು ಹಾಕಿಕೊಂಡಿದ್ದ ಮೊಬೈಲ್ ಕಂಪೆನಿಗಳಿಗೆ ಜಿಯೋ ಫೀಚರ್ ಫೋನ್ ದೊಡ್ಡ ಹೊಡೆತ ನೀಡುತ್ತಿದೆ.!! ಹಾಗಾಗಿಯೇ ಎಲ್ಲಾ ಮೊಬೈಲ್ ಕಂಪೆನಬಿಗಳು 4Gವೋಲ್ಟ್ ಮೊಬೈಲ್ ಉತ್ಪಾಧನೆಗೆ ನಿಂತಿದ್ದು, ಇನ್ನು ಎಲ್ಲಾ ಬೇಸಿಕ್ ಮೊಬೈಲ್‌ಗಳು 4Gವೋಲ್ಟ್ ಸೇವೆ ಹೊಂದಿರಲಿವೆ.!! ಇದು ಜಿಯೋ ಮತ್ತು ಮೊಬೈಲ್‌ ಕಂಪೆನಿಗಳಿಗೂ ಸಹಕಾರಿಯಾಗಿದೆ.!!

Jio Monsoon Offers !! ಜಿಎಸ್‌ಟಿ ಸ್ಟಾಟರ್ ಕಿಟ್ ಜೊತೆಗೆ ಜಿಯೋ ಹೊಸ 12 ಆಫರ್‌ಗಳು !!
ಎಲ್ಲವೂ ಜಿಯೋಮಯ!!

ಎಲ್ಲವೂ ಜಿಯೋಮಯ!!

ಜಿಯೋ ಟೆಲಿಕಾಂ, ಜಿಯೋ ಪೇಮೆಂಟ್, ಜಿಯೋ ಮೂವಿಸ್, ಜಿಯೋ ಮೊಬೈಲ್ ಮತ್ತು ಜಿಯೋ ಆಪ್‌.. ಹೌದು, ಜಿಯೋ ಇದೀಗ ಬಹುತೇಕ ಎಲ್ಲಾ ಸೇವಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ನೀಡುತ್ತಿದೆ.!! ಮುಂದೊಂದು ದಿವಸ ಫೇಸ್‌ಬುಕ್ ಮತ್ತು ಗೂಗಲ್‌ಗೂ ಜಿಯೋ ಸೆಡ್ಡು ಹೊಡೆದರೆ ಆಶ್ಚರ್ಯವೇನಿಲ್ಲ.!!

ಓದಿರಿ:'ಲಾಕಿ' ತಡೆಯಲು 'ಹೈ ಅಲರ್ಟ್' ನೀಡಿದ ಭಾರತ ಸರ್ಕಾರ..ಏನಿದು ಲಾಕಿ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
It may have been a slow, long year for the telecom industry in Indiato know more visit to kannada.gizbot.cim
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot