Home
ಸುದ್ದಿಜಾಲ

ಲಾವಾ ಬ್ಲೇಜ್ 1X 5G ಸ್ಮಾರ್ಟ್‌ಫೋನ್‌ ಲಾಂಚ್‌ಗೆ ದಿನಗಣನೆ: ಬಜೆಟ್ ಬೆಲೆಯಲ್ಲಿ ಲಭ್ಯ?

ಲಾವಾ ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ವಿಶೇಷವಾದ ಬೇಡಿಕೆ ಇದ್ದು, ಇತರೆ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಕೆ ಮಾಡಿದರೆ ಈ ಫೋನ್‌ಗಳು ವಿಭಿನ್ನ ಎನಿಸಿವೆ. ಈ ನಡುವೆ ಕೆಲವೇ ದಿನಗಳಲ್ಲಿ ಅತ್ಯಂತ ಆಕರ್ಷಕ ಹಾಗೂ ವಿಶೇಷ ಫೀಚರ್ಸ್‌ ಇರುವ ಹೊಸ ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಲು ಮುಂದಾಗಿದ್ದು, ಲಾಂಚ್ ಆಗುವ ಮುನ್ನವೇ ಈ ಫೋನ್‌ನ ಕೆಲವು ಫೀಚರ್ಸ್‌ ಲೀಕ್‌ ಆಗಿವೆ.

ಹೌದು, ಲಾವಾ ಬ್ಲೇಜ್ 1X 5G(Lava Blaze 1X5G) ಸ್ಮಾರ್ಟ್‌ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿ ತನ್ನದೇ ಆದ ರೀತಿಯಲ್ಲಿ ಸದ್ದು ಮಾಡುತ್ತಿದೆ. ಈ ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿರಲಿದೆ ಎನ್ನಲಾಗಿದ್ದು,ವಿಶೇಷವಾದ ಬ್ಯಾಕ್‌ ಪ್ಯಾನಲ್‌ನೊಂದಿಗೆ ಕಾಣಿಸಿಕೊಳ್ಳುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಜೊತೆಗೆ ಈ ಫೋನ್‌ ಬಜೆಟ್‌ ಬೆಲೆಯಲ್ಲಿ ಸೇಲ್‌ ಆಗಲು ಸಿದ್ಧವಾಗಿರುವುದು ಸ್ಮಾರ್ಟ್‌ಫೋನ್‌ ಪ್ರಿಯರಿಗೆ ನೆಚ್ಚಿನ ವಿಷಯವಾಗಿದೆ. ಹಾಗಿದ್ರೆ, ಈ ಫೋನ್‌ನ ಲೀಕ್‌ ಫೀಚರ್ಸ್‌ಗಳ ಬಗ್ಗೆ ತಿಳಿಯೋಣ ಬನ್ನಿ.

ಲಾವಾ ಬ್ಲೇಜ್ 1X5G ಸ್ಮಾರ್ಟ್‌ಫೋನ್‌ ಲಾಂಚ್‌ಗೆ ದಿನಗಣನೆ:ಬಜೆಟ್ ಬೆಲೆಯಲ್ಲಿ ಲಭ್ಯ?

ಲಾವಾ ಬ್ಲೇಜ್ 1X 5G ಶೈಲಿ: ಲೀಕ್‌ ವರದಿಯಂತೆ ಈ ಫೋನ್ ಟ್ರಿಪಲ್-ಕ್ಯಾಮೆರಾ ರಚನೆ ಹೊಂದಿರಲಿದ್ದು, ಎಲ್ಇಡಿ ಫ್ಲ್ಯಾಶ್‌ ಆಯ್ಕೆ ಸಹ ಇರಲಿದೆ ಎಂದು ತೋರುತ್ತಿದೆ. ಹಾಗೆಯೇ ಮುಂಭಾಗದಲ್ಲಿ ದಪ್ಪವಾದ ಚಿನ್ ಬೆಜೆಲ್ ಅನ್ನು ಹೊಂದಿರಲಿದ್ದು, ಬಲ ಅಂಚಿನಲ್ಲಿ ಪವರ್ ಬಟನ್ ಆಯ್ಕೆಯನ್ನು ಪಡೆದುಕೊಂಡಿರಲಿದೆ ಎಂದು ತೋರುತ್ತಿದೆ. ಹಾಗೆಯೆ ಇದೇ ಬಟನ್‌ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಗಿಯೂ ಕೆಲಸ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಲಾವಾ ಬ್ಲೇಜ್ 1X 5G ಡಿಸ್‌ಪ್ಲೇ ವಿವರ: ಟಿಪ್‌ಸ್ಟರ್ ಅಭಿಷೇಕ್ ಯಾದವ್ ಫೋನ್‌ನ ಫೀಚರ್ಸ್‌ ಬಗ್ಗೆ ಮಾಹಿತಿ ನೀಡಿದ್ದು, ಅದರಂತೆ ಈ ಫೋನ್ 6.5 ಇಂಚಿನ ಹೆಚ್‌ಡಿ+ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿರಲಿದೆ ಎನ್ನಲಾಗಿದೆ. ಇದರೊಂದಿಗೆ 90Hz ರಿಫ್ರೆಶ್ ರೇಟ್ ಆಯ್ಕೆ ಸಹ ಇರಲಿದ್ದು, ಅತ್ಯುತ್ತಮ ಬಳಕೆಯ ಅನುಭವ ನೀಡಲಿದೆ ಎಂದು ತೋರುತ್ತದೆ. ಜೊತೆಗೆ ಕ್ಯಾಮೆರಾ ಉದ್ದೇಶಕ್ಕಾಗಿ ವಾಟರ್‌ಡ್ರಾಪ್ ನಾಚ್ ಶೈಲಿ ಹೊಂದಿರಲಿದೆ.

ಲಾವಾ ಬ್ಲೇಜ್ 1X 5G ಪ್ರೊಸೆಸರ್‌ ಯಾವುದು?: ಈ ವಿಶೇಷ ಫೋನ್ ಪ್ರವೇಶ ಮಟ್ಟದ ಮತ್ತು ಸಾಕಷ್ಟು ಹಳೆಯ 5G ಪ್ರೊಸೆಸರ್ ಆಗಿರುವ ಮೀಡಿಯಾಟೆಕ್ ಡೈಮೆನ್ಸಿಟಿ 700 SoC ಯಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದ್ದು, 6GB RAM ಹಾಗೂ 128GB ಇಂಟರ್‌ ಸ್ಟೋರೇಜ್ ಸಾಮರ್ಥ್ಯದಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಆದರೆ. ಈ ವಿಚಾರದಲ್ಲಿ ಎಷ್ಟು ವೇರಿಯಂಟ್ ಇದೆ ಎಂಬ ಬಗ್ಗೆ ತಿಳಿದುಬಂದಿಲ್ಲ.

ಲಾವಾ ಬ್ಲೇಜ್ 1X5G ಸ್ಮಾರ್ಟ್‌ಫೋನ್‌ ಲಾಂಚ್‌ಗೆ ದಿನಗಣನೆ:ಬಜೆಟ್ ಬೆಲೆಯಲ್ಲಿ ಲಭ್ಯ?

ಲಾವಾ ಬ್ಲೇಜ್ 1X 5G ಕ್ಯಾಮೆರಾ ರಚನೆ: ಈ ಬ್ಲೇಜ್ ಫೋನ್ ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ ಹೊಂದಿರಲಿದ್ದು, ಇದರಲ್ಲಿ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ ಹಾಗೂ 2 ಮೆಗಾಪಿಕ್ಸೆಲ್‌ ಸೆಕೆಂಡರಿ ಸೆನ್ಸರ್ ಕ್ಯಾಮೆರಾ ಹೊಂದಿರಲಿದೆ ಎನ್ನಲಾಗಿದೆ. ಇನ್ನು ಸೆಲ್ಫಿ ಉದ್ದೇಶಕ್ಕಾಗಿ ಈ ಫೋನ್ 8 ಮೆಗಾಪಿಕ್ಸೆಲ್‌ಕ್ಯಾಮೆರಾ ಆಯ್ಕೆ ಹೊಂದಿರಲಿದೆ ಎನ್ನುವ ವಿಷಯ ವರದಿಗಳಿಂದ ತಿಳಿದುಬಂದಿದೆ.

ಲಾವಾ ಬ್ಲೇಜ್ 1X 5G ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ : ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿರಲಿದ್ದು, ಇದು 15W ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡುತ್ತದೆ ಎನ್ನಲಾಗಿದೆ. ಆದರೆ ಕೆಲವು ವರದಿಗಳ ಪ್ರಕಾರ 12W ಚಾರ್ಜಿಂಗ್‌ ಬೆಂಬಲ ಪಡೆದಿದೆ ಎಂದು ಹೇಳಲಾಗುತ್ತಿದೆ.

ಈ ಫೋನ್ ಹಳೆಯ ಆಂಡ್ರಾಯ್ಡ್ 12 ರನ್ ಮಾಡಲಿದೆ ಎನ್ನಲಾಗಿದ್ದು, ವಿವಿಧ ಕನೆಕ್ಟಿವಿಟಿ ಫೀಚರ್ಸ್‌ ಅನ್ನು ಸಹ ಪಡೆದಿರಲಿದೆ. ಅಂದರೆ ಈ ಸ್ಮಾರ್ಟ್‌ಫೋನ್‌ ಯುಎಸ್‌ಬಿ ಟೈಪ್-ಸಿ ಪೋರ್ಟ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಕೆಳಭಾಗದಲ್ಲಿ ಸ್ಪೀಕರ್ ಗ್ರಿಲ್ ಅನ್ನು ಹೊಂದಿರಲಿದೆ. ಜೊತೆಗೆ ಬಹು 5G ಬ್ಯಾಂಡ್‌ಗಳಾದ n1/n3/n5/n8/n28/n41/n77/n78 ಗೆ ಬೆಂಬಲ ನೀಡಲಿದೆ ಎನ್ನಲಾಗಿದೆ.

ಲಾವಾ ಬ್ಲೇಜ್ 1X5G ಸ್ಮಾರ್ಟ್‌ಫೋನ್‌ ಲಾಂಚ್‌ಗೆ ದಿನಗಣನೆ:ಬಜೆಟ್ ಬೆಲೆಯಲ್ಲಿ ಲಭ್ಯ?

ಲಾವಾ ಬ್ಲೇಜ್ 1X 5G ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಮುಂದಿನತಿಂಗಳು ಲಾಂಚ್‌ ಆಗಲಿದ್ದು, ಬಜೆಟ್‌ ಫೋನ್ ಆಗಿರುವುದರಿಂದ ಸುಮಾರು 13,000ರೂ.ಗಳ ಬೆಲೆಯಲ್ಲಿ ಹೊಂದಿರಬಹುದು ಎಂದು ಹೇಳಲಾಗುತ್ತಿದೆ. ಆದರೂ ಲಾಂಚ್‌ ಸಮಯದಲ್ಲಿ ಈ ಬೆಲೆಯಲ್ಲಿ ಏರು ಪೇರು ಆಗಬಹುದು. ಇನ್ನು ಈ ಫೋನ್ ಗ್ಲಾಸ್ ಬ್ಲೂ ಮತ್ತು ಗ್ಲಾಸ್ ಗ್ರೀನ್ ಎಂಬ ಎರಡು ಬಣ್ಣದ ಆಯ್ಕೆಯಲ್ಲಿ ಕಾಣಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ.

Best Mobiles in India

English summary
The Lava Blaze 1X 5G smartphone is already making its own noise in the market. This phone is said to have a triple rear camera setup and will appear with a special back panel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+