ಇಂದಿನಿಂದ ಲಾವಾ ಬ್ಲೇಜ್ 2 ಫೋನ್ ಖರೀದಿಗೆ ಲಭ್ಯ; ಬೆಲೆ 8,999ರೂ.!
ಲಾವಾ ಮೊಬೈಲ್ ಸಂಸ್ಥೆಯು ಭಾರತದಲ್ಲಿ ಇತ್ತೀಚಿಗಷ್ಟೆ ಹೊಸದಾಗಿ ಬಿಡುಗಡೆ ಮಾಡಿರುವ ಲಾವಾ ಬ್ಲೇಜ್ 2 ಸ್ಮಾರ್ಟ್‌ಫೋನ್ ಬಜೆಟ್ ಬೆಲೆಯಲ್ಲಿ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ. ಈ ಸ್ಮಾರ್ಟ್‌ಫೋನ್ ಇಂದು (ಏ 18) ರ ಮಧ್ಯಾಹ್ನ 12 ಗಂಟೆಗೆ ಇ ಕಾಮರ್ಸ್ ತಾಣ ಅಮೆಜಾನ್, ಲಾವಾ ಅಧಿಕೃತ ವೆಬ್‌ಸೈಟ್ ಮೂಲಕ ಮೊದಲ ಮಾರಾಟ ಪ್ರಾರಂಭಿಸಲಿದೆ. ಅಂದಹಾಗೆ ಲಾವಾ ಬ್ಲೇಜ್ 2 ಫೋನ್ ಯುನಿಸೋಕ್ T616 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದೆ.
ಹೌದು, ಲಾವಾ ಕಂಪೆನಿ ಹೊಸ ಲಾವಾ ಬ್ಲೇಜ್ 2 ಸ್ಮಾರ್ಟ್‌ಫೋನ್ ಅಮೆಜಾನ್ ವೆಬ್‌ಸೈಟ್, ಲಾವಾ ಅಧಿಕೃತ ವೆಬ್‌ಸೈಟ್ ಹಾಗೂ ಇತರೆ ಪ್ರಮುಖ ರಿಟೇಲ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಇನ್ನು ಈ ಫೋನ್ ಆರಂಭಿಕ 6GB RAM ಮತ್ತು 128 GB ಸ್ಟೋರೇಜ್ ವೇರಿಯಂಟ್ ಆಯ್ಕೆ ಹೊಂದಿದ್ದು, ಈ ಫೋನಿನ ಬೆಲೆಯು 8,999 ರೂ. ಆಗಿದೆ. ಇನ್ನುಳಿದಂತೆ ಲಾವಾ ಬ್ಲೇಜ್ 2 ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಲಾವಾ ಬ್ಲೇಜ್ 2 ಡಿಸ್‌ಪ್ಲೇ ರಚನೆ : ಲಾವಾ ಬ್ಲೇಜ್ 2 ಸ್ಮಾರ್ಟ್‌ಫೋನ್ 6.5 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಆಗಿದ್ದು, 90Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸಲಿದೆ. ಇನ್ನು ಡಿಸ್‌ಪ್ಲೇ ಪಂಚ್ ಹೋಲ್ ವಿನ್ಯಾಸವನ್ನು ಹೊಂದಿದೆ. ಜೊತೆಗೆ 2.5D ಕರ್ವ್ಡ್ ಸ್ಕ್ರೀನ್ ಅನ್ನು ಬೆಂಬಲಿಸಲಿದೆ.
ಲಾವಾ ಬ್ಲೇಜ್ 2 ಪ್ರೊಸೆಸರ್ ಯಾವುದು : ಲಾವಾ ಬ್ಲೇಜ್ 2 ಸ್ಮಾರ್ಟ್‌ಫೋನ್ ಯುನಿಸೋಕ್ T616 ಚಿಪ್‌ಸೆಟ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128 GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಇದು 5GB ವರೆಗೆ ವರ್ಚುವಲ್ RAM ಅನ್ನು ವಿಸ್ತರಿಸುವುದಕ್ಕೆ ಅವಕಾಶ ನೀಡಿದೆ.

ಲಾವಾ ಬ್ಲೇಜ್ 2 ಕ್ಯಾಮೆರಾ ಸೆಟ್‌ಅಪ್ ಲಾವಾ ಬ್ಲೇಜ್ 2 ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರ ಮುಖ್ಯ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಪೋರ್ಟ್ರೇಟ್, ನೈಟ್, AI, ಪ್ರೊ, ಬ್ಯೂಟಿ, ಸ್ಲೋ ಮೋಷನ್, ಆಡಿಯೋ ನೋಟ್, ಟೈಮ್‌ಲ್ಯಾಪ್ಸ್, ಫಿಲ್ಟರ್‌ಗಳು, HDR ಮತ್ತು ಪನೋರಮಾದಂತಹ ಆಯ್ಕೆಗಳು ಲಭ್ಯ.

ಲಾವಾ ಬ್ಲೇಜ್ 2 ಬ್ಯಾಟರಿ ಬ್ಯಾಕ್‌ಅಪ್ : ಲಾವಾ ಬ್ಲೇಜ್ 2 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ ಎಂದು ವರದಿಯಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ಯುಎಸ್‌ಬಿ ಸಿ ಪೋರ್ಟ್, ಬ್ಲೂಟೂತ್, ವೈಫೈ ಹಾಗೂ 3.5mm ಆಡಿಯೋ ಜ್ಯಾಕ್ ಅನ್ನು ಹೊಂದಿದೆ.
ಲಾವಾ ಬ್ಲೇಜ್ 2 ಕಲರ್ ಮತ್ತು ಮೆಮೊರಿ ಆಯ್ಕೆ : ಭಾತದಲ್ಲಿ ಲಾವಾ ಬ್ಲೇಜ್ 2 ಸ್ಮಾರ್ಟ್‌ಫೋನ್ 6GB RAM ಮತ್ತು 128 GB ವೇರಿಯಂಟ್ ಆಯ್ಕೆ ಪಡೆದಿದೆ. ಇನ್ನು ಈ ಫೋನ್ ಇಂದು ಏಪ್ರಿಲ್ 18 ರಂದು ಮಧ್ಯಾಹ್ನ 12 ಗಂಟೆಗೆ ಮೊದಲ ಮಾರಾಟ ಪ್ರಾರಂಭಿಸಲಿದೆ. ಇನ್ನು ಲಾವಾ ಬ್ಲೇಜ್ 2 ಸ್ಮಾರ್ಟ್‌ಫೋನ್ ಗ್ಲಾಸ್ ಬ್ಲ್ಯಾಕ್, ಗ್ಲಾಸ್ ಬ್ಲೂ ಮತ್ತು ಗ್ಲಾಸ್ ಆರೆಂಜ್ ಕಲರ್ ಆಯ್ಕೆಗಳಲ್ಲಿ ಬರಲಿದೆ.


Click it and Unblock the Notifications








