Home
ಸುದ್ದಿಜಾಲ

ಲಾವಾ ಬ್ಲೇಜ್‌ ಕರ್ವ್ 5G ಸ್ಮಾರ್ಟ್‌ಪೋನ್‌ ಟೀಸರ್‌ ಔಟ್‌: ಏನೆಲ್ಲಾ ನಿರೀಕ್ಷೆ?

ಸ್ವದೇಶಿ ಬ್ರ್ಯಾಂಡ್‌ ಲಾವಾ ಶೀಘ್ರದಲ್ಲೇ ಹೊಸ ಲಾವಾ ಬ್ಲೇಜ್ ಕರ್ವ್ 5G ಫೋನ್‌ ಪರಿಚಯಿಸುವುದಕ್ಕೆ ಮುಂದಾಗಿದೆ. ಈ ಸ್ಮಾರ್ಟ್‌ಫೋನಿನ ಲಾಂಚ್‌ ಟೀಸರ್ ಬಿಡುಗಡೆ ಆಗಿದ್ದು, ಪ್ರಮುಖ ಫೀಚರ್ಸ್‌ಗಳು ಬಹಿರಂಗವಾಗಿದೆ. ಇನ್ನು ಟೀಸರ್‌ನಲ್ಲಿ ಸ್ಮಾರ್ಟ್‌ಫೋನ್‌ ಕರ್ವ್ಡ್‌ ಸ್ಕ್ರೀನ್‌ ಅನ್ನು ಹೊಂದಿರಲಿದೆ ಎಂಬ ಸೂಚಿಸಲಾಗಿದೆ.

ಹೌದು, ಲಾವಾ ಬ್ಲೇಜ್‌ ಕರ್ವ್ 5G ಸ್ಮಾರ್ಟ್‌ಫೋನ್‌ ಲಾಂಚ್‌ ಟೀಸರ್‌ ಬಹಿರಂಗವಾಗಿದೆ. ಇನ್ನು ಲಾಂಚ್‌ ಟೀಸರ್‌ ಪ್ರಕಾರ ಈ ಫೋನ್‌ 5G ಸಂಪರ್ಕಕ್ಕೆ ಬೆಂಬಲದೊಂದಿಗೆ ಬರಲಿದೆ ಅನ್ನೊದು ಖಚಿತವಾಗಿದೆ. ಇದರ ಬಿಡುಗಡೆ ದಿನಾಂಕ ಅಧಿಕೃತವಾಗಿಲ್ಲವಾದರೂ, ಮಾರ್ಚ್ ಮೊದಲ ವಾರದಲ್ಲಿ ಬರಲಿದೆ ಎಂದು ಅಂದಾಜಿಸಲಾಗಿದೆ. ಹಾಗಾದ್ರೆ ಲಾವಾ ಬ್ಲೇಜ್‌ ಕರ್ವ್ 5G ಸ್ಮಾರ್ಟ್‌ಫೋನ್‌ ಫೀಚರ್ಸ್‌ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲಾವಾ ಬ್ಲೇಜ್‌ ಕರ್ವ್ 5G ಸ್ಮಾರ್ಟ್‌ಪೋನ್‌ ಟೀಸರ್‌ ಔಟ್‌: ಏನೆಲ್ಲಾ ನಿರೀಕ್ಷೆ?

ಲಾವಾ ಬ್ಲೇಜ್‌ ಕರ್ವ್ 5G ಫೀಚರ್ಸ್‌ ನಿರೀಕ್ಷೆ ಏನು?
ಲಾವಾ ಬ್ಲೇಜ್‌ ಕರ್ವ್ 5G ಸ್ಮಾರ್ಟ್‌ಫೋನ್‌ 6.78 ಇಂಚಿನ ಕರ್ವ್ಡ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ರಲಿದೆ. ಜೊತೆಗೆ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇಯು 388 ಪಿಪಿಐ ಪಿಕ್ಸೆಲ್ ಸಾಂದ್ರತೆಯನ್ನು ಒಳಗೊಂಡಿರಲಿದೆ. ಇದರೊಂದಿಗೆ ಡಿಸ್‌ಪ್ಲೇಯು ಟಚ್‌ಸ್ಕ್ರೀನ್, ಮಲ್ಟಿ-ಟಚ್ ಅನ್ನು ಬೆಂಬಲಿಸಲಿದೆ.

ಲಾವಾ ಬ್ಲೇಜ್‌ ಕರ್ವ್ 5G ಪ್ರೊಸೆಸರ್‌ ಯಾವುದು?
ಲಾವಾ ಬ್ಲೇಜ್‌ ಕರ್ವ್ 5G ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7050SoC ಪ್ರೊಸೆಸರ್‌ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್‌ 14 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದಲ್ಲಿ ಬರಲಿದೆ. ಇದಲ್ಲದೆ ಸ್ಮಾರ್ಟ್‌ಫೋನ್‌ ಮೆಮೊರಿ ಕಾರ್ಡ್‌ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ಸಹ ನೀಡಲಿದೆ.

ಲಾವಾ ಬ್ಲೇಜ್‌ ಕರ್ವ್ 5G ಕ್ಯಾಮೆರಾ ಸೆಟಪ್‌ ಏನಿದೆ?
ಲಾವಾ ಬ್ಲೇಜ್‌ ಕರ್ವ್ 5G ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್‌ ಸೆನ್ಸಾರ್‌ ಇರಲಿದೆ. ಎರಡು ಮತ್ತು ಮುರನೆ ಕ್ಯಾಮೆರಾಗಳ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಸ್ಮಾರ್ಟ್‌ಫೋನ್‌ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾದೊಂದಿಗೆ ಬರಲಿದೆ ಎಂದು ವರದಿಯಾಗಿದೆ.

ಲಾವಾ ಬ್ಲೇಜ್‌ ಕರ್ವ್ 5G ಬ್ಯಾಟರಿ ಮತ್ತು ಇತರೆ
ಲಾವಾ ಬ್ಲೇಜ್‌ ಕರ್ವ್ 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್‌ನೊಂದಿಗೆ ಬರಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್‌, ಹಾಟ್‌ಸ್ಪಾಟ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌, ಹೆಡ್‌ಫೋನ್‌ ಜ್ಯಾಕ್‌ ಅನ್ನು ಬೆಂಬಲಿಸಬಹುದು. ಇದಲ್ಲದೆ ಪವರ್ ಬಟನ್ ಮತ್ತು ವಾಲ್ಯೂಮ್ ರಾಕರ್‌ಗಳನ್ನು ಸ್ಮಾರ್ಟ್‌ಫೋನ್‌ನ ಬಲಭಾಗದಲ್ಲಿ ಇರಿಸಲಾಗುತ್ತದೆ ಎನ್ನಲಾಗಿದೆ.

ಲಾವಾ ಬ್ಲೇಜ್‌ ಕರ್ವ್ 5G ಬೆಲೆ ಮತ್ತು ಲಭ್ಯತೆ
ಲಾವಾ ಬ್ಲೇಜ್‌ ಕರ್ವ್ 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ 15,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಬರಲಿದೆ ಎಂದು ವರದಿಯಾಗಿದೆ. ಈ ಡಿವೈಸ್‌ ಅನ್ನು ಅಮೆಜಾನ್ ಇಂಡಿಯಾ ಮೂಲಕ ಪ್ರತ್ಯೇಕವಾಗಿ ಖರೀದಿಸುವುದಕ್ಕೆ ಸಾಧ್ಯವಿದೆ ಎಂದು ಹೇಳಲಾಗಿದೆ.

ಇನ್ನು ಇತ್ತೀಚಿಗೆ ಲಾವಾ ಕಂಪೆನಿ ಹೊಸ ಲಾವಾ ಯುವ 3 ಸ್ಮಾರ್ಟ್‌ಫೋನ್ ಪರಿಚಯಿಸಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.5 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 90Hz ರಿಫ್ರೆಶ್‌ ರೇಟ್‌ ಆಯ್ಕೆ ಪಡೆದುಕೊಂಡಿದೆ. ಇದಲ್ಲದೆ ಸ್ಮಾರ್ಟ್‌ಫೋನ್ ಯೂನಿಸೋಕ್‌ T606 ಆಕ್ಟಾ-ಕೋರ್ ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್‌ 14 ಅಪ್‌ಗ್ರೇಡ್ ಆಯ್ಕೆಯನ್ನೂ ಸಹ ನೀಡಲಾಗಿದೆ. ಈ ಫೋನ್ ಟ್ರಿಪಲ್ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು, ಅದರಲ್ಲಿ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ನೋಡಬಹುದಾಗಿದೆ. ಈ ಸೆನ್ಸಾರ್‌ಗಳು ಎಐ ಫೀಚರ್ಸ್‌ ನಲ್ಲಿ ಕೆಲಸ ಮಾಡಲಿವೆ.

Best Mobiles in India

English summary
Lava Blaze Curve 5G Coming Soon in india: Expected Specs Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+