ಇಂದು ಲಾವಾ ಬ್ಲೇಜ್ ಕರ್ವ್ 5G ಖರೀದಿಗೆ ಲಭ್ಯ!..ಸಿಗಲಿದೆ ಭರ್ಜರಿ ಆಫರ್!
ಲಾವಾ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಲಾವಾ ಬ್ಲೇಜ್ ಕರ್ವ್ 5G ಸ್ಮಾರ್ಟ್‌ಫೋನ್ ಫಸ್ಟ್ ಸೇಲ್ ಇಂದು (ಮಾರ್ಚ್ 10 ರಂದು) ಅಮೆಜಾನ್ ಇ ಕಾಮರ್ಸ್ ತಾಣದ ಮೂಲಕ ಮಧ್ಯಾಹ್ನ 12 ರಿಂದ ಶುರು ಆಗಲಿದೆ. ಈ ಸ್ಮಾರ್ಟ್‌ಫೋನ್ ಪ್ರಾಥಮಿಕ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಆಗಿದೆ.
ಹೌದು, ಲಾವಾ ಬ್ಲೇಜ್ ಕರ್ವ್ 5G ಫೋನ್ ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ಇಂದು ಮೊದಲ ಸೇಲ್ ಪ್ರಾರಂಭ ಮಾಡಲಿದೆ. ಈ ಫೋನ್ ಕರ್ವ್ ಡಿಸ್‌ಪ್ಲೇ ಮಾದರಿಯನ್ನು ಪಡೆದಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 7050 6nm ಪ್ರೊಸೆಸರ್ ವೇಗವನ್ನು ಪಡೆದುಕೊಂಡಿದೆ. ಅಲ್ಲದೇ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಕೂಡಾ ಒಳಗೊಂಡಿದೆ.

ಲಾವಾ ಬ್ಲೇಜ್ ಕರ್ವ್ 5G ಫೋನ್ ಆರಂಭಿಕ ವೇರಿಯಂಟ್ ಬೆಲೆಯು 17,999ರೂ. ಆಗಿದ್ದು, ಖರೀದಿದಾರರು ಈ ಮೊಬೈಲ್ ಅನ್ನು ಐರನ್ ಗ್ಲಾಸ್ ಮತ್ತು ವಿರಿಡಿಯನ್ ಗ್ಲಾಸ್ ಕಲರ್ ಆಯ್ಕೆಗಳಲ್ಲಿ ಖರೀದಿ ಮಾಡಬಹುದಾಗಿದೆ. ಹಾಗಾದರೇ ಲಾವಾ ಬ್ಲೇಜ್ ಕರ್ವ್ 5G ಮೊಬೈಲ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಲಾವಾ ಬ್ಲೇಜ್ ಕರ್ವ್ 5G - ಫೀಚರ್ಸ್
ಲಾವಾ ಬ್ಲೇಜ್ ಕರ್ವ್ 5G ಮೊಬೈಲ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಕರ್ವ್ಡ್ ಅಮೋಲೆಡ್ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇಯು 2400×1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಈ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್‌ನೊಂದಿಗೆ ಇದ್ದು, 800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಲೆವೆಲ್‌ನಲ್ಲಿ ಇದೆ.
ಲಾವಾ ಬ್ಲೇಜ್ ಕರ್ವ್ 5G ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 6nm ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 14 ಸಪೋರ್ಟ್ ಜೊತೆಗೆ ಕಾರ್ಯ ನಿರ್ವಹಿಸಲಿದೆ. ಜೊತೆಗೆ ಮಾಲಿ-G68 MC4 GPU ಸಪೋರ್ಟ್ ಪಡೆದಿದೆ. ಇದು 8GB RAM ಮತ್ತು 128GB / 256GB ಆಂತರೀಕ ಸ್ಟೋರೇಜ್ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ.
ಲಾವಾ ಬ್ಲೇಜ್ ಕರ್ವ್ 5G ಮೊಬೈಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಪಡೆದುಕೊಂಡಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್, ದ್ವಿತೀಯ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ತೃತೀಯ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
ಲಾವಾ ಬ್ಲೇಜ್ ಕರ್ವ್ 5G ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ಅಪ್ ಅನ್ನು ಹೊಂದಿದೆ. ಇದು 33W ವೇಗದ ಚಾರ್ಜಿಂಗ್‌ನೊಂದಿಗೆ ಬರಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್-ಸಿ ಆಡಿಯೋ, ಎಫ್‌ಎಂ ರೇಡಿಯೋ, ಸ್ಟಿರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್, 5G, ಡ್ಯುಯಲ್ 4G VoLTE, Wi-Fi 6, ಬ್ಲೂಟೂತ್ 5.2, ಡ್ಯುಯಲ್ -ಫ್ರೀಕ್ವೆನ್ಸಿ GPS/ GLONASS ಬೀಡೌ, ಯುಎಸ್‌ಬಿ ಟೈಪ್-ಸಿ ಅನ್ನು ಸಪೋರ್ಟ್ ಮಾಡಲಿದೆ.
ಲಾವಾದ ಈ ಮೊಬೈಲ್ 8GB + 128GB ಸ್ಟೋರೇಜ್ ಮಾದರಿಗೆ 17,999ರೂ ಬೆಲೆಯನ್ನು ಪಡೆದಿದ್ದು, ಹಾಗೆಯೇ ಇದರ 8GB + 256GB ಮಾದರಿಯ ಬೆಲೆ 18,999ರೂ ಬೆಲೆಯಲ್ಲಿ ಲಭ್ಯ. ಇದು ಅಮೆಜಾನ್, ಲಾವಾ ಇಂಡಿಯಾ ಆನ್‌ಲೈನ್ ಸ್ಟೋರ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ (ಇಂದು) ಮಾರ್ಚ್ 11 ರಿಂದ ಖರೀದಿಗೆ ಲಭ್ಯ. ಇನ್ನು ಸ್ಮಾರ್ಟ್‌ಫೋನ್ ಐರನ್ ಗ್ಲಾಸ್ ಮತ್ತು ವಿರಿಡಿಯನ್ ಗ್ಲಾಸ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ.


Click it and Unblock the Notifications








