Home
ಸುದ್ದಿಜಾಲ

LAVA: ಲಾವಾದ ಈ 128 GB ಸ್ಟೋರೇಜ್‌ ಫೋನ್‌ಗೆ ದೊಡ್ಡ ಆಫರ್! 50MP ಕ್ಯಾಮೆರಾ

ಲಾವಾ ಫೋನ್‌ಗಳು (Lava phone) ದೇಶದಲ್ಲಿ ವಿಶೇಷವಾದ ಮೌಲ್ಯ ಪಡೆದಿವೆ. ಒಂದು ದೇಶೀಯ ಬ್ರ್ಯಾಂಡ್‌ ಎನ್ನುವ ಕಾರಣಕ್ಕಾದರೆ ಮತ್ತೊಂದು ಕಡಿಮೆ ದರದಲ್ಲಿ ಉತ್ತಮ ಸ್ಟೋರೇಜ್‌ ಆಯ್ಕೆ ಪಡೆದಿರುತ್ತವೆ. ಈ ನಡುವೆ ಲಾವಾದ ಸ್ಮಾರ್ಟ್‌ಫೋನ್‌ಗೆ ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ಆಫರ್ ಘೋಷಣೆ ಮಾಡಲಾಗಿದೆ.

ಹೌದು, ಪ್ರಮುಖ ಇ-ಕಾಮರ್ಸ್‌ ಸೈಟ್‌ ಲಾವಾ ಬ್ಲೇಜ್‌ ಪ್ರೊ ಸ್ಮಾರ್ಟ್‌ಫೋನ್‌ಗೆ (Lava Blaze Pro Smartphone) ಭರ್ಜರಿ ಆಫರ್ ಘೋಷಣೆ ಮಾಡಿದೆ. ಈ ಸ್ಮಾರ್ಟ್‌ಫೋನ್ 6 GB RAM ಆಯ್ಕೆಯೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಲಿದ್ದು, ಹೆಚ್‌ಡಿ+ ಡಿಸ್ಪ್ಲೇ ಯೊಂದಿಗೆ ಉತ್ತಮ ಎನಿಸಿವೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಇದರ ಆಫರ್ ಬೆಲೆ ವಿವರ ಇಲ್ಲಿದೆ ನೋಡಿ.

ಲಾವಾದ ಈ 128 GB ಸ್ಟೋರೇಜ್‌ ಫೋನ್‌ಗೆ ದೊಡ್ಡ ಆಫರ್! 50MP ಕ್ಯಾಮೆರಾ

ಲಾವಾ ಬ್ಲೇಜ್‌ ಪ್ರೊ ಸ್ಮಾರ್ಟ್‌ಫೋನ್‌ ಆಫರ್ ಮಾಹಿತಿ: ಈ ಸ್ಮಾರ್ಟ್‌ಫೋನ್ 13,999 ರೂ.ಗಳ ಆಫರ್ ಬೆಲೆ ಹೊಂದಿದ್ದು, ನೀವೀಗ ಇದನ್ನು 9,390 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಅಂದರೆ, ಈ ಫೋನ್‌ ಮೇಲೆ ಫ್ಲಿಪ್‌ಕಾರ್ಟ್‌ (Flipkart) ಬರೋಬ್ಬರಿ 32% ರಿಯಾಯಿತಿ ನೀಡುತ್ತಿದೆ. ಈ ಮೂಲಕ ನೀವು ಭಾರೀ ಹಣ ಉಳಿತಾಯ ಮಾಡಬಹುದಾಗಿದೆ. ಇದರೊಂದಿಗೆ ಬ್ಯಾಂಕ್‌ ಆಫರ್ ಸಹ ಇದೆ.

ಇನ್ನು ಬ್ಯಾಂಕ್‌ ವಿಚಾರಕ್ಕೆ ಬಂದರೆ ಕೆನರಾ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವ್ಯವಹಾರದ ಮೇಲೆ 10% ರಿಯಾಯಿತಿ, ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್‌ ಕಾರ್ಡ್‌ ಮೇಲೆ 5% ಕ್ಯಾಶ್‌ಬ್ಯಾಕ್ ಹಾಗೂ ಈ ಫೋನ್‌ ಖರೀದಿ ಮಾಡಿದ ನಂತರ ಎಸಿ ಖರೀದಿ ಮಾಡಲು ಮುಂದಾದರೆ ಅದರಲ್ಲೂ ಹೆಚ್ಚಿನ ಆಫರ್ ಪಡೆಯಬಹುದಾಗಿದೆ.

ಲಾವಾದ ಈ 128 GB ಸ್ಟೋರೇಜ್‌ ಫೋನ್‌ಗೆ ದೊಡ್ಡ ಆಫರ್! 50MP ಕ್ಯಾಮೆರಾ

ಲಾವಾ ಬ್ಲೇಜ್‌ ಪ್ರೊ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಮಾಹಿತಿ: ಈ ಫೋನ್ 6.52 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, 90Hz ರಿಫ್ರೆಶ್‌ ರೇಟ್‌ ಆಯ್ಕೆ ಪಡೆದಿದೆ. ಇದರೊಂದಿಗೆ 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ 81.6% ಸ್ಕ್ರೀನ್-ಟು-ಬಾಡಿ ಅನುಪಾತ ಹಾಗೂ 269 ppi ಸಾಂದ್ರತೆ ಪಡೆದುಕೊಂಡಿದೆ.

ಲಾವಾ ಬ್ಲೇಜ್‌ ಪ್ರೊ ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ಮಾಹಿತಿ: ಈ ಫೋನ್ ಮೀಡಿಯಾಟೆಕ್ MT6765V/CB ಹಿಲಿಯೊ G37 (12 nm) ಪ್ರೊಸೆಸರ್‌ ಬಲ ಪಡೆದಿದ್ದು, ಆಂಡ್ರಾಯ್ಡ್ 12 ಓಎಸ್‌ನಲ್ಲಿ ರನ್‌ ಮಾಡಲಿದೆ. ಇದರೊಂದಿಗೆ ಪವರ್‌ವಿಆರ್‌ GE8320 ಗ್ರಾಫಿಕ್ಸ್ ಕಾರ್ಡ್‌ ಬಲದೊಂದಿಗೆ ಉತ್ತಮವಾಗಿ ಕಾರ್ಯ ನಿರ್ವಹಿಸಲಿದೆ. ಉಳಿದಂತೆ ಈ ಫೋನ್ 4GB RAM ಹಾಗೂ 64GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ.

ಲಾವಾ ಬ್ಲೇಜ್‌ ಪ್ರೊ ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಈ ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು. ಅದರಲ್ಲಿ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್‌ ಹಾಗೂ ವಿಜಿಎ ಸೆನ್ಸರ್‌ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ 8 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದ್ದು, 1080p@30fps ಸಾಮರ್ಥ್ಯದ ವಿಡಿಯೋಗಳನ್ನು ಸೆರೆಹಿಡಿಯಬಹುದಾಗಿದೆ.

ಲಾವಾದ ಈ 128 GB ಸ್ಟೋರೇಜ್‌ ಫೋನ್‌ಗೆ ದೊಡ್ಡ ಆಫರ್! 50MP ಕ್ಯಾಮೆರಾ

ಲಾವಾ ಬ್ಲೇಜ್‌ ಪ್ರೊ ಸ್ಮಾರ್ಟ್‌ಫೋನ್‌ ಬ್ಯಾಟರಿ ಹಾಗೂ ಇತರೆ: ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 10W ವೈರ್ಡ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಇದರೊಂದಿಗೆ 3.5 ಎಂಎಂ ಜ್ಯಾಕ್, ವೈ-ಫೈ 802.11 b/g/n/ac, ಬ್ಲೂಟೂತ್ ಆವೃತ್ತಿ 5.0, A2DP, LE, ಎಫ್‌ಎಮ್‌ ರೇಡಿಯೋ, ಯುಎಸ್‌ಬಿ ಟೈಪ್- ಸಿ 2.0, OTG ಕನೆಕ್ಟಿವಿಟಿ ಬೆಂಬಲ ಪಡೆದಿದೆ.

Best Mobiles in India

English summary
Lava Blaze Pro Smartphone has announced a great offer. This smartphone will perform well with the 6 GB RAM option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+