Home
ಸುದ್ದಿಜಾಲ

ಸ್ವಾತಂತ್ರ್ಯ ದಿನದ ಹಿನ್ನೆಲೆ ಗಿನ್ನೆಸ್ ವಿಶ್ವ ದಾಖಲೆ ಮಾಡಿದ ಲಾವಾ! ಅದೇಗೆ ಅಂತೀರಾ?

ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಭಾರತೀಯ ಬ್ರ್ಯಾಂಡ್‌ ಆಗಿರುವ ಲಾವಾ ಫೋನ್‌ಗಳು ಇತ್ತೀಚಿನ ದಿನಗಳಲ್ಲಿ ಸುಧಾರಿತ ಫೀಚರ್ಸ್‌ನೊಂದಿಗೆ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಅದರಲ್ಲೂ ಇತ್ತೀಚಿಗಷ್ಟೇ ಲಾವಾ ಹೊಸ ಫೋನ್‌ ಅನ್ನೂ ಸಹ ಅನಾವರಣ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿತ್ತು. ಈ ನಡುವೆ ಲಾವಾ ಸ್ವಾತಂತ್ರ್ಯ ದಿನದ ಹಿನ್ನೆಲೆ ಗಿನ್ನೆಸ್ ವಿಶ್ವ ದಾಖಲೆ ಮಾಡಿದೆ.

ಹೌದು, ಭಾರತೀಯ ಮೊಬೈಲ್ ಫೋನ್ ತಯಾರಕಾ ಕಂಪೆನಿಯಾಗಿರುವ ಲಾವಾ ಭಾರತೀಯ ಧ್ವಜದ ಆಕಾರ ಹಾಗೂ ಬಣ್ಣದಲ್ಲಿ ಸ್ಮಾರ್ಟ್‌ಫೋನ್‌ಗಳಿಂದ ಮಾಡಿದ ಅತಿದೊಡ್ಡ ಮೊಸಾಯಿಕ್‌ಗಾಗಿ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ದಾಖಲಾಗಿದೆ. ಈ ಸಂಬಂಧ ಲಾವಾ ಅಧಿಕೃತವಾಗಿ ಮಾಹಿತಿ ನೀಡಿ ಸಂತಸ ಹಂಚಿಕೊಂಡಿದೆ. ಹಾಗಿದ್ರೆ, ಯಾವ ಫೋನ್‌ ಬಳಕೆ ಮಾಡಿಕೊಂಡು ಈ ದಾಖಲೆ ಮಾಡಲಾಗಿದೆ?, ಈ ಮೊಸಾಯಿಕ್ ರಚನೆ ಮಾಡಿದ್ದು ಎಲ್ಲಿ ಎಂಬ ಇಂಟ್ರೆಸ್ಟಿಂಗ್‌ ಮಾಹಿತಿ ಇಲ್ಲಿದೆ ನೋಡಿ.

ಸ್ವಾತಂತ್ರ್ಯ ದಿನದ ಹಿನ್ನೆಲೆ ಗಿನ್ನೆಸ್ ವಿಶ್ವ ದಾಖಲೆ ಮಾಡಿದ ಲಾವಾ!...

ಈ ದಾಖಲೆ ಮಾಡಿದ್ದು ಎಲ್ಲಿ? : ಈ ವಿಶೇಷ ದಾಖಲೆಯನ್ನು ಲಾವಾ ಉತ್ತರ ಪ್ರದೇಶದ ನೋಯ್ಡಾದ ಮಾಲ್‌ನಲ್ಲಿ ಮಾಡಿದೆ. ಇದಕ್ಕಾಗಿ ಕಂಪೆನಿಯು ತನ್ನ ಲಾವಾ ಬ್ಲೇಜ್ 2 ಸ್ಮಾರ್ಟ್‌ಫೋನ್‌ಗಳನ್ನು ಬಳಕೆ ಮಾಡಿಕೊಂಡಿದೆ. ಅದರಂತೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್‌ನ ಅಧಿಕೃತ ತೀರ್ಪುಗಾರರು ದಾಖಲೆಯನ್ನು ಪರಿಶೀಲಿಸಲು ಅಲ್ಲಿಗೆ ಬಂದಿದ್ದರು ಹಾಗೂ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡ ಮೊಸಾಯಿಕ್ ನಿಜವಾಗಿಯೂ ಹೊಸ ವಿಶ್ವ ದಾಖಲೆಯಾಗಿದೆ ಎಂದು ಪ್ರಮಾಣೀಕರಿಸಿ ಹಾಡಿ ಹೊಗಳಿದ್ದಾರೆ.

ಈ ವೇಳೆ ಪ್ರತಿಕ್ರಿಯೆ ನೀಡಿರುವ ಲಾವಾ ಇಂಟರ್‌ನ್ಯಾಶನಲ್‌ನ ಅಧ್ಯಕ್ಷ ಮತ್ತು ಬಿಸಿನೆಸ್ ಹೆಡ್ ಸುನಿಲ್ ರೈನಾ, ಭಾರತದ ಧ್ವಜದ ಆಕಾರದಲ್ಲಿ ಅತಿದೊಡ್ಡ ಅನಿಮೇಟೆಡ್ ಮೊಬೈಲ್ ಫೋನ್ ಮೊಸಾಯಿಕ್ ಅನ್ನು ನೋಡಲು ನಮಗೆ ತುಂಬಾ ಹೆಮ್ಮೆಯಾಗುತ್ತದೆ. ಇದು ಈ ಬಾರಿಯ ಸ್ವಾತಂತ್ರ್ಯ ದಿನದಂದು ರಾಷ್ಟ್ರಕ್ಕೆ ಗೌರವವಾಗಿದೆ. ಹಾಗೂ ಅಗ್ನಿ 2 ರ ಯಶಸ್ಸಿನ ಆಚರಣೆಯನ್ನು ಸಹ ಇದು ಹೊಂದಿದೆ ಎಂದಿದ್ದಾರೆ. ಜೊತೆಗೆ ಭಾರತೀಯ ಟೆಕ್ ಉತ್ಪನ್ನಗಳು ಯಶಸ್ವಿಯಾಗುವುದಿಲ್ಲ ಎಂಬ ಕಲ್ಪನೆಯನ್ನು ಇದು ನಾಶ ಮಾಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಉಳಿದಂತೆ ಲಾವಾ ಇಂಟರ್‌ನ್ಯಾಶನಲ್ ತನ್ನ ಉತ್ಪಾದನೆ ಮತ್ತು ದುರಸ್ತಿ ಸೌಲಭ್ಯವನ್ನು ನೋಯ್ಡಾದಲ್ಲಿ ಹೊಂದಿದ್ದು, ಆಗಸ್ಟ್ 31, 2021 ರಂತೆ ಉತ್ಪಾದನಾ ಸೌಲಭ್ಯವು ವಾರ್ಷಿಕವಾಗಿ 42.52 ಮಿಲಿಯನ್ ಫೀಚರ್ ಫೋನ್ ಸಮಾನವಾದ ಹ್ಯಾಂಡ್‌ಸೆಟ್‌ಗಳ ಒಟ್ಟು ಉತ್ಪಾದನಾ ಸಾಮರ್ಥ್ಯವನ್ನು ಪಡೆದುಕೊಂಡಿದೆ ಎಂದು ವರದಿಯಾಗಿದೆ. ಈ ಮೂಲಕ ಇತರೆ ಸ್ಮಾರ್ಟ್‌ಫೋನ್ ಕಂಪೆನಿಗಳ ವಿರುದ್ಧ ತನ್ನದೇ ಆದ ರೀತಿಯಲ್ಲಿ ಸ್ಪರ್ಧಿಸುತ್ತಿದೆ.

ಇದರೊಂದಿಗೆ ಇತ್ತೀಚೆಗೆ ಲಾವಾ ಅಗ್ನಿ 2, ಲಾವಾ ಬ್ಲೇಜ್ 5G ಮತ್ತು ಲಾವಾ ಯುವ 2 ಪ್ರೊ ಸೇರಿದಂತೆ ವ್ಯಾಪಕ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದೆ.ಈ ಮೂಲಕ ಲಾವಾ 2023 ರ ಎರಡನೇ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ 53% ಬೆಳವಣಿಗೆಯನ್ನು ಕಾಣುತ್ತಿದೆಯಂತೆ. ಕೆಲವು ದಿನಗಳ ಹಿಂದೆ ಲಾಂಚ್ ಆಗಿರುವ ಫೋನ್‌ ಕೆಲವು ಫೀಚರ್ಸ್‌ ಕಡೆ ಕಣ್ಣಾಯಿಸಿ.

ಲಾವಾ ಬ್ಲೇಜ್ 5G ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ 8GB RAM ವೇರಿಯಂಟ್‌ನಲ್ಲಿ ಮರು ಲಾಂಚ್ ಮಾಡಲಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಇದನ್ನು 4GB RAM ನೊಂದಿಗೆ ಲಾಂಚ್‌ ಮಾಡಲಾಗಿತ್ತು. ಈ ಫೋನ್ 90Hz ರಿಫ್ರೆಶ್ ರೇಟ್‌ನೊಂದಿಗೆ 6.51ಇಂಚಿನ ಹೆಚ್‌ಡಿ+ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್‌ ಬಲ ಪಡೆದುಕೊಂಡಿದೆ.

ಉಳಿದಂತೆ ಈ ಫೋನ್ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ಪಡೆದಿದ್ದು, ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ 1TB ವರೆಗೆ ಇಂಟರ್ ಸ್ಟೋರೇಜ್‌ ಅನ್ನು ವಿಸ್ತರಣೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಹೆಚ್ಚುವರಿಯಾಗಿ, ವರ್ಚುವಲ್ RAM ಫೀಚರ್ಸ್ ಸಹ ಲಭ್ಯ ಇದೆ. ಅಂದರೆ RAM ಅನ್ನು ಹೆಚ್ಚುವರಿ 8GB ಯಷ್ಟು ವಿಸ್ತರಣೆ ಮಾಡಿಕೊಳ್ಳಬಹುದು.

Best Mobiles in India

English summary
Lava, an Indian mobile phone manufacturer, has set a Guinness World Record for the largest mosaic made of smartphones in the shape and color of the Indian flag.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+