Home
ಸುದ್ದಿಜಾಲ

ಭಾರೀ ಡಿಸ್ಕೌಂಟ್‌ನಲ್ಲಿ ಕರ್ವ್ಡ್‌ ಡಿಸ್‌ಪ್ಲೇ ಇರುವ ಫೋನ್‌ ಬೇಕಿದ್ರೆ, ಈ ಆಫರ್‌ ಬಿಡಬೇಡಿ!

ಜನಪ್ರಿಯ ಇ ಕಾಮರ್ಸ್‌ ಅಮೆಜಾನ್‌ ತಾಣದಲ್ಲಿ ಮೊಬೈಲ್‌ಗಳಿಗೆ ಏನಾದರೊಂದು ಡಿಸ್ಕೌಂಟ್‌ ಲಭ್ಯ ಇರುತ್ತದೆ. ಸದ್ಯ ಲಾವಾ ಕ್ರಿಕೆಟ್‌ ಫೀವರ್‌ ಸೇಲ್‌ ಆಯೋಜಿಸಿದ್ದು, ಈ ಮಾರಾಟದಲ್ಲಿ ಲಾವಾ ಬ್ರ್ಯಾಂಡ್‌ನ ಆಯ್ದ ಕೆಲವು ಮೊಬೈಲ್‌ಗಳು ಆಕರ್ಷಕ ಡಿಸ್ಕೌಂಟ್‌ ಬೆಲೆಯಲ್ಲಿ ಲಭ್ಯ ಇವೆ. ಈ ಮಾರಾಟದಲ್ಲಿ ಮುಖ್ಯವಾಗಿ ಲಾವಾ ಅಗ್ನಿ 2 5G (Lava Agni 2 5G) ಸ್ಮಾರ್ಟ್‌ಫೋನ್‌ ಸ್ಪೆಷಲ್‌ ಡಿಸ್ಕೌಂಟ್‌ ದರದಲ್ಲಿ ಕಾಣಿಸಿಕೊಂಡಿದ್ದು, ಕರ್ವ್ಡ್‌ ಡಿಸ್‌ಪ್ಲೇ ಇರುವ ಫೋನ್‌ ಖರೀದಿಸಬೇಕು ಎನ್ನುವ ಗ್ರಾಹಕರಿಗೆ ಖುಷಿ ನೀಡಿದೆ.

ಹೌದು, ಲಾವಾ ಅಗ್ನಿ 2 5G ಮೊಬೈಲ್‌ ಅಮೆಜಾನ್‌ ಇ ಕಾಮರ್ಸ್‌ ವೆಬ್‌ಸೈಟ್‌ನಲ್ಲಿ ಶೇ. 35% ರಷ್ಟು ಭರ್ಜರಿ ಡಿಸ್ಕೌಂಟ್‌ ದರದಲ್ಲಿ ಕಾಣಬಹುದಾಗಿದೆ. ಈ ಮೊಬೈಲ್‌ನ 8GB RAM + 256GB ಸ್ಟೋರೇಜ್‌ ವೇರಿಯಂಟ್‌ 16,999ರೂ. ಗಳ ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿ ಮಾಡಬಹುದು. ಇದರ ಜೊತೆಗೆ ಗ್ರಾಹಕರು ಆಯ್ದ ಕೆಲವು ಬ್ಯಾಂಕ್‌ಗಳ ಆಫರ್‌ ಕೂಡಾ ಪಡೆಯಲು ಅವಕಾಶ ಇದೆ.

ಡಿಸ್ಕೌಂಟ್‌ನಲ್ಲಿ ಕರ್ವ್ಡ್‌ ಡಿಸ್‌ಪ್ಲೇ ಫೋನ್‌ ಬೇಕಿದ್ರೆ, ಈ ಆಫರ್‌ ಬಿಡಬೇಡಿ!

ಅಂದಹಾಗೆ ಲಾವಾ ಅಗ್ನಿ 2 5G ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoC ಪ್ರೊಸೆಸರ್‌ ಪವರ್‌ ಸೌಲಭ್ಯ ಪಡೆದಿದ್ದು, 4,700mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಒಪ್ಪೋ A38 ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಲಾವಾ ಅಗ್ನಿ 2 5G - ಫೀಚರ್ಸ್‌

ಲಾವಾ ಅಗ್ನಿ 2 5G ಮೊಬೈಲ್‌ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಕರ್ವ್ಡ್‌ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಪಡೆದಿದೆ. ಈ ಡಿಸ್‌ಪ್ಲೇ 2220 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದ್ದು, ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್‌ ಸಪೋರ್ಟ್‌ ಹೊಂದಿದೆ. ಅಲ್ಲದೇ HDR, HDR 10 ಮತ್ತು HDR 10+ ಅನ್ನು ಸಪೋರ್ಟ್‌ ಮಾಡಲಿದ್ದು, ಫೋನ್ ಮ್ಯಾಟ್ ಫಿನಿಶ್ ಮತ್ತು ಡಬಲ್-ರೀನ್‌ಫೋರ್ಸ್ಡ್ ಗ್ಲಾಸ್ ಪ್ರೊಟೆಕ್ಷನ್‌ ಒಳಗೊಂಡಿದೆ.

ಲಾವಾ ಅಗ್ನಿ 2 5G ಮೊಬೈಲ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoC ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯ ಮಾಡಲಿದ್ದು, ಇದು ಆಂಡ್ರಾಯ್ಡ್ 13 ಓಎಸ್‌ ಸಪೋರ್ಟ್‌ ಪಡೆದಿದೆ. ಹಾಗೆಯೇ 8GB RAM ಮತ್ತು 256GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಒಳಗೊಂಡಿದ್ದು, ಇದರ ಜೊತೆಗೆ 16GB ವರೆಗೆ ವರ್ಚುವಲ್ ವಿಸ್ತರಣೆಗೆ ಸಪೋರ್ಟ್‌ ಕೂಡಾ ಹೊಂದಿದೆ.

ಲಾವಾ ಅಗ್ನಿ 2 5G ಮೊಬೈಲ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, ಇದರ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್‌ ಪಡೆದುಕೊಂಡಿದೆ. ದ್ವಿತೀಯ ಕ್ಯಾಮೆರಾ 8 ಮೆಗಾ ಪಿಕ್ಸಲ್‌ ಹಾಗೂ ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸಲ್‌ ಸೆನ್ಸಾರ್ ಆಗಿದೆ. ಅಲ್ಲದೇ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸೌಲಭ್ಯ ಪಡೆದುಕೊಂಡಿದೆ.

ಲಾವಾ ಅಗ್ನಿ 2 5G ಮೊಬೈಲ್‌ 4,700mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ 66W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅಡಾಪ್ಟರ್ ಸೌಲಭ್ಯ ಪಡೆದಿದೆ. ಇದರಿಂದ ಈ ಫೋನ್‌ ಕೇವಲ 16 ನಿಮಿಷಗಳಲ್ಲಿ ಶೂನ್ಯದಿಂದ 50% ತನಕ ಚಾರ್ಜ್‌ ಪಡೆಯಲಿದೆ. ಹಾಗೆಯೇ ಈ ಮೊಬೈಲ್‌ 5G ಯ 13 ಬ್ಯಾಂಡ್‌ಗಳನ್ನು ಸಹ ಸಪೋರ್ಟ್‌ ಮಾಡುತ್ತದೆ.

ಹಾಗೆಯೇ ಈ ಫೋನ್‌ ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌ ಆಯ್ಕೆಗಳನ್ನು ಪಡೆದಿದೆ. ಲಾವಾ ಅಗ್ನಿ 2 5G ಮೊಬೈಲ್‌ 8GB RAM ಮತ್ತು 256GB ಸ್ಟೋರೇಜ್‌ ಆಯ್ಕೆ ಅನ್ನು ಹೊಂದಿದೆ.

Best Mobiles in India

English summary
Lava Cricket Fever sale: Special Discount offer on Lava Agni 2 on Amazon. check other details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+