Lava: ಲಾವಾ ಯುವ 3 ಸ್ಮಾರ್ಟ್‌ಫೋನ್ ಲಾಂಚ್! ಬೆಲೆ 6,799ರೂ., ಫೀಚರ್ಸ್ ಏನು?
ಲಾವಾ ಸ್ಮಾರ್ಟ್‌ಫೋನ್‌ಗಳು (Lava smartphones) ಅಗ್ಗದ ದರದಲ್ಲಿ ಉತ್ತಮ ಫೀಚರ್ಸ್ ಅನ್ನು ನೀಡುತ್ತವೆ. ಅದರಂತೆ ಇದೀಗ ಭಾರತದಲ್ಲಿ ಲಾವಾ ಯುವ 3 ಸ್ಮಾರ್ಟ್‌ಫೋನ್ (Lava Yuva 3 smartphone) ಅನ್ನು ಅನಾವರಣ ಮಾಡಲಾಗಿದ್ದು, ಈ ಸ್ಮಾರ್ಟ್‌ಫೋನ್ 6,799ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ.
ಹೌದು, ದೇಶೀಯ ಬ್ರ್ಯಾಂಡ್ ಆಗಿರುವ ಲಾವಾ ಇದೀಗ ಭಾರತದಲ್ಲಿ ಲಾವಾ ಯುವ 3 ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದೆ. ಈ ಸ್ಮಾರ್ಟ್‌ಫೋನ್ ಯೂನಿಸೋಕ್ T606 ಆಕ್ಟಾ-ಕೋರ್ ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಂಖ ಫೀಚರ್ಸ್ ಹಾಗೂ ಯಾವ ವೇರಿಯಂಟ್‌ನಲ್ಲಿ ಲಭ್ಯ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಲಾವಾ ಯುವ 3 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಈ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಹೆಚ್ ಡಿ+ ರೆಸಲ್ಯೂಶನ್‌ನೊಂದಿಗೆ 6.5 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಇದು 90Hz ರಿಫ್ರೆಶ್ ರೇಟ್ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಸೆಲ್ಫಿ ಕ್ಯಾಮೆರಾ ಉದ್ದೇಶಕ್ಕೆ ಪಂಚ್-ಹೋಲ್ ಶೈಲಿ ಪಡೆದುಕೊಂಡಿದೆ.
ಲಾವಾ ಯುವ 3 ಸ್ಮಾರ್ಟ್‌ಫೋನ್ ಪ್ರೊಸೆಸರ್ ವಿವರ: ಈ ಫೋನ್ ಯೂನಿಸೋಕ್ T606 ಆಕ್ಟಾ-ಕೋರ್ ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 13 ಅನ್ನು ರನ್ ಮಾಡಲಿದೆ. ಇದರೊಂದಿಗೆ ಎರಡು ವರ್ಷಗಳ ಖಚಿತವಾದ ಭದ್ರತಾ ನವೀಕರಣಗಳನ್ನು ಮತ್ತು ಖಾತರಿಯ ಆಂಡ್ರಾಯ್ಡ್ 14 ಅಪ್‌ಗ್ರೇಡ್ ಆಯ್ಕೆಯನ್ನೂ ಸಹ ನೀಡಲಾಗಿದೆ. ಇದರೊಂದಿಗೆ 4GB RAM +4GB ವರ್ಚುವಲ್ RAM ಮತ್ತು 64GB ಹಾಗೂ 4GB RAM+4GB ವರ್ಚುವಲ್ RAM ಮತ್ತು 128GB ಇಂಟರ್ ಸ್ಟೋರೇಜ್‌ನಲ್ಲಿ ಈ ಫೋನ್ ಲಭ್ಯ ಇದೆ.

ಲಾವಾ ಯುವ 3 ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದ್ದು, ಅದರಲ್ಲಿ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ನೋಡಬಹುದಾಗಿದೆ. ಈ ಸೆನ್ಸರ್‌ಗಳು ಎಐ ಫೀಚರ್ಸ್ ನಲ್ಲಿ ಕೆಲಸ ಮಾಡಲಿವೆ. ಇದರೊಂದಿಗೆ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ. ಈ ಮೂಲಕ ಅತ್ಯುತ್ತಮ ವಿಡಿಯೋ ಹಾಗೂ ಫೋಟೋ ಸೆರೆಹಿಡಿಯಬಹುದಾಗಿದೆ.
ಲಾವಾ ಯುವ 3 ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ವರ್ಧಿತ ಭದ್ರತೆಗಾಗಿ ಫೇಸ್ ಅನ್‌ಲಾಕ್ ಫೀಚರ್ಸ್, ಬಾಟಮ್-ಫೈರಿಂಗ್ ಸ್ಪೀಕರ್ ಸೇರಿದಂತೆ ಅನೇಕ ಆಕರ್ಷಕ ಫೀಚರ್ಸ್ ಅನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ.

ಲಾವಾ ಯುವ 3 ಸ್ಮಾರ್ಟ್‌ಫೋನ್ ಬೆಲೆ ಹಾಗೂ ಲಭ್ಯತೆ: ಈ ಫೋನ್ ಎರಡು ವೇರಿಯಂಟ್‌ನಲ್ಲಿ ಲಭ್ಯ ಇದೆ. ಅಂದರೆ 4GB RAM +4GB ವರ್ಚುವಲ್ RAM ಮತ್ತು 64GB ಇಂಟರ್ ಸ್ಟೋರೇಜ್ ಆಯ್ಕೆ ಇರುವ ಫೋನ್ 6,799 ರೂ.ಗಳ ಬೆಲೆ ಹೊಂದಿದ್ದರೆ 4GB RAM+4GB ವರ್ಚುವಲ್ RAM ಮತ್ತು 128GB ಇಂಟರ್ ಸ್ಟೋರೇಜ್ ಆಯ್ಕೆಯ ಫೋನ್ 7,299 ರೂ.ಗಳ ಬೆಲೆ ಪಡೆದಿದೆ. ಈ ಫೋನ್‌ಗಳನ್ನು ಅಮೆಜಾನ್ ಮೂಲಕ ಫೆಬ್ರವರಿ 7 ರಿಂದ ಖರೀದಿ ಮಾಡಬಹುದಾಗಿದೆ. ಜೊತೆಗೆ ಈ ಫೋನ್ ಎಕ್ಲಿಪ್ಸ್ ಬ್ಲಾಕ್, ಕಾಸ್ಮಿಕ್ ಲ್ಯಾವೆಂಡರ್ ಮತ್ತು ಗ್ಯಾಲಕ್ಸಿ ವೈಟ್ ಬಣ್ಣದಲ್ಲಿ ಲಭ್ಯ ಇರಲಿವೆ.
ಈ ಫೋನ್ ಸಂಬಂಧ ಲಾವಾ ಇಂಟರ್‌ನ್ಯಾಶನಲ್ ಲಿಮಿಟೆಡ್‌ನ ಉತ್ಪನ್ನ ಮುಖ್ಯಸ್ಥ ಸುಮಿತ್ ಸಿಂಗ್ ಮಾಹಿತಿ ನೀಡಿ, ಈ ಫೋನ್‌ನ ಪ್ರೀಮಿಯಂ ವಿನ್ಯಾಸ, ಸ್ಟಾಕ್ ಆಂಡ್ರಾಯ್ಡ್ 13 ಮತ್ತು 2-ವರ್ಷದ ಭದ್ರತಾ ನವೀಕರಣಗಳಿಂದ ಚಾಲಿತವಾದ ಈ ಫೋನ್ ತಡೆರಹಿತ ಬಳಕೆದಾರ ಅನುಭವ ನೀಡಲಿದೆ. ಅಲ್ಲದೆ ಇದು ವಿಕಸನಗೊಳ್ಳುತ್ತಿರುವ ಬೇಡಿಕೆಗಳನ್ನು ಪೂರೈಸುತ್ತದೆ ಎಂದು ಹೇಳಿದ್ದಾರೆ.


Click it and Unblock the Notifications








