Home
ಸುದ್ದಿಜಾಲ

ಹೊಸ ಅವತಾರದಲ್ಲಿ ಮತ್ತೆ ಲಾವಾ O2 ಸ್ಮಾರ್ಟ್‌ಫೋನ್‌ ಲಾಂಚ್‌!..ಗ್ರಾಹಕರಿಗೆ ಅಚ್ಚರಿ!

ಸ್ವದೇಶಿ ಲಾವಾ ಸಂಸ್ಥೆಯು ಭಾರತದಲ್ಲಿ ಇತ್ತೀಚಿಗೆ ಬಿಡುಗಡೆ ಮಾಡಿರುವ ಲಾವಾ O2 (Lava O2) ಸ್ಮಾರ್ಟ್‌ಫೋನ್ ಬೆಲೆ ಹಾಗೂ ಫೀಚರ್ಸ್‌ಗಳಿಂದ ಆಕರ್ಷಕ ಎನಿಸಿಕೊಂಡಿದೆ. ಇದೀಗ ಸಂಸ್ಥೆಯು ಹೊಸ ರಾಯಲ್ ಗೋಲ್ಡ್ (Royal Gold) ಕಲರ್‌ ವೇರಿಯಂಟ್‌ ಅವತಾರದಲ್ಲಿ ಲಾಂಚ್‌ ಆಗಿದೆ.

ಹೌದು, ಲಾವಾ ಸಂಸ್ಥೆಯು ಲಾವಾ O2 ಫೋನ್‌ ಅನ್ನು ಈಗ ಹೊಸದಾಗಿ ರಾಯಲ್ ಗೋಲ್ಡ್ ಕಲರ್‌ನಲ್ಲಿ ಬಿಡುಗಡೆ ಮಾಡಿದೆ. ಈ ಮೊಬೈಲ್‌ ಈಗಾಗಲೇ ಇಂಪೀರಿಯಲ್ ಗ್ರೀನ್ ಮತ್ತು ಮೆಜೆಸ್ಟಿಕ್ ಪರ್ಪಲ್ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಇದೆ.

ಹೊಸ ಅವತಾರದಲ್ಲಿ ಮತ್ತೆ ಲಾವಾ O2 ಸ್ಮಾರ್ಟ್‌ಫೋನ್‌ ಲಾಂಚ್‌!..ಗ್ರಾಹಕರಿಗೆ ಅಚ್ಚರಿ

ಈ ಫೋನಿನ 8GB + 128GB ಸ್ಟೋರೇಜ್‌ ವೇರಿಯಂಟ್‌ 8,499 ರೂ. ಗಳ ಪ್ರೈಸ್‌ ಟ್ಯಾಗ್‌ ಅನ್ನು ಪಡೆದುಕೊಂಡಿದೆ. ಅಮೆಜಾನ್‌ ತಾಣದಲ್ಲಿ 500ರೂ. ಗಳ ಕೂಪನ್‌ ಲಭ್ಯ ಇದ್ದು, 7,999ರೂ. ಗಳಿಗೆ ಗ್ರಾಹಕರು ಪಡೆದುಕೊಳ್ಳಬಹುದಾಗಿದೆ. ಹಾಗಾದರೇ ಲಾವಾ O2 ಫೋನಿನ ಇತರೆ ಫೀಚರ್ಸ್‌ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಲಾವಾ O2 ಮೊಬೈಲ್‌ - ಫೀಚರ್ಸ್‌

ಲಾವಾ ಸಂಸ್ಥೆಯ ಈ ಹೊಸ ಮೊಬೈಲ್‌ 6.5 ಇಂಚಿನ ಎಲ್‌ಸಿಡಿ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಪಡೆದಿದ್ದು, ಡಿಸ್‌ಪ್ಲೇಯು 720 × 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಒಳಗೊಂಡಿದೆ. ಹಾಗೆಯೇ ಈ ಡಿಸ್‌ಪ್ಲೇಯು 269ppi ಪಿಕ್ಸೆಲ್ ಸಾಂದ್ರತೆ, 90Hz ರಿಫ್ರೆಶ್ ರೇಟ್ ಆಯ್ಕೆ ಹಾಗೂ ಪಂಚ್ ಹೋಲ್ ನಾಚ್ ಡಿಸ್‌ಪ್ಲೇ ಶೈಲಿ ಹೊಂದಿದೆ.

ಲಾವಾ O2 ಸ್ಮಾರ್ಟ್‌ಫೋನ್‌ ಯೂನಿಸೋಕ್‌ T616 ಪ್ರೊಸೆಸರ್ ಸೌಲಭ್ಯದಲ್ಲಿ ಕಾರ್ಯ ಮಾಡಲಿದ್ದು, ಮಾಲಿ G57 ಜಿಪಿಯು ಪವರ್‌ ಸಪೋರ್ಟ್ ಕೂಡಾ ಹೊಂದಿದೆ. ಇದು ಆಂಡ್ರಾಯ್ಡ್ 13 ಓಎಸ್‌ ಅನ್ನು ರನ್ ಮಾಡಲಿದ್ದು, ಆಂಡ್ರಾಯ್ಡ್‌ 14 ಗೆ ಅಪ್‌ಗ್ರೇಡ್ ಆಯ್ಕೆ ಒಳಗೊಂಡಿದೆ. ಹಾಗೆಯೇ 8GB RAM ಮತ್ತು 8 GB ವರ್ಚುವಲ್ RAM ಆಯ್ಕೆಯೊಂದಿಗೆ 128 GB UFS 2.2 ಆಂತರೀಕ ಸ್ಟೋರೇಜ್‌ ಆಯ್ಕೆ ಇವೆ.

ಲಾವಾ O2 ಮೊಬೈಲ್‌ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಆಯ್ಕೆ ಪಡೆದಿದ್ದು, ದ್ವಿತೀಯ ಕ್ಯಾಮೆರಾ ಎಐ ಲೆನ್ಸ್‌ ಅನ್ನು ಪಡೆದಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ 8 ಮೆಗಾ ಪಿಕ್ಸೆಲ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಹಾಗೆಯೇ ಎಲ್‌ಇಡಿ ಫ್ಲ್ಯಾಶ್‌ ಆಯ್ಕೆ ನೀಡಲಾಗಿದೆ.

ಲಾವಾ O2 ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಒಳಗೊಂಡಿದ್ದು, ಇದಕ್ಕೆ ಸಪೋರ್ಟಿವ ಆಗಿ 18W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 3.5mm ಆಡಿಯೋ ಜಾಕ್, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೌಲಭ್ಯ, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್, ಫೇಸ್ ಅನ್‌ಲಾಕ್ ಆಯ್ಕೆ, ಡ್ಯುಯಲ್-ಸಿಮ್, 4G, ವೈ ಫೈ, ಬ್ಲೂಟೂತ್‌ ಆವೃತ್ತಿ 5.0 ಆಯ್ಕೆ ಲಭ್ಯ.

ಲಾವಾ O2 ಸ್ಮಾರ್ಟ್‌ಫೋನಿನ 8GB RAM + 128GB ಸ್ಟೋರೇಜ್‌ ವೇರಿಯಂಟ್‌ ಆಫರ್‌ ಬೆಲೆ 7,999 ರೂ. ಪ್ರೈಸ್‌ಟ್ಯಾಗನಲ್ಲಿ ಲಭ್ಯವಿದೆ. ಅಮೆಜಾನ್‌ ವೆಬ್‌ಸೈಟ್‌ ಮೂಲಕ ಖರೀದಿ ಮಾಡಬಹುದಾಗಿದೆ. ಇನ್ನು ಈ ಮೊಬೈಲ್‌ ಫೋನ್‌ ರಾಯಲ್ ಗೋಲ್ಡ್ ಕಲರ್‌ ಆಯ್ಕೆ ಜೊತೆಗೆ ಮೆಜೆಸ್ಟಿಕ್ ಪರ್ಪಲ್ ಹಾಗೂ ಇಂಪೀರಿಯಲ್ ಗ್ರೀನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ.

Best Mobiles in India

English summary
Lava O2 Royal Gold Colour Variant Launched in India. price, specifications and all other details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+