ಇನ್ನು ಕೆಲವೇ ದಿನಗಳಲ್ಲಿ ಅಗ್ಗದ ಬೆಲೆಯಲ್ಲಿ ಈ ಫೋನ್ ಖರೀದಿಗೆ ಲಭ್ಯ!..ಜಬರ್ದಸ್ತ್ ಫೀಚರ್ಸ್!
ಲಾವಾ ಕಂಪನಿಯು ಹೊಸದಾಗಿ ಭಾರತದಲ್ಲಿ ಬಿಡುಗಡೆ ಮಾಡಿರುವ ಲಾವಾ O2 ಸ್ಮಾರ್ಟ್‌ಫೋನ್ ಈಗಾಗಲೇ ಬೆಲೆ ಹಾಗೂ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸಿದೆ. ಈ ಮೊಬೈಲ್ ಇದೇ ಮಾರ್ಚ್ 27 ರಂದು ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ಮಧ್ಯಾಹ್ನ 12 ಗಂಟೆಗೆ ಮೊದಲ ಮಾರಾಟ ಪ್ರಾರಂಭ ಮಾಡಲಿದೆ. ಅಂದಹಾಗೆ ಈ ಫೋನಿನ ಆರಂಭಿಕ ಆಫರ್ ಬೆಲೆ 7,999ರೂ. ಆಗಿದೆ.
ಹೌದು, ಲಾವಾ ಸಂಸ್ಥೆಯ ಇತ್ತೀಚಿನ ಲಾವಾ O2 ಸ್ಮಾರ್ಟ್‌ಫೋನ್ ಫೋನಿನ ಫಸ್ಟ್ ಸೇಲ್ ಮಾರ್ಚ್ 27 ರಂದು ಶುರುವಾಗಿಲಿದೆ. ಅಂದಹಾಗೆ ಈ ಫೋನ್ 8GB RAM + 128GB ಸ್ಟೋರೇಜ್ ವೇರಿಯಂಟ್ ಆಯ್ಕೆಯನ್ನು ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ.

ಅಂದಹಾಗೆ ಲಾವಾ O2 ಮೊಬೈಲ್ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಸಹ ಪಡೆದುಕೊಂಡಿದ್ದು, 18W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಕೂಡಾ ಇದೆ. ಇನ್ನು ಈ ಫೋನ್ ಮೆಜಿಸ್ಟಿಕ್ ಪರ್ಪಲ್, ಇಂಪೇರಿಯಲ್ ಗ್ರೀನ್ ಹಾಗೂ ರಾಯಲ್ ಗೋಲ್ಡ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಆಗಲಿದೆ. ಇನ್ನುಳಿದಂತೆ ಈ ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಲಾವಾ O2 ಮೊಬೈಲ್ ಫೀಚರ್ಸ್ ಹೀಗಿವೆ
ಲಾವಾದ ಈ ಮೊಬೈಲ್ 6.5 ಇಂಚಿನ ಎಲ್‌ಸಿಡಿ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಹೊಂದಿದ್ದು, 720×1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಹಾಗೆಯೇ 269ppi ಪಿಕ್ಸೆಲ್ ಸಾಂದ್ರತೆ, 90Hz ರಿಫ್ರೆಶ್ ರೇಟ್ ಆಯ್ಕೆ ಹಾಗೂ ಪಂಚ್ ಹೋಲ್ ನಾಚ್ ಡಿಸ್‌ಪ್ಲೇ ಶೈಲಿ ಹೊಂದಿದೆ.
ಹಾಗೆಯೇ ನೂತನ ಲಾವಾ O2 ಮೊಬೈಲ್ ಯೂನಿಸೋಕ್ T616 ಪ್ರೊಸೆಸರ್ ನಲ್ಲಿ ಕೆಲಸ ನಿರ್ವಹಿಸಲಿದ್ದು, ಮಾಲಿ G57 ಜಿಪಿಯು ಪವರ್ ಸಪೋರ್ಟ್ ಸಹ ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 13 ಓಎಸ್ ಅನ್ನು ರನ್ ಮಾಡಲಿದ್ದು, ಆಂಡ್ರಾಯ್ಡ್ 14 ಗೆ ಅಪ್‌ಗ್ರೇಡ್ ಆಯ್ಕೆ ಒಳಗೊಂಡಿದೆ. ಹಾಗೆಯೇ 8GB RAM ಮತ್ತು 8GB ವರ್ಚುವಲ್ RAM ಆಯ್ಕೆಯೊಂದಿಗೆ 128GB UFS 2.2 ಆಂತರೀಕ ಸ್ಟೋರೇಜ್ ಆಯ್ಕೆ ಕಾಣಬಹುದಾಗಿದೆ.
ಇನ್ನು ಈ ಮೊಬೈಲ್ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಆಯ್ಕೆ ಪಡೆದಿದ್ದು, ಸೆಕೆಂಡರಿ ಕ್ಯಾಮೆರಾ ಎಐ ಲೆನ್ಸ್ ಅನ್ನು ಪಡೆದಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ 8 ಮೆಗಾ ಪಿಕ್ಸೆಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಹಾಗೆಯೇ ಎಲ್‌ಇಡಿ ಫ್ಲ್ಯಾಶ್ ಆಯ್ಕೆ ನೀಡಲಾಗಿದೆ.
ಲಾವಾ O2 ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ಇದಕ್ಕೆ ಅನುಗುಣವಾಗಿ 18W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಕೂಡಾ ಪಡೆದಿದೆ. ಸರಳ ಚಾರ್ಜಿಂಗ್‌ಗಾಗಿ ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಆಯ್ಕೆ ಒದಗಿಸಲಾಗಿದೆ.ಅಲ್ಲದೇ ಈ ಕನೆಕ್ಟಿವಿಟಿ ಆಯ್ಕೆಗಳಲ್ಲಿ 3.5mm ಆಡಿಯೋ ಜಾಕ್, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೌಲಭ್ಯ, ಫೇಸ್ ಅನ್‌ಲಾಕ್ ಆಯ್ಕೆ, ಡ್ಯುಯಲ್-ಸಿಮ್, 4G, ವೈ ಫೈ, ಬ್ಲೂಟೂತ್ ಆವೃತ್ತಿ 5.0, ಮತ್ತು ಜಿಪಿಎಸ್ ಇವೆ.
ಇದರ 8GB RAM + 128GB ಸ್ಟೋರೇಜ್ ವೇರಿಯಂಟ್ ಆರಂಭಿಕ ಆಫರ್ ಬೆಲೆಯು 7,999 ರೂ. ಆಗಿದೆ. ಇದೇ ಮಾರ್ಚ್ 27, 2024 ರಿಂದ ಅಮೆಜಾನ್ ಹಾಗೂ ಲಾವಾ ವೆಬ್‌ಸೈಟ್ ಮೂಲಕ ಖರೀದಿಗೆ ಲಭ್ಯ ಇರಲಿದೆ. ಇನ್ನು ಈ ಸ್ಮಾರ್ಟ್‌ಫೋನ್ ಮೆಜೆಸ್ಟಿಕ್ ಪರ್ಪಲ್, ಇಂಪೀರಿಯಲ್ ಗ್ರೀನ್ ಮತ್ತು ರಾಯಲ್ ಗೋಲ್ಡ್ ಕಲರ್‌ಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಆಗಲಿದೆ.


Click it and Unblock the Notifications








