Home
ಸುದ್ದಿಜಾಲ

Lava: ಭಾರತದಲ್ಲಿ ಸುನಾಮಿ ಎಬ್ಬಿಸಲಿದೆ ಲಾವಾ O2! ನಿರೀಕ್ಷಿತ ಫೀಚರ್ಸ್‌ ಬಗ್ಗೆ ತಿಳಿಯಿರಿ

ಲಾವಾದ ಫೋನ್‌ಗಳು (Lava phones) ಭಾರತದಲ್ಲಿ ತಮ್ಮದೇ ಆದ ಟ್ರೆಂಡ್‌ ಸೃಷ್ಠಿಸಿವೆ. ಅಂದರೆ ಈ ಫೋನ್‌ಗಳಿಗೆ ಭಾರತದಲ್ಲಿ ವಿಶೇಷವಾದ ಬೇಡಿಕೆ ಇದ್ದು, ಈ ನಡುವೆ ಕೆಲವೇ ದಿನಗಳಲ್ಲಿ ಲಾವಾ ಹೊಸ ಹಾಗೂ ಆಕರ್ಷಕ ಫೋನ್‌ ಅನ್ನು ಲಾಂಚ್ ಮಾಡಲಿದೆ. ಈ ಫೋನ್‌ ಸ್ಮಾರ್ಟ್‌ಪೋನ್‌ ವಲಯದಲ್ಲಿ ಸುನಾಮಿ ಉಂಟು ಮಾಡಲಿದೆ.

ಹೌದು, ಭಾರತದಲ್ಲಿ ಲಾವಾದ ಫೋನ್‌ಗಳಿಗೆ ಬಹು ಬೇಡಿಕೆ ಇದ್ದು, ಈ ನಡುವೆ ಲಾವಾ O2 ಸ್ಮಾರ್ಟ್‌ಫೋನ್‌ (Lava O2 smartphone) ಲಾಂಚ್‌ಗೆ ದಿನಾಂಕ ನಿಗದಿ ಮಾಡಲಾಗಿದೆ. ಈ ಫೋನ್‌ ಸಂಬಂಧ ಮೈಕ್ರೋಸೈಟ್‌ ಆರಂಭಿಸಲಾಗಿದ್ದು, ಸ್ಮಾರ್ಟ್‌ಫೋನ್‌ ಪ್ರಿಯರ ಹೃದಯ ಬಡಿತ ಹೆಚ್ಚಾಗುವಂತೆ ಮಾಡಲಾಗುತ್ತಿದೆ. ಹಾಗಿದ್ರೆ, ಈ ಫೋನ್‌ ಯಾವಾಗ ಲಾಂಚ್‌ ಆಗಲಿದೆ?, ಇದರ ನಿರೀಕ್ಷಿತ ಫೀಚರ್ಸ್‌ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಭಾರತದಲ್ಲಿ ಸುನಾಮಿ ಎಬ್ಬಿಸಲಿದೆ ಲಾವಾ O2! ನಿರೀಕ್ಷಿತ ಫೀಚರ್ಸ್‌ ಬಗ್ಗೆ ತಿಳಿಯಿರಿ

ಲಾವಾ O2: ಲಾವಾದ ಈ ಫೋನ್‌ ಅನ್ನು ಇನ್ನೇನು ಕೆಲವೇ ದಿನಗಳಲ್ಲಿ ಅಂದರೆ ಮಾರ್ಚ್ 22 ರಂದು ಲಾಂಚ್‌ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಲಾವಾ ದೃಢೀಕರಿಸಿದೆ. ಈ ಸ್ಮಾರ್ಟ್‌ಫೋನ್ ಅನ್ನು ಅತ್ಯಂತ ವೇಗದ ಸ್ಮಾರ್ಟ್‌ಫೋನ್‌ ಎಂದು ಲಾವಾ ಹೇಳಿಕೊಂಡಿದೆ. ಹಾಗೆಯೇ ಲಾವಾ ಹಂಚಿಕೊಂಡ ಟೀಸರ್ ಪ್ರಕಾರ ಈ ಫೋನ್‌ನ ಚಿಪ್‌ಸೆಟ್ ಸೇರಿದಂತೆ ಇತರೆ ಕೆಲವು ಮಾಹಿತಿ ಖಚಿತವಾಗಿವೆ.

ಲಾವಾ O2 ಸ್ಮಾರ್ಟ್‌ಫೋನ್‌ ಅನ್ನು ಮಾರ್ಚ್ 22 ರಂದು ಮಧ್ಯಾಹ್ನ 12 ಗಂಟೆಗೆ ಲಾಂಚ್‌ ಮಾಡಲಾಗುತ್ತಿದ್ದು, ಈ ಲಾವಾದ ಸೋಶಿಯಲ್‌ ಸೈಟ್‌ಗಳಲ್ಲಿ ಕಾರ್ಯಕ್ರಮವನ್ನು ವೀಕ್ಷಣೆ ಮಾಡಬಹುದು. ಅಲ್ಲದೆ ಈ ಸ್ಮಾರ್ಟ್‌ಫೋನ್‌ಗಾಗಿ ಅಮೆಜಾನ್‌ನಲ್ಲಿ ಮೈಕ್ರೋಸೈಟ್‌ ಅನ್ನೂ ಸಹ ತೆರೆಯಲಾಗಿದೆ.ಈ ಮೂಲಕ ಅಮೆಜಾನ್‌ನಲ್ಲಿ ಈ ಫೋನ್‌ ಸೇಲ್‌ಗೆ ಲಭ್ಯವಾಗಲಿದೆ ಅನ್ನೋದನ್ನು ತಿಳಿಯಬಹುದು.

ಭಾರತದಲ್ಲಿ ಸುನಾಮಿ ಎಬ್ಬಿಸಲಿದೆ ಲಾವಾ O2! ನಿರೀಕ್ಷಿತ ಫೀಚರ್ಸ್‌ ಬಗ್ಗೆ ತಿಳಿಯಿರಿ

ಮೈಕ್ರೋಸೈಟ್ ಅನ್ನು ನೋಡಿದ್ರೆ ಈ ಫೋನ್‌ ಪರ್ಪಲ್ ಮತ್ತು ಗ್ರೀನ್‌ ಬಣ್ಣಗಳಲ್ಲಿ ಲಭ್ಯವಿರುತ್ತದೆ ಎಂದು ತಿಳಿದುಬಂದಿದೆ. ಹಾಗೆಯೇ ಈ ಫೋನ್ ಯೂನಿಸೋಕ್‌ T616 ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿದ್ದು, ಈ ಚಿಪ್‌ಸೆಟ್ 2.0GHz ನಲ್ಲಿ ಎರಡು ಕಾರ್ಟೆಕ್ಸ್ A75 ಕೋರ್‌ಗಳು, 1.8GHz ನಲ್ಲಿ ಆರು ಕಾರ್ಟೆಕ್ಸ್ A55 ಕೋರ್‌ಗಳು ಮತ್ತು ಮಾಲಿ G57 MP1 ಜಿಪಿಯು ಬಲ ಪಡೆದುಕೊಂಡಿದೆ. ಅಲ್ಲದೆ AnTuTu V10 ಬೆಂಚ್‌ಮಾರ್ಕಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ 2,80,000 ಸ್ಕೋರ್ ಅನ್ನು ಪಡೆದಿದೆ. ಈ ಬಗ್ಗೆ ಸ್ವತಃ ಲಾವಾ ಮಾಹಿತಿ ನೀಡಿದೆ.

ಇದರೊಂದಿಗೆ ಸೆಲ್ಫಿ ಕ್ಯಾಮೆರಾ ಉದ್ದೇಶಕ್ಕಾಗಿ ಪಂಚ್ ಹೋಲ್ ಕಟೌಟ್ ಆಯ್ಕೆ ಪಡೆದಿದ್ದು, 50 ಮೆಗಾಪಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾ ಸೇರಿದಂತೆ ಡ್ಯುಯಲ್‌ ಕ್ಯಾಮೆರಾ ಆಯ್ಕೆ ಪಡೆದಿರಲಿದೆ ಎಂದು ತಿಳಿದುಬಂದಿದೆ. ಅಲ್ಲದೆ ಈ ಫೋನ್‌ನ ಬಲಭಾಗದಲ್ಲಿ ಪವರ್ ಬಟನ್ ಮತ್ತು ವಾಲ್ಯೂಮ್ ರಾಕರ್‌ ಆಯ್ಕೆ ನೀಡಲಾಗಿದ್ದು, ಯುಎಸ್‌ಬಿ ಟೈಪ್‌-ಸಿ ಪೋರ್ಟ್, ಸ್ಪೀಕರ್ ಗ್ರಿಲ್, ಮೈಕ್ರೊಫೋನ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಈ ಫೋನ್‌ ಕೆಳಭಾಗದಲ್ಲಿ ನೀಡಲಾಗಿದೆ.

ಇಷ್ಟೇ ಅಲ್ಲದೆ ಈ ಸ್ಮಾರ್ಟ್‌ಫೋನ್ 18W ವೇಗದ ಚಾರ್ಜಿಂಗ್ ಬೆಂಬಲದ ಜೊತೆಗೆ 8GB RAM ಮತ್ತು 128GB ಇಂಟರ್ ಸ್ಟೋರೇಜ್‌ ಬೆಂಬಲ ಪಡೆದುಕೊಂಡಿದೆ. ಇಷ್ಟು ಮಾಹಿತಿಯನ್ನು ಲಾವಾ ಈಗಾಗಲೇ ಅಧಿಕೃತಗೊಳಿಸಿದ್ದು, ಕೆಲವು ಮಾಹಿತಿಯನ್ನು ರಹಸ್ಯವಾಗಿಟ್ಟು ಗ್ರಾಹಕರಲ್ಲಿ ಕುತೂಹಲ ಹೆಚ್ಚಾಗುವಂತೆ ಮಾಡಿದೆ. ಅವುಗಳಲ್ಲಿ ಪ್ರಮುಖವಾದುದು ಎಂದರೆ ಡಿಸ್‌ಪ್ಲೇ ವಿವರ ಹಾಗೂ ಬ್ಯಾಟರಿ ಸಾಮರ್ಥ್ಯ.

ಭಾರತದಲ್ಲಿ ಸುನಾಮಿ ಎಬ್ಬಿಸಲಿದೆ ಲಾವಾ O2! ನಿರೀಕ್ಷಿತ ಫೀಚರ್ಸ್‌ ಬಗ್ಗೆ ತಿಳಿಯಿರಿ

ಈ ಫೀಚರ್ಸ್‌ ಬಗ್ಗೆ ಲೀಕ್‌ ಮಾಹಿತಿಗಳು ಹರಿದಾಡುತ್ತಿವೆ. ಅದರಲ್ಲಿ ಉಲ್ಲೇಖ ಮಾಡಿದಂತೆ ಈ ಫೋನ್ ಸ್ಮಾರ್ಟ್‌ಫೋನ್ ಹೆಚ್‌ಡಿ+ ರೆಸಲ್ಯೂಶನ್ ಸಾಮರ್ಥ್ಯದ 90Hz ರಿಫ್ರೆಶ್ ರೇಟ್‌ ಆಯ್ಕೆಯ 6.5 ಇಂಚಿನ ಐಪಿಎಸ್‌ ಡಿಸ್‌ಪ್ಲೇಯನ್ನು ಹೊಂದಿರುತ್ತದೆ ಎಂಬ ನಂಬಲಾಗಿದೆ. ಇದರ ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ, LPDDR4X RAM ಮತ್ತು UFS 2.2 ಇಂಟರ್‌ ಸ್ಟೋರೇಜ್‌ ಪಡೆಯುವ ಸಾಧ್ಯತೆಯನ್ನು ಲೀಕ್‌ಮಾಹಿತಿಗಳಲ್ಲಿ ಉಲ್ಲೇಖ ಮಾಡಲಾಗಿದೆ. ಈ ಫೋನ್‌ ಬಗ್ಗೆ ನಿಮಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕು ಎಂದರೆ ಗಿಜ್‌ಬಾಟ್‌ನೊಂದಿಗೆ ಸಂಪರ್ಕದಲ್ಲಿರಿ.

Best Mobiles in India

English summary
Lava O2 Smartphone Launch Date announced, This smartphone will be powered by Unisock T616 processor and dual rear camera.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+