Home
ಸುದ್ದಿಜಾಲ

Lava: ಭಾರತದಲ್ಲಿ ಲಾವಾ O2 ಸ್ಮಾರ್ಟ್‌ಫೋನ್‌ ಲಾಂಚ್‌! ಸೂಪರ್ ಫೀಚರ್ಸ್‌..ಬೆಲೆ ಕೇವಲ ಇಷ್ಟೇ?

ಲಾವಾ ಫೋನ್‌ಗಳು (Lava phone) ಕಡಿಮೆ ದರದಲ್ಲಿ ಉತ್ತಮ ಫೀಚರ್ಸ್‌ ಆಯ್ಕೆ ನೀಡುತ್ತಿದ್ದು, ಅದರಂತೆ ಈಗ ಭಾರತದಲ್ಲಿ ಲಾವಾ O2 ಸ್ಮಾರ್ಟ್‌ಫೋನ್‌ (Lava O2 smartphone) ಅನ್ನು ಲಾಂಚ್‌ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಸ್ಟೈಲಿಶ್ ವಿನ್ಯಾಸ, ಉತ್ಕೃಷ್ಟ ಕಾರ್ಯಕ್ಷಮತೆ ಪಡೆದುಕೊಂಡಿದೆ.

ಹೌದು, ಭಾರತದಲ್ಲಿ ಕೊನೆಗೂ ಲಾವಾ O2 ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಹತ್ತು ಸಾವಿರದ ಒಳಗೆ ಲಭ್ಯ ಇರುವ ಫೋನ್‌ ವಿಭಾಗದಲ್ಲಿ ಅಗ್ರಸ್ಥಾನ ಪಡೆಯಲಿದೆ. ಯಾಕೆಂದರೆ ಈ ಫೋನ್ ಯೂನಿಸೋಕ್‌ T616 ಆಕ್ಟಾ-ಕೋರ್ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಭಾರತದಲ್ಲಿ ಲಾವಾ O2 ಸ್ಮಾರ್ಟ್‌ಫೋನ್‌ ಲಾಂಚ್‌! ಸೂಪರ್ ಫೀಚರ್ಸ್‌..

ಲಾವಾ O2 ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 6.5 ಇಂಚಿನ ಎಲ್‌ಸಿಡಿ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದ್ದು, 720×1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಹಾಗೆಯೇ 269ppi ಪಿಕ್ಸೆಲ್ ಸಾಂದ್ರತೆ, 90Hz ರಿಫ್ರೆಶ್ ರೇಟ್ ಆಯ್ಕೆ ಹಾಗೂ ಪಂಚ್ ಹೋಲ್ ನಾಚ್ ಡಿಸ್‌ಪ್ಲೇ ಶೈಲಿ ಪಡೆದಿದೆ.

ಲಾವಾ O2 ಸ್ಮಾರ್ಟ್‌ಫೋನ್‌ ಪ್ರೊಸೆಸರ್ ವಿವರ: ಇನ್ನು ಈ ಸ್ಮಾರ್ಟ್‌ಫೋನ್ ಯೂನಿಸೋಕ್‌ T616 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಮಾಲಿ G57 ಜಿಪಿಯು ಬಲ ಪಡೆದುಕೊಂಡಿದೆ. ಹಾಗೆಯೇ 8GB LPDDR4X RAM ಮತ್ತು 8GB ವರ್ಚುವಲ್ RAM ಆಯ್ಕೆಯೊಂದಿಗೆ 128GB UFS 2.2 ಇಂಟರ್‌ ಸ್ಟೋರೇಜ್‌ ಹೊಂದಿದೆ.

ಎಸ್‌ಡಿ ಕಾರ್ಡ್‌ಬಳಕೆ ಮಾಡಿಕೊಂಡು ಸ್ಟೋರೇಜ್‌ ಅನ್ನು ಹೆಚ್ಚಿಗೆ ಸಹ ಮಾಡಿಕೊಳ್ಳಬಹುದು. ಜೊತೆಗೆ ಆಂಡ್ರಾಯ್ಡ್ 13 ಓಎಸ್‌ ಅನ್ನು ರನ್ ಮಾಡಲಿದ್ದು, ಆಂಡ್ರಾಯ್ಡ್‌ 14 ಗೆ ಅಪ್‌ಗ್ರೇಡ್ ಮಾಡಬಹುದಾಗಿದೆ. ಅಲ್ಲದೆ ಎರಡು ವರ್ಷಗಳ ಭದ್ರತಾ ಪ್ಯಾಚ್ ನವೀಕರಣ ಸಹ ಲಭ್ಯ.

ಭಾರತದಲ್ಲಿ ಲಾವಾ O2 ಸ್ಮಾರ್ಟ್‌ಫೋನ್‌ ಲಾಂಚ್‌! ಸೂಪರ್ ಫೀಚರ್ಸ್‌..

ಲಾವಾ O2 ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಇನ್ನು ಈ ಫೋನ್ 50 ಮೆಗಾಪಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾ ಹಾಗೂ ಎಐ ಲೆನ್ಸ್‌ ಅನ್ನು ಪಡೆದಿದ್ದು, ಉತ್ತಮ ಫೋಟೋಗಳನ್ನು ತೆಗೆಯಲು ಎಲ್‌ಇಡಿ ಫ್ಲ್ಯಾಶ್‌ ಆಯ್ಕೆ ನೀಡಲಾಗಿದೆ. ಅಲ್ಲದೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್‌ 8 ಮೆಗಾಪಿಕ್ಸೆಲ್‌ ಕ್ಯಾಮೆರಾ ಹೊಂದಿದೆ.

ಲಾವಾ O2 ಸ್ಮಾರ್ಟ್‌ಫೋನ್‌ ಬ್ಯಾಟರಿ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, 18W ವೇಗದ ಚಾರ್ಜಿಂಗ್ ಬೆಂಬಲ ಪಡೆದಿದೆ. ಚಾರ್ಜಿಂಗ್‌ಗಾಗಿ ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಆಯ್ಕೆ ನೀಡಲಾಗಿದೆ. ಉಳಿದಂತೆ ಈ ಫೋನ್ 3.5mm ಆಡಿಯೋ ಜಾಕ್, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಫೇಸ್ ಅನ್‌ಲಾಕ್, ಡ್ಯುಯಲ್-ಸಿಮ್, 4G, ವೈ ಫೈ 5 802,11 b/g/n/ac, ಬ್ಲೂಟೂತ್‌ ಆವೃತ್ತಿ 5.0, ಮತ್ತು ಜಿಪಿಎಸ್‌ ಸೌಲಭ್ಯ ಪಡೆದುಕೊಂಡಿದೆ.

ಲಾವಾ O2 ಸ್ಮಾರ್ಟ್‌ಫೋನ್‌ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ಫೋನ್‌ ನಿಮಗೆ 7,999 ರೂ.ಗಳ ಬೆಲೆಗೆ ಲಭ್ಯ ಇರಲಿದೆ. ಬುಕ್ಕಿಂಗ್‌ಗಳು ಗ್ರಾಹಕರಿಗೆ ಮಾರ್ಚ್ 27, 2024 ರಿಂದ ಲಭ್ಯವಿರಲಿದ್ದು, ಗ್ರಾಹಕರು ಅಮೆಜಾನ್‌ ಮತ್ತು ಲಾವಾ ಇ-ಸ್ಟೋರ್‌ಗಳಲ್ಲಿ ಖರೀದಿ ಮಾಡಬಹುದಾಗಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ ಮೆಜೆಸ್ಟಿಕ್ ಪರ್ಪಲ್, ಇಂಪೀರಿಯಲ್ ಗ್ರೀನ್ ಮತ್ತು ರಾಯಲ್ ಗೋಲ್ಡ್ ಎಂಬ ಮೂರು ಬಣ್ಣದಲ್ಲಿ ಲಭ್ಯ ಇದೆ.

ಭಾರತದಲ್ಲಿ ಲಾವಾ O2 ಸ್ಮಾರ್ಟ್‌ಫೋನ್‌ ಲಾಂಚ್‌! ಸೂಪರ್ ಫೀಚರ್ಸ್‌..

ವಿಶೇಷ ವಿಷಯ ಏನೆಂದರೆ ಈ ಫೋನ್‌ ಅನ್ನು ಖರೀದಿ ಮಾಡಿದ ಬಳಿಕ ಗ್ರಾಹಕರ ಅನುಭವವನ್ನು ಹೆಚ್ಚಿಸಲು, ಪ್ರೀ ಸರ್ವಿಸ್‌ ಅಟ್‌ ಹೋಮ್‌ ಸೌಲಭ್ಯ ಕಲ್ಪಿಸಿಕೊಡಲಿದೆ. ಈ ಮೂಲಕ ಮನೆ ಬಾಗಿಲಿನಲ್ಲೇ ಮೊಬೈಲ್‌ ಸಂಬಂಧ ವಿವಿಧ ಸೇವೆಗಳನ್ನು ಪಡೆಯಬಹುದಾಗಿದೆ. ಈ ಸೇವೆ ಪಡೆಯಬೇಕು ಎಂದರೆ ನೀವು www.lavamobiles.com/lava_service_at_home/ ಲಿಂಕ್‌ ಅನ್ನು ಬಳಕೆ ಮಾಡಿಕೊಳ್ಳಬಹುದು.

Best Mobiles in India

English summary
Lava O2 smartphone unveiled. This smartphone will top the phone segment available under ten thousand. It will be powered by Unisoc T616 octa-core processor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+