Home
ಸುದ್ದಿಜಾಲ

ದೇಶಿ ಮಾರುಕಟ್ಟೆಯಲ್ಲಿ ಲಾವಾ ಪ್ರೊ ಬಡ್ಸ್‌ 22 ಅನಾವರಣ! ಬೆಲೆ ಎಷ್ಟು?

ಇತ್ತೀಚಿನ ದಿನಗಳಲ್ಲಿ ಸ್ವದೇಶಿ ಬ್ರ್ಯಾಂಡ್‌ ಮೇನಿಯಾ ಶುರುವಾಗಿದೆ. ಅದರಂತೆ ದೇಶಿ ಬ್ರ್ಯಾಂಡ್‌ ಲಾವಾ ಕಂಪೆನಿ ಕೂಡ ಹೊಸ ಮಾದರಿಯ ಡಿವೈಸ್‌ಗಳ ಮೂಲಕ ಸೌಂಡ್‌ ಮಾಡುತ್ತಿದೆ. ಸದ್ಯ ಇದೀಗ ಭಾರತದಲ್ಲಿ ಲಾವಾ ಪ್ರೊಬಡ್ಸ್‌ 22 TWS ಇಯರ್‌ಬಡ್ಸ್‌ ಬಿಡುಗಡೆ ಮಾಡಿದೆ. ಈ ಇಯರ್‌ಬಡ್ಸ್‌ ಕ್ವಾಡ್-ಮೈಕ್ರೋಫೋನ್ ಸೆಟಪ್ ಅನ್ನು ಒಳಗೊಂಡಿದೆ.

ಹೌದು, ಲಾವಾ ಪ್ರೊಬಡ್ಸ್‌ 22 TWS ಇಯರ್‌ಬಡ್ಸ್‌ ಬಿಡುಗಡೆ ಆಗಿದೆ. ಈ ಇಯರ್‌ಬಡ್ಸ್‌ನ ಪ್ರತಿ ಇಯರ್‌ಬಡ್‌ ಕೂಡ 46mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದರ ಚಾರ್ಜಿಂಗ್‌ ಕೇಸ್‌ 500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇನ್ನುಳಿದಂತೆ ಈ ಇಯರ್‌ಬಡ್ಸ್‌ ವಿಶೇಷತೆ ಏನು? ಇದರ ಬೆಲೆ ಎಷ್ಟು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ದೇಶಿ ಮಾರುಕಟ್ಟೆಯಲ್ಲಿ ಲಾವಾ ಪ್ರೊ ಬಡ್ಸ್‌ 22 ಅನಾವರಣ! ಬೆಲೆ ಎಷ್ಟು?

ಲಾವಾ ಪ್ರೊಬಡ್ಸ್‌ 22 TWS ವಿಶೇಷತೆ ಏನು?
ಲಾವಾ ಪ್ರೊಬಡ್ಸ್‌ 22 TWS ಇಯರ್‌ಬಡ್ಸ್‌ ಅತ್ಯಾಕರ್ಷಕ ಡಿಸೈನ್‌ ಹೊಂದಿದೆ. ಈ ಇಯರ್‌ಬಡ್ಸ್‌ 12mm ಆಡಿಯೋ ಡ್ರೈವರ್‌ಗಳನ್ನು ಹೊಂದಿದ್ದು, ಪ್ರಭಾವಶಾಲಿ ಬಾಸ್ ಕಾರ್ಯಕ್ಷಮತೆಯನ್ನು ನೀಡಲಿದೆ. ಇದರ ಕ್ವಾಡ್ ಮೈಕ್ರೊಫೋನ್‌ಗಳು ಬ್ಯಾಕ್‌ಗ್ರೌಂಡ್‌ ಶಬ್ದವನ್ನು ಎಫ್ಫೆಕ್ಟಿವ್‌ಲಿ ಕಡಿಮೆ ಮಾಡಲಿದೆ. ಇದರಿಂದ ಕರೆಗಳ ಸಮಯದಲ್ಲಿ ನಿಮ್ಮ ಧ್ವನಿಯು ಸ್ಪಷ್ಟವಾಗಿ ಕೇಳಿ ಬರಲಿದೆ ಎಂದು ಲಾವಾ ಕಂಪೆನಿ ಹೇಳಿಕೊಂಡಿದೆ.

ಲಾವಾ ಪ್ರೊಬಡ್ಸ್‌ 22 TWS ಇಯರ್‌ಬಡ್ಸ್‌ ಪಾಕೆಟ್ ಸ್ನೇಹಿಯಾಗಿದ್ದು, ಇದು ತುಂಬಾ ಹಗುರವಾಗಿದೆ. ಇದರ ಪ್ರತಿ ಇಯರ್‌ಬಡ್ 46mAh ಬ್ಯಾಟರಿಯನ್ನು ಹೊಂದಿವೆ. ಆದರೆ ಇದರ ಚಾರ್ಜಿಂಗ್‌ ಕೇಸ್ 500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದರಿಂದ ಇಯರ್‌ಬಡ್‌ ಚಾರ್ಜಿಂಗ್‌ನಿಂದ 8 ಗಂಟೆಗಳ ಮ್ಯೂಸಿಕ್‌ ಪ್ಲೇಬ್ಯಾಕ್ ಅನ್ನು ಒದಗಿಸಲಿದೆ. ಇನ್ನು ಆದರೆ ಚಾರ್ಜಿಂಗ್ ಕೇಸ್ ಮೂಲಕ ಹೆಚ್ಚುವರಿ 50 ಗಂಟೆಗಳ ಬ್ಯಾಟರಿ ಬಾಳಿಕೆ ಲಭ್ಯವಾಗಲಿದೆ.

ಪ್ರೊಬಡ್ಸ್ 22 ಅನ್ನು ಚಾರ್ಜ್ ಮಾಡುವುದಕ್ಕೆ USB-C ಪೋರ್ಟ್‌ ಅನ್ನು ನೀಡಲಾಗಿದೆ. ಆದರಿಂದ ಇದರ ಸಂಪೂರ್ಣ ಚಾರ್ಜಿಂಗ್‌ ಅನ್ನು ಕೇವಲ 90 ನಿಮಿಷಗಳಲ್ಲಿ ಮಾಡಬಹುದಾಗಿದೆ. ಅಲ್ಲದೆ ಕೇವಲ 10 ನಿಮಿಷಗಳ ಚಾರ್ಜಿಂಗ್‌ನಲ್ಲಿ 120 ನಿಮಿಷಗಳ ಇಯರ್‌ಬಡ್ ಬಳಕೆಯನ್ನು ಒದಗಿಸಲಿದೆ. ಇನ್ನು ಈ ಇಯರ್‌ಬಡ್ಸ್‌ ಬ್ಲೂಟೂತ್ 5.3 ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ. ಜೊತೆಗೆ 75ms ವಿಳಂಬದೊಂದಿಗೆ ಲೋ-ಲೆಟೆನ್ಸಿ ಮೋಡ್ ಅನ್ನು ನೀಡುತ್ತವೆ. ಇವುಗಳು ಗೂಗಲ್ ಅಸಿಸ್ಟೆಂಟ್ ಮತ್ತು ಸಿರಿ ವಾಯ್ಸ್ ಅಸಿಸ್ಟೆಂಟ್‌ಗಳನ್ನು ಬೆಂಬಲಿಸಲಿವೆ ಎಂದು ಹೇಳಲಾಗಿದೆ.

ಭಾರತದಲ್ಲಿ ಲಾವಾ ಪ್ರೊಬಡ್ಸ್‌ 22 ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಲಾವಾ ಪ್ರೊಬಡ್ಸ್‌ 22 TWS ಇಯರ್‌ಬಡ್ಸ್‌ 1,399ರೂ. ಬೆಲೆಯನ್ನು ಹೊಂದಿದೆ. ಇದನ್ನು ಲಾವಾ ಇಂಡಿಯಾದ ಅಧಿಕೃತ ಆನ್‌ಲೈನ್ ಸ್ಟೋರ್ ಮತ್ತು ಆಫ್‌ಲೈನ್ ರಿಟೇಲ್‌ ಸ್ಟೋರ್‌ಗಳು ಸೇರಿದಂತೆ ವಿವಿಧ ಪ್ಲಾಟ್‌ಫಾರ್ಮ್‌ಗಳ ಮೂಲಕ ಖರೀದಿಸಲು ಲಭ್ಯವಿದೆ. ಈ ಇಯರ್‌ಬಡ್ಸ್‌ ಫ್ರಾಸ್ಟ್ ವೈಟ್ ಮತ್ತು ಸ್ಪೇಸ್ ಬ್ಲ್ಯಾಕ್ ಕಲರ್‌ ಆಯ್ಕೆಗಳಲ್ಲಿ ದೊರೆಯಲಿದೆ. ಇದು ಖರೀದಿದಾರರಿಗೆ 1 ವರ್ಷದ ವಾರಂಟಿ ಜೊತೆಗೆ ಹೆಚ್ಚುವರಿ 2 ತಿಂಗಳ ಕವರೇಜ್ ಅನ್ನು ನೀಡುತ್ತಿದೆ.

ಇದಲ್ಲದೆ ಲಾವಾ ಕಂಪೆನಿ ಇತ್ತೀಚಿಗೆ ಲಾವಾ ಬ್ಲೇಜ್‌ 2 ಪ್ರೊ ಸ್ಮಾರ್ಟ್‌ಫೋನ್‌ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ 6.5 ಇಂಚಿನ HD+ IPS LCD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ನೊಂದಿಗೆ ಬರಲಿದೆ.

ಇದಲ್ಲದೆ ಹೆಚ್ಚುವರಿ ಭದ್ರತೆಗಾಗಿ ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ ಅನ್ನು ಒಳಗೊಂಡಿದೆ. ಇದು ಯುನಿಸೋಕ್‌ T616SoC ಪ್ರೊಸೆಸರ್‌ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್‌ 12ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸುವುದಕ್ಕೆ ಅವಕಾಶವನ್ನು ನೀಡಲಾಗಿದೆ.

Best Mobiles in India

English summary
Lava Probuds 22 with 50hr battery life launched in India: Specs Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+