Lava: ಲಾವಾ ಪ್ರೊ ವಾಚ್ Zn ಹಾಗೂ Vn ಸ್ಮಾರ್ಟ್‌ವಾಚ್ ಲಾಂಚ್! ಸೀಮಿತ ಅವಧಿಯ ಕೊಡುಗೆ ಸಹ ಲಭ್ಯ..
ಲಾವಾ ಸ್ಮಾರ್ಟ್‌ವಾಚ್ (Lava Smartwatch) ವಿಭಾಗದಲ್ಲಿ ತನ್ನ ಸಾಮರ್ಥ್ಯ ತೋರಿಸಲು ಮುಂದಾಗಿದೆ. ಅದರಂತೆ ಈಗ ವಿಶೇಷ ಫೀಚರ್ಸ್ ಆಯ್ಕೆಯ ಹಾಗೂ ಆಕರ್ಷಕವಾಗಿರುವ ವಾಚ್‌ಗಳನ್ನು ಅನ್ನು ಅನಾವರಣ ಮಾಡಿದೆ. ಈ ವಾಚ್‌ಗಳಿಗೆ ಸೀಮಿತ ಅವಧಿಯ ಕೊಡುಗೆ ಸಹ ಇದೆ.
ಹೌದು, ಭಾರತದಲ್ಲಿ ಪ್ರೊವಾಚ್ Zn ಮತ್ತು Vn ಸ್ಮಾರ್ಟ್ ವಾಚ್‌ಗಳನ್ನು (Lava ProWatch Zn and Vn Smartwatch) ಅನಾವರಣ ಮಾಡಲಾಗಿದೆ. ಈ ಮೂಲಕ ಲಾವಾ ತನ್ನ ಪೋರ್ಟ್‌ಫೋಲಿಯೊವನ್ನು ವಿಸ್ತರಿಸುತ್ತದೆ. ಈ ಸ್ಮಾರ್ಟ್‌ವಾಚ್‌ಗಳು ಅಮೋಲೆಡ್ ಡಿಸ್ಪ್ಲೇ ಆಯ್ಕೆ ಪಡೆದಿದ್ದು, ಆರೋಗ್ಯ ಮೇಲ್ವಿಚಾರಣಾ ಸೆನ್ಸರ್‌ಗಳು ಮತ್ತು ನೀರಿನ ಪ್ರತಿರೋಧದಂತಹ ಪ್ರಭಾವಶಾಲಿ ಫೀಚರ್ಸ್ ಅನ್ನು ಪಡೆದುಕೊಂಡಿವೆ. ಹಾಗಿದ್ರೆ, ಈ ಸ್ಮಾರ್ಟ್‌ವಾಚ್‌ಗಳ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇವುಗಳ ಆಫರ್ ಬೆಲೆ ಎಷ್ಟು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಲಾವಾ ಪ್ರೊವಾಚ್ Zn ಫೀಚರ್ಸ್: ಈ ಸ್ಮಾರ್ಟ್‌ವಾಚ್ ರೋಟೇಟ್ ಕ್ರೌನ್ ಬಟನ್ ಆಯ್ಕೆಯೊಂದಿಗೆ ವೃತ್ತಾಕಾರದ ಡಯಲ್ ಶೈಲಿ ಪಡೆದಿದೆ. ಹಾಗೆಯೇ 466*466 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ನೀಡುವ 1.43 ಇಂಚಿನ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಹಾಗೆಯೇ ಈ ಸ್ಮಾರ್ಟ್‌ವಾಚ್ ನಿರಂತರ ಹೃದಯ ಬಡಿತದ ಮೇಲ್ವಿಚಾರಣೆ ಮತ್ತು ಫಿಟ್‌ನೆಸ್ ಟ್ರ್ಯಾಕಿಂಗ್‌ಗಾಗಿ ಹೆಚ್ಚಿನ ನಿಖರತೆಯ ಪಿಪಿಜಿ ಸಂವೇದಕವನ್ನು ಸಂಯೋಜಿಸುತ್ತದೆ.
ಈ ಸ್ಮಾರ್ಟ್ ವಾಚ್ 110+ ಸ್ಪೋರ್ಟ್ಸ್ ಮೋಡ್‌ಗಳು, 150 ವಾಚ್ ಫೇಸ್‌ಗಳು, ಸ್ಮಾರ್ಟ್ ನೋಟಿಫಿಕೇಶನ್ ಮತ್ತು ವೇಗದ ಚಾರ್ಜಿಂಗ್ ಸೇರಿದಂತೆ ವಿವಿಧ ಫೀಚರ್ಸ್ ಆಯ್ಕೆಯನ್ನು ಪಡೆದುಕೊಂಡಿದೆ. ಜೊತೆಗೆ ದೀರ್ಘ ಬಾಳಿಕೆಗಾಗಿ ಮೆಟಲ್ ಬಾಡಿ ಆಯ್ಕೆ ನೀಡಲಾಗಿದ್ದು, ಇದು ಉನ್ನತ-ಕಾರ್ಯಕ್ಷಮತೆಯ ರಿಯಲ್‌ಟೆಕ್ ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದೆ. ಹಾಗೆಯೇ ತುಕ್ಕು-ಮುಕ್ತ ಸತು ಮಿಶ್ರಲೋಹದ ದೇಹದೊಂದಿಗೆ ವಿನ್ಯಾಸಗೊಳಿಸಲಾಗಿದ್ದು, ಇದರ ಬ್ಯಾಟರಿಯು ಸಾಮಾನ್ಯ ಬಳಕೆಯ ವೇಳೆ ಏಳು ದಿನಗಳವರೆಗೆ ಇರುತ್ತದೆ. ಜೊತೆಗೆ ಈ ವಾಚ್ IP68 ನೀರು-ನಿರೋಧಕವಾಗಿದೆ.

ಲಾವಾ ಪ್ರೊ ವಾಚ್Vn ಫೀಚರ್ಸ್: ಈ ವಾಚ್ 1.96 ಇಂಚಿನ TFT 2.5D ಕರ್ವ್ಡ್ ಡಿಸ್ಪ್ಲೇಯನ್ನು ಹೊಂದಿದುದ್ದು, ಇದು 320*386 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿಕೊಂಡಿದೆ. ಇದರ ಜೊತೆಗೆ 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ, ಬ್ಲೂಟೂತ್ ಕರೆ ಸೌಲಭ್ಯ, ಹಾಗೂ ಸ್ಕ್ರಾಲ್ ಬಟನ್ ಆಯ್ಕೆ, ವಾಯ್ಸ್ ಅಸಿಸ್ಟೆಂಟ್ ಸೌಲಭ್ಯಗಳನ್ನು ಪಡೆದುಕೊಂಡಿದೆ. ಹಾಗೆಯೇ ಫಿಟ್‌ನೆಸ್ ಟ್ರ್ಯಾಕಿಂಗ್‌ಗಾಗಿ ವಾಚ್ 150 ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಮತ್ತು 115+ ಇನ್‌ಬಿಲ್ಸ್ ಸ್ಪೋರ್ಟ್ಸ್ ಮೋಡ್ ಆಯ್ಕೆ ಪಡೆದುಕೊಂಡಿದೆ.
ಇದರೊಂದಿಗೆ ಈ ಸ್ಮಾರ್ಟ್‌ವಾಚ್ ಹೃದಯ ಬಡಿತ ಸೆನ್ಸರ್, SPO2 ಟ್ರ್ಯಾಕರ್, ಒತ್ತಡ ಮಟ್ಟದ ಟ್ರ್ಯಾಕರ್ ಮತ್ತು ನಿದ್ರೆ ಟ್ರ್ಯಾಕರ್‌ನಂತಹ ಆರೋಗ್ಯ ಮೇಲ್ವಿಚಾರಣಾ ಫೀಚರ್ಸ್ ಅನ್ನು ಈ ವಾಚ್ ಪಡೆದಿದ್ದು, ಇದು ಸಹ ಅನ್ನು ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP67 ಎಂದು ರೇಟಿಂಗ್ ಪಡೆದಿದೆ. ಅಲ್ಲದೆ ಕ್ಯಾಲ್ಕುಲೇಟರ್, ಕ್ವಿಕ್ ರಿಪ್ಲೈ ಫಂಕ್ಷನ್ ಮತ್ತು ಇನ್-ಬಿಲ್ಟ್ ಗೇಮ್‌ಗಳಂತಹ ಇತರ ಫೀಚರ್ಸ್ ಅನ್ನು ಈ ವಾಚ್‌ನಲ್ಲಿ ಕಾಣಬಹುದಾಗಿದೆ.

ಲಾವಾ ಪ್ರೊವಾಚ್ Zn ಮತ್ತು Vn ನ ಬೆಲೆ ಹಾಗೂ ಲಭ್ಯತೆ: ಲಾವಾ ಸಿಲಿಕಾನ್ ಸ್ಟ್ರಾಪ್ ಹೊಂದಿರುವ ಲಾವಾ ಪ್ರೊವಾಚ್ Zn ಮಾದರಿಯ ಬೆಲೆ 4,999 ರೂ.ಗಳಾಗಿದೆ. ಆದರೆ ಕಂಪನಿಯು ಈ ರೂಪಾಂತರಕ್ಕಾಗಿ 2,599 ರೂ.ಗಳ ವಿಶೇಷ ಬಿಡುಗಡೆ ಬೆಲೆಯನ್ನು ನಿಗದಿ ಪಡಿಸಿದೆ. ಇದರ ಜೊತೆಗೆ ಸಿಲಿಕಾನ್ ಸ್ಟ್ರಾಪ್‌ನೊಂದಿಗೆ ಸಜ್ಜುಗೊಂಡಿರುವ ಲಾವಾ ಪ್ರೋವಾಚ್ Vn ಸ್ಮಾರ್ಟ್‌ವಾಚ್ ಅನ್ನು 1,999 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದು. ಇದರ ಸಾಮಾನ್ಯ ಬೆಲೆ 3,999ರೂ.ಗಳಾಗಿದೆ. ಈ ಎರಡೂ ವಾಚ್‌ಗಳ ಸೇಲ್ ಏಪ್ರಿಲ್ 26, 2024 ರಿಂದ ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗುತ್ತದೆ. ಅಮೆಜಾನ್, ಲಾವಾ ಇಸ್ಟೋರ್, ಲಾವಾ ರಿಟೇಲ್ ನೆಟ್‌ವರ್ಕ್ ಸೇರಿದಂತೆ ವಿವಿಧ ಕಡೆ ಇದನ್ನು ಖರೀದಿ ಮಾಡಬಹುದಾಗಿದೆ.


Click it and Unblock the Notifications








