5,000mAh ಬ್ಯಾಟರಿ ಸೌಲಭ್ಯದ ಈ 5G ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!
ಜನಪ್ರಿಯ ಇ ಕಾಮರ್ಸ್ ವೆಬ್‌ಸೈಟ್ ಅಮೆಜಾನ್ (Amazon) ಈಗಾಗಲೇ ಆನ್‌ಲೈನ್ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡಿದ್ದು, ಖರೀದಿದಾರರಿಗೆ ಹಾಟ್ ಫೇವರೇಟ್ ಎನಿಸಿದೆ. ಈ ಆನ್‌ಲೈನ್ ಶಾಪಿಂಗ್ ತಾಣವು ಮುಖ್ಯವಾಗಿ ಸ್ಮಾರ್ಟ್‌ಫೊನ್‌ಗಳಿಗೆ ಹೆಚ್ಚಿನ ಡಿಸ್ಕೌಂಟ್ ಕೊಡುಗೆ ಘೋಷಿಸುತ್ತಾ ಮುನ್ನಡೆದ್ದು, ಈ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯುವ ಪ್ರಯತ್ನ ನಡೆಸಿದೆ. ಸದ್ಯ ಲಾವಾ ಸಂಸ್ಥೆಯು ಲಾವಾ ಸ್ಟಾರ್ಮ್ 5G (Lava Storm 5G) ಫೋನ್ ಭಾರೀ ಬೆಲೆ ಇಳಿಕೆ ದರದಲ್ಲಿ ಕಾಣಿಸಿಕೊಂಡಿದೆ. ಅಂದಹಾಗೆ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 SoC ಪ್ರೊಸೆಸರ್ ಸೌಲಭ್ಯ ಪಡೆದುಕೊಂಡಿದೆ.
ಹೌದು, ಅಮೆಜಾನ್ ತಾಣದಲ್ಲಿ ಲಾವಾ ಸ್ಟಾರ್ಮ್ 5G ಫೋನ್ ಶೇ. 20% ರಷ್ಟು ನೇರ ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿದೆ. ಈ ಫೋನಿನ 8GB RAM + 128GB ಸ್ಟೋರೇಜ್ ವೇರಿಯಂಟ್ 11,999ರೂ. ಗಳ ಆಫರ್ ದರದಲ್ಲಿ ಖರೀದಿಗೆ ಲಭ್ಯ. ಇನ್ನು ಅಮೆಜಾನ್ ವೆಬ್‌ಸೈಟ್‌ನಲ್ಲಿ ಸಿಗುವ ಇತರೆ ಬ್ಯಾಂಕ್ ಆಫರ್‌ಗಳನ್ನು ಪಡೆದರೆ, ಮತ್ತಷ್ಟು ರಿಯಾಯಿತಿ ಬೆಲೆಗೆ ಖರೀದಿಸಲು ಅವಕಾಶ ಲಭ್ಯ.

ಅಂದಹಾಗೆ ಲಾವಾ ಸ್ಟಾರ್ಮ್ 5G ಮೊಬೈಲ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಸಹ ಇದ್ದು, ಇನ್ನು ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸಾಮರ್ಥ್ಯದಲ್ಲಿ ಇದೆ. ಇನ್ನುಳಿದಂತೆ ಲಾವಾ ಸ್ಟಾರ್ಮ್ 5G ಮೊಬೈಲ್ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಲಾವಾ ಸ್ಟಾರ್ಮ್ 5G - ಫೀಚರ್ಸ್ ಮಾಹಿತಿ
ಲಾವಾ ಸ್ಟಾರ್ಮ್ 5G ಮೊಬೈಲ್ 6.78 ಇಂಚಿನ ಫುಲ್‌ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ 1080 x 2460 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಸಪೋರ್ಟ್ ಇದ್ದು, 396ppi ಪಿಕ್ಸೆಲ್ ಸಾಂದ್ರತೆ ಬೆಂಬಲಿಸುತ್ತದೆ.
ಲಾವಾ ಸ್ಟಾರ್ಮ್ 5G ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 SoC ಪ್ರೊಸೆಸರ್ ಪವರ್ ಅನ್ನು ಪಡೆದಿದೆ. ಇದು 2.4GHz ನಲ್ಲಿ ಎರಡು ಕಾರ್ಟೆಕ್ಸ್ A76 ಕೋರ್‌ಗಳನ್ನು ಹೊಂದಿದ್ದು, 2.0GHz ನಲ್ಲಿ ಆರು ಕಾರ್ಟೆಕ್ಸ್ A55 ಕೋರ್‌ಗಳು ಮತ್ತು ಮಾಲಿ G57 MP2 GPU ಪಡೆದಿದೆ.
ಇದಕ್ಕೆ ಸಪೋರ್ಟ್ ಆಗಿ ಆಂಡ್ರಾಯ್ಡ್ 13 ನಲ್ಲಿ ರನ್ ಆಗಲಿದೆ. ಹಾಗೆಯೇ 8GB RAM ಮತ್ತು 128GB ಆಂತರೀಕ ಸ್ಟೋರೇಜ್ ಸಾಮರ್ಥ್ಯ ಇದೆ. ಇದಲ್ಲದೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.
ಲಾವಾ ಸ್ಟಾರ್ಮ್ 5G ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸಪೋರ್ಟ್ ಪಡೆದಿದ್ದು, ಇದರ ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್, ದ್ವಿತೀಯ ಕ್ಯಾಮೆರಾ 8 ಮೆಗಾ ಪಿಕ್ಸಲ್ ಅಲ್ಟ್ರಾವೈಡ್ ಲೆನ್ಸ್ ಜೊತೆಗೆ LED ಫ್ಲ್ಯಾಶ್ ಅನ್ನು ಪಡೆದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.
ಲಾವಾ ಸ್ಟಾರ್ಮ್ 5G ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು, 33W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್-ಸಿ ಪೋರ್ಟ್, ಒಟಿಜಿ ಸಪೋರ್ಟ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್, ಬ್ಲೂಟೂತ್ 5.0, ಸಪೋರ್ಟ್ ಆಯ್ಕೆ ಇವೆ. ಇನ್ನು ಈ ಫೋನ್ ಲಾವಾ ಥಂಡರ್ ಬ್ಲಾಕ್ ಮತ್ತು ಗೇಲ್ ಗ್ರೀನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯ.


Click it and Unblock the Notifications








