Home
ಸುದ್ದಿಜಾಲ

ಭಾರತದಲ್ಲಿ 5G ಬಿರುಗಾಳಿ ಎಬ್ಬಿಸಲು ಬರುತ್ತಿದೆ ಹೊಸ ದೇಶೀಯ ಫೋನ್! ಚೀನಾ ಕಂಪೆನಿಗಳಿಗೆ ನಡುಕ ಶುರು

ಸ್ಮಾರ್ಟ್‌ಫೋನ್‌ಗಳು (Smartphones) ಇಂದು ಅಗತ್ಯ ಡಿವೈಸ್ ಆಗಿದ್ದು, ಈ ಮೂಲಕ ಎಲ್ಲಾ ರೀತಿಯ ಸೇವೆ ಪಡೆದುಕೊಳ್ಳಲಾಗುತ್ತಿದೆ. ಈ ಬೆಳವಣಿಗೆ ನಡುವೆ 5G ಬಹಳ ಸದ್ದು ಮಾಡುತ್ತಿದೆ. ಪರಿಣಾಮ 4G ಸ್ಮಾರ್ಟ್‌ಫೋನ್‌ ಖರೀದಿ ಪ್ರಮಾಣ ಇಳಿಕೆ ಆಗುತ್ತಿದೆ. ವಿಷಯ ಏನೆಂದರೆ ಭಾರತದಲ್ಲಿ ಹೆಚ್ಚು ಮಾರಾಟ ಆಗುತ್ತಿರುವ 5G ಫೋನ್‌ಗಳಲ್ಲಿ ಚೀನಾ ಕಂಪೆನಿಗಳ ಪ್ರಾಬಲ್ಯವೇ ಜಾಸ್ತಿ ಇದೆ. ಆದರೆ ಇದಕ್ಕೆ ಪೈಪೋಟಿ ನೀಡಲು ನಮ್ಮ ದೇಶದ ಕಂಪೆನಿ ಹಾತೊರೆಯುತ್ತಲೇ ಇದೆ.

ಹೌದು, ಇತ್ತೀಚಿನ ದಿನಗಳಲ್ಲಿ ಬಹುಸಂಖ್ಯೆಯ ಸ್ಮಾರ್ಟ್‌ಫೋನ್‌ ಬಳಕೆದಾರರು 5G ಫೋನ್‌ಗಳಿಗೆ ಅಪ್‌ಗ್ರೇಡ್ ಆಗುತ್ತಿದ್ದಾರೆ. ಈ ಮೂಲಕ ವೇಗದ ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಈ 5G ಬೆಂಬಲಿತ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಚೀನಾದ ಫೋನ್‌ಗಳೇ ಹೆಚ್ಚು ಸದ್ದು ಮಾಡುತ್ತಿದ್ದು, ಈ ಮೂಲಕ ತನ್ನದೇ ಆದ ರೀತಿಯಲ್ಲಿ ಚೀನಾ ಪ್ರಭಾವ ಬೀರಿದೆ. ಆದರೆ ಇನ್ಮುಂದೆ ಇದಕ್ಕೆ ಕಡಿವಾಣ ಹಾಕಲು ದೇಶೀ ಕಂಪೆನಿ ಎಲ್ಲಾ ತಯಾರಿ ಮಾಡಿಕೊಂಡಿದೆ. ಹಾಗಿದ್ರೆ, ಯಾವುದು ಈ ಕಂಪೆನಿ, ಯಾವ ವೇರಿಯಂಟ್‌ನ 5G ಫೋನ್‌ ಲಾಂಚ್‌ ಆಗಲಿದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ದೇಶೀಯ G ಸ್ಮಾರ್ಟ್‌ಫೋನ್: ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಚೀನಾದ ಮೊಬೈಲ್ ಕಂಪನಿಗಳು (Chinese mobile company) ಪ್ರಾಬಲ್ಯ ಹೊಂದಿವೆ ಎಂದು ನಾವು ಈ ಮೊದಲೇ ತಿಳಿಸಿದ್ದೇವೆ. ಬಜೆಟ್ ವಿಭಾಗದಿಂದ ಹಿಡಿದು ದುಬಾರಿ ಬೆಲೆಯ ಫೋನ್‌ಗಳು ಖರೀದಿಗೆ ಲಭ್ಯ ಇವೆ. ಆದರೆ ಈಗ ಭಾರತೀಯ ಮೊಬೈಲ್ ಬ್ರ್ಯಾಂಡ್ ಲಾವಾ (Indian mobile brand Lava) ಚೀನಾದ ಕಂಪನಿಗಳಿಗೆ ಕೊಂಚ ನಡುಕ ಹುಟ್ಟುವಂತೆ ಮಾಡಿದೆ.

ಭಾರತದಲ್ಲಿ 5G ಬಿರುಗಾಳಿ ಎಬ್ಬಿಸಲು ಬರುತ್ತಿದೆ ಹೊಸ ದೇಶೀಯ ಫೋನ್!..

ಲಾವಾ ಈಗಾಗಲೇ ಸಾಕಷ್ಟು ಸ್ಮಾರ್ಟ್‌ಫೋನ್‌ಗಳನ್ನು ಅಗ್ಗದ ದರದಲ್ಲಿ ಮಾರಾಟ ಮಾಡುವ ಮೂಲಕ ಜನಪ್ರಿಯತೆ ಪಡೆದುಕೊಂಡಿದೆ. ಅಂದರೆ ಡಿಸೆಂಬರ್ 14 ರಂದು, ಬಜೆಟ್ ಬೆಲೆಯ ಲಾವಾ ಯುವ 3 ಪ್ರೊ ಅನ್ನು ಲಾಂಚ್‌ ಮಾಡಿತ್ತು. ಈ ಫೋನ್ ಯುನಿಸಾಕ್ D616 ಚಿಪ್‌ಸೆಟ್ ಹಾಗೂ 50MP ಮುಖ್ಯ ಕ್ಯಾಮೆರಾ, ಹೆಚ್‌ಡಿ+ ಡಿಸ್‌ಪ್ಲೇ ಜೊತೆಗೆ 18W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ, ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ ಸೇರಿದಂತೆ ಅಗತ್ಯ ಫೀಚರ್ಸ್‌ ಅನ್ನು ಪಡೆದುಕೊಂಡಿತ್ತು.

ಇದಕ್ಕೂ ಮೊದಲು ಲಾವಾ ಬ್ಲೇಜ್‌ 2 5G ಅನ್ನು ಕಳೆದ ನವೆಂಬರ್‌ನಲ್ಲಿ 9,999ರೂ.ಗಳಿಗೆ ಲಾಂಚ್‌ ಮಾಡುವ ಮೂಲಕ ಸಾಕಷ್ಟು ಸದ್ದು ಮಾಡಿತ್ತು. ಆದರೆ, ಈ ಎಲ್ಲಾ ಬೆಳವಣಿಗೆ ನಡುವೆ ಈಗ ಲಾವಾ ಸ್ಟ್ರೋಮ್ 5G (Lava Storm 5G) ಎಂಬ ಮತ್ತೊಂದು ಹೊಸ 5G ಸ್ಮಾರ್ಟ್‌ಫೋನ್ ಅನ್ನು ಲಾಂಚ್‌ ಮಾಡಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಈ ಸಂಬಂಧ ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಲಾವಾ ಪೋಸ್ಟ್‌ವೊಂದನ್ನು ಶೇರ್‌ ಮಾಡಿಕೊಂಡಿದೆ.

ಭಾರತದಲ್ಲಿ 5G ಬಿರುಗಾಳಿ ಎಬ್ಬಿಸಲು ಬರುತ್ತಿದೆ ಹೊಸ ದೇಶೀಯ ಫೋನ್!..

ಈ ಹೊಸ ಟೀಸರ್ ಪೋಸ್ಟರ್ ಪ್ರಕಾರ, ಲಾವಾ ಸ್ಟ್ರೋಮ್ 5G ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದಲ್ಲದೆ, ಈ ಫೋನ್‌ನ ಮೈಕ್ರೋಸೈಟ್‌ಗಳು ಲಾವಾ ವೆಬ್‌ಸೈಟ್ ಮತ್ತು ಅಮೆಜಾನ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಸಹ ಲೈವ್ ಆಗಿವೆ. ಪರಿಣಾಮ ಈ ಫೋನ್‌ ಲಾಂಚ್‌ ಆದ ನಂತರ ಅಮೆಜಾನ್ ಮೂಲಕ ಮಾರಾಟವಾಗಲಿದೆ. ಅದರಂತೆ ಮೈಕ್ರೋಸೈಟ್‌ನಲ್ಲಿರುವ ಫೋಟೋವನ್ನು ಗಮನಿಸಿದ್ರೆ ಈ ಹೊಸ ಫೋನ್ ರಿಯರ್ ಪ್ಯಾನಲ್‌ನಲ್ಲಿ ವೃತ್ತಾಕಾರದ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿರಲಿದೆ ಎಂದು ತಿಳಿದುಬಂದಿದೆ.

ಭಾರತದಲ್ಲಿ 5G ಬಿರುಗಾಳಿ ಎಬ್ಬಿಸಲು ಬರುತ್ತಿದೆ ಹೊಸ ದೇಶೀಯ ಫೋನ್!..

ಜೊತೆಗೆ ಕ್ಯಾಮೆರಾ ಪಕ್ಕದಲ್ಲಿ ಸಣ್ಣ ವೃತ್ತಾಕಾರದ ಎಲ್ಇಡಿ ಘಟಕ ಸಹ ಕಾಣಿಸಿಕೊಂಡಿದೆ. ಹಾಗೆಯೇ ವಾಲ್ಯೂಮ್ ರಾಕರ್ಸ್ ಮತ್ತು ಪವರ್ ಬಟನ್ ಅನ್ನು ಸ್ಮಾರ್ಟ್‌ಫೋನ್‌ನ ಬಲ ಬದಿಯಲ್ಲಿ ಇರಿಸಲಾಗಿರುವುದನ್ನು ಈ ಫೋಟೋದಲ್ಲಿ ಕಾಣಬಹುದಾಗಿದೆ. ಇನ್ನು ಲಾವಾದ ಈ ಹೊಸ 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ SoC ಅನ್ನು ಪ್ಯಾಕ್ ಮಾಡಲಿದೆ ಎನ್ನಲಾಗಿದ್ದು, 15,000 ರೂ.ಗಳ ಬೆಲೆ ಹೊಂದಿರಬಹುದು ಎಂದು ತಿಳಿದುಬಂದಿದೆ.

Best Mobiles in India

English summary
Lava had earlier made a lot of noise by launching the Lava Blaze 2 5G last November for Rs 9,999. But, amidst all this development, it is now all set to launch another new 5G smartphone called Lava Storm 5G.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+