Home
ಸುದ್ದಿಜಾಲ

ಕಡಿಮೆ ಬೆಲೆಗೆ ಫೋನ್‌ ಖರೀದಿಸುವ ಪ್ಲ್ಯಾನ್‌ ಇದ್ರೆ, ಇದು ಬೆಸ್ಟ್‌ ಆಫರ್‌!

ಲಾವಾ ಮೊಬೈಲ್‌ ಸಂಸ್ಥೆಯ ಲಾವಾ X3 ಸ್ಮಾರ್ಟ್‌ಫೋನ್‌ ಅಗ್ಗದ ಎಂಟ್ರಿ ಲೆವೆಲ್‌ ಫೋನ್‌ಗಳಲ್ಲಿ ಒಂದಾಗಿದೆ. ಈ ಫೋನ್‌ ಈಗ ಜನಪ್ರಿಯ ಅಮೆಜಾನ್ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ನಲ್ಲಿ ಆಕರ್ಷಕ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯ ಇದ್ದು, ಅಗ್ಗದ ಬೆಲೆಯ ಮೊಬೈಲ್‌ ವಿಭಾಗದಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆದಿದೆ.

ಹೌದು, ಲಾವಾ ಕಂಪೆನಿಯ ಲಾವಾ X3 ಫೋನ್ ಅಮೆಜಾನ್‌ನಲ್ಲಿ 22% ರಿಯಾಯಿತಿ ಪಡೆದಿದೆ. 3 GB RAM + 32 GB ವೇರಿಯಂಟ್‌ ಫೋನ್ 8,999 ರೂ. ದರದಲ್ಲಿ ಕಾಣಸಿಕೊಂಡಿದ್ದು, ಆದ್ರೆ, ಗ್ರಾಹಕರು 6,999 ರೂ. ಗಳಿಗೆ ಖರೀದಿಸಬಹುದಾಗಿದೆ. ಇದರೊಂದಿಗೆ ಆಯ್ದ ಬ್ಯಾಂಕ್‌ಗಳಿಂದ ಹೆಚ್ಚುವರಿ ಡಿಸ್ಕೌಂಟ್‌ ಸಹ ದೊರೆಯುತ್ತದೆ. ಈ ಫೋನಿನ ಇತರೆ ಫೀಚರ್ಸ್‌ ಮುಂದೆ ತಿಳಿಯೋಣ ಬನ್ನಿರಿ.

ಕಡಿಮೆ ಬೆಲೆಗೆ ಫೋನ್‌ ಖರೀದಿಸುವ ಪ್ಲ್ಯಾನ್‌ ಇದ್ರೆ, ಇದು ಬೆಸ್ಟ್‌ ಆಫರ್‌!

ಲಾವಾ X3 ಡಿಸ್‌ಪ್ಲೇ : ಲಾವಾ X3 ಸ್ಮಾರ್ಟ್‌ಫೋನ್‌ 6.5 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, ಇದು 1600 x 720 ಪಿಕ್ಸೆಲ್‌ ರೆಸಲ್ಯೂಶನ್ ಜೊತೆಗೆ HD+ ರೆಸಲ್ಯೂಶನ್ ನೀಡಲಿದೆ. ಹಾಗೆಯೇ 60 Hz ನ ರಿಫ್ರೆಶ್ ರೇಟ್‌ ಆಯ್ಕೆ ಇದರಲ್ಲಿದೆ. ಇನ್ನು ಡಿಸ್‌ಪ್ಲೇ ವಾಟರ್ ಡ್ರಾಪ್ ನಾಚ್ ಶೈಲಿಯನ್ನು ಪಡೆದುಕೊಂಡಿದೆ.

ಲಾವಾ X3 ಪ್ರೊಸೆಸರ್‌ ಯಾವುದು : ಲಾವಾ X3 ಫೋನ್‌ ಮೀಡಿಯಾ ಟೆಕ್ ಹಿಲಿಯೊ A22 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಲಿದ್ದು, ಆಂಡ್ರಾಯ್ಡ್ 12 ಗೋ ಆವೃತ್ತಿಯಲ್ಲಿ ರನ್‌ ಆಗಲಿದೆ. ಹಾಗೆಯೇ ಈ ಫೋನ್‌ 3 GB RAM ಮತ್ತು 32 GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಪಡೆದುಕೊಂಡಿದ್ದು, ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 512 GB ವರೆಗೆ ಇಂಟರ್ನಲ್‌ ಸ್ಟೋರೇಜ್‌ ಅನ್ನು ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ.

ಲಾವಾ X3 ಡ್ಯುಯಲ್‌ ಕ್ಯಾಮೆರಾ ಸೆನ್ಸಾರ್ : ಲಾವಾ X3 ಸ್ಮಾರ್ಟ್‌ಫೋನ್‌ ಲಾವಾ X3 ಡ್ಯುಯಲ್ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಇದರಲ್ಲಿ ಪ್ರಮುಖ ಕ್ಯಾಮೆರಾ 8 ಮೆಗಾ ಪಿಕ್ಸೆಲ್‌ ಸೆನ್ಸರ್‌ ಹೊಂದಿದ್ದು, ಸೆಲ್ಫಿಗಾಗಿ 5 ಮೆಗಾ ಪಿಕ್ಸೆಪ್‌ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ರಿಯರ್‌ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್ ನೊಂದಿಗೆ ಪ್ಯಾಕ್‌ ಆಗಿದ್ದು, ಇದು AI ಮೋಡ್, ಬ್ಯೂಟಿ ಮೋಡ್, HDR ಮೋಡ್ ಮತ್ತು ಇನ್ನಿತರೆ ಹೆಚ್ಚಿನ ಫೀಚರ್ಸ್‌ ಅನ್ನು ಪಡೆದುಕೊಂಡಿದೆ. ಹಾಗೆಯೇ 1080p ವಿಡಿಯೋ ರೆಕಾರ್ಡಿಂಗ್ ಅನ್ನು ಇದು ಬೆಂಬಲಿಸುತ್ತದೆ.

ಲಾವಾ X3 ಬ್ಯಾಟರಿ ಹಾಗೂ ಇತರೆ ಸೌಲಭ್ಯಗಳು : ಲಾವಾ X3 ಸ್ಮಾರ್ಟ್‌ಫೋನ್‌ 10W ಚಾರ್ಜಿಂಗ್ ಅನ್ನು ಬೆಂಬಲಿಸುವ 4,000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು ಸಂಪೂರ್ಣ ಚಾರ್ಜ್‌ ಆಗಲು 165 ನಿಮಿಷ ಸಮಯ ಬೇಕಿದೆ. ಇದರೊಂದಿಗೆ ವೈ-ಫೈ, 3.5 ಎಂಎಂ ಹೆಡ್‌ಫೋನ್ ಜ್ಯಾಕ್, ಜಿಪಿಎಸ್, ಬ್ಲೂಟೂತ್ ಸೇರಿದಂತೆ ಬ್ಯಾಕ್‌ ಪ್ಯಾನಲ್‌ನಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್ ಆಯ್ಕೆ ಪಡೆದುಕೊಂಡಿದೆ.

ಲಾವಾ X3 ಮೆಮೊರಿ ಹಾಗೂ ಕಲರ್ : ಈ ಫೋನ್‌ 3 GB RAM + 32 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದೆ. ಹಾಗೆಯೇ ಎಸ್‌ಡಿ ಕಾರ್ಡ್ ಮೂಲಕ 512 GB ವರೆಗೆ ಇಂಟರ್ನಲ್‌ ಸ್ಟೋರೇಜ್‌ ಅನ್ನು ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ. ಈ ಫೋನ್‌ ಆರ್ಕ್ಟಿಕ್ ಬ್ಲೂ, ಚಾರ್ಕೋಲ್ ಬ್ಲಾಕ್ ಮತ್ತು ಲುಸ್ಟರ್ ಬ್ಲೂ ಎಂಬ ಮೂರು ಬಣ್ಣದಲ್ಲಿ ಲಭ್ಯ.

Best Mobiles in India

English summary
Lava X3 available at Great Discount Price on Amazon: Know more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+