Home
ಸುದ್ದಿಜಾಲ

ಎಂಟ್ರಿ ಲೆವೆಲ್‌ ಫೋನ್‌ ಖರೀದಿಸುವ ಗ್ರಾಹಕರಿಗೆ ಸಿಹಿಸುದ್ದಿ!..ವಾವ್ ಎನಿಸುವ ಬೆಲೆ!

ಲಾವಾ ಮೊಬೈಲ್‌ ಸಂಸ್ಥೆಯು ಅಗ್ಗದ ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಗ್ರಾಹಕರ ಚಿತ್ತ ಸೆಳೆದಿದೆ. ಸಂಸ್ಥೆಯ ಕಡಿಮೆ ದರದ ಫೋನ್‌ಗಳ ಪೈಕಿ ಲಾವಾ X3 ಫೋನ್ ಕೂಡಾ ಒಂದಾಗಿದ್ದು, ಇದು ಸದ್ಯ ಅಮೆಜಾನ್‌ ಇ ಕಾಮರ್ಸ್‌ ತಾಣದಲ್ಲಿ ಭಾರೀ ರಿಯಾಯಿತಿ ಪಡೆದಿದೆ. ಈ ಮೂಲಕ ಗ್ರಾಹಕರನ್ನು ಮತ್ತೆ ತನ್ನತ್ತ ಸೆಳೆದಿದೆ. ಅಂದಹಾಗೆ ಇದೊಂದು ಎಂಟ್ರಿ ಲೆವೆಲ್ ಬೇಸಿಕ್ ಫೋನ್ ಆಗಿದೆ.

ಹೌದು, ಅಮೆಜಾನ್ ತಾಣದಲ್ಲಿ ಲಾವಾ X3 ಮೊಬೈಲ್ ಶೇ. 28% ಆಕರ್ಷಕ ರಿಯಾಯಿತಿ ಪಡೆದಿದೆ. ಈ ಫೋನಿನ 3 GB RAM + 32 GB ವೇರಿಯಂಟ್‌ ಫೋನ್ 8,999 ರೂ. ದರದಲ್ಲಿ ಕಾಣಸಿಕೊಂಡಿದ್ದು, ಕೊಡುಗೆಯಲ್ಲಿ, ಗ್ರಾಹಕರು 6,999 ಇದನ್ನು 6,518ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಇದರ ಜತೆ ಆಯ್ದ ಬ್ಯಾಂಕ್‌ಗಳಿಂದ ಹೆಚ್ಚುವರಿ ಡಿಸ್ಕೌಂಟ್‌ ಸಹ ಲಭ್ಯ. ಹಾಗಾದರೇ ಲಾವಾ X3 ಮೊಬೈಲ್ ಫೋನಿನ ಇತರೆ ಫೀಚರ್ಸ್‌ ಮುಂದೆ ತಿಳಿಯೋಣ ಬನ್ನಿರಿ.

ಎಂಟ್ರಿ ಲೆವೆಲ್‌ ಫೋನ್‌ ಖರೀದಿಸುವ ಗ್ರಾಹಕರಿಗೆ ಸಿಹಿಸುದ್ದಿ!..ವಾವ್ ಎನಿಸುವ ಬೆಲೆ

ಲಾವಾ X3 ಫೋನಿನ ಫೀಚರ್ಸ್‌ ಹೀಗಿವೆ

ಲಾವಾ X3 ಮೊಬೈಲ್‌ 6.5 ಇಂಚಿನ IPS LCD ಡಿಸ್‌ಪ್ಲೇ ಅನ್ನು ಹೊಂದಿದ್ದು, ಇದು 1600 x 720 ಪಿಕ್ಸೆಲ್‌ ರೆಸಲ್ಯೂಶನ್ ಜೊತೆಗೆ HD+ ರೆಸಲ್ಯೂಶನ್ ಒದಗಿಸಲಿದೆ. ಹಾಗೆಯೇ ಇದು 60 Hz ನ ರಿಫ್ರೆಶ್ ರೇಟ್‌ ಆಯ್ಕೆ ಕಾಣಬಹುದಾಗಿದೆ. ಇನ್ನು ಡಿಸ್‌ಪ್ಲೇ ವಾಟರ್ ಡ್ರಾಪ್ ನಾಚ್ ಶೈಲಿಯನ್ನು ಒಳಗೊಂಡಿದೆ.

ಲಾವಾ ಸಂಸ್ಥೆಯ ಈ ಲಾವಾ X3 ಫೋನ್‌ ಮೀಡಿಯಾ ಟೆಕ್ ಹಿಲಿಯೊ A22 ಚಿಪ್‌ಸೆಟ್‌ನಿಂದ ಕೆಲಸ ನಿರ್ವಹಿಲಿದ್ದು, ಆಂಡ್ರಾಯ್ಡ್ 12 ಗೋ ಆವೃತ್ತಿ ಸಪೋರ್ಟ್‌ ಪಡೆದಿದೆ. ಇದಲ್ಲದೇ ಈ ಫೋನ್‌ 3 GB RAM ಮತ್ತು 32 GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯ ಪಡೆದುಕೊಂಡಿದ್ದು, ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 512 GB ವರೆಗೆ ಆಂತರೀಕ ಸ್ಟೋರೇಜ್‌ ಅನ್ನು ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ.

ಎಂಟ್ರಿ ಲೆವೆಲ್‌ ಫೋನ್‌ ಖರೀದಿಸುವ ಗ್ರಾಹಕರಿಗೆ ಸಿಹಿಸುದ್ದಿ!..ವಾವ್ ಎನಿಸುವ ಬೆಲೆ

ಲಾವಾ ಕಂಪನಿಯ ಈ ಸ್ಮಾರ್ಟ್‌ಫೋನ್‌ ಲಾವಾ X3 ಡ್ಯುಯಲ್ ರಿಯರ್‌ ಕ್ಯಾಮೆರಾ ರಚನೆ ಒಳಗೊಂಡಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 8 ಮೆಗಾ ಪಿಕ್ಸೆಲ್‌ ಸೆನ್ಸರ್‌ ಪಡೆದಿದ್ದು, ಸೆಲ್ಫಿಗಾಗಿ 5 ಮೆಗಾ ಪಿಕ್ಸೆಪ್‌ ಕ್ಯಾಮೆರಾ ಆಯ್ಕೆ ಒದಗಿಸಲಾಗಿದೆ. ರಿಯರ್‌ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್ ಸೌಲಭ್ಯ ಕೂಡಾ ಪಡೆದಿದ್ದು, ಇದು AI ಮೋಡ್, ಬ್ಯೂಟಿ ಮೋಡ್, HDR ಮೋಡ್ ಮತ್ತು ಇನ್ನಿತರೆ ಹೆಚ್ಚಿನ ಫೀಚರ್ಸ್‌ ಅನ್ನು ಪಡೆದುಕೊಂಡಿದೆ. ಹಾಗೆಯೇ 1080p ವಿಡಿಯೋ ರೆಕಾರ್ಡಿಂಗ್ ಅನ್ನು ಇದು ಸಪೋರ್ಟ್ ಮಾಡುತ್ತದೆ.

ಎಂಟ್ರಿ ಲೆವೆಲ್‌ ಫೋನ್‌ ಖರೀದಿಸುವ ಗ್ರಾಹಕರಿಗೆ ಸಿಹಿಸುದ್ದಿ!..ವಾವ್ ಎನಿಸುವ ಬೆಲೆ

ಲಾವಾ X3 ಮೊಬೈಲ್‌ 10W ಚಾರ್ಜಿಂಗ್ ಅನ್ನು ಬೆಂಬಲಿಸುವ 4,000 mAh ಸಾಮರ್ಥ್ಯದ ಬಿಗ್ ಬ್ಯಾಟರಿ ಪಡೆದಿದ್ದು, ಇದು ಸಂಪೂರ್ಣ ಚಾರ್ಜ್‌ ಆಗಲು 165 ನಿಮಿಷ ಸಮಯ ಪಡೆಯಲಿದೆ. ಇದರೊಂದಿಗೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, 3.5 ಎಂಎಂ ಹೆಡ್‌ಫೋನ್ ಜ್ಯಾಕ್, ಜಿಪಿಎಸ್, ಬ್ಲೂಟೂತ್ ಸೇರಿದಂತೆ ಬ್ಯಾಕ್‌ ಪ್ಯಾನಲ್‌ನಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್ ಆಯ್ಕೆ ಕಾಣಬಹುದಾಗಿದೆ.

ಈ ಫೋನಿನ ಮೆಮೊರಿ ಆಯ್ಕೆ ಹಾಗೂ ಕಲರ್ ಆಯ್ಕೆ ನೋಡುವುದಾರೆ, ಇದು 3 GB RAM + 32 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಹೊಂದಿದೆ. ಹಾಗೆಯೇ ಎಸ್‌ಡಿ ಕಾರ್ಡ್ ಮೂಲಕ 512 GB ವರೆಗೆ ಆಂತರೀಕ ಸ್ಟೋರೇಜ್‌ ಅನ್ನು ವಿಸ್ತರಿಸಬಹುದಾಗಿದೆ. ಈ ಫೋನ್‌ ಆರ್ಕ್ಟಿಕ್ ಬ್ಲೂ, ಚಾರ್ಕೋಲ್ ಬ್ಲಾಕ್ ಮತ್ತು ಲುಸ್ಟರ್ ಬ್ಲೂ ಎಂಬ ಮೂರು ಕಲರ್‌ ಆಯ್ಕೆಗ ಲಭ್ಯ.

Best Mobiles in India

English summary
Lava X3 phone now available at huge discount price. check offer price and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+