Home
ಸುದ್ದಿಜಾಲ

ಕಡಿಮೆ ಬೆಲೆಗೆ ಲಾಂಚ್‌ ಆಯ್ತು ಲಾವಾ ಯುವ 2 5G ಫೋನ್‌!..ಫೀಚರ್ಸ್‌ ಹೇಗಿವೆ?

ಜನಪ್ರಿಯ ಲಾವಾ (Lava) ಮೊಬೈಲ್‌ ಸಂಸ್ಥೆಯ ನೂತನವಾಗಿ ಲಾವಾ ಯುವ 2 5G (Lava Yuva 2 5G) ಸ್ಮಾರ್ಟ್‌ಫೋನ್‌ ಅಧಿಕೃತವಾಗಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಈ ಫೋನ್ ಅಗ್ಗದ ಪ್ರೈಸ್‌ಟ್ಯಾಗ್‌ ವಿಭಾಗದಲ್ಲಿ ಕಾಣಿಸಿಕೊಂಡಿದ್ದು, 5G ವೇರಿಯಂಟ್‌ ಆಗಿದೆ. ಈ ಮೊಬೈಲ್‌ UNISOC T760 SoC ಪ್ರೊಸೆಸರ್‌ ಪವರ್‌ ಪಡೆದುಕೊಂಡಿದೆ.

ಹೌದು, ಲಾವಾ ಸಂಸ್ಥೆಯು ಅಧಿಕೃತವಾಗಿ ತನ್ನ ಲಾವಾ ಯುವ 2 5G (Lava Yuva 2 5G) ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಿದೆ. ಈ ಮೊಬೈಲ್‌ 5000mAh ಬ್ಯಾಟರಿ ಸೌಲಭ್ಯ ಪಡೆದಿದ್ದು, ಇದರೊಂದಿಗೆ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ನ ಪ್ರಾಥಮಿಕ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದೆ. ಹಾಗೆಯೇ ಮುಂಭಾಗದಲ್ಲಿ 8 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ.

ಕಡಿಮೆ ಬೆಲೆಗೆ ಲಾಂಚ್‌ ಆಯ್ತು ಲಾವಾ ಯುವ 2 5G ಫೋನ್‌!..ಫೀಚರ್ಸ್‌ ಹೇಗಿವೆ?

ಸಂಸ್ಥೆಯ ಈ ನೂತನ ಲಾವಾ ಯುವ 2 5G ಮೊಬೈಲ್‌ 4GB RAM + 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದ್ದು, ಬಾಹ್ಯ ಮೆಮೊರಿಯನ್ನು ಎಸ್‌ಡಿ ಕಾರ್ಡ್‌ ಮೂಲಕ 512GB ವರೆಗೂ ವಿಸ್ತರಿಸಬಹುದು. ಇದಲ್ಲದೇ ಇದು 18W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಒಳಗೊಂಡಿದೆ. ಇನ್ನುಳಿದಂತೆ ಲಾವಾ ಯುವ 2 5G ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಲಾವಾ ಯುವ 2 5G - ಫೀಚರ್ಸ್‌ ಹೀಗಿವೆ

ಲಾವಾ ಯುವ 2 5G ಮೊಬೈಲ್‌ 6.67 ಇಂಚಿನ HD+ LCD ಸ್ಕ್ರೀನ್ ಅನ್ನು ಹೊಂದಿದ್ದು, ಡಿಸ್‌ಪ್ಲೇಯು 1612 × 720 ಪಿಕ್ಸಲ್‌ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. ಇನ್ನು ಇದು 90 Hz ರಿಫ್ರೆಶ್ ರೇಟ್ ಪಡೆದುಕೊಂಡಿದೆ. ಹಾಗೆಯೇ 700 nits ಗರಿಷ್ಠ ಬ್ರೈಟ್ನೆಸ್‌ ಸಪೋರ್ಟ್‌ ಕೂಡಾ ಪಡೆದಿದೆ.

ಲಾವಾ ಯುವ 2 5G ಮೊಬೈಲ್‌ UNISOC T760 SoC ಸಪೋರ್ಟ್‌ ಸಹ ಇದೆ. ಅಲ್ಲದೇ ಇದು ಆಂಡ್ರಾಯ್ಡ್‌ 14 ನಲ್ಲಿ ರನ್‌ ಆಗಲಿದೆ. ಹಾಗೆಯೇ 4GB RAM + 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದ್ದು, ಬಾಹ್ಯ ಮೆಮೊರಿಯನ್ನು ಎಸ್‌ಡಿ ಕಾರ್ಡ್‌ ಮೂಲಕ 512 GB ವರೆಗೂ ವಿಸ್ತರಿಸಬಹುದು.

ಲಾವಾ ಯುವ 2 5G ಮೊಬೈಲ್‌ ಹಿಂಭಾಗದಲ್ಲಿ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಪಡೆದಿದ್ದು, ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಪಡೆದಿದ್ದು, ಸೆಕೆಂಡರಿ ಕ್ಯಾಮೆರಾವು 2ಎಂಪಿ ಸೆನ್ಸಾರ್‌ ಪಡೆದುಕೊಂಡಿದೆ. ಹಾಗೆಯೇ ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಒದಗಿಸಲಾಗಿದೆ.

ಲಾವಾ ಯುವ 2 5G ಮೊಬೈಲ್‌ 18W ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಪಡೆದಿದ್ದು, ಇದಕ್ಕೆ ಸಪೋರ್ಟ್‌ ಆಗಿ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ನೀಡಲಾಗಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 4G LTE, ಬ್ಲೂಟೂತ್ v5.0, Wi-Fi 5 ಮತ್ತು GPS ಆಯ್ಕೆಗಳು ಸಹ ಇವೆ. ಹಾಗೆಯೇ ಇದು 3.5mm ಆಡಿಯೋ ಜ್ಯಾಕ್ ಮತ್ತು ಸಿಂಗಲ್ ಮೊನೊ ಸ್ಪೀಕರ್ ಜೊತೆಗೆ USB 2.0 ಡೇಟಾ ವರ್ಗಾವಣೆಗೆ ಚಾರ್ಜಿಂಗ್ ಮತ್ತು ಸಪೋರ್ಟ್‌ಗಾಗಿ USB-C ಪೋರ್ಟ್ ಅನ್ನು ಪಡೆದಿದೆ.

ಬೆಲೆ ಹಾಗೂ ಲಭ್ಯತೆ

ಲಾವಾ ಯುವ 2 5G ಮೊಬೈಲ್‌ನ 4GB RAM + 128GB ವೇರಿಯಂಟ್‌ ಬೆಲೆ 9,499 ರೂ.ಗಳ ಆಗಿದೆ. ಇನ್ನು ಈ ಫೋನ್‌ ರಿಟೇಲ್‌ ಸ್ಟೋರ್‌ಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಇನ್ನು ಸಂಸ್ಥೆಯು ಆನ್‌ಲೈನ್‌ ಪ್ಲಾಟ್‌ಫಾರ್ಮ್‌ ಗಳ ಲಭ್ಯತೆಯ ಬಗ್ಗೆ ಸ್ಪಷ್ಟ ಮಾಹಿತಿ ಹಂಚಿಕೊಂಡಿಲ್ಲ.

Best Mobiles in India

English summary
Lava Yuva 2 5G with 5000mAh battery Launched in India: Specifications, Price and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+