Home
ಸುದ್ದಿಜಾಲ

lava: ಲಾವಾ ಬ್ರ್ಯಾಂಡ್‌ನ ಹೊಸ 5G ಫೋನ್‌ ಲೈವ್‌ ಇಮೇಜ್‌ ಲೀಕ್‌! ವಾವ್ಹ್‌ ಎನಿಸುವ ಡಿಸೈನ್‌!

ದೇಶಿ ಬ್ರ್ಯಾಂಡ್‌ ಲಾವಾ ಕಂಪೆನಿ ಹೊಸ ಸ್ಮಾರ್ಟ್‌ಫೋನ್‌ ಪರಿಚಯಿಸಲು ತಯಾರಿ ನಡೆಸಿದೆ. ಈ ಸ್ಮಾರ್ಟ್‌ಫೋನ್‌ ಅನ್ನು ಲಾವಾ ಯುವ 4 ಪ್ರೊ 5G ಎಂದು ಗುರುತಿಸಲಾಗಿದೆ. ಸದ್ಯ ಈ ಸ್ಮಾರ್ಟ್‌ಫೋನ್‌ನ ಫೀಚರ್ಸ್‌ ಹಾಗೂ ಲೈವ್‌ ಇಮೇಜ್‌ಗಳು ಅನ್‌ಲೈನ್‌ನಲ್ಲಿ ಬಹಿರಂಗವಾಗಿದೆ. ಲೈವ್‌ ಇಮೇಜ್‌ಗಳ ಆದಾರದ ಮೇಲೆ ಇದು 5G ಸಂಪರ್ಕವನ್ನು ನೀಡುತ್ತದೆ ಎಂದು ಖಚಿತಪಡಿಸಲಾಗಿದೆ.

ಹೌದು, Lava Yuva 4 Pro 5G ಸ್ಮಾರ್ಟ್‌ಫೋನ್‌ನ ಲೈವ್‌ ಇಮೇಜ್‌ಗಳು ಬಹಿರಂಗವಾಗಿದೆ. ಇನ್ನು ಸೋರಿಕೆಯಾದ ಮಾಹಿತಿಯಂತೆ ಈ ಮೊಬೈಲ್‌ ಡ್ಯುಯಲ್ ಕ್ಯಾಮೆರಾದೊಂದಿಗೆ ಬರಲಿದೆ. ಜೊತೆಗೆ ಎಲ್ಇಡಿ ಫ್ಲ್ಯಾಷ್ ಅನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಜೊತೆಗೆ ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿರಬಹುದು ಎಂದು ವರದಿಯಾಗಿದೆ. ಹಾಗಾದ್ರೆ Lava Yuva 4 Pro 5G ಸ್ಮಾರ್ಟ್‌ಪೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲಾವಾ ಬ್ರ್ಯಾಂಡ್‌ನ ಹೊಸ 5G ಫೋನ್‌ ಲೈವ್‌ ಇಮೇಜ್‌ ಲೀಕ್‌!ವಾವ್ಹ್‌ ಎನಿಸುವ ಡಿಸೈನ್

ಲೈವ್‌ ಇಮೇಜ್‌ನಲ್ಲಿ ಏನಿದೆ?
ಲಾವಾ ಸ್ಮಾರ್ಟ್‌ಫೋನ್‌ನ ಲೈವ್‌ ಇಮೇಜ್‌ ಸೋರಿಕೆ ಮಾಹಿತಿ ಪ್ರಕಾರ ಇದು AI ಕ್ಯಾಮೆರಾಗೆ ಬೆಂಬಲದೊಂದಿಗೆ ಬರಲಿದೆ. ಲಾವಾ ಬ್ರ್ಯಾಂಡಿಂಗ್ ಮತ್ತು 5G ಟ್ಯಾಗ್ ಅನ್ನು ಸ್ಮಾರ್ಟ್‌ಫೋನ್‌ನ ಎಡಭಾಗದಲ್ಲಿ ಕಾಣಬಹುದು. ಈ ಲೈವ್ ಚಿತ್ರಗಳು ಡಿವೈಸ್‌ ನೀಲಿ ಬಣ್ಣದಲ್ಲಿ ಲಭ್ಯವಿರುತ್ತದೆ ಎಂದು ಖಚಿತಪಡಿಸಿವೆ.

Lava Yuva 4 Pro 5G ಫೀಚರ್ಸ್‌ ನಿರೀಕ್ಷೆ ಏನು?
Lava Yuva 4 Pro 5G ಸ್ಮಾರ್ಟ್‌ಫೋನ್‌ 6.58 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯೊಂದಿಗೆ ಬರಲಿದೆ. ಈ ಡಿಸ್‌ಪ್ಲೇಯು 1600 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿದೆ. ಇನ್ನು ಡಿಸ್‌ಪ್ಲೇ 267ಪಿಪಿಐ ಪಿಕ್ಸೆಲ್‌ ಸಾಂದ್ರತೆಯನ್ನು ಹೊಂದಿರಲಿದ್ದು, 90 Hz ರಿಫ್ರೆಶ್ ರೇಟ್‌ ಬೆಂಬಲದೊಂದಿಗೆ ಬರಲಿದೆ.

ಲಾವಾ ಬ್ರ್ಯಾಂಡ್‌ನ ಹೊಸ 5G ಫೋನ್‌ ಲೈವ್‌ ಇಮೇಜ್‌ ಲೀಕ್‌!ವಾವ್ಹ್‌ ಎನಿಸುವ ಡಿಸೈನ್

Lava Yuva 4 Pro 5G ಪ್ರೊಸೆಸರ್‌ ಯಾವುದು?
Lava Yuva 4 Pro 5G ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6080 SoC ಅನ್ನು ಹೊಂದಿದೆ ಎಂದು ಟಿಪ್‌ಸ್ಟರ್ ನಲ್ಲಿ ವರದಿಯಾಗಿದೆ. ಇದಕ್ಕೆ ಪೂರಕವಾಗಿ ಮಾಲಿ G57 MP2 GPU ಅನ್ನು ಒಳಗೊಂಡಿದೆ. ಇದು ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128 GB ಇಂಟರ್‌ ಸ್ಟೋರೇಜ್‌ನೊಂದಿಗೆ ಬರಲಿದೆ. ಈ ಸ್ಮಾರ್ಟ್‌ಫೋನ್‌ ಮೆಮೊರಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳುವುದಕ್ಕೆ ಕೂಡ ಅವಕಾಶ ನೀಡಲಿದೆ.

Lava Yuva 4 Pro 5G ಕ್ಯಾಮೆರಾ ಸೆಟಪ್‌ ಏನಿದೆ?
Lava Yuva 4 Pro 5G ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50MP ಸೆನ್ಸಾರ್‌ ಇರಲಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿರಲಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿರಲಿದೆ ಎಂದು ವರದಿಯಾಗಿದೆ.

ಲಾವಾ ಬ್ರ್ಯಾಂಡ್‌ನ ಹೊಸ 5G ಫೋನ್‌ ಲೈವ್‌ ಇಮೇಜ್‌ ಲೀಕ್‌!ವಾವ್ಹ್‌ ಎನಿಸುವ ಡಿಸೈನ್

Lava Yuva 4 Pro 5G ಬ್ಯಾಟರಿ ಮತ್ತು ಇತರೆ
Lava Yuva 4 Pro 5G ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದು 33W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌, ಹೆಡ್‌ಫೋನ್‌ ಜ್ಯಾಕ್‌ ಅನ್ನು ಹೊಂದಿರಬಹುದು ಎಂಬ ನಿರೀಕ್ಷೆಯನ್ನು ಇಡಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌ ಹಾಗೂ ಹೆಡ್‌ಫೋನ್‌ ಜ್ಯಾಕ್‌ನೊಂದಿಗೆ ಬರಲಿದೆ.

Lava Yuva 4 Pro 5G ಬೆಲೆ ಮತ್ತು ಲಭ್ಯತೆ
Lava Yuva 4 Pro 5G ಸ್ಮಾರ್ಟ್‌ಫೋನ್‌ 10,000ರೂ ಬೆಲೆ ವಿಭಾಗದಲ್ಲಿ ಬರಲಿದೆ ಎಂದು ವರದಿಯಾಗಿದೆ. ಆದರೆ ಈ ಫೋನ್‌ ಯಾವಾಗ ಬಿಡುಗಡೆ ಆಗಬಹುದು ಎಂಬುದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

Best Mobiles in India

English summary
Lava Yuva 4 Pro 5G Smartphone Live Images Surface Online: Expected Specs Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+