Home
ಸುದ್ದಿಜಾಲ

ಸ್ವದೇಶಿ ಮೂಲದ ಲಾವಾ Z61 ಪ್ರೊ ಫೋನ್ ಲಾಂಚ್!..ಬೆಲೆ 5774ರೂ!

ಭಾರತೀಯ ಸ್ಮಾರ್ಟ್‌ಫೋನ್ ತಯಾರಕ ಕಂಪನಿಯಾದ ಲಾವಾ ಇಂಟರ್ನ್ಯಾಷನಲ್ ಲಿಮಿಟೆಡ್‌ ಈಗಾಗಲೇ ಹಲವು ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಲಾವಾ ಸಂಸ್ಥೆಯು ಇದೀಗ ಭಾರತೀಯ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ಫೋನ್‌ವೊಂದನ್ನು ಬಿಡುಗಡೆ ಮಾಡಿದ್ದು, ದೇಶಿ ಮೊಬೈಲ್ ಪ್ರಿಯರ ಗಮನ ಸೆಳೆದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಅಗ್ಗದ ಪ್ರೈಸ್‌ಟ್ಯಾಗ್‌ ಹೊಂದಿದೆ.

ಲಾವಾ Z61

ಹೌದು, ಲಾವಾ ಕಂಪೆನಿಯ ಹೊಸದಾಗಿ ಲಾವಾ Z61 ಪ್ರೊ ಸ್ಮಾರ್ಟ್‌ಫೋನ್ ಅನ್ನು ದೇಶದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ 1.6GHz ಆಕ್ಟಾ ಕೋರ್ ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದ್ದು, ಎಸ್‌ಡಿ ಕಾರ್ಡ್‌ ಮೂಲಕ 128GB ವರೆಗೂ ವಿಸ್ತರಿಸುವ ಅವಕಾಶವನ್ನು ಪಡೆದಿದೆ. ಹಾಗೆಯೇ 3,100mAh ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿದ್ದು, ಆರಂಭಿಕ ಬೆಲೆಯು 5,774ರೂ. ಆಗಿದೆ. ಆನ್‌ಲೈನ್‌ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ಲಾವಾ Z61 ಪ್ರೊ ಸ್ಮಾರ್ಟ್‌ಫೋನ್‌ 5.45 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಉತ್ತಮ ಪಿಕ್ಸೆಲ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಡಿಸ್‌ಪ್ಲೇ ಅನುಪಾತವು18:9 ಆಗಿದ್ದು, ಸಿಗ್ನಿಫಿಕೆಂಟ್ ಬೆಜಲ್ ಮಾದರಿಯನ್ನು ಒಳಗೊಂಡಿದೆ.

ಪ್ರೊಸೆಸರ್‌ ರಚನೆ

ಪ್ರೊಸೆಸರ್‌ ರಚನೆ

ಲಾವಾ Z61 ಪ್ರೊ ಸ್ಮಾರ್ಟ್‌ಫೋನ್‌ 1.6GHz ಆಕ್ಟಾ ಕೋರ್ ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ ಓಎಸ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಲಾವಾ Z61 ಪ್ರೊ ಸ್ಮಾರ್ಟ್‌ಫೋನ್‌ 2GB RAM ಮತ್ತು 16GB ಸ್ಟೋರೇಜ್ ವೇರಿಯೆಂಟ್‌ ಆಯ್ಕೆ ಹೊಂದಿದೆ. ಹಾಗೆಯೇ ಎಸ್‌ಡಿ ಕಾರ್ಡ್‌ ಮೂಲಕ 128GB ವರೆಗೂ ವಿಸ್ತರಿಸುವ ಅವಕಾಶವನ್ನು ಪಡೆದಿದೆ.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಲಾವಾ Z61 ಪ್ರೊ ಸ್ಮಾರ್ಟ್‌ಫೋನ್‌ ಸಿಂಗಲ್ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿದ್ದು, ಕ್ಯಾಮೆರಾವು 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 5 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಹಲವು ಫೋಟೊ ಎಡಿಟಿಂಗ್ ಆಯ್ಕೆಗಳು ಸಹ ಇವೆ.

ಬ್ಯಾಟರಿ ಬ್ಯಾಕ್‌ಅಪ್‌

ಬ್ಯಾಟರಿ ಬ್ಯಾಕ್‌ಅಪ್‌

ಲಾವಾ Z61 ಪ್ರೊ ಸ್ಮಾರ್ಟ್‌ಫೋನ್‌ 3,100mAh ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿದೆ. ಇದರೊಂದಿಗೆ ಬ್ಲೂಟೂತ್ 4.2, ವೈ-ಫೈ, ಜಿಪಿಎಸ್, ಯುಎಸ್‌ಬಿ ಒಟಿಜಿ ಬೆಂಬಲ ಮತ್ತು ಮೈಕ್ರೋ-ಯುಎಸ್‌ಬಿ ಪೋರ್ಟ್. ಫಿಂಗರ್‌ಪ್ರಿಂಟ್ ಸೆನ್ಸಾರ್ ಆಯ್ಕೆ ಇಲ್ಲ, ಆದರೆ ಇದು ಸುರಕ್ಷತೆಗಾಗಿ ಫೇಸ್ ಅನ್ಲಾಕ್ ಸೌಲಭ್ಯಗಳನ್ನು ಬೆಂಬಲಿಸುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಲಾವಾ Z61 ಪ್ರೊ ಸ್ಮಾರ್ಟ್‌ಫೋನ್‌ 5,774ರೂ.ಗಳ ಬೆಲೆಯನ್ನ ಹೊಂದಿದ್ದು, ಸದ್ಯದಲ್ಲಿಯೇ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಸೇರಿದಂತೆ ಪ್ರಮುಖ ಆಫ್‌ಲೈನ್ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಮಿಡ್‌ನೈಟ್ ಬ್ಲೂ ಹಾಗೂ ರೆಡ್‌ ಬಣ್ಣಗಳ ಆಯ್ಕೆಯನ್ನು ಹೊಂದಿದೆ.

Best Mobiles in India

English summary
Lava Z61 Pro comes in two colour options - Midnight Blue and Amber Red.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+