ಅಗ್ಗದ ಬೆಲೆಗೆ ಲಾವಾ Z62 ಲಾಂಚ್!..'ಥ್ರೊ ಯೂವರ್ ಟಿವಿ' ಆಫರ್‌ನಡಿ ಫೋನ್ ಲಭ್ಯ!
ಸ್ವದೇಶಿ ಮೂಲಕದ 'ಲಾವಾ' ಇಂಟರ್ನ್ಯಾಷನಲ್ ಮೊಬೈಲ್ ಕಂಪನಿಯು ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್‌ಗಳಿಂದ ಗುರುತಿಸಿಕೊಂಡಿದ್ದು, ಈ ಕಂಪನಿ ಇದೀಗ ದೇಶಿಯ ಮಾರುಕಟ್ಟೆಗೆ ಹೊಸದಾಗಿ 'ಲಾವಾ Z62' ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಹಾಗೆಯೇ ಇದರೊಂದಿಗೆ ಗ್ರಾಹಕರಿಗೆ ಭರ್ಜರಿ ಸರ್‌ಪ್ರೈಸ್ ನೀಡಲು 'ಥ್ರೊ ಯೂವರ್ ಟಿವಿ' ಹೆಸರಿನ ಆಫರ್‌ವೊಂದನ್ನು ಬಿಡುಗಡೆ ಮಾಡಿ ಗಮನ ಸೆಳೆದಿದೆ.

ಹೌದು, ಲಾವಾ ಕಂಪನಿಯು ಲಾವಾ Z62' ಸ್ಮಾರ್ಟ್‌ಫೋನ್ ಅನ್ನು ಲಾಂಚ ಮಾಡುವ ಜೊತೆಗೆ 'ಥ್ರೊ ಯೂವರ್ ಟಿವಿ' ಎಕ್ಸ್‌ಚೇಂಜ್ ಆಫರ್ ನೀಡಿದೆ. ಈ ಆಫರ್‌ನಲ್ಲಿ ಗ್ರಾಹಕರು ತಮ್ಮ ಹಳೆಯ ಟಿವಿಯನ್ನು ನೀಡಿ 'ಲಾವಾ Z62' ಸ್ಮಾರ್ಟ್‌ಫೋನ್ ಪಡೆಯಬಹುದಾಗಿದೆ. ಇದೇ ಜೂನ್ 18ರಂದು ಬೆಳಿಗ್ಗೆ 10 ಗಂಟೆಗೆ ಸೇಲ್ ಆರಂಭವಾಗಲಿದ್ದು, ಅದೇ ವೇಳೆಗೆ ಥ್ರೊ ಯೂವರ್ ಟಿವಿ' ಎಕ್ಸ್‌ಚೇಂಜ್ ಆಫರ್ ಚಾಲನೆ ಆಗಲಿದೆ.

ಎಂಟ್ರಿ ಲೆವೆಲ್ ಮಾದರಿಯ 'ಲಾವಾ Z62' ಸ್ಮಾರ್ಟ್‌ಫೋನ್ ಗ್ರೇಡಿಯಂಟ್ ಡಿಸೈನ್ ಮಾದರಿಯಲ್ಲಿದ್ದು, ಹಿಂಬದಿ 8ಎಂಪಿ ಕ್ಯಾಮೆರಾ ಸಾಮರ್ಥ್ಯದೊಂದಿಗೆ ಗೂಗಲ್ ಅಸಿಸ್ಟಂಟ್ ಸೌಲಭ್ಯವನ್ನು ಪಡೆದುಕೊಂಡಿದೆ. ಹಾಗಾದರೇ ಲಾವಾ ಸ್ಮಾರ್ಟ್‌ಫೋನ್ ಇತರೆ ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಮತ್ತು ಥ್ರೊ ಯೂವರ್ ಟಿವಿ ಆಫರ್ ಕುರಿತು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ಮತ್ತು ಡಿಸೈನ್
ಲಾವಾ Z62 ಸ್ಮಾರ್ಟ್‌ಫೋನ್ ಗ್ರೇಡಿಯಂಟ್ ಮಾದರಿಯ ಡಿಸೈನ್ ಹೊಂದಿದ್ದು, ಗೂಗಲ್ ಅಸಿಸ್ಟಂಟ್ ಬಟನ್ ಆಯ್ಕೆಯನ್ನು ಪಡೆದುಕೊಂಡಿದೆ. ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ರಚನೆ ನೀಡಲಾಗಿದೆ. ಮಿಡ್‌ನೈಟ್ ಬ್ಲೂ ಮತ್ತು ಸ್ಪೇಸ್ ಬ್ಲೂ ಬಣ್ಣಗಳ ಆಯ್ಕೆಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ 6 ಇಂಚಿನ ಫುಲ್‌ವ್ಯೂವ್ IPS ಡಿಸ್‌ಪ್ಲೇಯನ್ನು ಹೊಂದಿದೆ.

ಪ್ರೊಸೆಸರ್ ಮತ್ತು ಮೆಮೊರಿ
ಕ್ವಾಡ್‌ಕೋರ್ ಮೀಡಿಯಾಟೆಕ್ ಹಿಲಿಯೊ A22 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಲಾವಾ Z62 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 9 ಪೈ ಅಪರೇಟಿಂಗ್ ಸಿಸ್ಟಮ್ ಸೌಲಭ್ಯವನ್ನು ಪಡೆದುಕೊಂಡಿದೆ. ಇದರೊಂದಿಗೆ 2GB ಸಾಮರ್ಥ್ಯದ RAM ನೀಡಲಾಗಿದ್ದು. ಆಂತರಿಕ ಸಂಗ್ರಹದ ಸ್ಥಳಾವಕಾಶವು 16GB ಆಗಿದೆ. ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸಬಹುದು.

ಕ್ಯಾಮೆರಾ ವಿಶೇಷತೆ ಏನು
ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ 8ಎಂಪಿ ರೇರ್ ಕ್ಯಾಮೆರಾ ಸೆಟ್‌ಅಪ್ ಇದ್ದು, ಅದರೊಂದಿಗೆ ಎಲ್‌ಇಡಿ ಫ್ಲ್ಯಾಶ್ ಲೈಟ್ ನೀಡಲಾಗಿದೆ. ಮುಂಬದಿ ಸೆಲ್ಫಿಗಾಗಿ 5ಎಂಪಿ ಕ್ಯಾಮೆರಾವನ್ನು ಒದಗಿಸಲಾಗಿದ್ದು, ಜೊತೆಗೆ ಎಲ್‌ಇಡಿ ಫ್ಲ್ಯಾಶ್ ಲೈಟ್ ಸೌಲಭ್ಯವನ್ನು ನೀಡಲಾಗಿದೆ. AI ಫೋಟೊ ಸ್ಟೂಡಿಯೊ ಮತ್ತು ಪ್ರೊಫೆಶನಲ್ ಮೋಡ್ ಆಯ್ಕೆಗಳು ಕ್ಯಾಮೆರಾದಲ್ಲಿವೆ.

ಥ್ರೊ ಯೂವರ್ ಟಿವಿ ಆಫರ್
ಲಾವಾ ತನ್ನ ಹೊಸ ಲಾವಾ Z62 ಹೊಸ ರೀತಿ ಲಾಂಚ್ ಮಾಡಲುಮುಂದಾಗಿದ್ದು, ಅದಕ್ಕಾಗಿ ಥ್ರೊ ಯೂವರ್ ಟಿವಿ ಆಫರ್ ಘೋಷಿಸಿದೆ. ಹಳೆಯ ಟಿವಿ ನೀಡಿ ಹೊಸ ಲಾವಾ Z62 ಸ್ಮಾರ್ಟ್‌ಫೋನ್ ಪಡೆಯುವ ಅವಕಾಶ ಗ್ರಾಹಕರಿಗೆ ಲಭ್ಯವಾಗಲಿದ್ದು, ಅದಕ್ಕೆ ರಿಜಿಸ್ಟರ್ ಮಾಡಿಕೊಳ್ಳಬೇಕು. ಸ್ಟಾಕ್ ಲಭ್ಯವಿರುವವರಿಗೆ ಮಾತ್ರ ಈ ಆಫರ್ ಇರಲಿದೆ. ಹೆಚ್ಚಿನ ಮಾಹಿತಿಗೆ ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಬ್ಯಾಟರಿ ಮತ್ತು ಬೆಲೆ
3,380mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಒಳಗೊಂಡಿರುವ ಲಾವಾ ಸ್ಮಾರ್ಟ್‌ಫೋನ್ ಅತ್ಯುತ್ತಮ ಚಾರ್ಜರ್ ಸೌಲಭ್ಯವನ್ನು ಪಡೆದಿದ್ದು, ಫೇಸ್ ಅನ್‌ಲಾಕ್ ಆಯ್ಕೆಯನ್ನು ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ ಬೆಲೆಯು 6,060ರೂ.ಗಳು ಆಗಿದೆ. ಇದೇ ಜೂನ್ 18ರಂದು ಸೇಲ್ ಆರಂಭವಾಗಲಿದ್ದು, ಖರೀದಿ ಮಾಡಲು ಗ್ರಾಹಕರಿಗೆ ದೊರೆಯಲಿದೆ.


Click it and Unblock the Notifications








