ಡ್ಯಾನ್ಸ್ ಮಾಡುವ ಗೂಗಲ್ ಗ್ಲಾಸ್ ನೋಡಿದ್ದೀರಾ?
ವೇರಿಯೇಬಲ್ ಡಿವೈಸ್‌ನಲ್ಲೇ ಗೂಗಲ್ ಗ್ಲಾಸ್ ಇನ್ನಷ್ಟು ತಾಂತ್ರಿಕ ಪ್ರಗತಿಯೊಂದಿಗೆ ಬಳಕೆದಾರರನ್ನು ಸಮೀಪಿಸಲಿದ್ದು ನಿಷ್ಪ್ರಯೋಜಕ ಎಂದು ಭಾವಿಸಿದವರನ್ನು ಬೆಚ್ಚಿಬೀಳಿಸುವ ಮಾದರಿಯಲ್ಲಿ ಗೂಗಲ್ ಎದ್ದು ನಿಲ್ಲಲಿದೆ.
ಡ್ಯಾನ್ಸ್ ಕಲಿಸುವ ಚಮತ್ಕಾರೀ ಅಂಶವನ್ನು ಈ ಗ್ಲಾಸ್ ಒಳಗೊಳ್ಳಲಿದ್ದು, ಜನಪ್ರಿಯ ಇಂಟರಾಕ್ಟೀವ್ ವೀಡಿಯೊ ಗೇಮ್ "ಡ್ಯಾನ್ಸ್ ಡ್ಯಾನ್ಸ್ ರೆವಲ್ಯೂಶನ್" ಗೆ ಹೆಜ್ಜೆ ಹಾಕುವ ಪರಿಯಲ್ಲಿ ಇದು ತಯಾರಾಗಲಿದೆ. ನಿರ್ದಿಷ್ಟ ಹಾಡಿನ ಸಂಯೋಜನೆಗೆ ಅನುಗುಣವಾಗಿ ನೃತ್ಯ ಚಲನೆಗಳನ್ನು ಈ ಗ್ಲಾಸ್‌ನಲ್ಲಿ ಅಳವಡಿಸಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದ ಪರವಾನಗಿ ಹಕ್ಕನ್ನು ಕಂಪೆನಿ ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ. [ಫೋನ್‌ನಲ್ಲೂ ನಾನ್‌ಸ್ಟಾಪ್ ಮನರಂಜನೆ ಹೇಗೆ ಗೊತ್ತೇ?]

ಹಾಡು ಮತ್ತು ನೃತ್ಯವನ್ನು ಗುರುತಿಸುವ ಸಾಮರ್ಥ್ಯವನ್ನು ಇದು ಹೊಂದಿದ್ದು, ಅದಕ್ಕೆ ಅನುಗುಣವಾದ ಮಾಹಿತಿಯನ್ನು ಇದು ನೀಡಲಿದೆ ಎನ್ನಲಾಗಿದೆ. ಇನ್ನು ಗೂಗಲ್ ಗ್ಲಾಸ್ ಸಾಮರ್ಥ್ಯ ಏನೆಂದರೆ ಹಿನ್ನಲೆಯಲ್ಲಿ ನಡೆಯುತ್ತಿರುವ ಹಾಡಿಗೆ ಅನುಗುಣವಾದ ನೃತ್ಯವನ್ನು ಇದು ಸಂಯೋಜಿಸುತ್ತದೆ ಇದುವೇ ಗ್ಲಾಸ್‌ನ ಪರವಾನಗಿಯಾಗಿದೆ ಎನ್ನಲಾಗಿದೆ. [ಬಿಲಿಯಗಟ್ಟಲೆ ಹಣವಿರುವ ಮಹಾನ್ ಟೆಕ್ ವ್ಯಕ್ತಿಗಳು]
ಮೇ 2014 ಕ್ಕೆ ಗೂಗಲ್ ಸಾರ್ವಜನಿಕ ರಂಗದಲ್ಲಿ ಸ್ಮಾರ್ಟ್‌ಗ್ಲಾಸ್ ಮಾರಾಟ ಪ್ರಾರಂಭಿಸಿತ್ತು. ಈ ವರ್ಷ ಜನವರಿಯಿಂದ ಗ್ಲಾಸ್ ನೀಡುವಿಕೆಯನ್ನು ಕಂಪೆನಿ ನಿಲ್ಲಿಸಿದೆ. ಗ್ಲಾಸ್‌ನ ಹೊಸ ಆವೃತ್ತಿ 2015 ರ ನಂತರ ಆಗಮನವಾಗಬಹುದು.


Click it and Unblock the Notifications








