Subscribe to Gizbot

ಫೋನ್‌ನಲ್ಲೂ ನಾನ್‌ಸ್ಟಾಪ್ ಮನರಂಜನೆ ಹೇಗೆ ಗೊತ್ತೇ?

Written By:

ಮೋಜು ಮನರಂಜನೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಎಷ್ಟೇ ಗಂಭೀರ ವದನರ ಮುಖದಲ್ಲೂ ಮಂದಹಾಸವನ್ನುಂಟು ಮಾಡುವ ಮನರಂಜನೆ ನಮ್ಮ ದೈನಂದಿನ ಜೀವನದಲ್ಲಿ ಅತೀ ಅಗತ್ಯವಾದುದು. [ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು]

ಇದೇ ಮನರಂಜನೆ ಟೆಕ್ ಜಗತ್ತಿನಲ್ಲಿ ನಿಮ್ಮ ಕೈಯಳತೆಯ ದೂರದಲ್ಲೇ ಇದೆ ಎಂದರೆ ನೀವು ನಂಬಲೇಬೇಕು. ಹೌದು ನಿಮ್ಮ ಕೈಯಲ್ಲಿದ್ದುಕೊಂಡೇ ನಿಮ್ಮಿಂದ ಅದ್ಭುತಗಳನ್ನು ಸೃಷ್ಟಿ ಮಾಡುತ್ತಿರುವ ಫೋನ್‌ನಲ್ಲೇ ಈ ಮನರಂಜಕ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಂಡು ಆನಂದವನ್ನು ಆಸ್ವಾದಿಸಬಹುದಾಗಿದೆ. ಬಹುತೇಕ ಉಚಿತವಾಗಿರುವ ಈ ಅಪ್ಲಿಕೇಶನ್‌ಗಳನ್ನು ಸುಲಭವಾಗಿ ನಿಮ್ಮ ಫೋನ್‌ನಲ್ಲಿ ಪಡೆದುಕೊಳ್ಳಬಹುದಾಗಿದೆ. ಇದರ ಕುರಿತಾದ ಮಾಹಿತಿ ಕೆಳಗಿನ ಸ್ಲೈಡರ್‌ನಲ್ಲಿ [ಕುಳಿತಲ್ಲೇ ಪಾವತಿ ಮಾಡಿ ಈ ಅಪ್ಲಿಕೇಶನ್‌ಗಳ ಮೂಲಕ]

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
9 ಗ್ಯಾಗ್

ಫೋನ್‌ನಲ್ಲೂ ನಾನ್‌ಸ್ಟಾಪ್ ಮನರಂಜನೆ

ಇದು ಮೆಮ್ಸ್, ಮೋಜಿನ ಚಿತ್ರಗಳು, ಕೊಡುಗೆಗಳು ಮತ್ತು ವೀಡಿಯೊಗಳನ್ನೊಳಗೊಂಡ ಅಪ್ಲಿಕೇಶನ್ ಆಗಿದೆ. ಇನ್ನು ಫನ್ನಿ ಸ್ಟಿಕ್ಕರ್‌ಗಳು ಕೂಡ ಇದರಲ್ಲಿ ಲಭ್ಯವಿದ್ದು ಇದು ಸಂದೇಶ ಹಂಚುವ ವ್ಯವಸ್ಥೆಯನ್ನು ಕೂಡ ಹೊಂದಿದೆ.

ಚೀಸ್ ಬರ್ಗರ್

ಫೋನ್‌ನಲ್ಲೂ ನಾನ್‌ಸ್ಟಾಪ್ ಮನರಂಜನೆ

ತಿಂಗಳಿಗೆ 10 ಮಿಲಿಯನ್ ಭೇಟಿದಾರರನ್ನು ಹೊಂದಿರುವ ಈ ಅಪ್ಲಿಕೇಶನ್ ಅಂತರ್ಜಾಲ ತಾಣದಲ್ಲೇ ಹೆಚ್ಚು ಜನಪ್ರಿಯವಾದುದು. ಇದು ಕೂಡ ಹಾಸ್ಯಮಯ ಅಪ್ಲಿಕೇಶನ್ ಆಗಿದ್ದು ನಿಮಗೆ ಮನರಂಜನೆಯನ್ನುಂಟು ಮಾಡುವ ವೀಡಿಯೊಗಳು, ಫೋಟೋಗಳು, ಸ್ಟಿಕ್ಕರ್‌ಗಳನ್ನು ನಿಮಗೆ ಇದರಲ್ಲಿ ಕಾಣಬಹುದಾಗಿದೆ.

ದ ಚೀವ್

ಫೋನ್‌ನಲ್ಲೂ ನಾನ್‌ಸ್ಟಾಪ್ ಮನರಂಜನೆ

ಹಾಸ್ಯ ಸೈಟ್ ಇದಾಗಿದ್ದು, ಇದು ಚಿತ್ರಗಳು, ಕಥೆಗಳು, ವೀಡಿಯೊಗಳು ಮತ್ತು ಹೆಚ್ಚಿನದನ್ನು ಪೋಸ್ಟ್ ಮಾಡುತ್ತದೆ. ಈ ಆಂಡ್ರಾಯ್ಡ್ ಅಪ್ಲಿಕೇಶನ್ ಹೆಚ್ಚು ಬಲವಾಗಿದ್ದು ಹೆಚ್ಚಿನ ಹಾಸ್ಯ ವಿಷಯಗಳನ್ನು ಒಳಗೊಂಡಿದೆ.

ಫುಡ್ ಬ್ಯಾಟಲ್

ಫೋನ್‌ನಲ್ಲೂ ನಾನ್‌ಸ್ಟಾಪ್ ಮನರಂಜನೆ

ಹಾಸ್ಯಮಯ ಗೇಮ್ ಅಪ್ಲಿಕೇಶನ್ ಇದಾಗಿದ್ದು ಆಟದೊಂದಿಗೆ ಮೋಜನ್ನು ನಿಮಗೆ ಒದಗಿಸುತ್ತದೆ.

ಫನ್ನಿ ಫ್ಯಾಕ್ಟ್ಸ್ ಫ್ರಿ 8000

ಫೋನ್‌ನಲ್ಲೂ ನಾನ್‌ಸ್ಟಾಪ್ ಮನರಂಜನೆ

ಹೆಸರೇ ಸೂಚಿಸುವಂತೆ ಈ ಅಪ್ಲಿಕೇಶನ್ ನಾನ್‌ಸ್ಟಾಪ್ ಮನರಂಜನೆಯನ್ನು ಒದಗಿಸುತ್ತದೆ. ಇದು ಆಂಡ್ರಾಯ್ಡ್ ಅಪ್ಲಿಕೇಶನ್ ಆಗಿದ್ದು ಸಂಪೂರ್ಣ ಉಚಿತವಾಗಿದೆ.

ಫನ್ನಿ ಜೋಕ್ಸ್

ಫೋನ್‌ನಲ್ಲೂ ನಾನ್‌ಸ್ಟಾಪ್ ಮನರಂಜನೆ

ಹೊಟ್ಟೆ ಹುಣ್ಣಾಗಿಸುವ ನಗೆ ಚಟಾಕಿಗಳನ್ನು ಒಳಗೊಂಡಿರುವ ಈ ಅಪ್ಲಿಕೇಶನ್ ಅವಿರತ ಮನರಂಜನೆಯನ್ನು ನಿಮಗೆ ಒದಗಿಸುತ್ತದೆ. ಈ ಅಪ್ಲಿಕೇಶನ್ ಉಚಿತವಾಗಿದೆ.

ಫೋನ್‌ನಲ್ಲೂ ನಾನ್‌ಸ್ಟಾಪ್ ಮನರಂಜನೆ

ಇದು ಗೇಮಿಂಗ್ ಅಪ್ಲಿಕೇಶನ್ ಆಗಿದ್ದು ಮೋಜಿನಿಂದ ಕೂಡಿದೆ. ಆಟದ ಅನುಭವವನ್ನು ನೀಡುವುದರ ಜೊತೆಗೆ ಮನರಂಜಕ ಎಂದೆನಿಸಿದೆ.

ಫೋನ್‌ನಲ್ಲೂ ನಾನ್‌ಸ್ಟಾಪ್ ಮನರಂಜನೆ

ಮೋಜಿನ ಚಿತ್ರಗಳನ್ನು ಹೊಂದಿರುವ ಈ ಅಪ್ಲಿಕೇಶನ್ ಸಂಪೂರ್ಣ ಉಚಿತವಾಗಿದೆ.

ಫೋನ್‌ನಲ್ಲೂ ನಾನ್‌ಸ್ಟಾಪ್ ಮನರಂಜನೆ

ಇದು ಫನ್ನಿ ಅಪ್ಲಿಕೇಶನ್ ಆಗಿದ್ದು ಉಚಿತವಾಗಿದೆ. ವೆಬ್ ಬ್ರೌಸರ್ ಮೂಲಕ ಈ ಅಪ್ಲಿಕೇಶನ್ ಅನ್ನು ನಿಮಗೆ ಪ್ರವೇಶಿಸಬಹುದು. ಇದರ ಮುಂಭಾಗ ಪುಟ ಸುಂದರವಾಗಿದ್ದು ಮನಸೂರೆಗೊಳಿಸುವಂತಿದೆ.

ಫೋನ್‌ನಲ್ಲೂ ನಾನ್‌ಸ್ಟಾಪ್ ಮನರಂಜನೆ

ರೋಗಿಯನ್ನು ಉಳಿಸುವ ಯಾವುದೇ ಇಚ್ಛೆಯಿಲ್ಲದ ವೈದ್ಯರ ಪಾತ್ರವನ್ನು ನಿಮಗಿಲ್ಲಿ ನಿಭಾಯಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
laughter is good for the body and soul and we agree with that notion. In most cases, you’ll find your laughs online through a range of websites but there are some good Android apps that can get the job done too. Here are the best funny apps for Android.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot