ಒಂದೇ ದಿನದಲ್ಲಿ ಇಕೊ ಟಿವಿ ಗೆ 10,000 ರಿಜಿಸ್ಟ್ರೇಶನ್ ಲೀಕೊ ಹೆಗ್ಗಳಿಕೆ

Written By:

ಜಾಗತಿಕ ಇಂಟರ್ನೆಟ್ ಮತ್ತು ತಂತ್ರಜ್ಞಾನ ದೈತ್ಯ ಲೀಕೊ, ತನ್ನ ಅತ್ಯುನ್ನತ ಇಕೊ ಟಿವಿ ಮೂಲಕ ಇತಿಹಾಸವನ್ನು ಸೃಷ್ಟಿಸಲಿದೆ. ಇದೇ ಪ್ರಥಮ ಬಾರಿಗೆ ಕಂಪೆನಿಯು ತನ್ನ ಸೂಪರ್ ಟಿವಿಗಳನ್ನು ಫ್ಲ್ಯಾಶ್ ಸೇಲ್ ಮತ್ತು ರಿಜಿಸ್ಟ್ರೇಶನ್ ಮೋಡ್ ಮಾದರಿಯಲ್ಲಿ ಒದಗಿಸಲಿದೆ. ಲೀಕೊ ತನ್ನ ಬಳಕೆದಾರರಿಂದ ಅದ್ಭುತ ಸ್ಪಂದನೆಗಳನ್ನು ಸ್ವೀಕರಿಸಿದ್ದು ತನ್ನ ಸೂಪರ್3 ಟಿವಿ ಸಿರೀಸ್ ಬರೇ ಒಂದೇ ದಿನದಲ್ಲಿ 10,000 ರಿಜಿಸ್ಟ್ರೇಶನ್‌ಗಳನ್ನು ಮಾಡಿಕೊಂಡು ಮಾರುಕಟ್ಟೆಯಲ್ಲಿ ಮುಂದಿದೆ.

ಓದಿರಿ: ಲೀಕೊ ಸೂಪರ್‌3 ಟಿವಿಗಳನ್ನು ಖರೀದಿಸಲು 5 ಬಲವಾದ ಕಾರಣಗಳು ಯಾವುವು ಗೊತ್ತೇ?

ಆಗಸ್ಟ್ 26, 12:00 ರ ಮಧ್ಯಾಹ್ನಕ್ಕೆ ಇಕೊ ಟಿವಿಯ ಪ್ರಥಮ ಫ್ಲ್ಯಾಶ್ ಸೇಲ್ ಅನ್ನು ನಿಗದಿಪಡಿಸಲಾಗಿದೆ. ಇಕೊ ಟಿವಿಯ ಪ್ರಥಮ ಅನುಭವವನ್ನು ಮಾಡಿಸಲು ಲೀಕೊ ರಸ್ತೆ ಪ್ರದರ್ಶನವನ್ನು ಏರ್ಪಡಿಸಿದೆ. ಈಗಾಗಲೇ ಈ ಕಾರ್ಯಕ್ರಮವನ್ನು ಕಂಪೆನಿ ನಡೆಸುತ್ತಿದ್ದು ದೆಹಲಿ, ಮುಂಬೈ ಮತ್ತು ಬೆಂಗಳೂರಿನ ಶಾಪಿಂಗ್ ಮಾಲ್‌ನಲ್ಲಿ ಇದನ್ನು ಏರ್ಪಡಿಸಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ದೊಡ್ಡ ಸ್ಕ್ರೀನ್‌ನ ಟಿವಿ

ದೊಡ್ಡ ಸ್ಕ್ರೀನ್‌ನ ಟಿವಿ

ಅತಿ ಕಡಿಮೆ ಸಮಯದಲ್ಲೇ, ಭಾರತೀಯ ಮಾರುಕಟ್ಟೆಗೆ ಕಂಪೆನಿಯು ದೊಡ್ಡ ಸ್ಕ್ರೀನ್‌ನ ಟಿವಿಯನ್ನು ಪ್ರಸ್ತುತಪಡಿಸುತ್ತಿದೆ. ಫ್ಲ್ಯಾಶ್ ಸೇಲ್ ಮಾದರಿಯಲ್ಲಿ ಕಂಪೆನಿಯು ಭಾರತಕ್ಕೆ ಟಿವಿಯನ್ನು ತರುತ್ತಿದ್ದು, ನಿಜಕ್ಕೂ ಕಂಪೆನಿಗೆ ಇದು ಬಂಪರ್ ಕೊಡುಗೆಯನ್ನು ನೀಡಲಿದೆ.

ಲೀಕೊಗಿರುವ ಅಭಿಮಾನ

ಲೀಕೊಗಿರುವ ಅಭಿಮಾನ

ರಿಜಿಸ್ಟ್ರೇಶನ್ ಸಂಖ್ಯೆಯಿಂದಲೇ ಲೀಕೊಗಿರುವ ಅಭಿಮಾನವನ್ನು ನಾವು ನೋಡಬಹುದಾಗಿದ್ದು ಈ ಟಿವಿ ಭಾರತೀಯ ಮಾರುಕಟ್ಟೆಯಲ್ಲಿ ಕಮಾಲನ್ನು ಉಂಟುಮಾಡಲಿರುವುದು ಖಂಡಿತವಾಗಿದೆ.

 ವಿಶೇಷತೆ

ವಿಶೇಷತೆ

65 ಇಂಚಿನ ವರ್ಗದಲ್ಲಿ ಅದೇ ಮಾದರಿಯ ವಿಶೇಷತೆಗಳನ್ನು ಪಡೆದುಕೊಂಡು ಲೀಕೊ ತನ್ನ ಟಿವಿಯನ್ನು ಮಾರುಕಟ್ಟೆಗೆ ಪ್ರಸ್ತುತಪಡಿಸುತ್ತಿದೆ. 55 ಇಂಚಿನ ವರ್ಗದಲ್ಲಿ ಸ್ಪರ್ಧೆಯು ಲೀಕೊದ ಇಕೊ ಟಿವಿಯ 184% ಕ್ಕಿಂತ ಅಧಿಕವಾಗಿದೆ.

2 ವರ್ಷಗಳ ವಿಐಪಿ ಸದಸ್ಯತ್ವ

2 ವರ್ಷಗಳ ವಿಐಪಿ ಸದಸ್ಯತ್ವ

ಲೀಕೊದ Super3 X55 - 139.7 cm (55) ರೂ 59,790 ಲಭ್ಯವಾಗುತ್ತಿದ್ದು, ಲೀಕೊದ Super3 X65 - 163.9 cm (65) ರೂ 99,790 ಮತ್ತು Super3 Max65- 163.9 cm (65) ಬೆಲೆ ರೂ 149,790 ಆಗಿದೆ. ಇದರೊಂದಿಗೆ ಟಿವಿಯು 2 ವರ್ಷಗಳ ವಿಐಪಿ ಸದಸ್ಯತ್ವವನ್ನು ಪಡೆದುಕೊಂಡಿದ್ದು ಇದರ ಬೆಲೆ ರೂ 9,800 ಆಗಿದೆ.

ಕನಿಷ್ಟ ಪಕ್ಷ 2000 ಪೂರ್ಣ ಎಚ್‌ಡಿ/ಎಚ್‌ಡಿ ಚಲನ ಚಿತ್ರ

ಕನಿಷ್ಟ ಪಕ್ಷ 2000 ಪೂರ್ಣ ಎಚ್‌ಡಿ/ಎಚ್‌ಡಿ ಚಲನ ಚಿತ್ರ

ಸದಸ್ಯತ್ವದ ಮೂಲಕ ಬಳಕೆದಾರರು ಭಾರತದ ಅತಿ ದೊಡ್ಡ ಮನರಂಜನಾ ಲೈಬ್ರರಿಗೆ ಪ್ರವೇಶವನ್ನು ಪಡೆದುಕೊಳ್ಳಬಹುದಾಗಿದೆ. ಕನಿಷ್ಟ ಪಕ್ಷ 2000 ಪೂರ್ಣ ಎಚ್‌ಡಿ/ಎಚ್‌ಡಿ ಚಲನ ಚಿತ್ರಗಳನ್ನು ಹಾಲಿವುಡ್ ಮತ್ತು ಬಾಲಿವುಡ್ ಯಾವುದೇ ಕ್ಷೇತ್ರದಲ್ಲಿ ಪಡೆದುಕೊಳ್ಳಬಹುದಾಗಿದ್ದು, ನೂರಕ್ಕಿಂತಲೂ ಸ್ಯಾಟಲೈಟ್ ಟಿವಿ ಚಾನೆಲ್‌ಗಳು, 3.5 ಮಿಲಿಯನ್ ಹಾಡುಗಳು ಮತ್ತು 50 ಕ್ಕಿಂತಲೂ ಹೆಚ್ಚಿನ ಲೈವ್ ಕನ್ಸರ್ಟ್‌ಗಳನ್ನು ಆನಂದಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Global internet and technology conglomerate, LeEco has ushered in a new era of content integrated Ecosystem TVs in India with the launch of its future ready Super3 series Ecosystem TVs.
Please Wait while comments are loading...
Opinion Poll

Social Counting

Gadget Finder

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot