Home
ಸುದ್ದಿಜಾಲ

Deepfake: ಡೀಪ್‌ಫೇಕ್‌ಗೆ ಬಿಸಿ ಮುಟ್ಟಿಸಿದ ಸರ್ಕಾರ; ಮೂರು ವರ್ಷ ಜೈಲು, 1 ಲಕ್ಷ ರೂ.ದಂಡ

ರಶ್ಮಿಕಾ ಮಂದಣ್ಣ (Rashmika Mandanna) ಅವರ ಆಕ್ಷೇಪಾರ್ಹ ವಿಡಿಯೋ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆದರೆ ಇದು ರಶ್ಮಿಕಾ ಮಂದಣ್ಣ ಅವರ ವಿಡಿಯೋ ಅಲ್ಲ ಬದಲಾಗಿ ಇದನ್ನು ಡೀಪ್‌ಫೇಕ್‌ ತಂತ್ರಜ್ಞಾನ (Deepfake technology) ದಲ್ಲಿ ಕ್ರಿಯೇಟ್‌ ಮಾಡಲಾಗಿದೆ ಎಂದು ಕಂಡುಕೊಳ್ಳಲಾಗಿದ್ದು, ಈ ತಂತ್ರಜ್ಞಾನದ ವಿರುದ್ಧ ಈಗ ಎಲ್ಲಾ ಕಡೆ ಆಕ್ರೋಶ ಕೇಳಿಬರುತ್ತಿದೆ.

ಹೌದು, ರಶ್ಮಿಕಾ ಮಂದಣ್ಣ ಅವರ ವೈಯಕ್ತಿಕ ಜೀವನಕ್ಕೆ ಕುಂದು ಬರುವ ಹಾಗೆ ಮಾಡಿರುವ ಈ ವಿಡಿಯೋ ಸಂಬಂಧ ಎಲ್ಲಾ ಗಣ್ಯಾತಿಗಣ್ಯರು ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿ ದೊಡ್ಡ ಮಟ್ಟದ ಕಳವಳ ಹೊರಹಾಕಿದ್ದಾರೆ. ಅದರಲ್ಲಿ ಅಮಿತಾಬ್ ಬಚ್ಚನ್ ಸಹ ಪ್ರಮುಖರು. ಈ ಬೆಳವಣಿಗೆ ನಡುವೆ ಸರ್ಕಾರ ಎಚ್ಚೆತ್ತುಕೊಂಡಿದ್ದು, ಡೀಪ್‌ಫೇಕ್‌ ತಂತ್ರಜ್ಞಾನ ಬಳಕೆ ಮಾಡಿ ಈ ರೀತಿ ಮಾಡುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದೆ. ಹಾಗಿದ್ರೆ, ಏನೆಲ್ಲಾ ಶಿಕ್ಷೆ ನೀಡಲಾಗುತ್ತದೆ?. ಏನಿದು ಡೀಪ್‌ಫೇಕ್‌ ಎಂಬ ಮಾಹಿತಿ ಇಲ್ಲಿದೆ ನೋಡಿ.

ಡೀಪ್‌ಫೇಕ್‌ಗೆ ಬಿಸಿ ಮುಟ್ಟಿಸಿದ ಸರ್ಕಾರ; ಮೂರು ವರ್ಷ ಜೈಲು, 1 ಲಕ್ಷ ರೂ.ದಂಡ

ದಕ್ಷಿಣ ಭಾರತದ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ ವೈರಲ್ (Deepfake video viral) ಆದ ನಂತರ ಸರ್ಕಾರ ಕಟ್ಟುನಿಟ್ಟಿನ ಮಾಹಿತಿ ರವಾನಿಸಿದೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಸಲಹೆಯನ್ನು ನೀಡಿದ್ದು, ಅಸ್ತಿತ್ವದಲ್ಲಿರುವ ಸಲಹೆಯನ್ನು ಪುನರುಚ್ಚರಿಸಿದೆ. ಇಂತಹ ಕೃತ್ಯವು ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಲು ಕಾರಣವಾಗಬಹುದು ಎಂದು ಸಚಿವಾಲಯ ತಿಳಿಸಿದೆ.

ಐಟಿ ಇಲಾಖೆ ಸಲಹೆಯಲ್ಲಿ ಏನಿದೆ?: 2000 ರ ಮಾಹಿತಿ ತಂತ್ರಜ್ಞಾನ ಕಾಯ್ದೆಯ 66D ಸೇರಿದಂತೆ ಅಸ್ತಿತ್ವದಲ್ಲಿರುವ ನಿಯಮಗಳನ್ನು ಪುನರುಚ್ಚರಿಸಿರುವ ಸಚಿವಾಲಯವು ಹೊರಡಿಸಿದ ಸಲಹೆಯಲ್ಲಿ, ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿಕೊಂಡು ವಂಚನೆ ಮಾಡಿದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ನಿಯಮ 3(1)(b)(vii) ಅಡಿಯಲ್ಲಿ, ಸಾಮಾಜಿಕ ಮಾಧ್ಯಮ ಕಂಪನಿಗಳು ಸಹ ಈ ನಿಯಮಗಳು ಮತ್ತು ಗೌಪ್ಯತೆ ನೀತಿಯನ್ನು ಅನುಸರಿಸಬೇಕು. ಸಾಮಾಜಿಕ ಮಾಧ್ಯಮ ಕಂಪನಿಗಳು ಬಳಕೆದಾರರ ಆ ರೀತಿಯ ಕಂಟೆಂಟ್ ಅನ್ನು ಪೋಸ್ಟ್ ಮಾಡುವುದನ್ನು ನಿಲ್ಲಿಸಬೇಕಾಗುತ್ತದೆ. ನಿಯಮ 3(2)(b) ಪ್ರಕಾರ ದೂರು ಸ್ವೀಕರಿಸಿದ 24 ಗಂಟೆಗಳ ಒಳಗೆ ಯಾವುದೇ ಕಂಟೆಂಟ್‌ ಅನ್ನು ಅದರ ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕಬೇಕು ಎಂದು ತಿಳಿಸಲಾಗಿದೆ.

ಡೀಪ್‌ಫೇಕ್‌ಗೆ ಬಿಸಿ ಮುಟ್ಟಿಸಿದ ಸರ್ಕಾರ; ಮೂರು ವರ್ಷ ಜೈಲು, 1 ಲಕ್ಷ ರೂ.ದಂಡ

ಇನ್ನು ನವೆಂಬರ್ 6 ರ ಸೋಮವಾರ ನಟಿ ರಶ್ಮಿಕಾ ಮಂದಣ್ಣ ಅವರ ವೀಡಿಯೊ ವೈರಲ್ ಆಗಿದ್ದು ಅದು ಅವರದ್ದಲ್ಲ ಎಂಬುದು ಈಗಾಗಲೇ ಎಲ್ಲರಿಗೂ ತಿಳಿದ ವಿಚಾರ. ಈ ವೈರಲ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸದ್ದು ಮಾಡುವ ಜಾರಾ ಪಟೇಲ್ ಅವರದ್ದಾಗಿದ್ದು, ಇದನ್ನು ಎಡಿಟ್ ಮಾಡಲಾಗಿದೆ ಮತ್ತು ಜಾರಾ ಪಟೇಲ್ ಅವರ ಮುಖವನ್ನು ರಶ್ಮಿಕಾ ಮಂದಣ್ಣ ಅವರ ಮುಖದೊಂದಿಗೆ ಬದಲಾಯಿಸಲಾಗಿದೆ. ಈ ವಿಡಿಯೋ ಮುನ್ನೆಲೆಗೆ ಬಂದ ನಂತರ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಡೀಪ್‌ಫೇಕ್ ವಿಡಿಯೋ ಅತ್ಯಂತ ಅಪಾಯಕಾರಿ ಎಂದಿದ್ದಾರೆ.

ಏನಿದು ಡೀಪ್‌ಫೇಕ್‌ ತಂತ್ರಜ್ಞಾನ?: ಡೀಪ್‌ಫೇಕ್‌ಗಳು ವಿಡಿಯೋ ಹಾಗೂ ಫೋಟೋ ಮಾದರಿಯಲ್ಲಿ ಕಾಣಿಸಿಕೊಳ್ಳುತ್ತವೆ. ವಿಶೇಷ ಯಂತ್ರ ಕಲಿಕೆಯನ್ನು ಬಳಸಿಕೊಂಡು ಇದನ್ನು ರಚಿಸಲಾಗಿದೆ. ಡೀಪ್‌ಫೇಕ್‌ನಲ್ಲಿ ಕಂಪ್ಯೂಟರ್‌ಗೆ ಎರಡು ವಿಡಿಯೋ ಅಥವಾ ಫೋಟೋಗಳನ್ನು ನೀಡಲಾಗುತ್ತದೆ. ಇದಾದ ನಂತರ ಅದನ್ನು ಯಾವ ರೀತಿ ಬೇಕೋ ಹಾಗೆ ಎಡಿಟ್‌ ಮಾಡಲು ಅನುಮತಿಸುತ್ತದೆ.

ಡೀಪ್‌ಫೇಕ್‌ಗೆ ಬಿಸಿ ಮುಟ್ಟಿಸಿದ ಸರ್ಕಾರ; ಮೂರು ವರ್ಷ ಜೈಲು, 1 ಲಕ್ಷ ರೂ.ದಂಡ

ಅಂದರೆ ಆಟೋಮ್ಯಾಟಿಕ್‌ ಆಗಿ ವಿಡಿಯೋಗಳು ಅಥವಾ ಫೋಟೋಗಳನ್ನು ಒಂದೇ ಎಂಬಂತೆ ಮಾಡುತ್ತದೆ. ಡೀಪ್‌ಫೇಕ್ ಎನ್ನುವುದು ನೈಜ ಚಿತ್ರಗಳು ಹಾಗೂ ವಿಡಿಯೋಗಳನ್ನು ಉತ್ತಮ ನೈಜ ನಕಲಿ ಫೋಟೋಗಳು, ವೀಡಿಯೊಗಳಾಗಿ ಪರಿವರ್ತಿಸುವ ಪ್ರಕ್ರಿಯೆಯಾಗಿದೆ. ಇದನ್ನು ಹೆಚ್ಚಾಗಿ ರಾಜಕಾರಣಿಗಳು ಹಾಗೂ ಸೆಲೆಬ್ರಿಟಿಟಿಗಳ ಮೇಲೆ ಬಳಕೆ ಮಾಡಲಾಗುತ್ತದೆ. ಈ ಮೂಲಕ ಒಂದು ವರ್ಗ ಇದರಿಂದ ಲಾಭ ಪಡೆಯುವ ಕೆಲಸ ಮಾಡುತ್ತಿದೆ.

Best Mobiles in India

English summary
A deepfake video that has been made to insult Rashmika Mandanna personal life has gone viral, and after this video, the government has issued a warning regarding deepfake videos.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+