Home
ಸುದ್ದಿಜಾಲ

ಲೆನೊವೊದಿಂದ ಬರಲಿದೆ ಹೊಸ ಲ್ಯಾಪ್‌ಟಾಪ್‌!..ಗ್ರಾಹಕರು ಹುಬ್ಬೇರಿಸುವುದು ಗ್ಯಾರಂಟಿ!

ಜನಪ್ರಿಯ ಲ್ಯಾಪ್‌ಟಾಪ್‌ ಸಂಸ್ಥೆ ಆಗಿರುವ ಲೆನೊವೊ (Lenovo) ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ನೂತನವಾಗಿ Legion 9i ಲ್ಯಾಪ್‌ಟಾಪ್ ಅನ್ನು ಪರಿಚಯಿಸಿ ಗ್ರಾಹಕರ ಗಮನ ಸೆಳೆದಿದೆ. ಇದೀಗ ಲೆನೊವೊ ಸಂಸ್ಥೆಯು ಅಚ್ಚರಿಯ ವಿನ್ಯಾಸದ ಲ್ಯಾಪ್‌ಟಾಪ್‌ ಅನ್ನು ಪರಿಚಯಿಸಲು ಸಜ್ಜಾಗಿದ್ದು, ಈ ಹೊಸ ಮಾದರಿಯ ರಚನೆ ಗ್ರಾಹಕರು ಹುಬ್ಬೇರಿಸುವಂತೆ ಇದೆ.

ಹೌದು, ಬಾರ್ಸಿಲೋನಾದಲ್ಲಿ ಪ್ರಾರಂಭವಾಗಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) 2024 ರ ಕಾರ್ಯಕ್ರಮದಲ್ಲಿ ಲೆನೊವೊ ಟ್ರಾನ್ಸ್ಫರೆಂಟ್‌ (Transparent) ಮಾದರಿಯ ಲ್ಯಾಪ್‌ಟಾಪ್‌ ಘೋಷಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ನೂತನ ಟ್ರಾನ್ಸ್ಫರೆಂಟ್‌ ಮಾದರಿಯ ವಿನ್ಯಾಸದೊಂದಿಗೆ ಹೊಸ ಲ್ಯಾಪ್‌ಟಾಪ್ ಸಾಕಷ್ಟು ಅಪ್‌ಡೇಟ್‌ ಫೀಚರ್ಸ್‌ಗಳೊಂದಿಗೆ ಲಗ್ಗೆ ಇಡಲು ತಯಾರಿ ನಡೆಸುತ್ತಿದೆ ಎಂದು ವರದಿಯಾಗಿದೆ.

ಲೆನೊವೊದಿಂದ ಬರಲಿದೆ ಹೊಸ ಲ್ಯಾಪ್‌ಟಾಪ್‌!..ಗ್ರಾಹಕರು ಹುಬ್ಬೇರಿಸುವುದು ಗ್ಯಾರಂಟಿ!

ವಿಂಡೋಸ್ ವರದಿಯು ಲೆನೊವೊದಿಂದ ಯೋಜನೆ ಟ್ರಾನ್ಸ್ಫರೆಂಟ್‌ ಲ್ಯಾಪ್‌ಟಾಪ್‌ನ ವಿನ್ಯಾಸವನ್ನು ಲೀಕ್‌ ಮಾಡಿದೆ. ಸಂಸ್ಥೆಯು ಫೆಬ್ರವರಿ 26 ರಿಂದ ಫೆಬ್ರವರಿ 29 ರ ವರೆಗೆ ನಡೆಯಲಿರುವ MWC 2024 ನಲ್ಲಿ ಈ ನೂತನ ಪ್ರದರ್ಶಿಸಬಹುದು ಎಂದು ಹೇಳಲಾಗಿದೆ. ಫೋಟೋ ಲೆನೊವೊ ಬ್ರ್ಯಾಂಡಿಂಗ್‌ನೊಂದಿಗೆ ಈ ವದಂತಿಯ ಮಾದರಿಯನ್ನು ತೋರಿಸುತ್ತವೆ. ಬೆಜೆಲ್-ಲೆಸ್ ವಿನ್ಯಾಸ ಮತ್ತು ಟ್ರಾನ್ಸ್ಫರೆಂಟ್‌ ಪ್ರದರ್ಶನದಂತೆ ಕಾಣುತ್ತದೆ.

ಈ ನೂತನ ಟ್ರಾನ್ಸ್ಫರೆಂಟ್‌ ಲೆನೊವೊ ಲ್ಯಾಪ್‌ಟಾಪ್‌ನ ಡೆಕ್ ಪ್ರತಿಫಲಿತವಾಗಿದೆ ಹಾಗೂ ಸಂಪೂರ್ಣವಾಗಿ ಟ್ರಾನ್ಸ್ಫರೆಂಟ್‌ ಮಾದರಿಯಲ್ಲಿ ಇದೆ. ಪ್ರಾಥಮಿಕ ಆಂತರಿಕ ಘಟಕಗಳನ್ನು ಅಪಾರದರ್ಶಕ ಗಲ್ಲದ ಅಡಿಯಲ್ಲಿ ಇರಿಸಲಾಗುತ್ತದೆ.

ಲೆನೊವೊ ಸಂಸ್ಥೆಯು ಇತ್ತೀಚಿಗೆ ಥಿಂಕ್‌ಬುಕ್‌ ಪ್ಲಸ್‌ ಜನ್‌ 5 ಹೈಬ್ರಿಡ್‌ ಲ್ಯಾಪ್‌ಟಾಪ್‌ ಪಿಸಿ ಆಗಿಯೂ ಟ್ಯಾಬ್ಲೆಟ್‌ ಆಗಿಯೂ ಕೂಡ ಕಾರ್ಯ ನಿರ್ವಹಿಸಲಿದೆ. ಇದರ ಹೈಬ್ರಿಡ್‌ ಮಾದರಿಯು 14 ಇಂಚಿನ 2.8K OLED ಟಚ್‌ಸ್ಕ್ರೀನ್ ಡಿಸ್‌ಪ್ಲೆ ಅನ್ನು ಪಡೆದಿದ್ದು, ಈ ಡಿಸ್‌ಪ್ಲೆ 100% DCI:P3 ಕಲರ್‌ ಗ್ಯಾಮಟ್‌ ಮತ್ತು ಐಚ್ಛಿಕ ಲೆನೊವೊ ಟ್ಯಾಬ್‌ ಪೆನ್‌ ಪ್ಲಸ್‌ಗೆ ಸಪೋರ್ಟ್‌ ಮಾಡುತ್ತದೆ.

ಹಾಗೆಯೇ ಈ ಹೈಬ್ರಿಡ್ ಲ್ಯಾಪ್‌ಟಾಪ್‌ ಇಂಟೆಲ್ ಕೋರ್ ಅಲ್ಟ್ರಾ 7 ಪ್ರೊಸೆಸರ್ನಲ್ಲಿ ಕೆಲಸ ನಿರ್ವಹಿಸಲಿದೆ. ಆದರೆ ಇದರ ಟ್ಯಾಬ್ಲೆಟ್‌ ಕ್ವಾಲ್ಕಮ್ ಸ್ನ್ಯಾಡ್‌ಗನ್ 8+ ಜೆನ್‌ 1 ಪ್ರೊಸೆಸರ್‌ನಲ್ಲಿ ರನ್‌ ಕೆಲಸ ಮಾಡಲಿದೆ. ಹಾಗೆಯೇ ಹೈಬ್ರಿಡ್ ಲ್ಯಾಪ್‌ಟಾಪ್‌ 32GB RAM ಮತ್ತು 1TB SSD ಸ್ಟೋರೆಜ್‌ ಸಾಮರ್ಥ್ಯದಲ್ಲಿ ಇದ್ದು, ಟ್ಯಾಬ್ಲೆಟ್‌ 32GB RAM ಮತ್ತು 256GB ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿದೆ.

ಸಂಸ್ಥೆಯ ಥಿಂಕ್‌ಬುಕ್‌ ಪ್ಲಸ್‌ ಜನ್‌ 5 ಹೈಬ್ರಿಡ್‌ ಲ್ಯಾಪ್‌ಟಾಪ್‌ ಎರಡು 2W ಹರ್ಮನ್ ಕಾರ್ಡನ್ ಸ್ಪೀಕರ್‌ಗಳನ್ನು ಪಡೆದುಕೊಂಡಿದೆ. ಆದರೆ ಟ್ಯಾಬ್ಲೆಟ್‌ ನಾಲ್ಕು 1W ಸೂಪರ್-ಲೀನಿಯರ್ ಸ್ಪೀಕರ್‌ಗಳನ್ನು ಪಡೆದುಕೊಂಡಿದೆ. ಇದು ಸೆಲ್ಫಿ ಮತ್ತು ವೀಡಿಯೊ ಚಾಟ್‌ಗಳಿಗಾಗಿ 1080p IR ಕ್ಯಾಮೆರಾವನ್ನು ಹೊಂದಿದ್ದು, ಟ್ಯಾಬ್ಲೆಟ್‌ನ ಹಿಂಭಾಗದಲ್ಲಿ 13 ಮೆಗಾ ಪಿಕ್ಸೆಲ್ ಸೆನ್ಸಾರ್‌ ಮತ್ತು 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಡ್ಯುಯಲ್‌ ಕ್ಯಾಮೆರಾವನ್ನು ಒದಗಿಸಲಾಗಿದೆ.

ಹೈಬ್ರಿಡ್ ಡಿವೈಸ್‌ ಕನೆಕ್ಟಿವಿಟಿ ಸೌಲಭ್ಯ ವೈ-ಫೈ 6E, ಬ್ಲೂಟೂತ್ 5.2, ಎರಡು ಥಂಡರ್‌ಬೋಲ್ಟ್ 4 ಪೋರ್ಟ್‌ಗಳು ಮತ್ತು ಬೇಸ್‌ನಲ್ಲಿ 3.5 ಎಂಎಂ ಆಡಿಯೊ ಜ್ಯಾಕ್ ಒಳಗೊಂಡಿದೆ. ಆದರೆ ಟ್ಯಾಬ್ಲೆಟ್ ಮಾದರಿಯು Wi-Fi 6E ಮತ್ತು ಬ್ಲೂಟೂತ್ 5.3 ಗೆ ಸಪೋರ್ಟ್‌ ಪಡೆದಿದೆ USB ಟೈಪ್-C ಪೋರ್ಟ್ ಅನ್ನು ಪಡೆದುಕೊಂಡಿದೆ. ಸೆಕ್ಯುರಿಟಿ ಸೌಲಭ್ಯಗಳೊಂದಿಗೆ ಲ್ಯಾಪ್‌ಟಾಪ್‌ನಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು IR ಕ್ಯಾಮರಾ ಮೂಲಕ ಫೆಸ್‌ ಡಿಟೆಕ್ಷನ್‌ ಅನ್ನು ನೀಡಲಾಗಿದೆ.

ಇನ್ನು ಲೆನೊವೊ ಥಿಂಕ್‌ಬುಕ್‌ ಪ್ಲಸ್‌ ಜನ್‌ 5 ಹೈಬ್ರಿಡ್ ಪ್ರತ್ಯೇಕ ಬ್ಯಾಟರಿಗಳಿಂದ ಚಾಲಿತವಾಗಿದೆ. ಆದರೆ ಇವುಗಳು ಪರಸ್ಪರ ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಅಂದರೆ ಹೈಬ್ರಿಡ್ ಮಾದರಿಯು 75WHr ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 100W ಅಡಾಪ್ಟರ್‌ನ ಸಪೋರ್ಟ್‌ ಪಡೆದಿದೆ. ಅಲ್ಲದೇ ಟ್ಯಾಬ್ಲೆಟ್ 38WHr ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.

Best Mobiles in India

English summary
Lenovo Plans to Unveil Transparent Laptop at MWC 2024. check all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+