Home
ಸುದ್ದಿಜಾಲ

Lenovo Diwali Sale: ಲ್ಯಾಪ್‌ಟಾಪ್ ಖರೀದಿಗೆ ಇದು ಬೆಸ್ಟ್‌ ಟೈಮ್‌; 48% ವರೆಗೆ ರಿಯಾಯಿತಿ ಘೋಷಿಸಿದ ಲೆನೊವೊ!

ಲ್ಯಾಪ್‌ಟಾಪ್‌ (Laptop) ಇತ್ತೀಚಿನ ದಿನಗಳಲ್ಲಿ ಉದ್ಯೋಗಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯವಾಗಿವೆ. ಆದರೆ, ಹಲವಾರು ವಿದ್ಯಾರ್ಥಿಗಳು ಇವುಗಳನ್ನು ಖರೀದಿ ಮಾಡಲು ಆಗುವುದಿಲ್ಲ. ಕಾರಣ ಹೆಚ್ಚಿನ ಬೆಲೆ. ಆದರೆ, ಈ ದೀಪಾವಳಿ ವಿಶೇಷ ಸೇಲ್‌ನಲ್ಲಿ (Lenovo Diwali Dhamaka Sale) ಲೆನೊವೊ ತನ್ನ ಎಲ್ಲಾ ರೀತಿಯ ಡಿವೈಸ್‌ಗಳಿಗೆ ಭಾರೀ ಆಫರ್ ಘೋಷಣೆ ಮಾಡಿದೆ.

ಹೌದು, ಲೆನೊವೊ ದೀಪಾವಳಿ ಸೇಲ್‌ 2023 (Lenovo Diwali Sale 2023) ಅಡಿಯಲ್ಲಿ, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು (Laptops, tablets) ಮತ್ತು ಇತರ ಪರಿಕರಗಳ ಮೇಲೆ ಬರೋಬ್ಬರಿ ಭರ್ಜರಿ ರಿಯಾಯಿತಿ ಸಿಗುತ್ತಿದೆ. ಇಷ್ಟೇ ಅಲ್ಲದೆ 10% ವರೆಗೆ ಕ್ಯಾಶ್‌ಬ್ಯಾಕ್ ಮತ್ತು ರೂ.7,000 ವರೆಗೆ ವಿನಿಮಯ ಬೋನಸ್ ಆಯ್ಕೆ ಸಹ ಇದ್ದು, ಈ ಮೂಲಕ ನೀವು ಈ ಹಬ್ಬದ ಸೇಲ್‌ನಲ್ಲಿ ಭಾರೀ ಹಣ ಉಳಿತಾಯದೊಂದಿಗೆ ಹೊಸ ಡಿವೈಸ್‌ಗಳನ್ನು ಖರೀದಿ ಮಾಡಬಹುದಾಗಿದೆ. ಹಾಗಿದ್ರೆ, ಯಾವೆಲ್ಲಾ ಲ್ಯಾಪ್‌ಟಾಪ್‌ಗೆ ಏನೆಲ್ಲಾ ರಿಯಾಯಿತಿ ಇದೆ ನೋಡೋಣ ಬನ್ನಿ.

ಲ್ಯಾಪ್‌ಟಾಪ್ ಖರೀದಿಗೆ ಇದು ಬೆಸ್ಟ್‌ ಟೈಮ್‌; 48% ವರೆಗೆ ರಿಯಾಯಿತಿ ...

ಲೆನೊವೊ ದೀಪಾವಳಿ ಸೇಲ್‌: ಈ ವಿಶೇಷ ಸೇಲ್‌ನಲ್ಲಿ ನೀವು ಥಿಂಕ್‌ಪ್ಯಾಡ್ E16 ಲ್ಯಾಪ್‌ಟಾಪ್ (ThinkPad E16 Laptop) ಅನ್ನು 41% ರಿಯಾಯಿತಿಯೊಂದಿಗೆ ಖರೀದಿ ಮಾಡಬಹುದಾಗಿದೆ. ಈ ಲ್ಯಾಪ್‌ಟಾಪ್ 13 ನೇ ಜನ್ ಇಂಟೆಲ್‌ i5 ಪ್ರೊಸೆಸರ್ ಬಲ ಹಾಗೂ 16 GB RAM ಮತ್ತು 512 GB ಸ್ಟೋರೇಜ್‌ ಆಯ್ಕೆಯೊಂದಿಗೆ ಕಾಣಿಸಿಕೊಂಡಿದೆ.ಇದರ ಆಫರ್ ಬೆಲೆ 71,990ರೂ.ಗಳು.

ಇದರೊಂದಿಗೆ AMD ರೈಜನ್‌ 5 ಪ್ರೊಸೆಸರ್, 16GB RAM, 512GB ಹಾರ್ಡ್ ಡ್ರೈವ್ ಮತ್ತು ಇಂಟಿಗ್ರೇಟೆಡ್ AMD ರೇಡಿಯನ್ ಗ್ರಾಫಿಕ್ಸ್ ಕಾರ್ಡ್ ಹೊಂದಿರುವ E16 ಲ್ಯಾಪ್‌ಟಾಪ್ ಮಾದರಿಯನ್ನು 61,990ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಜೊತೆಗೆ ಐಡಿಯಾಪ್ಯಾಡ್ ಸ್ಲಿಮ್ ಲ್ಯಾಪ್‌ಟಾಪ್ ಮಾದರಿಯು 42 % ರಿಯಾಯಿತಿಯಲ್ಲಿ ಲಭ್ಯ ಇದ್ದು, ಈ ಮೂಲಕ ನೀವು 62,990ರೂ.ಗಳಲ್ಲಿ ಖರೀದಿಸಬಹುದಾಗಿದೆ.

ಈ ಡಿವೈಸ್‌ 11ನೇ ಜನ್‌ ಇಂಟೆಲ್‌ i7 ಪ್ರೊಸೆಸರ್‌ ಬಲದೊಂದಿಗೆ 16GB RAM, 512GB ಹಾರ್ಡ್ ಡ್ರೈವ್ ಮತ್ತು ಎನ್ವಿಡಿಯಾ ಜಿಫೋರ್ಸ್ MX450 ಗ್ರಾಫಿಕ್ಸ್ ಕಾರ್ಡ್ ಶಕ್ತಿ ಪಡೆದಿದೆ. ಹಾಗೆಯೇ 11 ನೇ ಜನ್‌ ಇಂಟೆಲ್‌ i7 ಪ್ರೊಸೆಸರ್, 16GB RAM ಮತ್ತು 512GB ಹಾರ್ಡ್ ಡ್ರೈವ್‌ನೊಂದಿಗೆ ಕಾಣಿಸಿಕೊಂಡಿರುವ ಲೆನೊವೊ ಐಡಿಯಾಪ್ಯಾಡ್ ಸ್ಲಿಮ್ ಲ್ಯಾಪ್‌ಟಾಪ್ ಮಾದರಿಯು 50,790 ರೂಗಳ ಬೆಲೆಯಲ್ಲಿ ಲಭ್ಯ ಇದೆ.

ಲ್ಯಾಪ್‌ಟಾಪ್ ಖರೀದಿಗೆ ಇದು ಬೆಸ್ಟ್‌ ಟೈಮ್‌; 48% ವರೆಗೆ ರಿಯಾಯಿತಿ ...

ಇಷ್ಟೇ ಅಲ್ಲದೆ ಲೆನೊವೊ ಪ್ರೀಮಿಯಂ ಲ್ಯಾಪ್‌ಟಾಪ್ ಸರಣಿಯ ಲೀಜನ್(Legion) ಸರಣಿಯ ಲ್ಯಾಪ್‌ಟಾಪ್ ಮಾದರಿಗಳ ಮೇಲೂ ಸಹ ಶೇಕಡಾ 46 ರಷ್ಟು ರಿಯಾಯಿತಿ ಘೋಷಣೆ ಮಾಡಲಾಗಿದೆ. ಇದರಲ್ಲಿ ನೀವು ಲೀಜನ್ 5 ಪ್ರೊ ಮಾದರಿಯನ್ನು 112,490 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದು. ಇಷ್ಟೇ ಅಲ್ಲದೆ ಲೆನೊವೊ ಟ್ಯಾಬ್‌ P11 ಮಾದರಿಯು 51% ರಿಯಾಯಿತಿ ಪಡೆದಿದ್ದು, ಈ ಮೂಲಕ 18,999 ರೂ.ಗಳಲ್ಲಿ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಲೆನೊವೊ ಟ್ಯಾಬ್‌ M10 ಮಾಡೆಲ್ ಅನ್ನು 14,999ರೂ.ಗಳ ಆಫರ್ ಬೆಲೆಗೆ ನಿಮ್ಮದಾಗಿಸಿಕೊಳ್ಳಬಹುದು.

ಲ್ಯಾಪ್‌ಟಾಪ್ ಖರೀದಿಗೆ ಇದು ಬೆಸ್ಟ್‌ ಟೈಮ್‌; 48% ವರೆಗೆ ರಿಯಾಯಿತಿ ...

ಇತರೆ ಆಕ್ಸೆಸರಿಗಳ ಮೇಲೆ ಆಫರ್: ಇನ್ನು ಈ ವಿಶೇಷ ಸೇಲ್‌ನಲ್ಲಿ ಹೆಡ್‌ಸೆಟ್‌ಗಳು, ಮಾನಿಟರ್‌ಗಳು ಮತ್ತು ಇತರ ಉತ್ಪನ್ನಗಳನ್ನು ಒಳಗೊಂಡಂತೆ ಬಹಳಷ್ಟು ಟೂಲ್ಸ್‌ಗಳ ಮೇಲೆ ರಿಯಾಯಿತಿ ನೀಡಲಾಗಿದೆ. ಅದರಲ್ಲಿ ನೀವು ಲೆನೊವೊದ ಎಸೆನ್ಷಿಯಲ್ ವೈರ್‌ಲೆಸ್ ಮೌಸ್ ಮತ್ತು ಕೀಬೋರ್ಡ್ ಸೆಟ್ ಮೇಲೆ 63% ರಿಯಾಯಿತಿ ಪಡೆದುಕೊಳ್ಳಬಹುದು. ಈ ಮೂಲಕ 1,999 ರೂಗಳಲ್ಲಿ ಲಭ್ಯವಿದೆ. ಹಾಗೆಯೇ 23.8 ಇಂಚಿನ G24-20 FHD ಗೇಮಿಂಗ್ ಮಾನಿಟರ್‌ಗೆ 46 % ರಿಯಾಯಿತಿ ಇದೆ. ಹೆಚ್ಚುವರಿಯಾಗಿ ಖರೀದಿಯ ಸಮಯದಲ್ಲಿ ಅರ್ಹ ಕ್ರೆಡಿಟ್ ಕಾರ್ಡ್‌ಗಳನ್ನು ಬಳಕೆ ಮಾಡಿದ್ರೆ 10 ರಷ್ಟು ಕ್ಯಾಶ್‌ಬ್ಯಾಕ್ ಸಹ ಲಭ್ಯ ಇದೆ.

Best Mobiles in India

English summary
Lenovo Diwali Sale 2023: laptops, tablets and other accessories are getting huge discounts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+