Lenovo: ಲೆನೊವೊದಿಂದ ಬಣ್ಣ ಬದಲಾಯಿಸುವ ಲ್ಯಾಪ್‌ಟಾಪ್ ಘೋಷಣೆ! ನೀವು ಖರೀದಿಸಲು ಸಾಧ್ಯವಿಲ್ಲ...
ಲೆನೊವೊ (Lenovo) ಈಗಾಗಲೇ ಭಿನ್ನ ಫೀಚರ್ಸ್ ಆಯ್ಕೆಯ ಲ್ಯಾಪ್‌ಟಾಪ್‌ಗಳ (laptops) ಮೂಲಕ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದೆ. ಈ ಬೆಳವಣಿಗೆ ನಡುವೆ ಹೊಸ ಪರಿಕಲ್ಪನೆಯ ಅನ್ನು ಘೋಷಣೆ ಮಾಡಿದ್ದು, ಇದು ಬಣ್ಣ ಬದಲಾಯಿಸುವ ಫೀಚರ್ಸ್ ಅನ್ನು ಪಡೆದಿದೆ.
ಹೌದು, ಲೆನೊವೊ ವಿಶೇಷ ಪರಿಕಲ್ಪನೆಯ ಲ್ಯಾಪ್‌ಟಾಪ್ ಅನ್ನು ಪ್ರದರ್ಶಿಸಿದೆ. ಈ ಮೂಲಕ ಲ್ಯಾಪ್‌ಟಾಪ್ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಆಕರ್ಷಿಸಲು ಮುಂದಾದಂತೆ ಕಂಡುಬಂದಿದೆ. ಯಾಕೆಂದರೆ ಈ ಲ್ಯಾಪ್‌ಟಾಪ್‌ಗಳು 8 ಬಣ್ಣಗಳನ್ನು ಬೆಂಬಲಿಸುವ ಪ್ರೊಗ್ರಾಮೆಬಲ್ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡಿವೆ. ಹಾಗಿದ್ರೆ, ಯಾವುದು ಈ ಲ್ಯಾಪ್‌ಟಾಪ್?, ಯಾವಾಗ ಲಭ್ಯ?, ಇದರ ಫೀಚರ್ಸ್ ಏನು? ಅನ್ನೋ ಮಾಹಿತಿ ಇಲ್ಲಿದೆ ನೋಡಿ

ಬಣ್ಣ ಬದಲಿಸುವ ಲ್ಯಾಪ್‌ಟಾಪ್: ಲ್ಯಾಪ್‌ಟಾಪ್‌ನ ಪ್ಯಾನಲ್‌ನಲ್ಲಿ ಇರುವ ಇ-ಇಂಕ್ ಡಿಸ್‌ಪ್ಲೇ ಲ್ಯಾಪ್‌ಟಾಪ್ ಅನ್ನು ಆಫ್ ಮಾಡಿದಾಗಲೂ ಡೈನಾಮಿಕ್ ಬಣ್ಣಗಳು ಮತ್ತು ಮಾದರಿಗಳನ್ನು ಪ್ರದರ್ಶಿಸುತ್ತದೆ. ಬಳಕೆದಾರರಿಗೆ ಗ್ರಾಹಕೀಯಗೊಳಿಸಬಹುದಾದ ಮತ್ತು ವಿಶಿಷ್ಟವಾದ ಸೌಂದರ್ಯವನ್ನು ಈ ಮೂಲಕ ನೀಡಲಿದೆ. ಲೆನೊವೊ ಥಿಂಕ್‌ಬುಕ್ 13x ಜನ್ 4 SPE (Lenovo ThinkBook 13x Gen 4 SPE) ನಲ್ಲಿ ಈ ವಿಶೇಷತೆ ಇದ್ದು, ಇದನ್ನು CES 2024 ನಲ್ಲಿ ಪರಿಕಲ್ಪನೆಯ ಪುರಾವೆಯಾಗಿ ಪ್ರಸ್ತುತಪಡಿಸಲಾಗಿದೆ. ಸದ್ಯ ನಾಲ್ಕು ವಿಭಿನ್ನ ವಿನ್ಯಾಸ ಯೋಜನೆಗಳು ಮತ್ತು ಸಾವಿರ ವಿಭಿನ್ನ ಚಿತ್ರಗಳನ್ನು ಬೆಂಬಲಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.
ಇ-ಇಂಕ್ ಪ್ರಿಸ್ಮ್ 3 (E-Ink Prism 3)ಅನ್ನು ಕಳೆದ ವರ್ಷ ಇ-ಇಂಕ್ ಪರಿಚಯಿಸಿತ್ತು. ಇದು ಸರಳವಾದ ಗ್ರಾಫಿಕ್ಸ್ ಮತ್ತು ಮಾದರಿಗಳನ್ನು ಬಹು ಬಣ್ಣಗಳೊಂದಿಗೆ ಪ್ರದರ್ಶಿಸುವಲ್ಲಿ ಹೆಸರುವಾಸಿಯಾಗಿದೆ. ಈ ವಿಶೇಷ ತಂತ್ರಜ್ಞಾನವನ್ನು ಡೈನಾಮಿಕ್ ಸಿಗ್ನೇಜ್ ಮತ್ತು ಆಟೋಮೋಟಿವ್ ಅಪ್ಲಿಕೇಷನ್‌ಗಳಿಗಾಗಿ ಬಳಸಿಕೊಳ್ಳಲಾಗುತ್ತದೆ. ಆದರೆ, ಈಗ ಲೆನೊವೊ ಪರಿಕಲ್ಪನೆಯ ಲ್ಯಾಪ್‌ಟಾಪ್ ವೈಯಕ್ತಿಕ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಸೌಂದರ್ಯದ ಆಕರ್ಷಣೆಗಾಗಿ ಮಾತ್ರ ಸೀಮಿತವಾಗಿದೆ.

ಥಿಂಕ್‌ಬುಕ್ 13x ಜನ್ 4 SPE ನ ಪ್ರಮುಖ ಫೀಚರ್ಸ್ ಏನೆಂದರೆ ಇದು ಕಡಿಮೆ ಬ್ಯಾಟರಿ ಶಕ್ತಿ ಬಳಕೆ ಮಾಡುತ್ತದೆ. ಹಾಗೆಯೇ ಬಳಕೆದಾರರು ತಮ್ಮ ಡಿವೈಸ್‌ನ ನೋಟವನ್ನು ವೈಯಕ್ತೀಕರಿಸಲು ಅನುವು ಮಾಡಿಕೊಡುತ್ತದೆ. ಈ ಮೂಲಕ ಈ ಇ-ಇಂಕ್ ತಂತ್ರಜ್ಞಾನ ಬ್ಯಾಟರಿಗೆ ಯಾವುದೇ ಸಮಸ್ಯೆ ಉಂಟು ಮಾಡದೆ ಬಣ್ಣಗಳು ಮತ್ತು ಮಾದರಿಗಳನ್ನು ಪ್ರದರ್ಶಿಸುವುದನ್ನು ಮುಂದುವರಿಸುತ್ತದೆ.
ನೀವು ಖರೀದಿ ಮಾಡಲು ಆಗುವುದಿಲ್ಲ: ಇದನ್ನು ಯಾಕೆ ಖರೀದಿ ಮಾಡಲು ಆಗುವುದಿಲ್ಲ ಎಂದು ಕೇಳಿದರೆ ಇದಕ್ಕೆ ನೇರ ಉತ್ತರ ಇದೊಂದು ಪರಿಕಲ್ಪನೆಯ ಲ್ಯಾಪ್‌ಟಾಪ್(concept laptop). ಈ ಪರಿಕಲ್ಪನೆಯ ಲ್ಯಾಪ್‌ಟಾಪ್ ವೈಯಕ್ತಿಕ ಕಂಪ್ಯೂಟಿಂಗ್ ಡಿವೈಸ್‌ಗಳಲ್ಲಿ ಇ-ಇಂಕ್ ತಂತ್ರಜ್ಞಾನವನ್ನು ಸಂಯೋಜಿಸುವ ಸೃಜನಶೀಲ ಸಾಧ್ಯತೆಗಳನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆಯಷ್ಟೇ. ಅಲ್ಲದೆ ಕೆವಲ ಪರಿಕಲ್ಪನೆಯ ಪುರಾವೆಯಾಗಿದೆ ಎಂದೂ ಸಹ ಲೆನೊವೊ ಮಾಹಿತಿ ನೀಡಿದೆ.
ಇ-ಇಂಕ್ ಡಿಸ್‌ಪ್ಲೇಯ ಹೊರತಾಗಿ ಥಿಂಕ್‌ಬುಕ್ 13x ಜನ್ 4 SPE 13.5 ಇಂಚಿನ, 2.8K, 120 Hz ಡಿಸ್‌ಪ್ಲೇ ಹೊಂದಿದೆ. ಜೊತೆಗೆ ಇಂಟೆಲ್ ಮೆಟಿಯರ್ ಲೇಕ್ ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದ್ದು, 32GB ವರೆಗೆ LPDDR5x ಸ್ಟೋರೇಜ್ ಹೊಂದಿರಲಿದೆ ಹಾಗೂ PCIe ಜನ್ 4 ಸಂಗ್ರಹಣೆಯ 2TB ಸ್ಟೋರೇಜ್ ಬಲ ಪಡೆದಿದೆ. ಅಷ್ಟೇ ಅಲ್ಲದೆ 74 Wh ಸಾಮರ್ಥ್ಯದ ಬ್ಯಾಟರಿ ಆಯ್ಕೆಯನ್ನು ಇದರಲ್ಲಿ ಕಾಣಬಹುದಾಗಿದೆ.

ಇದರೊಂದಿಗೆ ಈ ವಿಶೇಷ ಲ್ಯಾಪ್‌ಟಾಪ್ ಕ್ವಾಡ್ ಸ್ಪೀಕರ್‌ಗಳು, ಮೂರು ಥಂಡರ್‌ಬೋಲ್ಟ್ 4 ಪೋರ್ಟ್‌ಗಳು, 3.5mm ಆಡಿಯೊ ಜ್ಯಾಕ್ ಆಯ್ಕೆ ಪಡೆದಿದೆ. ಇದನ್ನು ಈಗ ಪ್ರದರ್ಶನ ಮಾಡಲಾಗಿದೆಯೇ ಹೊರತು ಇದರ ಮಾರಾಟದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಈ ಕಾರಣಕ್ಕೆ ಮುಂದಿನ ದಿನಗಳಲ್ಲಿ ಇದನ್ನು ಮಾರುಕಟ್ಟೆಗೆ ತರುವ ಬಗ್ಗೆ ತಯಾರಿ ನಡೆಸುತ್ತಿದೆಯಾ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications








