ಭಾರತದಲ್ಲಿ ಲೆನೊವೊ ಸಂಸ್ಥೆಯಿಂದ ಹೊಸ ಲ್ಯಾಪ್‌ಟಾಪ್ ಬಿಡುಗಡೆ; ಅಚ್ಚರಿಯ ಬೆಲೆ?
ಪ್ರತಿಷ್ಠಿತ ಲ್ಯಾಪ್‌ಟಾಪ್ ತಯಾರಿಕಾ ಕಂಪನಿಗಳಲ್ಲಿ ಒಂದಾದ ಲೆನೊವೊ ಈಗಾಗಲೇ ಹಲವು ಶ್ರೇಣಿಗಳಲ್ಲಿ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿ ಗ್ರಾಹಕರ ಮೆಚ್ಚುಗೆ ಪಡೆದಿದೆ. ಇದೀಗ ಲೆನೊವೊ ಭಾರತದಲ್ಲಿ ಹೊಸದಾಗಿ 'ಐಡಿಯಾಪ್ಯಾಡ್ ಸ್ಲಿಮ್ 5 ಪ್ರೊ' ಹೆಸರಿನ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದೆ. ಕಂಪನಿಯ ಹೊಸ ಲೆನೊವೊ ಲ್ಯಾಪ್‌ಟಾಪ್ 11 ನೇ ತಲೆಮಾರಿನ ಇಂಟೆಲ್ ಕೋರ್ ಹಾಗೂ AMD ರೈಜೆನ್ ಪ್ರೊಸೆಸರ್ ಕಾನ್ಫಿಗರೇಶನ್ ಹೊಂದಿರುವುದು ಆಕರ್ಷಕ ಎನಿಸಿದೆ.

ಹೌದು, ಜನಪ್ರಿಯ ಲೆನೊವೊ ಕಂಪನಿಯು ದೇಶಿಯ ಮಾರುಕಟ್ಟೆಗೆ ಐಡಿಯಾಪ್ಯಾಡ್ ಸ್ಲಿಮ್ 5 ಪ್ರೊ ಲ್ಯಾಪ್‌ಟಾಪ್ ಮಾಡೆಲ್ ಅನ್ನು ಲಾಂಚ್ ಮಾಡಿದೆ. ಈ ಲ್ಯಾಪ್‌ಟಾಪ್ ಎರಡು ಸ್ಕ್ರೀನ್ ಗಾತ್ರಗಳ ಆಯ್ಕೆಯನ್ನು ಪಡೆದಿದೆ. 2.2K ಪಿಕ್ಸಲ್ ರೆಸಲ್ಯೂಶನ್ ಹೊಂದಿದ್ದು, ಇದರೊಂದಿಗೆ ಆಡಿಯೋ ವಿಭಾಗದಲ್ಲಿ ಡಾಲ್ಬಿ ಅಟ್ಮೋಸ್ ಸಪೋರ್ಟ್ ಪಡೆದಿದೆ. ಹಾಗೆಯೇ ಇದು 16GB RAM ಮತ್ತು 1TB SSD ವರೆಗೂ ಆಯ್ಕೆ ಒಳಗೊಂಡಿರುವುದು ಮತ್ತೊಂದು ಪ್ರಮುಖ ಅಂಶವಾಗಿದೆ.

ಹೊಸ ಲೆನೊವೊ ಐಡಿಯಾಪ್ಯಾಡ್ ಸ್ಲಿಮ್ 5 ಪ್ರೊ ಲ್ಯಾಪ್‌ಟಾಪ್ ಎರಡು ಸ್ಕ್ರೀನ್ ಆಯ್ಕೆಗಳನ್ನು ಹೊಂದಿದೆ. 14 ಇಂಚಿನ ಡಿಸ್‌ಪ್ಲೇ ಇದ್ದು, ಡಿಸ್‌ಪ್ಲೇಯು 2.2K ಪಿಕ್ಸಲ್ ರೆಸೊಲ್ಯೂಶನ್ ಅನ್ನು ಒಳಗೊಂಡಿದೆ. ಹಾಗೆಯೇ 16 ಇಂಚಿನ WQXGA ಮಾದರಿಯ ಸ್ಕ್ರೀನ್ ಇದ್ದು, 2560 x 1600 ಪಿಕ್ಸೆಲ್‌ಗಳ ರೆಸೊಲ್ಯೂಶನ್ ಪಡೆದಿದೆ. ಹಾಗೆಯೇ ಐಪಿಎಸ್ ಆಂಟಿ-ಗ್ಲೇರ್ ಡಿಸ್‌ಪ್ಲೇ ಇದಾಗಿದ್ದು, 16:10 ಅನುಪಾತ ಹೊಂದಿದೆ. ಡಿಸ್‌ಪ್ಲೇಯು 350 ನಿಟ್‌ಗಳ ಬ್ರೈಟ್ನೆಸ್ ಪಡೆದಿದ್ದು, sRGB ಸಂಯೋಜನೆ ಪಡೆದಿದೆ.

ಇನ್ನು ಈ ಲ್ಯಾಪ್‌ಟಾಪ್ ಇಂಟೆಲ್ ಅಥವಾ AMD ಪ್ರೊಸೆಸರ್‌ಗಳ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಲ್ಯಾಪ್‌ಟಾಪ್ ವಿಂಡೋಸ್ 10 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಇತ್ತೀಚಿನ ಹೊಸ ವಿಂಡೋಸ್ 11 ಗೆ ಅಪ್‌ಗ್ರೇಡ್ ಮಾಡಬಹುದು. ಇದರೊಂದಿಗೆ 16GB RAM ಆಯ್ಕೆ ಹೊಂದಿದ್ದು, 1TB SSD ವರೆಗಿನ ಸ್ಟೋರೇಜ್ ಆಯ್ಕೆ ಒಳಗೊಂಡಿದೆ. ಇದಕ್ಕೆ ಪೂರಕವಾಗಿ Iris XeAM ಅಥವಾ AMD Radeon ಹಾಗೂ Nvidia GeForce ಗ್ರಾಫಿಕ್ಸ್ ಸಪೋರ್ಟ್ ಸಹ ಇದೆ.

ಲೆನೊವೊದ ಈ ಹೊಸ ಲ್ಯಾಪ್‌ಟಾಪ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ 6, ಬ್ಲೂಟೂತ್ v5.1 ಮತ್ತು ಇತರ ಪೋರ್ಟ್‌ಗಳು ಹೊಂದಿದೆ. ಆಡಿಯೋ ವಿಭಾಗದಲ್ಲಿ ಡಾಲ್ಬಿ ಅಟ್ಮೋಸ್‌ನೊಂದಿಗೆ ಸ್ಟೀರಿಯೋ ಸ್ಪೀಕರ್‌ಗಳು, ಫೇಶಿಯಲ್ ರೆಕಗ್ನೈಸ್ ಬೆಂಬಲದೊಂದಿಗೆ 720p ವೆಬ್‌ಕ್ಯಾಮ್ ಸಪೋರ್ಟ್ ಇದೆ. ಇದರೊಂದಿಗೆ ಅಮೆಜಾನ್ ಅಲೆಕ್ಸಾ ಮತ್ತು ಮೈಕ್ರೋಸಾಫ್ಟ್ ಕೊರ್ಟಾನಾ ವಾಯಿಸ್ ಅಸಿಸ್ಟಂಟ್ ಸಪೋರ್ಟ್ ಅನ್ನು ಹೊಂದಿದೆ.

ಐಡಿಯಾಪ್ಯಾಡ್ ಸ್ಲಿಮ್ 5 ಪ್ರೊ ಲ್ಯಾಪ್‌ಟಾಪ್ 14-ಇಂಚಿನ ಮಾಡೆಲ್ 56.5Whr ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಪಡೆದಿದೆ. ಹಾಗೆಯೇ ಇದು 312.2 x 221 x 17.99 ಮಿಮೀ ಮತ್ತು 1.38 ಕಿಲೋಗ್ರಾಂ ತೂಕ ಪಡೆದಿದೆ. ಅದೇ ರೀತಿ 16-ಇಂಚಿನ ಡಿಸ್‌ಪ್ಲೇ ಮಾಡೆಲ್ ಕೌಂಟರ್‌ಪಾರ್ಟ್ 75Whr ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ ಈ ಡಿವೈಸ್ 356 x 251 x 18.4 ಮಿಮೀ ಅಳತೆ ಮತ್ತು 1.9 ಕಿಲೋಗ್ರಾಂ ತೂಕ ಹೊಂದಿದೆ.

ಬೆಲೆ ಎಷ್ಟು?
ಆಕರ್ಷಕ ಫೀಚರ್ಸ್‌ಗಳಿಂದ ಗಮನನ ಸೆಳೆದಿರುವ ಲೆನೊವೊದ ಹೊಸ ಐಡಿಯಾಪ್ಯಾಡ್ ಸ್ಲಿಮ್ 5 ಪ್ರೊ ಲ್ಯಾಪ್‌ಟಾಪ್ 14 ಇಂಚು ಮತ್ತು 16 ಇಂಚಿನ ಎರಡು ಮಾಡೆಲ್‌ಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ. ಭಾರತದಲ್ಲಿ ಈ ಲ್ಯಾಪ್‌ಟಾಪ್‌ನ ಆರಂಭಿಕ ಬೆಲೆಯು 77,990ರೂ. ಆಗಿದೆ.

ಲೆನೊವೊ ಯೋಗ ಸ್ಲಿಮ್ 7i ಕಾರ್ಬನ್ ಲ್ಯಾಪ್‌ಟಾಪ್
ಲೆನೊವೊ ಯೋಗ ಸ್ಲಿಮ್ 7i ಕಾರ್ಬನ್ ಲ್ಯಾಪ್‌ಟಾಪ್ 2,560x1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 13.3-ಇಂಚಿನ ಕ್ಯೂಎಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು 300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್, ಡಾಲ್ಬಿ ವಿಷನ್ ಬೆಂಬಲ ಮತ್ತು ಟಿಯುವಿ ರೈನ್‌ಲ್ಯಾಂಡ್ ಪ್ರಮಾಣೀಕರಣವನ್ನು ಹೊಂದಿದೆ. ಜೊತೆಗೆ ಇದು ಲೆನೊವೊ ಎನ್‌ಟಿಎಸ್‌ಸಿಯ 72% ಮತ್ತು ಎಸ್‌ಆರ್‌ಜಿಬಿ ಬಣ್ಣದ ಹರವುಗಳ 100 % ವ್ಯಾಪ್ತಿಯನ್ನು ಹೊಂದಿದೆ. ಇನ್ನು ಯೋಗ ಸ್ಲಿಮ್ 7i ಕಾರ್ಬನ್ 11 ನೇ ತಲೆಮಾರಿನ ಇಂಟೆಲ್ ಕೋರ್ i7-1165G7 ಜಿಪಿಯು ಪ್ರೊಸೆಸರ್ ಅನ್ನು ಹೊಂದಿದ್ದು, ಇದು 16GB RAM ಮತ್ತು 1TB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ.


Click it and Unblock the Notifications