Lenovo: ಲೆನೊವೊದಿಂದ ಎಐ ಚಾಲಿತ ಲೀಜನ್ ಗೇಮಿಂಗ್ ಲ್ಯಾಪ್‌ಟಾಪ್‌ಗಳು ಲಾಂಚ್; ಬೆಲೆ ಎಷ್ಟು?
ಲೆನೊವೊ (Lenovo) ಆಗಾಗ್ಗೆ ಭಿನ್ನ ಶೈಲಿಯ ಅಥವಾ ಭಿನ್ನ ಫೀಚರ್ಸ್ ಆಯ್ಕೆಯ ಡಿವೈಸ್‌ಗಳ ಮೂಲಕ ಸದ್ದು ಮಾಡುತ್ತಿರುತ್ತದೆ. ಅದರಂತೆ ಈಗ ವಿಶೇಷ ಫೀಚರ್ಸ್ ಆಯ್ಕೆಯ ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು ಅನಾವರಣ ಮಾಡಿದೆ.
ಹೌದು, ಲೆನೊವೊ ಇದೀಗ ಎಐ ಫೀಚರ್ಸ್ ಆಯ್ಕೆಯೊಂದಿಗೆ ಲೀಜನ್ ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು (Legion Gaming Laptop) ಲಾಂಚ್ ಮಾಡಿದೆ. ಈ ಲ್ಯಾಪ್‌ಟಾಪ್ ಅನ್ನು ಲೆನೊವೊ ಕಳೆದ ತಿಂಗಳು CES 2024 ನಲ್ಲಿ ಪ್ರದರ್ಶಿಸಿತ್ತು. ಇನ್ನು ಈ ಲ್ಯಾಪ್‌ಟಾಪ್‌ಗಳು 14 ನೇ ಜನ್ ಇಂಟೆಲ್ ಕೋರ್ ಪ್ರೊಸೆಸರ್ ಆಯ್ಕೆ ಪಡೆದಿದೆ. ಹಾಗಿದ್ರೆ, ಇವುಗಳ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರವನ್ನು ತಿಳಿಸಿಕೊಡಲಾಗಿದೆ ಓದಿರಿ.

ಲೆನೊವೊ ಲೀಜನ್ ಗೇಮಿಂಗ್ ಲ್ಯಾಪ್‌ಟಾಪ್: ಲೆನೊವೊ ಮೊದಲೇ ತಿಳಿಸಿದಂತೆ ಎಐ ಫೀಚರ್ಸ್ ಆಯ್ಕೆಯೊಂದಿಗೆ ಲೀಜನ್ ಪ್ರೊ 7i, ಲೀಜನ್ ಪ್ರೊ 5i, ಲೀಜನ್ 7i ಮತ್ತು ಲೀಜನ್ 5i ಲ್ಯಾಪ್‌ಟಾಪ್‌ಗಳನ್ನು (Legion Pro 7i, Legion Pro 5i, Legion 7i and Legion 5i Laptop) ಲಾಂಚ್ ಮಾಡಲಾಗಿದೆ. ಈ ಲ್ಯಾಪ್‌ಟಾಪ್‌ಗಳು ಎಐ ಸಾಮರ್ಥ್ಯಗಳೊಂದಿಗೆ ಕೆಲಸ ಮಾಡಲಿದ್ದು, ಲೆನೊವೊ ಎಲ್‌ಎ ಎಂದು ಕರೆಯಲ್ಪಡುವ ಮೀಸಲಾದ ಎಐ ಚಿಪ್‌ನಿಂದ ರನ್ ಆಗಲಿವೆ.
ಇನ್ನು ಈ ಹೊಸ ಗೇಮಿಂಗ್ ಲ್ಯಾಪ್‌ಟಾಪ್‌ಗಳು ಇತ್ತೀಚಿನ 14 ನೇ ಜನ್ ಇಂಟೆಲ್ ಕೋರ್ ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಎನ್ವಿಡಿಯಾ RTX 4090 ಗ್ರಾಫಿಕ್ಸ್ ಕಾರ್ಡ್ ಮೂಲಕ ಗೇಮಿಂಗ್ ಪ್ರಿಯರಿಗೆ ಅತ್ಯುತ್ತಮವಾದ ಅನುಭವ ನೀಡುತ್ತವೆ. ಅದರಲ್ಲೂ ಈ ಡಿವೈಸ್‌ಗಳ ಮುಖ್ಯ ಭಾಗದಲ್ಲಿ ಲೆನೊವೊ ಎಲ್‌ಎ ಎಐ ಚಿಪ್ ಇದ್ದು, ಲೆನೊವೊ ಎಐ ಎಂಜಿನ್+ ಮೂಲಕ ಕಾರ್ಯಕ್ಷಮತೆಯನ್ನು ಸುಧಾರಣೆ ಮಾಡಲಿದೆ. ಅಲ್ಲದೆ FPS ಮತ್ತು ಸುಧಾರಿತ ವಿದ್ಯುತ್ ದಕ್ಷತೆಗೆ ಇದು ಕಾರಣವಾಗುತ್ತದೆ.

ಲೀಜನ್ ಪ್ರೊ 7i ಮತ್ತು ಲೀಜನ್ ಪ್ರೊ 5i ಫೀಚರ್ಸ್: ಲೀಜನ್ ಪ್ರೊ ಸರಣಿಯು ಗೇಮರ್‌ಗಳಿಗೆ ಅತ್ಯುತ್ತಮ ಆಯ್ಕೆ ಆಗಿದೆ. ಇವು 32GB DDR5 ಸ್ಟೋರೇಜ್ ಆಯ್ಕೆಯೊಂದಿಗೆ ಇಂಟೆಲ್ ಕೋರ್ i9-14900HX ಪ್ರೊಸೆಸರ್ ಮತ್ತು ಎನ್ವಿಡಿಯಾ RTX 4090 ಗ್ರಾಫಿಕ್ಸ್ ಮೂಲಕ ಉತ್ತಮವಾಗಿ ಕೆಲಸ ಮಾಡಲಿವೆ. ಪ್ರಮುಖ ಫೀಚರ್ಸ್ ಬಗ್ಗೆ ಹೇಳುವುದಾದರೆ ಎಕ್ಸ್ಟ್ರಾ ವೈಡ್ ವೇಪರ್ ಚೇಂಬರ್, ಎಐ ಚಾಲಿತ ವಿದ್ಯುತ್ ನಿರ್ವಹಣೆಯೊಂದಿಗೆ ಲಿಕ್ವಿಡ್ ಮತ್ತು ಲೀಜನ್ ಕೋಲ್ಡ್‌ಫ್ರಂಟ್ ತಂತ್ರಜ್ಞಾನದ ಆಯ್ಕೆ ನೀಡಲಾಗಿದೆ.
ಈ ಎರಡೂ ಲ್ಯಾಪ್‌ಟಾಪ್‌ಗಳು 245 Hz ವರೆಗಿನ ವೇರಿಯಬಲ್ ರಿಫ್ರೆಶ್ ರೇಟ್ ಮತ್ತು 500 ನಿಟ್ಸ್‌ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ ಲೆನೊವೊ ಪ್ಯೂರ್‌ಸೈಟ್ ಗೇಮಿಂಗ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿವೆ. ಇದರಿಂದಾಗಿ ಬಳಕೆದಾರರು ತಲ್ಲೀನಗೊಳಿಸುವ ಗೇಮ್‌ಪ್ಲೇ ಅನುಭವ ಪಡೆಯಬಹುದಾಗಿದೆ. ಇಷ್ಟೇ ಅಲ್ಲದೆ ಈ ಲ್ಯಾಪ್‌ಟಾಪ್‌ಗಳು ಟ್ರೂಸ್ಟ್ರೈಕ್ ಕೀಬೋರ್ಡ್‌ಗಳೊಂದಿಗೆ ಕಸ್ಟಮೈಸ್ ಮಾಡಬಹುದಾದ ಆರ್‌ಜಿಬಿ ಲೈಟಿಂಗ್ ಮತ್ತು ವಿಸ್ತೃತ ಗೇಮಿಂಗ್ ಸೆಷನ್‌ಗಳಿಗಾಗಿ ರಾಪಿಡ್ ಚಾರ್ಜ್ ಪ್ರೊ ಸೌಲಭ್ಯ ಪಡೆದುಕೊಂಡಿವೆ.

ಲೀಜನ್ 7i ಮತ್ತು ಲೀಜನ್ 5i ಫೀಚರ್ಸ್: ಈ ಸರಣಿಗಳು ಇಂಟೆಲ್ ಕೋರ್ i9 14900HX ಪ್ರೊಸೆಸರ್ ಮತ್ತು ಎನ್ವಿಡಿಯಾ ಜಿಫೋರ್ಸ್ RTX 4070 ಗ್ರಾಫಿಕ್ಸ್‌ನಿಂದ ರನ್ ಆಗಲಿವೆ. ಇವೂ ಸಹ ವಿಶೇಷ ಫೀಚರ್ಸ್ ಆಯ್ಕೆ ಪಡೆದುಕೊಂಡಿದ್ದು, ಅದರಲ್ಲಿ ಪ್ಯೂರ್‌ಸೈಟ್ ಡಿಸ್‌ಪ್ಲೇ ಆಯ್ಕೆ, ಟ್ರೂಸ್ಟ್ರೈಕ್ ಕೀಬೋರ್ಡ್ ಮತ್ತು ಹೊಸ ಕೋಲ್ಡ್‌ಫ್ರಂಟ್ ಹೈಪರ್ ಥರ್ಮಲ್ ಸೊಲ್ಯೂಶನ್ ಫೀಚರ್ಸ್ ಕಾಣಬಹುದು.
ಇನ್ನು ಲೀಜನ್ 7i LA3 ಎಐ ಚಿಪ್ ಅನ್ನು ಹೊಂದಿದ್ದು, ಲೀಜನ್ 5i LA1 ಎಐ ಚಿಪ್ ಅನ್ನು ಹೊಂದಿದೆ. ಅವತಾರ್ ಮಾಸ್ಟರ್ ಮೂಲಕ ವೈಯಕ್ತೀಕರಿಸಿದ ಅನುಭವ ಮತ್ತು ಗೌಪ್ಯತೆಯನ್ನು ಎಐ ಚಾಲಿತ ಆಪ್‌ಗಳು ನೀಡಲಿವೆ. ಇದರ ಜೊತೆಗೆ ಗೇಮಿಂಗ್ ಅನುಭವವನ್ನು ಸರಳಗೊಳಿಸುವ ಎಕ್ಸ್‌ಬಾಕ್ಸ್ ಗೇಮ್ ಪಾಸ್ ಅಲ್ಟಿಮೇಟ್‌ಗೆ ಉಚಿತ ಚಂದಾದಾರಿಕೆ ಆಯ್ಕೆ ಸಹ ಲಭ್ಯ ಇದೆ. ಇದೆಲ್ಲದರ ಜೊತೆಗೆ ಈ ಲ್ಯಾಪ್‌ಟಾಪ್‌ಗಳು ಶಕ್ತಿಯುತ ಬ್ಯಾಟರಿ ಆಯ್ಕೆ ಪಡೆದಿವೆ.
ಲೀಜನ್ ಲ್ಯಾಪ್‌ಟಾಪ್ ಬೆಲೆ ಮತ್ತು ಲಭ್ಯತೆ: ಈ ಲ್ಯಾಪ್‌ಟಾಪ್‌ಗಳಿಗೆ ಭಿನ್ನ ಬೆಲೆಯನ್ನು ನಿಗದಿ ಮಾಡಲಾಗಿದ್ದು, ಲೆನೊವೊದ ಅಧಿಕೃತ ಸೈಟ್ ಮೂಲಕ ಖರೀದಿ ಮಾಡಬಹುದಾಗಿದೆ. ಅದರಂತೆ ಲೀಜನ್ 5i ಗೆ 129,990 ರೂ.ಗಳ ಬೆಲೆ ಇದ್ದು, ಲೀಜನ್ 5i ಪ್ರೊ ಸರಣಿಗೆ 157,990 ರೂ.ಗಳ ಆರಂಭಿಕ ಬೆಲೆ ನಿಗದಿ ಮಾಡಲಾಗಿದೆ. ಹಾಗೆಯೇ ಲೀಜನ್ 7i ಗೆ 177,990 ರೂ.ಗಳು ಮತ್ತು ಲೀಜನ್ 7i ಪ್ರೊ ಸರಣಿಗೆ 3,24,990 ರೂ.ಗಳ ಬೆಲೆಯನ್ನು ನಿಗದಿ ಮಾಡಲಾಗಿದೆ.
ಗಮನಿಸಬೇಕಾದ ವಿಷಯ ಏನೆಂದರೆ ನಿಮ್ಮ ಪಿಸಿಯನ್ನು ಕಸ್ಟಮೈಸ್ ಮಾಡಿ ಆಯ್ಕೆಯ ಮೂಲಕ ಗ್ರಾಹಕರು ತಮ್ಮ ಗೇಮಿಂಗ್ ಅವಶ್ಯಕತೆಗಳಿಗೆ ಅನುಗುಣವಾಗಿ ಫೀಚರ್ಸ್ ಆಯ್ಕೆ ಪಡೆಯಬಹುದಾಗಿದೆ. ಅಲ್ಲದೆ ಲೆನೊವೊ ಹೊರತುಪಡಿಸಿ ಇತರೆ ಇ-ಕಾಮರ್ಸ್ ಸೈಟ್‌ಗಳು ಹಾಗೂ ರಿಟೇಲರ್ ಸ್ಟೋರ್ ಮೂಲಕವೂ ನೀವು ಈ ಡಿವೈಸ್‌ಗಳನ್ನು ಖರೀದಿ ಮಾಡಬಹುದಾಗಿದೆ.


Click it and Unblock the Notifications








